MAP

SKOREA-AVIATION-ACCIDENT SKOREA-AVIATION-ACCIDENT 

ದಕ್ಷಿಣ ಕೊರಿಯಾದ ಧರ್ಮಾಧ್ಯಕ್ಷರುಗಳಿಂದ ಉತ್ತಮ ಸುರಕ್ಷತಾ ಕ್ರಮಗಳಿಗಾಗಿ ಮನವಿ

ಸುಮಾರು 200 ಜೀವಗಳನ್ನು ಬಲಿ ಪಡೆದ ಮಾರಣಾಂತಿಕ ವಿಮಾನ ಅಪಘಾತದ ನಂತರ, ದಕ್ಷಿಣ ಕೊರಿಯಾದ ಧರ್ಮಾಧ್ಯಕ್ಷರುಗಳು ಉತ್ತಮ ಸುರಕ್ಷತಾ ಕ್ರಮಗಳನ್ನು ಸಾಧ್ಯವಾದಷ್ಟು ಬೇಗ ಜಾರಿಗೆ ತರಬೇಕೆಂದು ಒತ್ತಾಯಿಸುತ್ತಿದ್ದಾರೆ.

ಡೆಬೊರಾ ಕ್ಯಾಸ್ಟೆಲ್ಲಾನೊ ಲುಬೊವ್

29 ಡಿಸೆಂಬರ್ 2024 ರಂದು, ಬೋಯಿಂಗ್ 737-800 ಥೈಲ್ಯಾಂಡ್‌ನಿಂದ ದಕ್ಷಿಣ ಕೊರಿಯಾಕ್ಕೆ 181 ಜನರನ್ನು ಹೊತ್ತೊಯ್ಯುತ್ತಿದ್ದಾಗ ಜೆಜು ಏರ್ ವಿಮಾನವು ಆಗಮನದ ವೇಳೆ ಪತನಗೊಂಡಿತು.

ಭಗ್ನಾವಶೇಷಗಳಿಂದ ಹೊರತೆಗೆದ ಇಬ್ಬರು ವಿಮಾನ ಪರಿಚಾರಕರನ್ನು/ಫ್ಲೈಟ್ ಅಟೆಂಡೆಂಟ್‌ಗಳನ್ನು ಹೊರತುಪಡಿಸಿ ಕಡಿಮೆ ವೆಚ್ಚದ ವಿಮಾನದಲ್ಲಿದ್ದ ಎಲ್ಲರೂ ಸಾವನ್ನಪ್ಪಿದ್ದರು.

ಇದು ದಕ್ಷಿಣ ಕೊರಿಯಾದ ನೆಲದಲ್ಲಿ ಅತ್ಯಂತ ಕೆಟ್ಟ ವಾಯುಯಾನ ದುರಂತವನ್ನು ಗುರುತಿಸುತ್ತದೆ.

ಅಪಘಾತದ ನಂತರ ವಿಶ್ವಗುರು ಫ್ರಾನ್ಸಿಸ್ ರವರು ತಮ್ಮ ಭಾನುವಾರದ ತ್ರಿಕಾಲ ಪ್ರಾರ್ಥನೆಯಲ್ಲಿ ಸಂತ್ರಸ್ತರಿಗಾಗಿ ಮತ್ತು ಅವರ ಪ್ರೀತಿಪಾತ್ರರಿಗಾಗಿ ಪ್ರಾರ್ಥನೆ ಸಲ್ಲಿಸಿದರು. "ನಾಟಕೀಯ ವಿಮಾನ ಅಪಘಾತದ ನಂತರ ಇಂದು ಶೋಕಿಸುತ್ತಿರುವ ದಕ್ಷಿಣ ಕೊರಿಯಾದ ಅನೇಕ ಕುಟುಂಬಗಳ ಕಡೆಗೆ ನನ್ನ ಆಲೋಚನೆಗಳು ತಿರುಗುತ್ತಿವೆ" ಎಂದು ಅವರು ಹೇಳಿದರು, "ನಾನು ಬದುಕುಳಿದವರಿಗಾಗಿ ಮತ್ತು ಈ ಲೋಕವನ್ನು ಬಿಟ್ಟು ಅಗಲಿದವರಿಗಾಗಿ ಪ್ರಾರ್ಥನೆ ಸಲ್ಲಿಸುತ್ತೇನೆ."

ಸುರಕ್ಷತೆಗಾಗಿ ಧರ್ಮಾಧ್ಯಕ್ಷರುಗಳ ಕರೆ
ಕೊರಿಯಾದ ಕಥೋಲಿಕ ಧರ್ಮಾಧ್ಯಕ್ಷರುಗಳ ಸಮ್ಮೇಳನದ ಅಧ್ಯಕ್ಷ ಧರ್ಮಾಧ್ಯಕ್ಷರಾದ ಮಥಿಯಾಸ್ ರಿ ಇಯೊಂಗ್-ಹೂನ್ ರವರು ಸಹಿ ಮಾಡಿದ ಹೇಳಿಕೆಯಲ್ಲಿ ರಾಷ್ಟ್ರದ ಧರ್ಮಾಧ್ಯಕ್ಷರುಗಳು ಉತ್ತಮ ಸುರಕ್ಷತಾ ಕ್ರಮಗಳಿಗೆ ಕರೆ ನೀಡುವಂತೆ ಧ್ವನಿ ಎತ್ತಿದ್ದಾರೆ ಎಂದು ಏಷ್ಯಾ ಸುದ್ಧಿ ವರದಿ ಮಾಡಿದೆ.

"ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿನ ಪ್ರಗತಿಗಳು ನಮ್ಮ ಜೀವನವನ್ನು ಶ್ರೀಮಂತಗೊಳಿಸಿವೆ, ಆದರೆ ಅವರು ತಮ್ಮೊಂದಿಗೆ ಹೊಸ ರೀತಿಯ ಅಪಾಯ ಮತ್ತು ಬೆದರಿಕೆಯನ್ನು ತಂದಿದ್ದಾರೆ" ಎಂದು ಧರ್ಮಾಧ್ಯಕ್ಷರುಗಳು ಗಮನಿಸುತ್ತಾರೆ.

"ಈ ಎಲ್ಲಾ ಅಪಾಯಗಳನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಾಗದಿದ್ದರೂ, ಅವುಗಳನ್ನು ಸಾಧ್ಯವಾದಷ್ಟು ಉತ್ತಮವಾಗಿ ತೊಡೆದುಹಾಕಲು ಮಧ್ಯಸ್ಥಗಾರರು ಮತ್ತು ಸರ್ಕಾರಿ ಅಧಿಕಾರಿಗಳ ಪಾತ್ರ ಮುಖ್ಯವಾಗಿದೆ" ಎಂದು ಅವರು ಹೇಳಿದರು.

ದಯಾಮಯ ದೇವರ ಆಲಿಂಗನ
ಅಪಘಾತಕ್ಕೆ ಕಾರಣವೇನು ಎಂಬುದರ ಕುರಿತು ತನಿಖೆಯ ಫಲಿತಾಂಶಗಳು ಇನ್ನೂ ಬಾಕಿ ಉಳಿದಿವೆ ಎಂದು ಧರ್ಮಾಧ್ಯಕ್ಷರುಗಳು ಹೇಳುತ್ತಾರೆ ಮತ್ತು ಆಳವಾದ ನೋವು ಮತ್ತು ಆಘಾತದ ಪರಿಸ್ಥಿತಿಯಲ್ಲಿ, ಅಧಿಕಾರಿಗಳು ತಮ್ಮ ಮುಖ್ಯ ಆದ್ಯತೆಯನ್ನು ಇದಕ್ಕೆಲ್ಲಾ ಯಾರು ಹೊಣೆಗಾರರಾಗಿದ್ದಾರೆ ಎಂಬುದನ್ನು ಸಂಶೋಧಿಸುವುದರಲ್ಲಿ ತೋರಿಸಬಾರದು ಎಂದು ಹೇಳಿದ್ದಾರೆ.

ಬದಲಾಗಿ, ಜವಾಬ್ದಾರಿಯುತ ಮತ್ತು ಸರ್ಕಾರಿ ಅಧಿಕಾರಿಗಳು" ಇಂತಹ ದುರಂತವು ಮತ್ತೆ ಮತ್ತೆ ಸಂಭವಿಸದಂತೆ ತಡೆಯಲು ಸುರಕ್ಷತಾ ಪರಿಸರ ಮತ್ತು ಪರಿಸ್ಥಿತಿಗಳನ್ನು ಸುಧಾರಿಸಲು ತಮ್ಮ ಕೈಲಾದಷ್ಟು ಕೆಲಸ ಮಾಡಲು" ಶ್ರಮಿಸಬೇಕು.

ಕೊನೆಯದಾಗಿ, ಸಂಬಂಧಿಕರನ್ನು ಕುರಿತು ಸಂಬೋಧಿಸುವ ಸಾಂತ್ವನದ ಮಾತುಗಳು, ನಿಮ್ಮನ್ನು ಸಾಂತ್ವನಗೊಳಿಸುವುದರಲ್ಲಿ ಅಸಮರ್ಪಕವಾಗಿದೆ ಎಂದು ಧರ್ಮಾಧ್ಯಕ್ಷರುಗಳು ಒಪ್ಪಿಕೊಂಡರು ಮತ್ತು ಆದ್ದರಿಂದ," ಕರುಣಾಮಯಿ ದೇವರು ಸಂತ್ರಸ್ತರ ಆತ್ಮಗಳನ್ನು ಅಪ್ಪಿಕೊಳ್ಳುತ್ತಾರೆ ಮತ್ತು ದುಃಖಿತ ಕುಟುಂಬಗಳ ನೋವು ಮತ್ತು ಗಾಯಗಳನ್ನು ಮುಟ್ಟುತ್ತಾರೆ" ಎಂದು ತಮ್ಮ ಭರವಸೆಯನ್ನು ವ್ಯಕ್ತಪಡಿಸುತ್ತಾರೆ.

31 ಡಿಸೆಂಬರ್ 2024, 10:19