MAP

2025.01.29 Br Adophe Mulengezi DRC 2025.01.29 Br Adophe Mulengezi DRC 

ಡಿಆರ್ ಕಾಂಗೋ: "ದೈನಂದಿನ ಜೀವನವು ಬದುಕುಳಿಯುವಿಕೆಯ ಹೋರಾಟವಾಗಿದೆ"

ಪ್ರಮುಖ ನಗರವಾದ ಗೋಮಾದಲ್ಲಿ ಇತ್ತೀಚೆಗೆ ಹೆಚ್ಚಿದ ಹಿಂಸಾಚಾರದ ನಂತರ, ಕನ್ಸೊಲಾಟಾದ ಧರ್ಮಪ್ರಚಾರಕ ಬ್ರದರ್. ಅಡೋಫೆ ಮುಲೆಂಗೆಜಿರವರು ದೇಶದ ಭೀಕರ ಪರಿಸ್ಥಿತಿಯನ್ನು ವಿವರಿಸುತ್ತಾರೆ.

ಕೀಲ್ಸ್ ಗುಸ್ಸಿ

1994 ರಿಂದ, ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯವು ಹೋರಾಟಗಳಿಂದ ತುಂಬಿದೆ. ಖನಿಜ-ಸಮೃದ್ಧ ಆಫ್ರಿಕ ರಾಷ್ಟ್ರದ ನಿಯಂತ್ರಣಕ್ಕಾಗಿ ವಿವಿಧ ಸಶಸ್ತ್ರ ಗುಂಪುಗಳು ಹೋರಾಡುತ್ತಿರುವುದರಿಂದ ದೇಶದಲ್ಲಿ ಅಸ್ಥಿರತೆಯು ಹೆಚ್ಚುತ್ತಿದೆ ಎಂಬುದನ್ನು ಸೂಚಿಸುತ್ತಿದೆ.

ಕಳೆದ ಕೆಲವು ದಿನಗಳಲ್ಲಿ, ಜನಾಂಗೀಯ ಟುಟ್ಸಿಗಳ ನೇತೃತ್ವದ M23 ಬಂಡುಕೋರರು ಗೋಮಾ ನಗರವನ್ನು ವಶಪಡಿಸಿಕೊಳ್ಳಲು ಹತ್ತಿರವಾಗುತ್ತಿದ್ದಂತೆ ಸಂಘರ್ಷವು ಉಲ್ಬಣಗೊಂಡಿದೆ.

ಪರಿಸ್ಥಿತಿ ಹದಗೆಡುತ್ತಿದೆ
ವಿಶ್ವಸಂಸ್ಥೆಯ ವಿಶ್ವ ಆಹಾರ ಕಾರ್ಯಕ್ರಮದ ವಕ್ತಾರರು ಪ್ರಮುಖ ನಗರವಾದ ಗೋಮಾದಲ್ಲಿನ ಪರಿಸ್ಥಿತಿಯನ್ನು ವಿವರಿಸುತ್ತಾ, "ರಸ್ತೆಗಳು ಮುಚ್ಚಿಹೋಗಿವೆ, ಬಂದರುಗಳು ಮುಚ್ಚಲ್ಪಟ್ಟಿವೆ ಮತ್ತು ಕಿವು ಸರೋವರವನ್ನು ದಾಟುವವರು ತಾತ್ಕಾಲಿಕ ದೋಣಿಗಳಲ್ಲಿ ತಮ್ಮ ಪ್ರಾಣವನ್ನು ಪಣಕ್ಕಿಡುತ್ತಿದ್ದಾರೆ" ಎಂದು ಹೇಳಿದರು.

ಹಿಂಸಾಚಾರದ ತ್ವರಿತ ಏರಿಕೆಯಿಂದಾಗಿ, ಅನೇಕರು ತಮ್ಮ ಮನೆಗಳಿಂದ ಯಾರೂ ಹೊರ ಬರದೆ, ಮನೆಗಳಿಗೆ ಸೀಮಿತರಾಗಿದ್ದಾರೆ. ಬ್ರದರ್. ಅಡೋಫೆ ಮುಲೆಂಗೆಜಿರವರ ಕುಟುಂಬದ ವಿಷಯವೂ ಹಾಗೆಯೇ. ಬ್ರದರ್. ಅಡೋಫೆ ಮುಲೆಂಗೆಜಿರವರು ರೋಮ್‌ನಲ್ಲಿ ಅಧ್ಯಯನ ಮಾಡುತ್ತಿರುವ ಕನ್ಸೊಲಾಟಾ ಧರ್ಮಪ್ರಚಾರಕರಾಗಿದ್ದು, ಗೋಮಾದಲ್ಲಿನ ಜನರು "ನಗರವು ಈಗ ಭಯಭೀತ ಸ್ಥಿತಿಯಲ್ಲಿ ಸಿಲುಕಿರುವುದರಿಂದ" ತೀವ್ರ ಭಯದಲ್ಲಿ ಜೀವಿಸುತ್ತಿದ್ದಾರೆ ಎಂದು ವ್ಯಾಟಿಕನ್ ಸುದ್ಧಿಗೆ ತಿಳಿಸಿದರು.

M23 ಬಂಡಾಯ ಪಡೆಗಳು ಗೋಮಾ ನಗರವನ್ನು ವಶಪಡಿಸಿಕೊಂಡಿರುವುದಾಗಿ ಸೋಮವಾರ ಹೇಳಿಕೊಂಡಾಗಿನಿಂದ ಬ್ರದರ್ ಅಡೋಫೆರವರು, ಅವರ ಕುಟುಂಬದೊಂದಿಗೆ ಯಾವುದೇ ರೀತಿಯ ಸಂಪರ್ಕವನ್ನು ಹೊಂದಲು ಸಾಧ್ಯವಾಗಿಲ್ಲ. ಪರಿಸ್ಥಿತಿ ಅನಿಶ್ಚಿತವಾಗಿರುವುದರಿಂದ ಮತ್ತು "ಅನೇಕರು ತೀವ್ರ ಸಂಕಷ್ಟದಲ್ಲಿ ಜೀವಿಸುತ್ತಿರುವುದರಿಂದ" "ನಾನು ಅವರ ಸುರಕ್ಷತೆಗಾಗಿ ನಿರಂತರ ಪ್ರಾರ್ಥನೆಯಲ್ಲಿದ್ದೇನೆ" ಎಂದು ಅವರು ಹೇಳಿದರು.

ಸಂವಹನವಿಲ್ಲ, ನೀರಿಲ್ಲ, ವಿದ್ಯುತ್ ಇಲ್ಲ
M23 ಬಂಡುಕೋರರು ಗೋಮಾದಲ್ಲಿನ ವಿಮಾನ ನಿಲ್ದಾಣವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ ಮತ್ತು 1,200ಕ್ಕೂ ಹೆಚ್ಚು ಕಾಂಗೋಲೀಸ್ ನ ಸೈನಿಕರು ಶರಣಾಗಿದ್ದಾರೆ. ನಗರದಲ್ಲಿ ಪರಿಸ್ಥಿತಿ "ವೇಗವಾಗಿ ಹದಗೆಡುತ್ತಿದೆ", ಇಂಟರ್ನೆಟ್ ಇಲ್ಲ, ವಿದ್ಯುತ್ ಕಡಿತ, ನೀರಿನ ಕೊರತೆ ಮತ್ತು ಲೂಟಿಯ ವರದಿಗಳು ಕಂಡು ಬರುತ್ತಿವೆ. ಈ ಪರಿಸ್ಥಿತಿಗಳು "ಜನಸಂಖ್ಯೆಯನ್ನು ಹೆಚ್ಚು ದುರ್ಬಲ ಸ್ಥಿತಿಗೆ ದೂಡಿದೆ, ಅಗತ್ಯ ಸೇವೆಗಳು ಮತ್ತು ಸಂವಹನವನ್ನು ಕಡಿತಗೊಳಿಸಿವೆ" ಎಂದು ಬ್ರದರ್ ಅಡೋಫೆರವರು ವಿವರಿಸಿದರು.

ಸುರಕ್ಷತೆ ಮತ್ತು ಭದ್ರತೆಯನ್ನು ಹುಡುಕುತ್ತಾ, ಗ್ರಾಮೀಣ ಪ್ರದೇಶದ ಜನರು ನಗರಕ್ಕೆ ಪ್ರಯಾಣಿಸಿದರು. ಅಲ್ಲಿ ಅವರು "ವ್ಯಾಪಕವಾಗಿರುವ ಭಯ ಮತ್ತು ಅಸಹಾಯಕತೆಯ ಭಾವನೆಯನ್ನು" ಕಂಡುಕೊಂಡರು.

ಕಾರ್ಯಪ್ರವೃತ್ತದಲ್ಲಿರುವ ಧರ್ಮಸಭೆ
ಕೆಲವೇ ದಿನಗಳಲ್ಲಿ, ಗೋಮಾ ಸುತ್ತಮುತ್ತಲಿನ ಶಿಬಿರಗಳಲ್ಲಿ ವಾಸಿಸುತ್ತಿದ್ದ ಸುಮಾರು 300,000 ಜನರು ಹಿಂಸಾಚಾರದಿಂದಾಗಿ ನಿರಾಶ್ರಿತರಾಗಿದ್ದಾರೆ. ವಿಶ್ವಸಂಸ್ಥೆಯ ನೆರವಿನ ಸಮನ್ವಯ ಕಚೇರಿ, OCHA, ಮಾನವೀಯ ಗೋದಾಮು ಮತ್ತು ಆರೋಗ್ಯ ಸೌಲಭ್ಯಗಳಿಗೆ ಹಾನಿಯಾಗಿದೆ ಎಂದು ವರದಿ ಮಾಡಿದೆ.

ಜನಸಂಖ್ಯೆಯಲ್ಲಿ ಹೆಚ್ಚುತ್ತಿರುವ ನೆರವಿನ ಅಗತ್ಯಕ್ಕೆ ಸ್ಪಂದಿಸುತ್ತಾ, ಗೋಮಾದ ಧರ್ಮಾಧ್ಯಕ್ಷರಾದ ವಿಲಿಯಂ ಗುಂಬಿರವರು ಜನವರಿ 27 ರಂದು ದಿನಾಂಕ 1997 ರಂದು ಒಂದು ಪತ್ರವನ್ನು ಬಿಡುಗಡೆ ಮಾಡಿದರು, ಅದು ದಾಳಿಗಳನ್ನು ಖಂಡಿಸಿತು. ಚಾರಿಟಿ ಮಟಾನೊ ಜನರಲ್ ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ಘಟಕದ ಮೇಲೆ ಬಾಂಬ್ ದಾಳಿ ನಡೆಸಿ ನವಜಾತ ಶಿಶುಗಳನ್ನು ಕೊಂದ ಘಟನೆಯನ್ನೂ ಸಹ ಇದು ಖಂಡಿಸಿತು. ಸಹಾಯ ನೀಡುವ ಮೂಲಕ ಮತ್ತು ಪ್ರಾರ್ಥನೆಗಳ ಮೂಲಕ ಸ್ಥಳಾಂತರಗೊಂಡವರೊಂದಿಗೆ ತಮ್ಮ ಒಗ್ಗಟ್ಟನ್ನು ತೋರ್ಪಡಿಸಲು ಧರ್ಮಾಧ್ಯಕ್ಷರಾದ ಗುಂಬಿರವರು ಸಮುದಾಯವನ್ನು ಪ್ರೋತ್ಸಾಹಿಸಿದರು.

ವಿಶ್ವಗುರುವಿನ ಭೇಟಿ
ವಿಶ್ವಗುರು ಫ್ರಾನ್ಸಿಸ್ ರವರು ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯಕ್ಕೆ ಭೇಟಿ ನೀಡಿ ಎರಡು ವರ್ಷಗಳಾಗಿವೆ. ಪರಿಸ್ಥಿತಿಯು ಯಾವುದೇ ರೀತಿಯಲ್ಲಿ ಬದಲಾಗಿಲ್ಲ ಎಂದು ಬ್ರದರ್.ಅಡೋಫೆರವರು ಬಣ್ಣಿಸಿದರು. "ನಾವು ಸಂದೇಶವನ್ನು ನಿಜವಾಗಿಯೂ ಸೆರೆಹಿಡಿಯಲು ಸಾಧ್ಯವಾಗದ ಖಾಲಿ ಪಾತ್ರೆಯೊಂದಿಗೆ ಮಾತನಾಡುತ್ತಿರುವಂತೆ ತೋರುತ್ತಿದೆ" ಎಂದು ಅವರು ವಿಷಾದಿಸಿದರು.

ದಶಕಗಳಿಂದ, ದೇಶವು ಯುದ್ಧದಲ್ಲಿದೆ ಮತ್ತು ಇದರ ಪರಿಣಾಮವಾಗಿ "ಜೀವನದ ಘನತೆ ಇಲ್ಲ" ಎಂದು ಬ್ರದರ್ ಅಡೋಫೆರವರು ವಿವರಿಸಿದರು. ಕಾಂಗೋದಲ್ಲಿ, ಜೀವನದ ಘನತೆಯ ಬಗ್ಗೆ ನೀವು ನನಗೆ ಹೇಳಲು ಸಾಧ್ಯವಿಲ್ಲ: ಏಕೆಂದರೆ "ಎಲ್ಲೆಡೆ ನಿಜವಾಗಿಯೂ ರಕ್ತದಿಂದ ತುಂಬಿರುವ ಈ ದೇಶದಲ್ಲಿ ನಾನು ಮನುಷ್ಯನಾಗಿ ಎಂದಿಗೂ ಆನಂದಿಸಿಲ್ಲ" ಎಂದು ಅವರು ಹೇಳಿದರು.

ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದ ಜನರ ಪರವಾಗಿ ಮಧ್ಯಪ್ರವೇಶಿಸಲು ಮತ್ತು ವಕಾಲತ್ತು ವಹಿಸಲು ಅವರು ಅಂತರರಾಷ್ಟ್ರೀಯ ಸಮುದಾಯದಿಂದ ಸಹಾಯಕ್ಕಾಗಿ ಕರೆ ನೀಡಿದರು. ಯುದ್ಧವು ನಿಲ್ಲಲೆಬೇಕು ಎಂದು ಬ್ರದರ್ ಅಡೋಫೆರವರು ಒತ್ತಾಯಿಸಿದರು. "ನಮಗೆ ಬದುಕುವ ಹಕ್ಕಿರುವುದರಿಂದ ಗೋಮಾ, ಡಿ.ಆರ್. ಕಾಂಗೋವನ್ನು ಯಾವುದೇ ಇತರ ರಾಷ್ಟ್ರದಂತೆ ಉಸಿರಾಡಲು ಮತ್ತು ಬದುಕಲು ಬಿಡಬೇಕು. ಯಾವುದೇ ಇತರ ರಾಷ್ಟ್ರದಂತೆ ನಮಗೂ ಬದುಕುವ ಹಕ್ಕಿದೆ."

29 ಜನವರಿ 2025, 13:02