MAP

International Holocaust Remembrance Day, in Poland International Holocaust Remembrance Day, in Poland  (ALEKSANDRA SZMIGIEL)

ಆಶ್ವಿಟ್ಜ್ ವಿಮೋಚನೆಯ 80ನೇ ವಾರ್ಷಿಕೋತ್ಸವ: ಎಂದಿಗೂ ಮರೆಯಬೇಡಿ ಮತ್ತು ನಿರಾಕರಿಸಬೇಡಿ

ಜನವರಿ 27, 2025 ರಂದು ಜರ್ಮನ್ ಆಕ್ರಮಿತ ಪೋಲೆಂಡ್‌ನಲ್ಲಿ ಜರ್ಮನ್ ನಾಜಿ ಸೆರೆ ಮತ್ತು ನಿರ್ನಾಮ ಶಿಬಿರವಾದ ಆಶ್ವಿಟ್ಜ್‌ನ ವಿಮೋಚನೆಯ 80ನೇ ವಾರ್ಷಿಕೋತ್ಸವವನ್ನು ಆಚರಿಸುತ್ತದೆ. ಆಶ್ವಿಟ್ಜ್-ಬಿರ್ಕೆನೌನ ರಾಜ್ಯ ವಸ್ತುಸಂಗ್ರಹಾಲಯದ ನಿರ್ದೇಶಕ ಪಿಯೋಟರ್ ಸಿವಿನ್ಸ್ಕಿರವರು ವ್ಯಾಟಿಕನ್ ಮಾಧ್ಯಮದೊಂದಿಗೆ ಆಶ್ವಿಟ್ಜ್ ನ ಪೂರ್ವಜರ ಸ್ಮರಣೆಯನ್ನು ಜೀವಂತವಾಗಿರಿಸಿಕೊಳ್ಳುವ ಮತ್ತು ಜವಾಬ್ದಾರಿಗಳನ್ನು ತೆಗೆದುಕೊಳ್ಳುವ ಮಹತ್ವದ ಬಗ್ಗೆ ಮಾತನಾಡುತ್ತಾರೆ.

ಎಸ್. ಕಿಡೇನ್

ಎರಡನೇ ಮಹಾಯುದ್ಧದ ಸಮಯದಲ್ಲಿ ಆಶ್ವಿಟ್ಜ್-ಬಿರ್ಕೆನೌ ಜರ್ಮನ್ ನಾಜಿ ಸೆರೆ ಮತ್ತು ನಿರ್ನಾಮ ಶಿಬಿರದಲ್ಲಿ 1.1 ಮಿಲಿಯನ್‌ಗಿಂತಲೂ ಹೆಚ್ಚು ಪುರುಷರು, ಮಹಿಳೆಯರು ಮತ್ತು ಮಕ್ಕಳು ಕೊಲ್ಲಲ್ಪಟ್ಟರು.

ಪೋಲಿಷ್ ನಗರವಾದ ಓಸ್ವೀಸೆಮ್ ನ್ನು ನಾಜಿಗಳು ಥರ್ಡ್ ರೀಚ್‌ಗೆ(ಜರ್ಮನ್‌ ಸಾಮ್ರಾಜ್ಯ) ಸೇರಿಸಿಕೊಂಡ ನಂತರ 1940 ರಲ್ಲಿ ಜರ್ಮನ್ನರು ಸ್ಥಾಪಿಸಿದ ಆಶ್ವಿಟ್ಜ್ ಭಯೋತ್ಪಾದನೆ, ನರಮೇಧ ಮತ್ತು ಶೋವಾಗಳ(ಹತ್ಯಾಕಾಂಡದ) ಸಂಕೇತವಾಗಿದೆ.

ಈ ಸ್ಮಾರಕವನ್ನು 1979ರಲ್ಲಿ ವಿಶ್ವಗುರು ದ್ವಿತೀಯ ಸಂತ ಜಾನ್ ಪಾಲ್ ರವರು, 2006ರಲ್ಲಿ ವಿಶ್ವಗುರು ಹದಿನಾರನೇ ಬೆನೆಡಿಕ್ಟ್ ರವರು ಮತ್ತು 2016ರಲ್ಲಿ ವಿಶ್ವಗುರು ಫ್ರಾನ್ಸಿಸ್ ರವರು ಭೇಟಿ ನೀಡಿದರು.

ಆಶ್ವಿಟ್ಜ್ ಸ್ಮಾರಕ ಮತ್ತು ವಸ್ತುಸಂಗ್ರಹಾಲಯದ ಮಾಹಿತಿಯನ್ನು ಕೇವಲ ನಾವು ವೆಬ್‌ಸೈಟ್‌ನಲ್ಲಿ (ಅಂತರ್ಜಾಲ ತಾಣದಲ್ಲಿ) ಓದಬಹುದಾದುದನ್ನು "ಸ್ಮರಣೆ" ಎಂದರೆ, ಒಮ್ಮೆ ಅದನ್ನು ಒದಿ ಸಂಪಾದಿಸಿ ಆ ನೆನಪನ್ನು ಶಾಶ್ವತವಾಗಿ ಉಳಿಸಿಕೊಳ್ಳುವ ವಿಷಯವಲ್ಲ. ಆಶ್ವಿಟ್ಜ್ ನ ಕೊನೆಯ ಪ್ರತ್ಯಕ್ಷದರ್ಶಿಗಳು ಮತ್ತು ಬದುಕುಳಿದವರು ನಿಧನರಾದ ಕ್ಷಣಗಳನ್ನು ಹಾಗೂ ಆ ಹಿಂದಿನ ಕೈದಿಗಳ ಸಾಕ್ಷ್ಯಗಳನ್ನು ರಕ್ಷಿಸಿ ಕಾಪಾಡಲು ನಾವೆಲ್ಲರೂ ಒಟ್ಟಾಗಿ ಶ್ರಮಿಸಿಬೇಕಾಗಿದೆ.

ಆಶ್ವಿಟ್ಜ್-ಬಿರ್ಕೆನೌ ರಾಜ್ಯ ವಸ್ತುಸಂಗ್ರಹಾಲಯದ ನಿರ್ದೇಶಕ ಪಿಯೋಟರ್ ಸಿವಿನ್ಸ್ಕಿ, ಎಲ್'ಒಸ್ಸೆರ್ವಾಟೋರ್ ರೊಮಾನೋ (L’Osservatore Romano’s) ದ ಸಬಾ ಕಿಡೇನ್ ರವರೊಂದಿಗೆ ಮಾತನಾಡಿದ ಅವರು, ವಿಮೋಚನೆಯ ವಾರ್ಷಿಕೋತ್ಸವವನ್ನು ಆಚರಿಸಲು ಒಟ್ಟುಗೂಡಿದ ವಿಶ್ವ ನಾಯಕರ ಜೊತೆಗೆ, ಬದುಕುಳಿದವರ ನಿರ್ಣಾಯಕ ಪಾತ್ರವನ್ನು, ಸ್ಮರಣೆ ಮತ್ತು ಜವಾಬ್ದಾರಿಯ ಅಗತ್ಯವನ್ನು ಎತ್ತಿ ತೋರಿಸಿದರು.

ಸಂದರ್ಶನದ ವಿವರಗಳು:
ಪ್ರಶ್ನೆ: ಈ ವರ್ಷ ನೀವು ಈ ಕಾರ್ಯಕ್ರಮವನ್ನು ಹೇಗೆ ಸ್ಮರಿಸುತ್ತೀರಿ ಮತ್ತು ಇತರ ವರ್ಷಗಳಿಗಿಂತ ಇದು ಹೇಗೆ ಭಿನ್ನವಾಗಿರುತ್ತದೆ?
ಈ ವರ್ಷ, ಆಶ್ವಿಟ್ಜ್-ಬಿರ್ಕೆನೌ ಜರ್ಮನ್ ನಾಜಿ ಸೆರೆಯವರಿಂದ ಬದುಕುಳಿದ, ಅಂದರೆ ನಮ್ಮೊಂದಿಗಿರುವ ಬದುಕುಳಿದವರ ಮೇಲೆ ನಾವು ಸಂಪೂರ್ಣವಾಗಿ ನಮ್ಮ ಗಮನಹರಿಸುತ್ತೇವೆ, ಪ್ರಸ್ತುತವಾಗಿ ಕೇವಲ ಬಹುಶಃ 50 ಅಥವಾ ಬಹುಶಃ 60 ಜನರು ಇರಬಹುದು. ಬದುಕುಳಿದವರು ಆ ದಿನದಂದು, ಮುಖ್ಯ ಅತಿಥಿಗಳು ಹಾಗೂ ಪ್ರಮುಖ ವ್ಯಕ್ತಿಗಳಾಗಿರುತ್ತಾರೆ. ಅವರು ಆ ಆಚರಣೆಯ ಮುಖ್ಯ ಭಾಷಣಗಳನ್ನು ನೀಡುತ್ತಾರೆ. ಅಂದು ಯಾವುದೇ ರಾಜಕೀಯ ಭಾಷಣಗಳು ಇರುವುದಿಲ್ಲ. ನಂತರ ಕೆಲವು ಸಾಮಾನ್ಯ ಪ್ರಾರ್ಥನೆಗಳು ಇರುತ್ತವೆ. ನಾವು ಸಂತ್ರಸ್ತರಿಗೆ ಮೇಣದಬತ್ತಿಗಳೊಂದಿಗೆ ಪ್ರಾರ್ಥನೆ ಮಾಡುವುದರ ಮೂಲಕ ಗೌರವ ಸಲ್ಲಿಸುತ್ತೇವೆ.

ಪ್ರಶ್ನೆ: ಜಗತ್ತಿನ ಪ್ರಸ್ತುತ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಆ ವಿಷಯಗಳನ್ನು, ನೆನಪಿಸಿಕೊಳ್ಳುವುದರ ಮಹತ್ವವೇನು?
ನಮ್ಮ ಇಂದಿನ ಸ್ಥಾನವನ್ನು ಅರ್ಥಮಾಡಿಕೊಳ್ಳಲು, ನಮ್ಮ ಕೆಲಸಗಳು, ನಮ್ಮ ಜವಾಬ್ದಾರಿಗಳು ಮತ್ತು ನಮ್ಮ ಅಗತ್ಯಗಳನ್ನು ಅರ್ಥಮಾಡಿಕೊಳ್ಳಲು, ನಮಗೆ ಇರುವ ಕೆಲವೇ "ತೆರೆಹಿಡಿ/ನೆರವು" ಗಳಲ್ಲಿ ಈ ಸ್ಮರಣೆಯೂ ಒಂದು ಎಂದು ನಾನು ಭಾವಿಸುತ್ತೇನೆ. ಈ ಅನುಭವಗಳು ನಮ್ಮನ್ನು ಸಮಾಜದಲ್ಲಿ ಒಬ್ಬ ಉತ್ತಮ ಪ್ರಜೆಯಾಗಿ ಜೀವಿಸಲು ಬೇಕಾದ ಅಂಶಗಳನ್ನು ಅರಿತುಕೊಳ್ಳಲು ಸಹಕರಿಸುತ್ತವೆ.

ಪ್ರಶ್ನೆ: ಬದುಕುಳಿದವರಗೆ ವಯಸ್ಸಾಗುತ್ತಿದ್ದೆ, ಪ್ರಕೃತಿಯ ನಿಯಮದಂತೆ ವಯಸ್ಸಾದ ಮೇಲೆ ಸಾಯುವುದು ಖಚಿತ, ಆದ್ದರಿಂದ ಅಂತಿಮವಾಗಿ ಅವರು ನಮ್ಮೊಂದಿಗೆ ಇರುವುದಿಲ್ಲ. ಇಲ್ಲಿ ನಡೆದಂತಹ ವಿಷಯಗಳು 50 ವರ್ಷಗಳ ನಂತರ, ಇಂದು ಜನಿಸಿದ ಮಕ್ಕಳಿಗೆ ಇತಿಹಾಸದಲ್ಲಿ ಮತ್ತೊಂದು ಭಯಾನಕ ಕಥೆಯಾಗದಂತೆ ನಾವು ಹೇಗೆ ಖಚಿತಪಡಿಸಿಕೊಳ್ಳಬಹುದು?
ಯುರೋಪಿನಲ್ಲಿ ಇಂತಹ ದುರಂತಗಳನ್ನು ತಪ್ಪಿಸಲು ಯುದ್ಧದ ನಂತರ ನಮ್ಮ ಸಾಮಾನ್ಯ ಪ್ರಯತ್ನ ಏನೆಂದು ನಾವು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಬೇಕು ಎಂದು ನಾನು ಭಾವಿಸುತ್ತೇನೆ: ಯುರೋಪಿನ ಒಕ್ಕೂಟದ ರಚನೆ, ಯುರೋಪಿನ ಎಲ್ಲಾ ಸಮುದಾಯದ ಮನೋಭಾವ, ದೇಶಗಳ ನಡುವೆ, ರಾಷ್ಟ್ರಗಳ ನಡುವೆ, ಹಾಗೆಯೇ ಧರ್ಮಸಭೆಗಳ ನಡುವೆ ಸಹಕಾರ, ಎಲ್ಲಾ ಧರ್ಮಾಧ್ಯಕ್ಷರುಗಳ ಪ್ರಯತ್ನಗಳು, ವಿಭಿನ್ನ ಗುಂಪುಗಳ ನಡುವಿನ ಸಹಬಾಳ್ವೆ, ಒಂದು ನಿರ್ದಿಷ್ಟ ಸಹಬಾಳ್ವೆ, ಇನ್ನೂ ಹೆಚ್ಚಿನ ಸಹಕಾರವು ಎಲ್ಲರಿಗೂ ಖಂಡಿತವಾಗಿಯೂ ಹೆಚ್ಚು ನೈತಿಕ, ಹೆಚ್ಚು ಫಲಪ್ರದವಾದ ಮಾರ್ಗವಾಗಿದೆ ಎಂದು ತೋರಿಸಲು ಒಂದು ರೀತಿಯ ಉತ್ತರವಾಗಿತ್ತು.

27 ಜನವರಿ 2025, 12:49