MAP

ಚರ್ಚುಗಳ ಕಾಣಿಕೆಯ ಮೇಲೆ ತೆರಿಗೆ ವಿಧಿಸಿದ ನಿಕರಾಗುವ ಸರ್ಕಾರ

ನಿಕರಾಗುವ ದೇಶದ ಸಂಸತ್ತು ನಿನ್ನೆ ತನ್ನ ದೇಶದಲ್ಲಿನ ಕಥೋಲಿಕ ಚರ್ಚುಗಳೂ ಸೇರಿದಂತೆ, ವಿವಿಧ ಕ್ರೈಸ್ತ ಪಂಗಡಗಳ ದೇವಾಲಯಗಳಲ್ಲಿ ಭಕ್ತಾಧಿಗಳು ಹಾಕುವ ಕಾಣಿಕೆಯ ಮೇಲೆ ತೆರಿಗೆಯನ್ನು ವಿಧಿಸುವ ಕಾನೂನನ್ನು ಅನುಮೋದಿಸಿದೆ.

ವರದಿ: ಜಿಯಾನ್ ಕಾರ್ಲೋ ಲ ವೆಲ್ಲಾ, ಅಜಯ್ ಕುಮಾರ್

ನಿಕರಾಗುವ ದೇಶದ ಸಂಸತ್ತು ನಿನ್ನೆ ತನ್ನ ದೇಶದಲ್ಲಿನ ಕಥೋಲಿಕ ಚರ್ಚುಗಳೂ ಸೇರಿದಂತೆ, ವಿವಿಧ ಕ್ರೈಸ್ತ ಪಂಗಡಗಳ ದೇವಾಲಯಗಳಲ್ಲಿ ಭಕ್ತಾಧಿಗಳು ಹಾಕುವ ಕಾಣಿಕೆಯ ಮೇಲೆ ತೆರಿಗೆಯನ್ನು ವಿಧಿಸುವ ಕಾನೂನನ್ನು ಅನುಮೋದಿಸಿದೆ.   

ಕಳೆದ ಹಲವು ತಿಂಗಳುಗಳಿಂದ ನಿಕರಾಗುವ ಸರ್ಕಾರವು ಅಲ್ಲಿನ ಅಧ್ಯಕ್ಷ ಡೇನಿಯೆಲ್ ಒರ್ಟೇಗಾ ಅವರ ವಿರುದ್ಧ ಇರುವ ವ್ಯಕ್ತಿಗಳು ಹಾಗೂ ಸಂಸ್ಥೆಗಳ ವಿರುದ್ಧ ಪ್ರತಿಕಾರವನ್ನು ತೀರಿಸಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ದೇಶದಲ್ಲಿ ಧಾರ್ಮಿಕ ಸಮುದಾಯಗಳ ಮೇಲೆ ದಾಳಿಯನ್ನು ಆರಂಭಿಸಿದ್ದು, ಕಳೆದ ಹಲವು ತಿಂಗಳುಗಳಲ್ಲಿ ಹಲವಾರು ಕಥೋಲಿಕ ಗುರುಗಳನ್ನು ಬಂಧಿಸಿದೆ ಮಾತ್ರವಲ್ಲದೆ, ಇವುಗಳಲ್ಲಿ ಹಲವರನ್ನು ಗಡೀಪಾರು ಮಾಡಿದೆ.

ಕಥೋಲಿಕ ಸಮುದಾಯ ಸೇರಿದಂತೆ ಬಹುತೇಕ ಎಲ್ಲಾ ಧರ್ಮಗಳ ಮೇಲೆ ಪರೋಕ್ಷ ಸಮರವನ್ನು ಸಾರಿರುವ ಸರ್ಕಾರವು ಅವುಗಳನ್ನು ಹತ್ತಿಕ್ಕುವಲ್ಲಿ ವಿವಿಧ ಹಾದಿಗಳನ್ನು ಕಂಡುಕೊಳ್ಳುತ್ತಿದೆ. ಪ್ರಸ್ತುತ ಸಾರ್ವಜನಿಕರು ಹಾಗೂ ಭಕ್ತಾಧಿಗಳು ಚರ್ಚುಗಳಲ್ಲಿ ಹಾಕುವ ಕಾಣಿಕೆಯ ಮೇಲೆಯೂ ಸಹ ತೆರಿಗೆಯನ್ನು ವಿಧಿಸುವ ಕಾನೂನನ್ನು ಅಲ್ಲಿನ ಸಂಸತ್ತು ಅನುಮೋದಿಸಿದೆ ಎಂದು ವರದಿಯಾಗಿದೆ.    

22 ಆಗಸ್ಟ್ 2024, 15:54