ಕಾರ್ಡಿನಲ್ ಮುಲ್ಲಾ: ಕ್ರೂರ ಹತ್ಯೆಗೆ ಪ್ರತಿಕ್ರಿಯೆಯಾಗಿ ಸೇಡು ತೀರಿಸಿಕೊಳ್ಳಬೇಡಿ
ಸಿಸ್ಟರ್. ಜೆಸಿಂಟರ್ ಆಂಟೊನೆಟ್ ಒಕೊತ್, FSSA
ಸುಡಾನ್‌ನಲ್ಲಿ ನೆಲೆಸಿರುವ ದಕ್ಷಿಣ ಸುಡಾನಿನ ನಿರಾಶ್ರಿತರ ಮೇಲೆ ಇತ್ತೀಚೆಗೆ ನಡೆದ ಕ್ರೂರ ದಾಳಿಯ ನಂತರ, ಸುಡಾನ್ ಕಥೋಲಿಕ ಧರ್ಮಾಧ್ಯಕ್ಷರುಗಳ ಸಮ್ಮೇಳನದ (SSS-CBC) ಅಧ್ಯಕ್ಷ ಕಾರ್ಡಿನಲ್ ಮುಲ್ಲಾರವರು, ನಾಗರಿಕರಿಗೆ ಮನವಿ ಮಾಡಿದ್ದಾರೆ, ನಷ್ಟದ ಭಾರೀ ನೋವಿನ ನಡುವೆಯೂ, ನೀವು ಸೇಡು ತೀರಿಸಿಕೊಳ್ಳಬಾರದು ಎಂದು ಮನವಿ ಮಾಡಿದ್ದಾರೆ.
ಕಾರ್ಡಿನಲ್ ರವರು ದಕ್ಷಿಣ ಸುಡಾನಿನ ನಿರಾಶ್ರಿತರ ಮೇಲೆ ಇತ್ತೀಚೆಗೆ ನಡೆದ ಕ್ರೂರ ದಾಳಿಯಲ್ಲಿ ನಡೆದ ಹಿಂಸಾತ್ಮಕ ಹತ್ಯೆಯನ್ನು ಖಂಡಿಸಿದರು ಮತ್ತು ಮುಗ್ಧ ದಕ್ಷಿಣ ಸುಡಾನ್ ನಾಗರಿಕರ ಕ್ರೂರ ಹತ್ಯೆಯು "ದ್ವೇಷ ಮತ್ತು ದಬ್ಬಾಳಿಕೆಯಲ್ಲಿ ಬೇರೂರಿರುವ ಘೋರ ಕೃತ್ಯ" ಎಂದು ಗಮನಿಸಿದರು.
ಪ್ರೀತಿ, ಕ್ಷಮೆ ಮತ್ತು ತಿಳುವಳಿಕೆಯನ್ನು ಅಳವಡಿಸಿಕೊಳ್ಳಿ
ದಕ್ಷಿಣ ಸುಡಾನ್ ವಿರುದ್ಧದ ಹಿಂಸಾಚಾರದ ಕೃತ್ಯಗಳ ಹಿಂದಿನ ಪ್ರೇರಕ ಶಕ್ತಿ, ದಬ್ಬಾಳಿಕೆಯ ಆಡಳಿತಗಳು ಮತ್ತು ವ್ಯವಸ್ಥೆಗಳು, ವ್ಯಕ್ತಿಗಳನ್ನು ಅವರ ಜನಾಂಗೀಯತೆ, ವಿಶ್ವಾಸಕ್ಕೆ ಅಥವಾ ರಾಜಕೀಯ ಸಂಬಂಧಗಳಿಗಾಗಿ ಅಮಾನವೀಯಗೊಳಿಸುತ್ತವೆ ಎಂಬುದನ್ನು ಜುಬಾದ ಕಾರ್ಡಿನಲ್ ಮಹಾಧರ್ಮಾಧ್ಯಕ್ಷರು ಗಮನಿಸಿದರು.
"ನಮ್ಮ ಕರೆ ಪ್ರೀತಿ, ಕ್ಷಮೆ ಮತ್ತು ಕ್ರಿಸ್ತರು ನಮಗೆ ಕಲಿಸುವ ತಿಳುವಳಿಕೆಯ ತತ್ವಗಳಲ್ಲಿ ನೆಲೆಗೊಂಡಿದೆ" ಎಂದು ಅವರು ಹೇಳಿದರು.
"ಈ ದೌರ್ಜನ್ಯಗಳನ್ನು ಗಮನದಲ್ಲಿಟ್ಟುಕೊಂಡು, ನಮ್ಮ ಪ್ರೀತಿಯ ದಕ್ಷಿಣ ಸುಡಾನ್ ಜನರು ಸಂಯಮ ಮತ್ತು ಸಹಾನುಭೂತಿಯನ್ನು ತೋರಿಸಬೇಕೆಂದು ನಾವು ಮನವಿ ಮಾಡುತ್ತೇವೆ. ಈ ಘಟನೆಗಳಿಂದ ಉಂಟಾಗುವ ನೋವು ಮತ್ತು ಕೋಪವು ಅರ್ಥವಾಗುವಂತಹದ್ದಾಗಿದ್ದರೂ, ನಮ್ಮ ರಾಷ್ಟ್ರದಲ್ಲಿರುವ ಸುಡಾನ್ ನಿರಾಶ್ರಿತರ ವಿರುದ್ಧ ಸೇಡು ತೀರಿಸಿಕೊಳ್ಳುವುದನ್ನು ತಡೆಯುವಂತೆ ನಾವು ನಿಮ್ಮನ್ನು ಬೇಡಿಕೊಳ್ಳುತ್ತೇವೆ" ಎಂದು ಕಾರ್ಡಿನಲ್ ರವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
"ಈ ವ್ಯಕ್ತಿಗಳಲ್ಲಿ ಅನೇಕರು ನಮ್ಮ ವಿರುದ್ಧ ಹಿಂಸಾಚಾರವನ್ನು ನಡೆಸಿದ ಅದೇ ದಬ್ಬಾಳಿಕೆಯ ಸರ್ಕಾರದಿಂದ ಪಲಾಯನ ಮಾಡುತ್ತಿದ್ದಾರೆ. ಅವರು ಕೂಡ ಕರುಣೆ ತೋರಿಸದ ಕ್ರೂರ ವ್ಯವಸ್ಥೆಯ ಸಂತ್ರಸ್ಥರಾಗಿದ್ದಾರೆ."
ಸೇಡು ಹಾನಿಕಾರಕ
ಕಾರ್ಡಿನಲ್ ರವರು ಸೇಡಿನ ಬಗ್ಗೆ ತಮ್ಮ ಕಳವಳವನ್ನು ವ್ಯಕ್ತಪಡಿಸಿದರು, ಅದು ಸಂಘರ್ಷ ಮತ್ತು ದ್ವೇಷವನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.
“ಸೇಡು, ಹೆಚ್ಚು ಹಿಂಸೆ ಮತ್ತು ಸಂಕಟವನ್ನು ಹುಟ್ಟುಹಾಕುತ್ತದೆ, ನಮ್ಮನ್ನು ಬಂಧಿಸುವ ದ್ವೇಷದ ಚಕ್ರಗಳನ್ನು ಆಳಗೊಳಿಸುತ್ತದೆ” ಎಂದು ಅವರು ಹೇಳಿದರು. ಬದಲಿಗೆ, ನಮ್ಮ ನಡುವೆ ಆಶ್ರಯ ಪಡೆದವರಿಗೆ ಒಗ್ಗಟ್ಟಿನಿಂದ ನಮ್ಮ ನೆರವಿನ ಹಸ್ತಗಳನ್ನು ಚಾಚೋಣ, ಅವರ ದುಃಸ್ಥಿತಿಯನ್ನು ನಮ್ಮ ಹಂಚಿಕೆಯ ಮಾನವ ಅನುಭವದ ಭಾಗವೆಂದು ಗುರುತಿಸೋಣ.”
ಕಠಿಣ ಸಮಯದಲ್ಲಿ ಒಗ್ಗಟ್ಟು ಮತ್ತು ಐಕ್ಯತೆ
ದಕ್ಷಿಣ ಸುಡಾನ್ ಸಮುದಾಯದ ನಡುವಿನ ಐಕ್ಯತೆಯ ಮನೋಭಾವಕ್ಕೆ ಕಾರ್ಡಿನಲ್ ಮುಲ್ಲಾರವರು ಮೆಚ್ಚುಗೆ ವ್ಯಕ್ತಪಡಿಸಿದರು.
ಅವರು ಭಕ್ತವಿಶ್ವಾಸಿಗಳನ್ನು ಕುರಿತು ಸಂವಾದದಲ್ಲಿ ತೊಡಗಿಸಿಕೊಳ್ಳಲು, ಸಹಾನುಭೂತಿಯನ್ನು ಉತ್ತೇಜಿಸಲು ಮತ್ತು ತಿಳುವಳಿಕೆಯ ಸೇತುವೆಗಳನ್ನು ನಿರ್ಮಿಸಲು ಕರೆ ನೀಡಿದರು.
ಈ ಕಾರ್ಯಗಳ ಮೂಲಕ, "ನಾವು ಕಳೆದುಕೊಂಡವರ ನೆನಪುಗಳನ್ನು ಗೌರವಿಸುತ್ತೇವೆ ಮತ್ತು ಶಾಂತಿ, ನ್ಯಾಯ ಮತ್ತು ಸಾಮರಸ್ಯವು ಮೇಲುಗೈ ಸಾಧಿಸುವ ಭವಿಷ್ಯಕ್ಕೆ ಕೊಡುಗೆ ನೀಡುತ್ತೇವೆ" ಎಂದು ಕಾರ್ಡಿನಲ್ ರವರು ಹೇಳಿದರು.
"ನಮ್ಮ ಪ್ರಾರ್ಥನೆಗಳು ಸಂತ್ರಸ್ತರ ಕುಟುಂಬಗಳೊಂದಿಗೆ ಇವೆ, ಮತ್ತು ಈ ಅಸಹನೀಯ ದುರಂತವನ್ನು ದುಃಖಿಸುವವರೊಂದಿಗೆ ನಾವು ಒಗ್ಗಟ್ಟಿನಲ್ಲಿ ನಿಲ್ಲುತ್ತೇವೆ" ಎಂದು ಅವರು ಹೇಳಿದರು, "ನಮ್ಮ ದಕ್ಷಿಣ ಸುಡಾನ್ ಸಮುದಾಯಗಳನ್ನು ನಿರೂಪಿಸುವ ಏಕತೆ ಮತ್ತು ಸ್ಥಿತಿಸ್ಥಾಪಕತ್ವದ ಮನೋಭಾವದ ಬಗ್ಗೆ, ನಮಗೆ ಹೆಮ್ಮೆ ಇದೆ. ನಾವು ಒಟ್ಟಾಗಿ ಸೌಖ್ಯಪಡಿಸುವ ಮತ್ತು ಪುನರ್ನಿರ್ಮಾಣದ ಕಡೆಗೆ ಕೆಲಸ ಮಾಡಬೇಕು, ಪ್ರತಿಯೊಬ್ಬ ವ್ಯಕ್ತಿಯು ಅವರ ಮೂಲವನ್ನು ಲೆಕ್ಕಿಸದೆ ಸುರಕ್ಷಿತ ಮತ್ತು ಮೌಲ್ಯಯುತವೆಂದು ಭಾವಿಸಬಹುದಾದ ವಾತಾವರಣವನ್ನು ಬೆಳೆಸಬೇಕು" ಎಂದು ಅವರು ಹೇಳಿದರು.