ಅಮೇರಿಕದ ಅಧ್ಯಕ್ಷ: ಮರಣದಂಡನೆ ಶಿಕ್ಷೆಯನ್ನು ಬದಲಾಯಿಸುವುದು 'ಮಾನವ ಜೀವಕ್ಕೆ ಗೌರವ'ವನ್ನು ತೋರಿಸುತ್ತದೆ
ಫೆಡರಲ್ ಮರಣದಂಡನೆಗೆ ಒಳಗಾದ 40 ಕೈದಿಗಳ ಪೈಕಿ 37 ಕೈದಿಗಳ ಶಿಕ್ಷೆಯನ್ನು ಪೆರೋಲ್‌ನ ಸಾಧ್ಯತೆಯಿಲ್ಲದೆ ಜೀವಾವಧಿ ಶಿಕ್ಷೆಗೆ ಅಮೇರಿಕದ ಅಧ್ಯಕ್ಷ ಜೋ ಬೈಡೆನ್ ರವರು ಬದಲಾಯಿಸಿದ್ದಾರೆ ಎಂಬ ಇತ್ತೀಚಿನ ಸುದ್ದಿಯ ಬಗ್ಗೆ ಮಹಾಧರ್ಮಾಧ್ಯಕ್ಷರಾದ ತಿಮೋತಿ ಬ್ರೋಗ್ಲಿಯೊರವರು ವ್ಯಾಟಿಕನ್ ಮಾಧ್ಯಮದೊಂದಿಗೆ ಮಾತನಾಡಿದ್ದಾರೆ.
ಅಮೇರಿಕದ ಕಥೋಲಿಕ ಧರ್ಮಾಧ್ಯಕ್ಷರುಗಳ ಸಮ್ಮೇಳನದ (USCCB) ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಅಮೇರಿಕದ (USA) ಮಿಲಿಟರಿ ಸೇವೆಗಳ ಮಹಾಧರ್ಮಾಧ್ಯಕ್ಷರು, ಅಧ್ಯಕ್ಷರ ನಿರ್ಧಾರವು ವಿಶ್ವುಗುರು ಫ್ರಾನ್ಸಿಸ್ ರವರ ಡಿಸೆಂಬರ್ 8ರ, ಕೈದಿಗಳ ಭವಿಷ್ಯವನ್ನು ನಿರ್ಣಯಿಸುವ ಮತ್ತು ಕರುಣೆಯಿಂದ ಪ್ರತಿಕ್ರಿಯಿಸಲು ಮಾಡಿದ ಅವರ ಮನವಿಗೆ ಅನುಗುಣವಾಗಿದೆ ಎಂದು ಗಮನಿಸಿದರು.
ಡಿಸೆಂಬರ್ 8 ರಂದು ಅಮಲೋದ್ಭವ ಮಾತೆಯ ಹಬ್ಬದ ತ್ರಿಕಾಲ ಪ್ರಾರ್ಥನೆಯ ಸಮಯದಲ್ಲಿ, ಪವಿತ್ರ ತಂದೆಯು "ಅಮೇರಿಕದಲ್ಲಿನ ಮರಣದಂಡನೆಯಲ್ಲಿರುವ ಕೈದಿಗಳಿಗಾಗಿ ಪ್ರಾರ್ಥಿಸಲು" ಭಕ್ತವಿಸ್ವಾಸಿಗಳಿಗೆ ಕರೆ ನೀಡಿದರು. (...)
"ಅವರ ಶಿಕ್ಷೆಯನ್ನು, ಬದಲಾಯಿಸಲು "ನಾವೆಲ್ಲರೂ ಪ್ರಾರ್ಥಿಸೋಣ," ಎಂದು ಅವರು ಹೇಳಿದರು,. ನಾವು ಈ ನಮ್ಮ ಸಹೋದರ ಸಹೋದರಿಯರ ಬಗ್ಗೆ ಯೋಚಿಸೋಣ ಮತ್ತು ಅವರನ್ನು ಸಾವಿನಿಂದ ರಕ್ಷಿಸಲು ಪ್ರಭುವಿನ ಕೃಪೆಯನ್ನು ಬೇಡೋಣ."
ಕ್ರಿಸ್ತಜಯಂತಿಯ ಹಿಂದಿನ ದಿನದಂದು ಸಂತ ಪೇತ್ರರ ಮಹಾದೇವಾಲಯದ ಪವಿತ್ರ ದ್ವಾರಗಳನ್ನು ತೆರೆಯುವುದರೊಂದಿಗೆ ವಿಶ್ವಗುರುಗಳು ಭರವಸೆಯ ಜೂಬಿಲಿ ವರ್ಷವನ್ನು ಉದ್ಘಾಟಿಸಲಿರುವರು ಎಂದು ವಿಶ್ವಗುರುಗಳು ತಮ್ಮ ಜೂಬಿಲಿ ವರ್ಷದ ಆಜ್ಞಾ ಪತ್ರದಲ್ಲಿ ಬರೆದಿದ್ದಾರೆ, ʼಸ್ಪೇಸ್ ನಾನ್ ಕನ್‌ಫಂಡಿಟ್ʼ ನಲ್ಲಿ. ಬಡ ದೇಶಗಳಿಗೆ ವಿದೇಶಿ ಸಾಲವನ್ನು ರದ್ದುಗೊಳಿಸುವುದು ಮತ್ತು ವಿಶ್ವಾದ್ಯಂತ ಮರಣದಂಡನೆಯನ್ನು ರದ್ದುಗೊಳಿಸುವಂತಹ ಕ್ರಮಗಳು ಅವರು ಗಂಭೀರವಾಗಿ ಆಶಿಸುತ್ತಿದ್ದಾರೆ.
ವ್ಯಾಟಿಕನ್ ಸುದ್ಧಿ: ಮಹಾಧರ್ಮಾಧ್ಯಕ್ಷ ಬ್ರೊಗ್ಲಿಯೊರವರು ಸ್ಪಷ್ಟವಾಗಿ, ಅಧ್ಯಕ್ಷ ಬೈಡೆನ್ ರವರು ಇಂದು ಮರಣದಂಡನೆ ಶಿಕ್ಷೆಯಲ್ಲಿರುವ ಕೈದಿಗಳ ಶಿಕ್ಷೆಯನ್ನು ಕಡಿಮೆ ಮಾಡಿದ್ದಾರೆ ಎಂಬ ಸುದ್ದಿ ಒಳ್ಳೆಯ ಸುದ್ದಿಯಾಗಿದೆ. ನಿಮ್ಮ ಪ್ರತಿಕ್ರಿಯೆ ಏನು?
ಮಹಾಧರ್ಮಾಧ್ಯಕ್ಷ ಬ್ರೊಗ್ಲಿಯೊರವರು: ಅಧ್ಯಕ್ಷ ಬೈಡೆನ್, ವಿಶ್ವಗುರು ಫ್ರಾನ್ಸಿಸ್ ಮತ್ತು ಇನ್ನಿತರ ಹಲವು ವಿನಂತಿಯನ್ನು ಪಾಲಿಸಿದ್ದಕ್ಕಾಗಿ ನನಗೆ ತುಂಬಾ ಸಂತೋಷವಾಗಿದೆ, ಇದು ಮಾನವ ಜೀವದ ಮೇಲೆ ಗೌರವವನ್ನು ಪ್ರದರ್ಶಿಸುತ್ತದೆ, ಅದೇ ಸಮಯದಲ್ಲಿ ಈ ವ್ಯಕ್ತಿಗಳು ಸಮಾಜದ ಜವಾಬ್ದಾರಿಯನ್ನು ಹೊಂದಿದ್ದಾರೆಂದು ಗುರುತಿಸುತ್ತಾರೆ. ಆದರೆ ಅವರ ಪ್ರಾಣವನ್ನು ಅವರಿಂದ ತೆಗೆದುಕೊಳ್ಳಬಾರದು ಎಂದು. ಈ ಕಾರಣಕ್ಕಾಗಿ, ಅಧ್ಯಕ್ಷರ ಈ ಕ್ರಮಕ್ಕಾಗಿ ನಾನು ತುಂಬಾ ಕೃತಜ್ಞನಾಗಿದ್ದೇನೆ ಮತ್ತು ಅವರ ಅಧ್ಯಕ್ಷತೆಯನ್ನು ಕೊನೆಗೊಳಿಸಲು ಇದು ಖಂಡಿತವಾಗಿಯೂ ಅತ್ಯಂತ ಸೂಕ್ತವಾದ ಮಾರ್ಗವಾಗಿದೆ.
ಪ್ರ. ಮತ್ತು ಮಾನವ ಘನತೆಯನ್ನು ಕಾಪಾಡಲು ಅಮೇರಿಕದಕಥೋಲಿಕರು ಏನು ಮಾಡಬಹುದು? ಇನ್ನೂ ಹಲವರು ಮರಣದಂಡನೆಗೆ ಗುರಿಯಾಗಿದ್ದಾರೆ. ಮರಣದಂಡನೆಯನ್ನು ರದ್ದುಗೊಳಿಸುವ ನಿಟ್ಟಿನಲ್ಲಿ, ಯಾವ ರೀತಿಯಲ್ಲಿ ಕೆಲಸ ಮಾಡಬಹುದು?
ಒಳ್ಳೆಯದು, ಗರ್ಭಧಾರಣೆಯಿಂದ ನೈಸರ್ಗಿಕ ಸಾವಿನವರೆಗೆ ನಾವು ಜೀವನಕ್ಕಾಗಿ ನಮ್ಮ ವಕಾಲತ್ತು ಮುಂದುವರಿಸಬೇಕು ಎಂದು ನಾನು ಭಾವಿಸುತ್ತೇನೆ. ಇದು ನಾವು ನಮ್ಮ ಜೀವದ ಪರವಾಗಿ ಧ್ವನಿ ಎತ್ತುವ ವಿಷಯ ಎಂದು ನಾನು ಭಾವಿಸುತ್ತೇನೆ. ನಿಸ್ಸಂಶಯವಾಗಿ ಯಾರೂ ಕ್ರಿಮಿನಲ್ ಚಟುವಟಿಕೆಯನ್ನು ಪ್ರಾಯೋಜಿಸುತ್ತಿಲ್ಲ, ಆದರೆ ನಾವು ಸಮಾಜವನ್ನು ರಕ್ಷಿಸುವ ವ್ಯವಸ್ಥೆಗಳನ್ನು ಹೊಂದಿದ್ದೇವೆ ಎಂದು ಹೇಳಲು ಬಯಸುತ್ತೇವೆ. ಆದ್ದರಿಂದ, ನಾವು ಸಾಮಾನ್ಯವಾಗಿ ಅನಾಗರಿಕವಾದ ಯಾವುದನ್ನಾದರೂ ಕೊನೆಗೊಳಿಸಲು ಒಂದು ಕ್ರಮವನ್ನು ಮಾಡಬೇಕು. ಅದು ಅಪರಾಧಿಗಳ ಹತ್ಯೆ. ಆದ್ದರಿಂದ, ನಾವು ಈಗ ಅದನ್ನು ರಾಜ್ಯ ಮಟ್ಟದಲ್ಲಿ ಮಾಡುತ್ತೇವೆ ಎಂದು ನಾನು ಭಾವಿಸುತ್ತೇನೆ ಮತ್ತು ಫೆಡರಲ್ ಮಟ್ಟದಲ್ಲಿ ಮೇಲ್ಮನವಿಗಳು ಹೊಂದಿರುವ ಅದೇ ಪರಿಣಾಮವನ್ನು ನಾವು ಹೊಂದಬಹುದು ಎಂದು ಭಾವಿಸುತ್ತೇವೆ. ಪ್ರ. ನಿಸ್ಸಂಶಯವಾಗಿ, ಜೂಬಿಲಿ ವರ್ಷವು ನಾಳೆಯಿಂದ ಪ್ರಾರಂಭವಾಗಲಿದೆ, ವ್ಯಾಟಿಕನ್‌ನಲ್ಲಿ ವಿಶ್ವಗುರು ಫ್ರಾನ್ಸಿಸ್ ರವರು ಉದ್ಘಾಟಿಸಲಿದ್ದಾರೆ ಎಂಬ ಅಂಶದೊಂದಿಗೆ ಇದು ಗಮನಾರ್ಹವಾಗಿದೆ. ಸಮಯವು ಸ್ವಲ್ಪ ಆಸಕ್ತಿದಾಯಕವಾಗಿದೆ ಎಂದು ತೋರುತ್ತದೆ.
ಜೂಬಿಲಿ ವರ್ಷದ ವಿಷಯವು ಭರವಸೆಯ ವಿಷಯವಾಗಿದೆ ಮತ್ತು ಆದ್ದರಿಂದ, ನಾವು ಯಾವಾಗಲೂ ಉತ್ತಮ ಸಮಾಜಕ್ಕಾಗಿ ಭರವಸೆಯನ್ನು ಹೊಂದಿದ್ದೇವೆ, ನಾವು ಕ್ರಿಸ್ ಮಸ್ ಮತ್ತು ಈಸ್ಟರ್‌ನಲ್ಲಿ ಆಚರಿಸುವ ಜಗತ್ತಿಗೆ ಕ್ರಿಸ್ತನ ಪ್ರೀತಿಯ ಮಹತ್ವದ ಕೊಡುಗೆಯನ್ನು ಹೆಚ್ಚು ಪ್ರತಿಬಿಂಬಿಸುವ ಸಮಾಜವಾಗಿದೆ. ಇದು ತುಂಬಾ ಸೂಕ್ತವಾದ ಸಮಯ ಆದ್ದರಿಂದ, ಈ ಎರಡು ಘಟನೆಗಳು ಹೊಂದಿಕೆಯಾಗುವುದು ಗಮನಾರ್ಹವಾಗಿದೆ.
ಮಹಾಧರ್ಮಾಧ್ಯಕ್ಷರೇ, ನಿಮ್ಮ ಸಮಯಕ್ಕಾಗಿ ತುಂಬಾ ಧನ್ಯವಾದಗಳು.