ಡೊನಾಲ್ಡ್ ಟ್ರಂಪ್ ರವರು ಮತ್ತು ಮುಂಬರುವ ಅಮೆರಿಕ
ಅಲೆಸ್ಸಾಂಡ್ರೊ ಗಿಸೊಟ್ಟಿ
ಇಲ್ಲ, ಬರ್ಲಿನ್ ಗೋಡೆಯ ಪತನ ಮತ್ತು ಸೋವಿಯತ್ ಒಕ್ಕೂಟದ ವಿಸರ್ಜನೆಯೊಂದಿಗೆ ಇತಿಹಾಸವು "ಕೊನೆಗೊಳ್ಳಲಿಲ್ಲ". ಕಳೆದ ಶತಮಾನದ ಅಂತ್ಯದಲ್ಲಿ ಕೆಲವು ರಾಜಕೀಯ ವಿಜ್ಞಾನಿಗಳು ಮತ್ತು ರಾಜಕಾರಣಿಗಳು ಹೊಂದಿದ್ದ ಭ್ರಮೆಯು ನಾಟಕೀಯವಾಗಿ ತಪ್ಪಾಗಿದೆ ಎಂದು ಸಾಬೀತಾಗಿದೆ.
ವಾಸ್ತವವಾಗಿ, 21ನೇ ಶತಮಾನದ ಉದಯದ ಆರಂಭದಲ್ಲಿ, ಅವಳಿ ಗೋಪುರಗಳ ಮೇಲಿನ ಭಯೋತ್ಪಾದಕ ದಾಳಿಯು "ಯೋಚಿಸಲಾಗದ" ಘಟನೆಯೊಂದಿಗೆ ಇವೆಲ್ಲಾ ಸ್ಪಷ್ಟವಾಗಿದೆ, ಇದು ಉದಾರ ಅರ್ಥಶಾಸ್ತ್ರದಿಂದ ಗುರುತಿಸಲ್ಪಟ್ಟ ಜಾಗತಿಕ ಸ್ಥಿರತೆಯ ಯುಗವನ್ನು ಕಲ್ಪಿಸಿಕೊಂಡವರಿಗೆ ಕಠೋರ ಜಾಗೃತಿಯಾಗಿ ಕಾರ್ಯನಿರ್ವಹಿಸಿತು.
ಇತಿಹಾಸದಲ್ಲಿ ಅತ್ಯಂತ ದಬ್ಬಾಳಿಕೆಯ ಸರ್ವಾಧಿಕಾರಿ ವ್ಯವಸ್ಥೆಗಳಲ್ಲಿ ಒಂದನ್ನು, ತನ್ನೊಂದಿಗೆ ತೆಗೆದುಕೊಂಡು ಗೋಡೆ ಬಿದ್ದ ಆ ಐತಿಹಾಸಿಕ ದಿನದಿಂದ, 30 ವರ್ಷಗಳಿಗೂ ಹೆಚ್ಚು ಅವಧಿಯಲ್ಲಿ ಮಾನವೀಯತೆಯು ಸ್ಥಳೀಯ ಬಿಕ್ಕಟ್ಟುಗಳಿಂದ ಪ್ರಾದೇಶಿಕ ಬಿಕ್ಕಟ್ಟುಗಳಿಗೆ ವಿಕಸನಗೊಂಡಿರುವ ನಿರಂತರವಾಗಿ ಹೆಚ್ಚುತ್ತಿರುವ ಸಂಖ್ಯೆಯ ಸಂಘರ್ಷಗಳನ್ನು ಅನುಭವಿಸಿದೆ, ಇದು ವಿಶ್ವಗುರು ಫ್ರಾನ್ಸಿಸ್ ರವರ ಭವಿಷ್ಯವಾಣಿಯಂತೆ "ಮೂರನೇ ಮಹಾಯುದ್ಧವು ತುಂಡು ತುಂಡಾಗಿ ನಡೆಯಿತು" ಎಂದು ಹೇಳಿದ್ದಾರೆ. ಆದ್ದರಿಂದ, ಇತಿಹಾಸವು ಇನ್ನೂ ಕೊನೆಗೊಂಡಿಲ್ಲ.
ಈ ಕಾಲು ಶತಮಾನದಲ್ಲಿ, ಇದನ್ನು ವಿಶ್ವಗುರುಗಳು "ಬದಲಾವಣೆಯ ಯುಗ" ಕ್ಕಿಂತ ಹೆಚ್ಚಾಗಿ "ಯುಗದ ಬದಲಾವಣೆ" ಎಂದು ವಿವರಿಸುವ ಅವಧಿಯನ್ನು, ವಿಶ್ವದ ಮಹತ್ವದ ಶಕ್ತಿಗಳಾದ, ಆರ್ಥಿಕ, ರಾಜಕೀಯ ಮತ್ತು ಮಿಲಿಟರಿ ಪಡೆಗಳು ಮರುರೂಪಿಸಲ್ಪಟ್ಟಿವೆ.
ಇಂದು ನಾವು ಬಹುಧ್ರುವೀಯ ವಿಶ್ವದಲ್ಲಿ ಜೀವಿಸುತ್ತಿದ್ದೇವೆ, ಒಪ್ಪಂದಗಳನ್ನು ಅನುಸರಿಸುವುದು - ವಿಶೇಷವಾಗಿ ಬಿಕ್ಕಟ್ಟಿನ ಸಮಯದಲ್ಲಿ - ಹೆಚ್ಚು ಸಂಕೀರ್ಣ ಮತ್ತು ಕಡಿಮೆ ಪ್ರಮಾಣದಲ್ಲಿ ನೇರವಾಗಿದೆ. ಆದರೂ, ನಾವು ಜೀವಿಸುವ ಜಗತ್ತು ಇದು, ಮತ್ತು ವಾಸ್ತವಿಕತೆಯ ತತ್ವವನ್ನು, ಎಲ್ಲಾ ನಾಯಕರು (ವಿಶೇಷವಾಗಿ ಅಪಾರ ಶಕ್ತಿಯನ್ನು ಹೊಂದಿರುವವರು) ನಮ್ಮ ಕಾಲದ ದೊಡ್ಡ ಸವಾಲುಗಳನ್ನು "ಯಾವಾಗಲೂ ಹೀಗೆಯೇ ಮಾಡಲಾಗುತ್ತಿತ್ತು" ಎಂಬ ಮನಸ್ಥಿತಿಯನ್ನು ತಿರಸ್ಕರಿಸಿ, ಹೊಸ ಮಾದರಿಗಳನ್ನು ಮತ್ತು ಸೃಜನಶೀಲತೆಯ ಕಾರ್ಯಗಳನ್ನು ಬಯಸುತ್ತವೆ ಎಂಬುದನ್ನು ಗುರುತಿಸುವಂತೆ ಒತ್ತಾಯಿಸುತ್ತದೆ.
ಈ ಐತಿಹಾಸಿಕ ಸನ್ನಿವೇಶದಲ್ಲಿ, ಸೋಮವಾರ, ಡೊನಾಲ್ಡ್ ಟ್ರಂಪ್ ರವರು ಅಮೆರಿಕದ ಸಂವಿಧಾನವನ್ನು ರಕ್ಷಿಸಲು ಮತ್ತು ಅಮೆರಿಕಾದ ಜನರಿಗೆ ಸೇವೆ ಸಲ್ಲಿಸಲು ಎರಡನೇ ಬಾರಿಗೆ ಅಧಿಕಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ವ್ಯಾಪಕವಾಗಿ ಗಮನಿಸಿದಂತೆ, ಈ ಘಟನೆಯು ಹಲವು ಅಭೂತಪೂರ್ವ ಅಂಶಗಳನ್ನು ಹೊಂದಿದೆ ಹಾಗೂ ಭರವಸೆ ಮತ್ತು ಕಾಳಜಿ ಎರಡನ್ನೂ ಹೊಂದಿದೆ, ಏಕೆಂದರೆ ಒಂದೇ ಒಂದು ಮಹಾಶಕ್ತಿ ಇಲ್ಲದ ಜಗತ್ತಿನಲ್ಲಿಯೂ ಸಹ, ಅಂತರರಾಷ್ಟ್ರೀಯ ರಾಜಕೀಯ ಮತ್ತು ಆರ್ಥಿಕ ಚಲನಶೀಲತೆಯ ಮೇಲೆ ಅಮೇರಿಕದ ನಿರಂತರ ಪ್ರಭಾವವನ್ನು ಯಾರೂ ಕಡೆಗಣಿಸುವುದಿಲ್ಲ.
ಉಕ್ರೇನ್‌ನಲ್ಲಿ ಯುದ್ಧವನ್ನು ಕೊನೆಗೊಳಿಸುವ ತನ್ನ ಬದ್ಧತೆಯನ್ನು ನಿಯೋಜಿತ ಅಧ್ಯಕ್ಷ ಟ್ರಂಪ್ ರವರು ಪದೇ ಪದೇ ಹೇಳುತ್ತಿದ್ದಾರೆ ಮತ್ತು ತಮ್ಮ ಅಧ್ಯಕ್ಷತೆಯಲ್ಲಿ ಅಮೆರಿಕ ಯಾವುದೇ ಹೊಸ ಸಂಘರ್ಷಗಳಲ್ಲಿ ತೊಡಗುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ. ಅಂತರರಾಷ್ಟ್ರೀಯ ಸಂಸ್ಥೆಗಳ ಬಗ್ಗೆ ಅವರು ಯಾವ ನಿಲುವು ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.
ವಲಸೆ, ಪರಿಸರ ಮತ್ತು ಆರ್ಥಿಕ ಅಭಿವೃದ್ಧಿ (ತಂತ್ರಜ್ಞಾನದಿಂದ ಹೆಚ್ಚಾಗಿ ನಡೆಸಲ್ಪಡುತ್ತಿದೆ) ಶ್ವೇತಭವನದ 47ನೇ ನಿವಾಸಿಯು ಸೂಕ್ಷ್ಮವಾಗಿ ಪರಿಶೀಲಿಸುವ ಪ್ರಮುಖವಾದ ವಿಷಯಗಳಾಗಿವೆ, ಇದನ್ನು ಅಮೆರಿಕಾದ ಜನರು ಮಾತ್ರವಲ್ಲದೆ ಅಂತರರಾಷ್ಟ್ರೀಯ ಸಮುದಾಯವೂ ಸಹ ಸೂಕ್ಷ್ಮವಾಗಿ ಪರಿಶೀಲಿಸುತ್ತದೆ.
ಹಲವು ವರ್ಷಗಳಿಂದ ಅಮೆರಿಕದ ರಾಜಕೀಯ ಜೀವನವನ್ನು ವ್ಯಾಖ್ಯಾನಿಸಿರುವ ಮತ್ತು ಜನವರಿ 6, 2021 ರಂದು ಕ್ಯಾಪಿಟಲ್ ನ ಮೇಲಿನ ದಾಳಿಯು ರಾಷ್ಟ್ರೀಯ ಇತಿಹಾಸದ ಅತ್ಯಂತ ದುಃಖಕರ ಅಥವಾ ಕರಾಳ ದಿನಗಳಲ್ಲಿ ಒಂದಾಗಿ ಕಂಡ ವಿಭಜನೆಗಳು ಮತ್ತು ಧ್ರುವೀಕರಣಗಳನ್ನು ನಿವಾರಿಸುವ ಕಾರ್ಯಗಳನ್ನು ಕೈಗೊಳ್ಳಲು ಅಧ್ಯಕ್ಷ ಟ್ರಂಪ್ ರವರಿಗೆ ಕರೆ ನೀಡಲಾಗಿದೆ. ಇದು ನಿಸ್ಸಂದೇಹವಾಗಿ ಕಷ್ಟಕರವಾದ ಕೆಲಸ ಆದರೆ, ಹೊಸ ಆಡಳಿತಕ್ಕೆ ಅಗತ್ಯವಾದ ಕೆಲಸವಿದು ಎಂದು ನಿರ್ಧರಿಸಲಾಗಿದೆ.
ಹತ್ತು ವರ್ಷಗಳ ಹಿಂದೆ, ಅಮೆರಿಕಾದ ಮೊದಲ ವಿಶ್ವಗುರು ಪೋಪ್ ಫ್ರಾನ್ಸಿಸ್ ರವರು ಅಮೆರಿಕಾದ ರಾಷ್ಟ್ರದ ಸ್ಥಾಪಕ ಮೌಲ್ಯಗಳನ್ನು ಎತ್ತಿ ತೋರಿಸುವ ಭಾಷಣದೊಂದಿಗೆ ಅಮೇರಿಕದ ಕಾಂಗ್ರೆಸ್ ನ್ನು ಉದ್ದೇಶಿಸಿ ಮಾತನಾಡಿದರು. ಈ ಭಾಷಣವನ್ನು ಪುನರ್ವಿಮರ್ಶಿಸುವುದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವರು ಮತ್ತು ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ರವರಿಗೂ ಸಹ ಉಪಯುಕ್ತವಾಗಬಹುದು.
ಕ್ಯಾಪಿಟಲ್ ಬೆಟ್ಟದಲ್ಲಿ ಪಕ್ಷಾತೀತವಾಗಿ ವ್ಯಾಪಕ ಪ್ರಶಂಸೆಗೆ ಪಾತ್ರವಾದ ಆ ಭಾಷಣವು, ಪ್ರಕ್ಷುಬ್ಧ ಸಮಯಗಳಲ್ಲಿಯೂ ಸಹ, ರಾಜಕೀಯ ಜವಾಬ್ದಾರಿಯನ್ನು ಹೊಂದಿರುವವರಿಗೆ ಮಾರ್ಗವನ್ನು ರೂಪಿಸಲು ಸಹಾಯ ಮಾಡುವ ಮಾರ್ಗದರ್ಶಕ ತಾರೆಗಳಾಗಿ ನಾಲ್ಕು ಮಹಾನ್ ಅಮೆರಿಕದವರನ್ನು ಗುರುತಿಸಿತು.
"ಲಿಂಕನ್ ರವರು ಮಾಡಿದಂತೆ ಸ್ವಾತಂತ್ರ್ಯವನ್ನು ಕಾಪಾಡಿದಾಗ, ಮಾರ್ಟಿನ್ ಲೂಥರ್ ಕಿಂಗ್ ರವರು ಅದೇ ರೀತಿ ಪ್ರಯತ್ನಿಸಿದಂತೆ, ಜನರು ತಮ್ಮ ಎಲ್ಲಾ ಸಹೋದರ ಸಹೋದರಿಯರಿಗೆ, ತಮ್ಮ ಪೂರ್ಣ ಹಕ್ಕುಗಳ 'ಕನಸು' ಕಾಣಲು ಅನುವು ಮಾಡಿಕೊಡುವ ಸಂಸ್ಕೃತಿಯನ್ನು ಅಭಿವೃದ್ಧಿಗೊಳಿಸಿದಾಗ, ಆಗ, ಆ ಒಂದು ರಾಷ್ಟ್ರವನ್ನು ಶ್ರೇಷ್ಠವೆಂದು ಪರಿಗಣಿಸಬಹುದು" ಎಂದು ವಿಶ್ವಗುರು ಫ್ರಾನ್ಸಿಸ್ ರವರು ತೀರ್ಮಾನಿಸಿದರು; ಡೊರೊಥಿ ಡೇರವರು, ತನ್ನ ಅವಿಶ್ರಾಂತ ಕಾರ್ಯನಿರ್ವಹಣೆಯಿಂದ, ನ್ಯಾಯ ಮತ್ತು ತುಳಿತಕ್ಕೊಳಗಾದವರ ಪರವಾಗಿ ಶ್ರಮಿಸಿದಾಗ, ಥಾಮಸ್ ಮೆರ್ಟನ್ ರವರ ಚಿಂತನಶೀಲ ಶೈಲಿಯಲ್ಲಿ, ಸಂವಾದವಾಗಿ ಪರಿಣಮಿಸುವ ಮತ್ತು ಶಾಂತಿಯನ್ನು ಬಿತ್ತುವ ವಿಶ್ವಾಸದ ಫಲವು ಇದಾಗುತ್ತದೆ."
ಅಮೆರಿಕವನ್ನು ಶ್ರೇಷ್ಠ ದೇಶವನ್ನಾಗಿ ಮಾಡಿದ ಮೌಲ್ಯಗಳಿವು ಮತ್ತು ಇಂತಹ ಮೌಲ್ಯಗಳು ಇಂದಿಗೂ ಜಗತ್ತಿಗೆ ಬೇಕಾಗಿವೆ.