ತಂಜಾನಿಯಾದಲ್ಲಿ ಜನಿಸಿದ ಮಾಜಿ ಪವಿತ್ರ ಪೀಠಾಧಿಕಾರಿಯ ರಾಜತಾಂತ್ರಿಕ ರೋಮ್‌ನಲ್ಲಿ ನಿಧನರಾದರು
ಸಾರಾ ಪೆಲಾಜಿ -ತಂಜಾನಿಯಾ
ತಂಜಾನಿಯಾದ ಕಥೋಲಿಕ ಧರ್ಮಸಭೆ, ಮಾಜಿ ಪ್ರೇಷಿತ ರಾಯಭಾರಿಯಾಗಿದ್ದ ಮತ್ತು ಪವಿತ್ರ ಪೀಠಾಧಿಕಾರಿಯ ರಾಜತಾಂತ್ರಿಕ ಮಹಾಧರ್ಮಾಧ್ಯಕ್ಷರಾದ ನೊವಾಟಸ್ ರುಗಾಂಬ್ವಾರವರ ನಿಧನಕ್ಕೆ ಶೋಕ ವ್ಯಕ್ತಪಡಿಸುತ್ತಿದೆ. ಅವರು ಸೆಪ್ಟೆಂಬರ್ 16, 2025 ರ ಸಂಜೆ ರೋಮ್‌ನ ಜೆಮೆಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ನಿಧನರಾದರು.
ದಿವಂಗತ ಮಹಾಧರ್ಮಾಧ್ಯಕ್ಷರು ತಂಜಾನಿಯಾದ ಬುಕೊಬಾ ಕಥೋಲಿಕ ಧರ್ಮಕ್ಷೇತ್ರದ ಸ್ಥಳೀಯರಾಗಿದ್ದರು. ತಂಜಾನಿಯಾದ ಬುಕೊಬಾ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಜೊವಿಟಸ್ ಫ್ರಾನ್ಸಿಸ್ ಮ್ವಿಜೇಜ್ ರವರು ಮಹಾಧರ್ಮಾಧ್ಯಕ್ಷರವರ ನಿಧನಕ್ಕೆ ತೀವ್ರ ದುಃಖ ವ್ಯಕ್ತಪಡಿಸಿದರು.
ತುಮ್ಸಿಫು ಯೇಸು ಕ್ರಿಸ್ಟೋರವರು ಸೆಪ್ಟೆಂಬರ್ 16, 2025 ರ ಸಂಜೆ ರೋಮ್‌ನಲ್ಲಿ ದೇವರೊಂದಿಗೆ ಇರಲು ಕರೆಯಲ್ಪಟ್ಟ ನಮ್ಮ ಪ್ರೀತಿಯ ಮಹಾಧರ್ಮಾಧ್ಯಕ್ಷರಾದ ನೊವಾಟಸ್ ರುಗಾಂಬ್ವಾರವರ ನಿಧನವನ್ನು ನಾನು ಬಹಳ ದುಃಖದಿಂದ ಘೋಷಿಸುತ್ತೇನೆ ಎಂದು ಧರ್ಮಾಧ್ಯಕ್ಷರಾದ ಮ್ವಿಜಗೆ ಬುಧವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅಂತ್ಯಕ್ರಿಯೆಯ ವ್ಯವಸ್ಥೆಗಳನ್ನು ಸರಿಯಾದ ಸಮಯದಲ್ಲಿ ತಿಳಿಸಲಾಗುವುದು ಎಂದು ಧರ್ಮಾಧ್ಯಕ್ಷರು ಹೇಳಿದರು.
ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸೋಣ: ಓ ಕರ್ತರೇ, ಮೃತರಿಗೆ ನಿತ್ಯ ವಿಶ್ರಾಂತಿಯನ್ನು ದಯಪಾಲಿಸಿರಿ ಮತ್ತು ನಿತ್ಯ ಜೋತಿಯು ಅವರ ಮೇಲೆ ಪ್ರಕಾಶಿಸಲಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಆಮೆನ್.
ಧರ್ಮಸಭೆಗೆ ಮತ್ತು ವಿಶ್ವಕ್ಕೆ ಸೇವೆಯ ಜೀವನ
ಮಹಾಧರ್ಮಾಧ್ಯಕ್ಷರಾದ ನೊವಾಟಸ್ ರುಗಾಂಬ್ವಾರವರು ಅಕ್ಟೋಬರ್ 8, 1957 ರಂದು ತಂಜಾನಿಯಾದ ಬುಕೊಬಾ ಧರ್ಮಕ್ಷೇತ್ರದಲ್ಲಿ ಜನಿಸಿದರು. ಅವರು ತಮ್ಮ ಯಾಜಕತ್ವದ ತರಬೇತಿ ಮತ್ತು ದೈವಶಾಸ್ತ್ರದ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ ಜುಲೈ 6, 1986 ರಂದು ದಿವಂಗತ ಧರ್ಮಾಧ್ಯಕ್ಷರಾದ ನೆಸ್ಟೋರಿಯಸ್ ಟಿಮನಿವಾರವರಿಂದ ಯಾಜಕಭಿಷೇಕವನ್ನು ಸ್ವೀಕರಿಸಿದರು.
ಅವರು ಜುಲೈ 1, 1991ರಂದು ಪವಿತ್ರ ಪೀಠಾಧಿಕಾರಿಯ ರಾಜತಾಂತ್ರಿಕ ಸೇವೆಗೆ ಸೇರಿದರು ಮತ್ತು ವಿಶ್ವದಾದ್ಯಂತದ ವ್ಯಾಟಿಕನ್ ರಾಯಭಾರಿಗಳಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದರು.
ಜೂನ್ 28, 2007 ರಂದು,ವಿಶ್ವಗುರು ಬೆನೆಡಿಕ್ಟ್ XVI ರವರನ್ನು ವಲಸಿಗರು ಮತ್ತು ನಿರಾಶ್ರಿತರ ಜನರ ಯಾಜಕರ ಆರೈಕೆಗಾಗಿ ವಿಶ್ವಗುರುಗಳ ಸಮ್ಮೇಳನದ ಉಪ ಕಾರ್ಯದರ್ಶಿಯಾಗಿ ನೇಮಿಸಿದರು.
ನಂತರ, ಫೆಬ್ರವರಿ 6, 2010 ರಂದು, ಅವರನ್ನು ಅಂಗೋಲಾ, ಸಾವೊ ಟೋಮ್ ಮತ್ತು ಪ್ರಿನ್ಸಿಪೆಗೆ ಟೈಟ್ಯುಲರ್ ಮಹಾಧರ್ಮಾಧ್ಯಕ್ಷರು ಮತ್ತು ಪ್ರೇಷಿತ ರಾಯಭಾರಿ ಎಂದು ಹೆಸರಿಸಲಾಯಿತು.
ಅವರ ಧರ್ಮಾಧ್ಯಕ್ಷೀಯಾಭಿಷೇಕವು ಮಾರ್ಚ್ 18, 2010 ರಂದು ನಡೆಯಿತು, ಇದನ್ನು ಆಗಿನ ವ್ಯಾಟಿಕನ್ ವಿದೇಶಾಂಗ ಕಾರ್ಯದರ್ಶಿ ಕಾರ್ಡಿನಲ್ ಟಾರ್ಸಿಸಿಯೊ ಬರ್ಟೋನ್ ರವರ ನೇತೃತ್ವದಲ್ಲಿ ಆಚರಿಸಲಾಯಿತು.
ಅವರ ರಾಜತಾಂತ್ರಿಕ ಪ್ರಯಾಣವು ಮತ್ತಷ್ಟು ನೇಮಕಾತಿಗಳೊಂದಿಗೆ ಮುಂದುವರೆಯಿತು. ಮಾರ್ಚ್ 5, 2015 ರಂದು, ಅವರನ್ನು ಹೊಂಡುರಾಸ್‌ಗೆ ಪ್ರೇಷಿತ ರಾಯಭಾರಿಯಾಗಿ ನೇಮಿಸಲಾಯಿತು. ಮಾರ್ಚ್ 29, 2019 ರಂದು, ವಿಶ್ವಗುರು ಫ್ರಾನ್ಸಿಸ್ ರವರನ್ನು ನ್ಯೂಜಿಲೆಂಡ್‌ಗೆ ಪ್ರೇಷಿತ ರಾಯಭಾರಿಯಾಗಿ ಮತ್ತು ಪೆಸಿಫಿಕ್ ದ್ವೀಪಗಳಿಗೆ ವಿಶ್ವಗುರುವಿನ ಪ್ರತಿನಿಧಿಯಾಗಿ ನೇಮಿಸಿದರು.