MAP

ಬೈರೂತ್ ನಗರದ ಮೇಲೆ ದಾಳಿ ಮುಂದುವರೆಸಿದ ಇಸ್ರೇಲ್

ಪೋಪ್ ಫ್ರಾನ್ಸಿಸ್ ಅವರ ಕರೆಯ ಹಿನ್ನೆಲೆ ಧರ್ಮಸಭೆಯು ನಾಳೆ ಪ್ರಾರ್ಥನೆ ಹಾಗೂ ಉಪವಾಸದ ದಿನವನ್ನಾಗಿ ಆಚರಿಸಲು ಸಿದ್ಧತೆ ನಡೆಸಿರುವ ಹೊತ್ತಿನಲ್ಲಿ, ಇತ್ತ ಇಸ್ರೇಲ್ ದೇಶವು ಬೈರೂತ್ ಮೇಲಿನ ದಾಳಿಯನ್ನು ಮುಂದುವರೆಸಿದೆ.

ವರದಿ: ನೇಥನ್ ಮೊರ್ಲೆ, ಅಜಯ್ ಕುಮಾರ್

ಪೋಪ್ ಫ್ರಾನ್ಸಿಸ್ ಅವರ ಕರೆಯ ಹಿನ್ನೆಲೆ ಧರ್ಮಸಭೆಯು ನಾಳೆ ಪ್ರಾರ್ಥನೆ ಹಾಗೂ ಉಪವಾಸದ ದಿನವನ್ನಾಗಿ ಆಚರಿಸಲು ಸಿದ್ಧತೆ ನಡೆಸಿರುವ ಹೊತ್ತಿನಲ್ಲಿ, ಇತ್ತ ಇಸ್ರೇಲ್ ದೇಶವು ಬೈರೂತ್ ಮೇಲಿನ ದಾಳಿಯನ್ನು ಮುಂದುವರೆಸಿದೆ. ನಿನ್ನೆ ನಡೆದ ದಾಳಿಯು ಅಕ್ಷರಶಃ ಬೈರೂತ್ ನಗರದ ದಕ್ಷಿಣ ಭಾಗವನ್ನು ನಡುಗಿಸಿದೆ. ದಾಳಿಯ ತೀವ್ರತೆಯು ಅಷ್ಟಿತ್ತು ಎಂಬುದನ್ನು ಅಂದಾಜಿಸಬಹುದಾಗಿದೆ.

ಈ ಕುರಿತು ವರದಿ ಮಾಡಿರುವ ಲೆಬಾನನ್ ಮಾಧ್ಯಮಗಳು ಈ ದಾಳಿ ಅತ್ಯಂತ ದೊಡ್ಡ ಹಾಗೂ ಬೀಕರ ದಾಳಿಯಾಗಿದೆ ಎಂದು ವರ್ಣಿಸಿವೆ. ಹಲವು ಮಾಧ್ಯಮಗಳ ಅನುಮಾನದ ಪ್ರಕಾರ ಇಸ್ರೇಲ್ ಕ್ಷಿಪಣಿಯೊಂದು ಪೆಟ್ರೋಲ್ ಬ್ಯಾಂಕಿಗೆ ಬಡಿದ ಪರಿಣಾಮ ದೊಡ್ಡ ಮಟ್ಟದ ದಾಳಿ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

ಈವರೆಗೂ ಇಸ್ರೇಲ್ ಸೇನೆಯು ಹೇಳಿರುವ ಪ್ರಕಾರ ಲೆಬಾನನ್'ನಲ್ಲಿ ಸುಮಾರು ನಾಲ್ಕು ನೂರಕ್ಕೂ ಹೆಚ್ಚು ಹೆಝಾಬೊಲ್ಲಾ ಉಗ್ರರನ್ನು ಕೊಲ್ಲಲಾಗಿದೆ. ಶನಿವಾರ ಉತ್ತರ ಲೆಬಾನನ್ನಿನ ಟ್ರಿಪೋಲಿ ನಗರದ ಮೇಲೆ ನಡೆಸಿದ ದಾಳಿಯಲ್ಲಿ ಹಮಾಸ್ ನಾಯಕನೊಬ್ಬನ ಹತ್ಯೆಯಾಗಿದೆ ಎಂದು ತಿಳಿದುಬಂದಿದೆ.

ಇಸ್ರೇಲ್ ದಾಳಿ ಆರಂಭವಾದ ಹಿನ್ನೆಲೆ, ವಿಶ್ವಸಂಸ್ಥೆಯ ಮಾಹಿತಿಯ ಪ್ರಕಾರ ಸುಮಾರು ಎರಡು ಲಕ್ಷಕ್ಕೂ ಅಧಿಕ ಜನರು ಹತ್ತಿರದ ಸಿರಿಯಾ ದೇಶಕ್ಕೆ ಓಡಿಹೋಗಿದ್ದಾರೆ. 1.2 ಮಿಲಿಯನ್ಗೂ ಹೆಚ್ಚು ಜನರು ನಿರಾಶ್ರಿತರಾಗಿದ್ದಾರೆ ಎಂದು ವರದಿಯಾಗಿದೆ.  

 

06 ಅಕ್ಟೋಬರ್ 2024, 17:31