MAP

TOPSHOT-KAZAKHSTAN-PLANE-CRASH TOPSHOT-KAZAKHSTAN-PLANE-CRASH  (AFP or licensors)

ಅಜೆರ್ಬೈಜಾನ್ ರಷ್ಯಾದ ಕ್ಷಿಪಣಿ - ವಿಮಾನದ ಪತನ

ಅಜರ್ಬೈಜಾನಿ ಸರ್ಕಾರದ ಮೂಲಗಳು ಮತ್ತು ಬದುಕುಳಿದವರ ಪ್ರಕಾರ ರಷ್ಯಾದ ಮೇಲ್ಮೈಯಿಂದ ಗಾಳಿಗೆ ಕ್ಷಿಪಣಿಯು ಬುಧವಾರ ಕಝಾಕಿಸ್ತಾನ್‌ನಲ್ಲಿ ಅಜೆರ್ಬೈಜಾನ್ ಏರ್‌ಲೈನ್ಸ್ ವಿಮಾನ ಅಪಘಾತಕ್ಕೆ ಕಾರಣವಾಗಿದ್ದು, ಅದರಲ್ಲಿದ್ದ 67 ಜನರಲ್ಲಿ 38 ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. ಉಕ್ರೇನ್ ಮತ್ತು ರಷ್ಯಾ ನಡುವೆ ನಡೆಯುತ್ತಿರುವ ಯುದ್ಧದ ಮಧ್ಯೆ ಈ ಪ್ರದೇಶದಲ್ಲಿ ವಾಯು ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಅಮೇರಿಕವು, ಅಪಘಾತದ ಹಿಂದೆ ರಷ್ಯಾದ ಕೈವಾಡವಿದೆ ಎಂದು ಸೂಚಿಸಿದೆ.

ಸ್ಟೀಫನ್ ಜೆ. ಬಾಸ್
ರಷ್ಯಾದ ಚೆಚೆನ್ಯಾ ಪ್ರದೇಶದ ರಾಜಧಾನಿ ಗ್ರೋಜ್ನಿ ಮೇಲಿನ ಡ್ರೋನ್ ವಾಯು ಚಟುವಟಿಕೆಯ ಸಮಯದಲ್ಲಿ ಫ್ಲೈಟ್ 8432 ನಲ್ಲಿ ರಷ್ಯಾದ ಕ್ಷಿಪಣಿಯನ್ನು ಹಾರಿಸಲಾಯಿತು ಎಂದು ಅಜೆರ್ಬೈಜಾನಿ ಸರ್ಕಾರಿ ಅಧಿಕಾರಿಗಳು ಹೇಳುತ್ತಾರೆ. "ಬಾಹ್ಯ ಭೌತಿಕ ಮತ್ತು ತಾಂತ್ರಿಕ ಹಸ್ತಕ್ಷೇಪ" ಎಂದು ಕರೆಯಲ್ಪಡುವ ಕಾರಣದಿಂದಾಗಿ ಹಲವಾರು ಜನರು ಸಾವನ್ನಪ್ಪಿದ ಅಪಘಾತ ಸಂಭವಿಸಿದೆ ಎಂದು ಅಜೆರ್ಬೈಜಾನ್ ಏರ್ಲೈನ್ಸ್ ಸೂಚಿಸಿದೆ.

ಈ ವಾರ ಕಝಾಕಿಸ್ತಾನ್‌ನಲ್ಲಿ ಪತನಗೊಂಡ ಅಜೆರ್‌ಬೈಜಾನ್ ಏರ್‌ಲೈನ್ಸ್ ವಿಮಾನವನ್ನು ರಷ್ಯಾದ ವಾಯು ರಕ್ಷಣಾ ವ್ಯವಸ್ಥೆಗಳು ಹೊಡೆದುರುಳಿಸಿರಬಹುದು ಎಂಬುದಕ್ಕೆ ತನ್ನ ಬಳಿ ಪುರಾವೆಗಳಿವೆ ಎಂದು ಅಮೇರಿಕವು ಶುಕ್ರವಾರ ಹೇಳಿದೆ. ದೇಶೀಯ ರಕ್ಷಣಾ ಸಮಿತಿಯ(ನ್ಯಾಷನಲ್ ಸೆಕ್ಯುರಿಟಿ ಕೌನ್ಸಿಲ್) ವಕ್ತಾರ ಜಾನ್ ಕಿರ್ಬಿರವರು, ಹಾನಿಗೊಳಗಾದ ವಿಮಾನದಿಂದ ಪ್ರಸಾರವಾದ ಚಿತ್ರಗಳನ್ನು ಮೀರಿ ಸಾಕ್ಷ್ಯಾಧಾರಗಳು ಇವೆ ಎಂದು ಹೇಳಿದರು

ವಿಮಾನದ ಮಧ್ಯದಲ್ಲಿ ಸ್ಫೋಟಗೊಂಡಿದ್ದರಿಂದ ಪ್ರಯಾಣಿಕರು ಮತ್ತು ಕ್ಯಾಬಿನ್ ಸಿಬ್ಬಂದಿಗೆ ಸಿಡಿದ ಬಾಂಬ್‌ ಗಳ ಚೂರುಗಳು ಬಂದು ಬಡಿದಿದೆ. ಪ್ರಯಾಣಿಕರು ಪ್ರಾರ್ಥನೆ ಮತ್ತು ಅಪಘಾತಕ್ಕೆ ತಯಾರಾಗುತ್ತಿರುವುದನ್ನು ದೃಶ್ಯಾವಳಿಗಳು ತೋರಿಸಿವೆ.

ಹಾನಿಗೊಳಗಾದ ವಿಮಾನವು ರಷ್ಯಾದಲ್ಲಿ ಇಳಿಸಲು ಅನುಮತಿ ನಿರಾಕರಿಸಿತು
ತುರ್ತು ಲ್ಯಾಂಡಿಂಗ್‌ಗಾಗಿ ಪೈಲಟ್‌ನ ಮನವಿಯ ಹೊರತಾಗಿಯೂ ಹಾನಿಗೊಳಗಾದ ವಿಮಾನವನ್ನು ರಷ್ಯಾದ ಯಾವುದೇ ವಿಮಾನ ನಿಲ್ದಾಣಗಳಲ್ಲಿ ಇಳಿಸಲು ಅನುಮತಿಸಲಾಗಿಲ್ಲ ಎಂದು ಅಜೆರ್ಬೈಜಾನಿ ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

ಅಜರ್‌ಬೈಜಾನ್ ಏರ್‌ಲೈನ್ಸ್‌ನ ಎಂಬ್ರೇರ್ 190 ಅಜೆರ್ಬೈಜಾನ್ ರಾಜಧಾನಿ ಬಾಕುದಿಂದ ಉತ್ತರ ಕಾಕಸಸ್‌ನಲ್ಲಿರುವ ರಷ್ಯಾದ ನಗರವಾದ ಗ್ರೋಜ್ನಿಗೆ ತೆರಳುತ್ತಿತ್ತು. ಆದರೆ ರಷ್ಯಾದಲ್ಲಿ ಸುರಕ್ಷಿತವಾಗಿ ಕೆಳಗಿಳಿಯುವ ಯಾವುದೇ ಸಾಧ್ಯತೆಯಿಲ್ಲದೆ, ಪೈಲಟ್ ಕಜಕಿಸ್ತಾನ್‌ನಲ್ಲಿ ಇಳಿಯಲು ಪ್ರಯತ್ನಿಸಿದರು. ಆದರೆ ಅದು ತಪ್ಪಾಯಿತು. ಕ್ಯಾಸ್ಪಿಯನ್ ಸಮುದ್ರವನ್ನು ದಾಟಿದ ನಂತರ, ವಿಮಾನವು ಅಕ್ಟೌ ನಗರದಿಂದ ಸುಮಾರು 3 ಕಿಲೋಮೀಟರ್ (2 ಮೈಲುಗಳು) ಕೆಳಗೆ ಹೋಯಿತು, ಅದರಲ್ಲಿದ್ದ 67 ಜನರಲ್ಲಿ 38 ಜನರು ಸಾವನ್ನಪ್ಪಿದರು.

ಸಾಕ್ಷಿಗಳು ಆಘಾತಕ್ಕೊಳಗಾಗಿದ್ದರು
ತನಿಖೆ ಮುಂದುವರೆದಂತೆ, ದುರಂತದ ಬಲಿಪಶುಗಳಿಗಾಗಿ ಅಜೆರ್ಬೈಜಾನ್ ರಾಷ್ಟ್ರೀಯ "ಶೋಕಾಚರಣೆಯ ದಿನ" ವನ್ನು ಆಚರಿಸಿತು, ಇದು ಬದುಕುಳಿದ 29 ಜನರನ್ನು ಗಾಯಗೊಳಿಸಿದೆ. ವಿಮಾನವು ತನ್ನ ಮಾರ್ಗದಿಂದ ವಿಚಲಿತವಾಗಿದೆ ಎಂದು ರಷ್ಯದವರು ಹೇಳುತ್ತಿದ್ದಾರೆ.

ಬುಧವಾರ ಅಪಘಾತಕ್ಕೀಡಾದ ಅಜರ್‌ಬೈಜಾನ್ ಏರ್‌ಲೈನ್ಸ್ ವಿಮಾನವು "ಭಾರೀ ಮಂಜು ಮತ್ತು ಉಕ್ರೇನಿಯನ್ ಡ್ರೋನ್‌ಗಳಿಂದಾಗಿ" ಅದರ ಯೋಜಿತ ಗಮ್ಯಸ್ಥಾನವಾದ ಗ್ರೋಜ್ನಿಯಿಂದ "ವಿಪಥಗೊಂಡಿದೆ" ಎಂದು ರಷ್ಯಾದ ವಾಯುಯಾನ ಪ್ರಾಧಿಕಾರ ಶುಕ್ರವಾರ ಹೇಳಿಕೊಂಡಿದೆ. ನಡೆಯುತ್ತಿರುವ ತನಿಖೆಯ ಫಲಿತಾಂಶಕ್ಕಾಗಿ ಕಾಯಲು ಬಯಸುವುದಾಗಿ ಮಾಸ್ಕೋ ಹೇಳಿದೆ. ಆದಾಗ್ಯೂ, ಉಕ್ರೇನಿಯನ್ನಿನ ಡ್ರೋನ್‌ಗಳು ರಷ್ಯಾದ ಮೇಲೆ ದಾಳಿ ಮಾಡುತ್ತಿರುವ ಪ್ರದೇಶದಲ್ಲಿ ರಷ್ಯಾದ ವಾಯು ರಕ್ಷಣಾ ವ್ಯವಸ್ಥೆಗಳು ಕಾರಣವೆಂದು ಹೆಚ್ಚಿನ ಸಂಖ್ಯೆಯ ತಜ್ಞರು ಒಪ್ಪುತ್ತಾರೆ.

ಫೆಬ್ರವರಿ 2022ರಲ್ಲಿ ಪ್ರಾರಂಭವಾದ ಉಕ್ರೇನ್‌ನ ರಷ್ಯಾದ ಪೂರ್ಣ ಪ್ರಮಾಣದ ಆಕ್ರಮಣಕ್ಕೆ ಇದು ಕೈವ್‌ನ ಪ್ರತಿಕ್ರಿಯೆಯಾಗಿದೆ. ಇನ್ನೂ ಹೆಚ್ಚಿನ ಸಂಖ್ಯೆಯ ನಾಗರಿಕರು, ವಿಮಾನ ಪ್ರಯಾಣಿಕರು ಸೇರಿದಂತೆ, ಎರಡನೆಯ ಮಹಾಯುದ್ಧದ ನಂತರ ಯುರೋಪಿನ ಮಾರಣಾಂತಿಕ ಸಂಘರ್ಷಕ್ಕೆ ಬಲಿಯಾಗಿದ್ದಾರೆ ಎಂಬುದು ಸ್ಪಷ್ಟವಾಗಿದೆ.

31 ಡಿಸೆಂಬರ್ 2024, 07:59