ಕ್ರಿಸ್‌ಮಸ್ ದಿನದಂದು ಸಾವಿನ ಸಂಖ್ಯೆಯ ಏರಿಕೆ
ಕ್ರಿಸ್‌ಮಸ್ ದಿನದಂದು ಗಾಜಾ ಗಡಿಯಾದ್ಯಂತ ಇಸ್ರಯೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 22 ಪ್ಯಾಲೆಸ್ಟಸ್ತೀನಿಯದವರು ಸಾವನ್ನಪ್ಪಿದ್ದಾರೆ ಎಂದು ಪ್ಯಾಲೇಸ್ತೀನಿ ಮೂಲಗಳು ತಿಳಿಸಿವೆ.
ಇಸ್ರಯೇಲ್ ವಿಮಾನವು ಗಾಜಾ ನಗರದ ಉತ್ತರದಲ್ಲಿ ಸ್ಥಳಾಂತರಗೊಂಡ ವ್ಯಕ್ತಿಗಳ ವಸತಿ ಡೇರೆಗಳನ್ನು ಗುರಿಯಾಗಿಸಿಕೊಂಡಿದೆ ಎಂದು ವರದಿಯಾಗಿದೆ. ದಾಳಿಯ ನಂತರ ಕನಿಷ್ಠ ಏಳು ಶವಗಳನ್ನು ಮತ್ತು 25 ಗಾಯಗೊಂಡ ಜನರನ್ನು ನಾಗರಿಕ ರಕ್ಷಣಾ ಸಿಬ್ಬಂದಿ ಶಾಲೆಯಿಂದ ಹೊರತೆಗೆದರು.
ಅಷ್ಟರಲ್ಲಿ, ಇಸ್ರಯೇಲರ ರಕ್ಷಣಾ ಸಚಿವ ಇಸ್ರಯೇಲ್ ಕಾಟ್ಜ್ ರವರು ಭದ್ರತಾ ನಿಯಂತ್ರಣವನ್ನು ಕಾಪಾಡಿಕೊಳ್ಳಲು ಇಸ್ರಯೇಲ್ ಪಡೆಗಳು ಗಾಜಾದಲ್ಲಿ ನೆಲೆಸಿರುತ್ತವೆ ಎಂದು ಹೇಳಿದ್ದಾರೆ, ಇತ್ತೀಚಿನ ಕದನ ವಿರಾಮದ ಚರ್ಚೆಗಳು ಮತ್ತಷ್ಟು ಪ್ರತಿಕೂಲತೆಯನ್ನು ಎದುರಿಸಬಹುದು ಎಂಬ ಆತಂಕವನ್ನು ಹುಟ್ಟುಹಾಕಿದೆ.
ಬ್ರಿಟಿಷ್ ಪತ್ರಿಕಾ ವರದಿಗಳ ಪ್ರಕಾರ, ಇಸ್ರಯೇಲ್ ಮತ್ತು ಪ್ಯಾಲೆಸ್ತೀನಿನ ನಡುವೆ ಶಾಶ್ವತ ಶಾಂತಿಯನ್ನು ಸಾಧಿಸುವ ಗುರಿಯನ್ನು ಹೊಂದಿರುವ ಹೊಸ ಅಂತರರಾಷ್ಟ್ರೀಯ ಉಪಕ್ರಮದಲ್ಲಿ ಬ್ರಿಟನ್ನಿನ (ಯುಕೆ) ಪ್ರಧಾನಿ ಸರ್ ಕೀರ್ ಸ್ಟಾರ್ಮರ್ ರವರು ಪ್ರಮುಖ ಪಾತ್ರವನ್ನು ವಹಿಸಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ಸಮರ್ಥನೀಯ ನಿರ್ಣಯವನ್ನು ಸ್ಥಾಪಿಸಲು ಉದ್ದೇಶಿಸಿರುವ ಕಾರ್ಯಕ್ರಮದ ಪುನರುಜ್ಜೀವನವನ್ನು ಬೆಂಬಲಿಸಲು ಉತ್ತರ ಐರ್ಲೆಂಡ್‌ನಲ್ಲಿನ ಅನುಭವಗಳನ್ನು, ಅವರು ಪಡೆದುಕೊಂಡಿದ್ದಾರೆ ಎಂದು ವರದಿಗಳು ಹೇಳುತ್ತವೆ.
ಸರ್ ಕೀರ್, ವಿದೇಶಾಂಗ ಕಾರ್ಯದರ್ಶಿ ಡೇವಿಡ್ ಲ್ಯಾಮಿರವರಿಗೆ ಮುಂದಿನ ವರ್ಷದ ಆರಂಭದಲ್ಲಿ ಲಂಡನ್‌ನಲ್ಲಿ ಅಂತರಾಷ್ಟ್ರೀಯ ಶೃಂಗಸಭೆಯನ್ನು ಇಸ್ರಯೇಲ್-ಪ್ಯಾಲೆಸ್ತೀನ್ ಶಾಂತಿಗಾಗಿ (IFP) ಪ್ರಾರಂಭಿಸಲು ಸೂಚಿಸಿದ್ದಾರೆ, ಇದನ್ನು ದಿ ಅಲೈಯನ್ಸ್ ಫಾರ್ ಮಿಡಲ್ ಈಸ್ಟ್ ಪೀಸ್ (ALLMEP) ಅನುಮೋದಿಸಿದೆ. 160 ಸಂಸ್ಥೆಗಳು ಇಸ್ರಯೇಲರ ಮತ್ತು ಪ್ಯಾಲೆಸ್ತೀನಿಯರ ನಡುವೆ ನಾಗರಿಕ ಸಮಾಜದ ಶಾಂತಿ ನಿರ್ಮಾಣ ಪ್ರಯತ್ನಗಳನ್ನು ಉತ್ತೇಜಿಸಲು ಮೀಸಲಾಗಿವೆ.