ಪವಿತ್ರ ಪೀಠಾಧಿಕಾರಿ: ಮಾನವೀಯ ಕಾನೂನಿಗೆ ಗೌರವವು ಮಾನವೀಯತೆಯ ಜವಾಬ್ದಾರಿಯಾಗಿದೆ
ಲಿಂಡಾ ಬೋರ್ಡೋನಿ
ಅಂತರರಾಷ್ಟ್ರೀಯ ಮಾನವೀಯ ಕಾನೂನು ಸೇರಿದಂತೆ ಅಂತರರಾಷ್ಟ್ರೀಯ ಕಾನೂನನ್ನು ಪಾಲಿಸುವುದು ಮತ್ತು ಗೌರವಿಸುವುದು ದೌರ್ಬಲ್ಯದ ಒಂದು ರೂಪವಲ್ಲ. ಇದಕ್ಕೆ ವಿರುದ್ಧವಾಗಿ, ಅವು ಎಲ್ಲಾ ಮಾನವೀಯತೆಯೆಡಿಗಿನ ಜವಾಬ್ದಾರಿಯ ಉದಾತ್ತ ರೂಪವಾಗಿದೆ ಎಂದು ಜಿನೀವಾದಲ್ಲಿ ವಿಶ್ವಸಂಸ್ಥೆ ಮತ್ತು ಇತರ ಸಂಸ್ಥೆಗಳಿಗೆ ಪವಿತ್ರ ಪೀಠಾಧಿಕಾರಿಯ ಶಾಶ್ವತ ವೀಕ್ಷಕರು ಹೇಳಿದರು.
ಸೆಪ್ಟೆಂಬರ್ 16 ರಂದು ಕ್ಲಸ್ಟರ್ ಯುದ್ಧಸಾಮಗ್ರಿಗಳ ಸಮಾವೇಶದ 13ನೇ ರಾಜ್ಯ ಪಕ್ಷಗಳ ಸಭೆಯಲ್ಲಿ ಮಾತನಾಡಿದ ಮಹಾಧರ್ಮಾಧ್ಯಕ್ಷರಾದ ಎಟ್ಟೋರ್ ಬಾಲೆಸ್ಟ್ರೆರೊರವರು, ಫಿಲಿಪೈನ್ಸ್ ಸಮಾವೇಶಕ್ಕೆ ತನ್ನ ಬದ್ಧತೆಗೆ ಧನ್ಯವಾದ ಹೇಳುವ ಮೂಲಕ ಮತ್ತು ಹೊಸದಾಗಿ ಸೇರಿಕೊಂಡ ವನವಾಟುವನ್ನು ಸ್ವಾಗತಿಸುವ ಮೂಲಕ ತಮ್ಮ ಹೇಳಿಕೆಯನ್ನು ಪ್ರಾರಂಭಿಸಿದರು.
ಮಾನವೀಯ ನಿಶ್ಯಸ್ತ್ರೀಕರಣ ಒಪ್ಪಂದಗಳು ಕಾನೂನು ಬಾಧ್ಯತೆಗಳನ್ನು ಮಾತ್ರವಲ್ಲದೆ, ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಗೆ ನೈತಿಕ ಬದ್ಧತೆಗಳನ್ನು ಸಹ ಒಳಗೊಂಡಿರುತ್ತವೆ ಎಂದು ಅವರು ತಮ್ಮ ಹೇಳಿಕೆಯಲ್ಲಿ ಗಮನಿಸಿದರು.
ಆಗಸ್ಟ್ 1939ರಲ್ಲಿ ವಿಶ್ವಗುರು XII ಪಯಸ್ ರವರು ಶಾಂತಿಗಾಗಿ ಕೋರಿದ ಮನವಿಯನ್ನು ಉಲ್ಲೇಖಿಸುತ್ತಾ, ನ್ಯಾಯವು ನಿಜವಾಗಿಯೂ 'ಶಸ್ತ್ರಾಸ್ತ್ರಗಳ ಬಲದಿಂದಲ್ಲ, ವಿವೇಚನಾ ಬಲದಿಂದ' ಉತ್ತಮ ಭವಿಷ್ಯಕ್ಕಾಗಿ ದಾರಿ ಮಾಡಿಕೊಡುತ್ತದೆ ಎಂದು ಅವರು ಹೇಳಿದರು.
ಎಲ್ಲಾ ರಾಜ್ಯಗಳು ಒಂದು ಸೇರಲು ಮನವಿ ಮಾಡಿ
ಆದ್ದರಿಂದ, ಈ ಸಮಾವೇಶದಲ್ಲಿ ಇನ್ನೂ ಪಕ್ಷವಾಗಿಲ್ಲದ ಎಲ್ಲಾ ರಾಜ್ಯಗಳು "ತುರ್ತಾಗಿ (ನ್ಯಾಯವು ನಿಜವಾಗಿಯೂ 'ಶಸ್ತ್ರಾಸ್ತ್ರಗಳ ಬಲದಿಂದಲ್ಲ, ವಿವೇಚನಾ ಬಲದಿಂದ' ಉತ್ತಮ ಭವಿಷ್ಯಕ್ಕಾಗಿ ದಾರಿ ಮಾಡಿಕೊಡುತ್ತದೆ) ಅದನ್ನು ಪಾಲಿಸಬೇಕು ಮತ್ತು ಅದನ್ನು ತ್ವರಿತವಾಗಿ ಕಾರ್ಯಗತಗೊಳಿಸಬೇಕು" ಎಂದು ಪವಿತ್ರ ಪೀಠಾಧಿಕಾರಿಯ ನಿಯೋಗವು ಕರೆ ನೀಡುತ್ತದೆ ಎಂದು ಅವರು ಹೇಳಿದರು.
ನಾಗರಿಕರನ್ನು ರಕ್ಷಿಸುವುದು, ಸಂತ್ರಸ್ತರುಗಳಿಗೆ ಸಹಾಯ ಮಾಡುವುದು ಮತ್ತು ಹೆಚ್ಚಿನ ಸಾವುನೋವುಗಳನ್ನು ತಡೆಯುವುದು ಈ ಸಮಾವೇಶವನ್ನು ಸ್ಥಾಪಿಸಲು ಒಂದು ಕಾರಣವಾಗಿತ್ತು ಎಂದು ಮಹಾಧರ್ಮಾಧ್ಯಕ್ಷರಾದ ಎಟ್ಟೋರ್ ಬಾಲೆಸ್ಟ್ರೆರೊರವರು ನೆನಪಿಸಿಕೊಂಡರು.
ನಿಶ್ಯಸ್ತ್ರೀಕರಣವಿಲ್ಲದೆ ಶಾಶ್ವತ ಶಾಂತಿ ಸಾಧ್ಯವಿಲ್ಲ
ಹೀಗಾಗಿ, "ರಾಷ್ಟ್ರಗಳ ಕುಟುಂಬ" ವಾಗಿ, ಸಂತ್ರಸ್ತರುಗಳಿಗೆ ಸಹಾಯ ಮಾಡುವುದು ಅಂತರರಾಷ್ಟ್ರೀಯ ಸಹಕಾರ ಮತ್ತು ಒಗ್ಗಟ್ಟಿನಲ್ಲಿ ಬೇರೂರಿರುವ ಹಂಚಿಕೆಯ ಜವಾಬ್ದಾರಿಯಾಗಿದೆ ಎಂದು ಅವರು ಗಮನಿಸಿದರು.
ರಾಷ್ಟ್ರಗಳ ನಡುವೆ ವಿಶ್ವಾಸ ಬೆಳೆಸುವುದು
ಸಾರ್ವಭೌಮತ್ವ ಮತ್ತು ಭದ್ರತೆಯನ್ನು ಕಾಪಾಡುವ ಪ್ರತಿಯೊಂದು ದೇಶದ ಬದ್ಧತೆಯು ನ್ಯಾಯಸಮ್ಮತವಾಗಿದ್ದರೂ, ಇದು ಮರುಸಜ್ಜುಗೊಳಿಸುವ ಓಟಕ್ಕೆ ಕಾರಣವಾಗಬಾರದು ಎಂದು ಮಹಾಧರ್ಮಾಧ್ಯಕ್ಷರಾದ ಎಟ್ಟೋರ್ ಬಾಲೆಸ್ಟ್ರೆರೊರವರು ತಮ್ಮ ನಂಬಿಕೆಯನ್ನು ವ್ಯಕ್ತಪಡಿಸಿದರು.