MAP

Second Session of the 16th Ordinary General Assembly of the Synod of Bishops Second Session of the 16th Ordinary General Assembly of the Synod of Bishops  (ANSA)

ಕಾರ್ಡಿನಲ್ ಗ್ರೆಚ್: ಸಿನೊಡಲ್ ಪ್ರಕ್ರಿಯೆಯ ಮೂರನೇ ಹಂತವು ಧರ್ಮಸಭೆಯ 'ಮುಂದಿನ ಹೆಜ್ಜೆ'

ಧರ್ಮಾಧ್ಯಕ್ಷರುಗಳ ಸಿನೊಡ್‌ನ ಪ್ರಧಾನ ಕಾರ್ಯದರ್ಶಿ ಕಾರ್ಡಿನಲ್ ಮಾರಿಯೋ ಗ್ರೆಚ್ ರವರು, ಸಿನೊಡಲ್ ಪ್ರಕ್ರಿಯೆಯ 60ನೇ ವಾರ್ಷಿಕೋತ್ಸವದಂದು ಪ್ರಕಟವಾದ ಟಿಪ್ಪಣಿಯಲ್ಲಿ, ಧರ್ಮಾಧ್ಯಕ್ಷರುಗಳ ಸಿನೊಡ್‌ನ ವಿಕಾಸವನ್ನು ಪತ್ತೆಹಚ್ಚಿ ಉತ್ತಮ ಭವಿಷ್ಯವನ್ನು ಎದುರು ನೋಡುತ್ತಾರೆ.

ಸಾಲ್ವಟೋರ್ ಸೆರ್ನುಜಿಯೊ

ಧರ್ಮಾಧ್ಯಕ್ಷರುಗಳ ಸಿನೊಡ್‌ನ ಪ್ರಧಾನ ಕಾರ್ಯದರ್ಶಿ ಕಾರ್ಡಿನಲ್ ಮಾರಿಯೋ ಗ್ರೆಚ್ ರವರು, ಸಿನೊಡಲ್ ಪ್ರಕ್ರಿಯೆಯ ಮೂರನೇ ಹಂತವು ಸಿನೊಡಾಲಿಟಿಯ ಅನುಭವ ಮತ್ತು ತಿಳುವಳಿಕೆಯಲ್ಲಿ ಮತ್ತಷ್ಟು ಯೋಜನೆಯ ಕಾರ್ಯಗತ ಹೆಜ್ಜೆಯನ್ನು ಮುಂದಿಡಲು ಎಲ್ಲಾ ಪ್ರಯತ್ನಗಳನ್ನು ಮಾಡುವಂತೆ ಧರ್ಮಸಭೆಯನ್ನು ಆಹ್ವಾನಿಸಿದ್ದಾರೆ.

ವ್ಯಾಟಿಕನ್ ಸಂಸ್ಥೆಯ ಸ್ಥಾಪನೆಯ 60ನೇ ವಾರ್ಷಿಕೋತ್ಸವಕ್ಕಾಗಿ ಪ್ರಕಟವಾದ ಟಿಪ್ಪಣಿಯಲ್ಲಿ ಈ ಪ್ರೋತ್ಸಾಹ ಬಂದಿದೆ.

ಪತ್ರದಲ್ಲಿ, ಕಾರ್ಡಿನಲ್ ಗ್ರೆಚ್ರವರು ವಿಶ್ವಗುರು ಫ್ರಾನ್ಸಿಸ್ರವರು ಸಿನೊಡಾಲಿಟಿಯನ್ನು “ಧರ್ಮಸಭೆಯಲ್ಲಿ ಏಕತೆಯನ್ನು ಸಾಧಿಸಲು ಇದೊಂದು ವಿಶೇಷ ಮಾರ್ಗವಾಗಿದೆ” ಎಂದು ವ್ಯಾಖ್ಯಾನಿಸಿದ್ದಾರೆ ಎಂದು ಹೇಳುತ್ತಾರೆ.

ಈ ಭಾವನೆಗಳನ್ನು ವಿಶ್ವಗುರು XIV ಲಿಯೋರವರು ಕೂಡ ಪ್ರತಿಧ್ವನಿಸಿದ್ದಾರೆ, ಅವರು ಕಳೆದ ಭಾನುವಾರದ ತ್ರಿಕಾಲ ಪ್ರಾರ್ಥನೆಯಲ್ಲಿ, 1965ರಲ್ಲಿ ದ್ವಿತೀಯ ವ್ಯಾಟಿಕನ್ ಸಮ್ಮೇಳನವು ಮುಕ್ತಾಯಗೊಳ್ಳುತ್ತಿದ್ದಂತೆ ಧರ್ಮಾಧ್ಯಕ್ಷರುಗಳ ಸಿನೊಡ್ ನ್ನು ರಚಿಸುವಲ್ಲಿ ಸಂತ ಆರನೇ ಪೌಲ್ ರವರ "ಪ್ರವಾದಿಯ ಅಂತಃಪ್ರಜ್ಞೆ"ಯ ಬಗ್ಗೆ ಒತ್ತಿ ಹೇಳಿದರು.

ಈ ಭರವಸೆಯನ್ನು ಕಾರ್ಡಿನಲ್ ಗ್ರೆಚ್ ರವರು ತಮ್ಮ ಟಿಪ್ಪಣಿಯಲ್ಲಿ ಪುನರುಚ್ಚರಿಸಿದ್ದಾರೆ, ಇದು 2021ರಲ್ಲಿ ವಿಶ್ವಗುರು ಫ್ರಾನ್ಸಿಸ್ ರವರು ತಳಮಟ್ಟದಲ್ಲಿ ಪ್ರಾರಂಭಿಸಿದ ಸಿನೊಡಲ್ ಪ್ರಕ್ರಿಯೆಯ ಮೂರನೇ ಹಂತದಲ್ಲಿ ಬರುತ್ತದೆ.

ಧರ್ಮಕ್ಷೇತ್ರಗಳು ಮತ್ತು ಸ್ಥಳೀಯ ಧರ್ಮಸಭೆಗಳಿಂದ ಪ್ರಾರಂಭಿಸಿ, ಈ ಪ್ರಕ್ರಿಯೆಯು ಮೂರು ಹಂತಗಳನ್ನು ಒಳಗೊಂಡಿತ್ತು, ಇದರ ಪರಿಣಾಮವಾಗಿ 2023 ಮತ್ತು 2024ರಲ್ಲಿ ವ್ಯಾಟಿಕನ್‌ನಲ್ಲಿ ಎರಡು ಸಭೆಯ ಅಧಿವೇಶನಗಳು ನಡೆದವು. ಈ ಸಭೆಗಳು ಅಂತಿಮ ದಾಖಲೆಯನ್ನು ತಯಾರಿಸಿದವು, ಅದರ ಪ್ರಸ್ತಾಪಗಳನ್ನು ಪ್ರಯತ್ನಿಸಲು ಕಾರ್ಡಿನಲ್ ಗ್ರೆಚ್ ರವರು ಸ್ಥಳೀಯ ಧರ್ಮಸಭೆಗಳು ಮತ್ತು ಅವುಗಳ ಪ್ರಾದೇಶಿಕ ಸಂಸ್ಥೆಗಳನ್ನು ಈಗ ನೋಡಬೇಕೆಂದು ಒತ್ತಾಯಿಸುತ್ತಾರೆ.

ಸಂತ ಆರನೇ ಪೌಲ್ ರವರ ಪ್ರವಾದಿಯ ಅಂತಃಪ್ರಜ್ಞೆ
ಸಂತ ಆರನೇ ಪೌಲ್ ರ ಧರ್ಮಾಧ್ಯಕ್ಷರುಗಳ ಸಿನೊಡ್‌ನ ರಚನೆಯಿಂದ ಮೋಟು ಪ್ರೊಪ್ರಿಯೊ ಅಪೋಸ್ಟೋಲಿಕಾ ಸೊಲಿಸಿಟುಡೊ ಮೂಲಕ ಕಾರ್ಡಿನಲ್ ಗ್ರೆಚ್ ರವರು ತಮ್ಮ ಟಿಪ್ಪಣಿಯನ್ನು ಸಿನೊಡ್‌ನ ಮೂಲಗಳನ್ನು ನೋಡುವ ಮೂಲಕ ಪ್ರಾರಂಭಿಸುತ್ತಾರೆ.

ಇಡೀ ಧರ್ಮಸಭೆಗಾಗಿ ವಿನಂತಿಸುವ ಪೆಟ್ರಿನ್ ಅಧಿಕಾರದಲ್ಲಿ ಧರ್ಮಾಧ್ಯಕ್ಷರುಗಳ ಒಕ್ಕೂಟವನ್ನು ಒಳಗೊಳ್ಳುವಂತೆ "ಧರ್ಮಗುರುಗಳ ಸಮ್ಮೇಳನಗಳ ವಿನಂತಿಗಳಿಗೆ ಪ್ರತಿಕ್ರಿಯಿಸಲು" ಅವರು ಈ ಕೂಟವನ್ನು ಸ್ಥಾಪಿಸಿದರು ಎಂದು ಗ್ರೆಚ್ ರವರು ಬರೆಯುತ್ತಾರೆ.

ಧರ್ಮಾಧ್ಯಕ್ಷೀಯ ಜೀವನದ ನವೀಕರಣ
ಅಂದಿನಿಂದ, 16 ಸಾಮಾನ್ಯ ಸಾಮಾನ್ಯ ಸಭೆಗಳು, 3 ಅಸಾಧಾರಣ ಸಾಮಾನ್ಯ ಸಭೆಗಳು ಮತ್ತು 11 ವಿಶೇಷ ಸಭೆಗಳು ನಡೆದಿವೆ.

ಸಮ್ಮೇಳನದ ನಂತರದ ಎಲ್ಲಾ ವಿಶ್ವಗುರುಗಳು ವಿವಿಧ ಸಭೆಗಳು ರೂಪಿಸಿದ ಪ್ರಸ್ತಾವನೆಗಳು ಅಥವಾ ಅಂತಿಮ ದಾಖಲೆಗಳನ್ನು ಸ್ವೀಕರಿಸಿದ್ದಾರೆ ಮತ್ತು ಧರ್ಮಸಭೆಗಾಗಿ ಬರೆಯಲಾದ ಸಿನೊಡಲ್ ನಂತರದ ಪ್ರೇಷಿತ ಉಪದೇಶಗಳನ್ನು ತಯಾರಿಸಲು ಬಳಸಿದ್ದಾರೆ ಎಂದು ಕಾರ್ಡಿನಲ್ ಗ್ರೆಚ್ ರವರು ವಿವರಿಸುತ್ತಾರೆ, ಇದು "ಧರ್ಮಸಭೆಯ ಜೀವನದ ನವೀಕರಣಕ್ಕೆ ಹೆಚ್ಚಿನ ಕೊಡುಗೆ ನೀಡಿದೆ."
 

17 ಸೆಪ್ಟೆಂಬರ್ 2025, 18:47