MAP

S.Sede-Vietnam: il Papa riceve gruppo di lavoro congiunto S.Sede-Vietnam: il Papa riceve gruppo di lavoro congiunto  (ANSA)

ವಿಯೆಟ್ನಾಂ ಜೊತೆಗಿನ ದ್ವಿಪಕ್ಷೀಯ ಸಂಬಂಧಗಳಲ್ಲಿ ಪವಿತ್ರ ಪೀಠಾಧಿಕಾರಿಯು ಪ್ರಗತಿಯನ್ನು ಪ್ರಕಟಿಸಿದೆ

ದ್ವಿಪಕ್ಷೀಯ ಸಂಬಂಧಗಳನ್ನು ಉತ್ತೇಜಿಸಲು ವ್ಯಾಟಿಕನ್‌ನಲ್ಲಿ ವಿಯೆಟ್ನಾಂನ ಪವಿತ್ರ ಪೀಠಾಧಿಕಾರಿಯು ಜಂಟಿ ಕಾರ್ಯಕಾರಿ ಗುಂಪಿನ ಸಭೆ ಶುಕ್ರವಾರ ಸ್ನೇಹ, ವಿಶ್ವಾಸ ಮತ್ತು ಪರಸ್ಪರ ಗೌರವದ ವಾತಾವರಣದಲ್ಲಿ ನಡೆಯಿತು ಎಂದು ಪವಿತ್ರ ಪೀಠಾಧಿಕಾರಿಯ ಪತ್ರಿಕಾ ಕಚೇರಿಯ ಹೇಳಿಕೆ ತಿಳಿಸಿದೆ.

ವ್ಯಾಟಿಕನ್‌ ಸುದ್ದಿ

ವಿಯೆಟ್ನಾಂನ - ಪವಿತ್ರ ಪೀಠಾಧಿಕಾರಿಯು ಜಂಟಿ ಕಾರ್ಯ ಗುಂಪಿನ ಹನ್ನೆರೆಡನೆಯ ಸಭೆಯು ಸೆಪ್ಟೆಂಬರ್ 12, 2025 ರಂದು ವ್ಯಾಟಿಕನ್ ನಗರದಲ್ಲಿ ನಡೆಯಿತು. ಈ ಸಭೆಯ ಸಹ-ಅಧ್ಯಕ್ಷತೆಯನ್ನು ವಿಯೆಟ್ನಾಂ ನಿಯೋಗದ ಮುಖ್ಯಸ್ಥರಾದ ವಿದೇಶಾಂಗ ವ್ಯವಹಾರಗಳ ಉಪ ಮಂತ್ರಿಗಳಾದ ಘನತೆವೆತ್ತ ಮೇಡಂ ಲೆ ಥಿ ಥು ಹ್ಯಾಂಗ್ ಮತ್ತು ಪವಿತ್ರ ಪೀಠಾಧಿಕಾರಿಯ ನಿಯೋಗದ ಮುಖ್ಯಸ್ಥರಾದ ರಾಜ್ಯಗಳೊಂದಿಗಿನ ಸಂಬಂಧಗಳ ಅಧೀನ ಕಾರ್ಯದರ್ಶಿ ಮಾನ್ಸಿಗ್ನರ್ ಮಿರೋಸ್ಲಾವ್ ವಾಚೋವ್ಸ್ಕಿರವರು ವಹಿಸಿದ್ದರು.

ವಿಯೆಟ್ನಾಂ - ಪವಿತ್ರ ಪೀಠಾಧಿಕಾರಿಯ ಸಂಬಂಧಗಳು ಮತ್ತು ವಿಯೆಟ್ನಾಂನಲ್ಲಿನ ಕಥೋಲಿಕ ಧರ್ಮಸಭೆಯು ಪ್ರಸ್ತುತ ಪರಿಸ್ಥಿತಿಯ ಕುರಿತು ಎರಡೂ ಕಡೆಯವರು ವ್ಯಾಪಕವಾದ ಅಭಿಪ್ರಾಯಗಳ ವಿನಿಮಯವನ್ನು ನಡೆಸಿದರು. ಉತ್ತಮ ಕಥೊಲಿಕರು ಮತ್ತು ಉತ್ತಮ ನಾಗರಿಕರಾಗಿ ಜಗತ್ತಿನಲ್ಲಿ ಸುವಾರ್ತೆಯನ್ನು ಜೀವಿಸುವ ಉತ್ಸಾಹದಲ್ಲಿ, ವಿಯೆಟ್ನಾಂನ ಒಟ್ಟಾರೆ ಅಭಿವೃದ್ಧಿಗೆ ಧರ್ಮಸಭೆಯು ನೀಡಿದ ಸಕಾರಾತ್ಮಕ ಕೊಡುಗೆಗಳನ್ನು ಎರಡೂ ಕಡೆಯವರು ಗುರುತಿಸಿದರು.

ಮೇ 2024ರಲ್ಲಿ ಹಾ ನೋಯ್‌ನಲ್ಲಿ ನಡೆದ ವಿಯೆಟ್ನಾಂ - ಪವಿತ್ರ ಪೀಠಾಧಿಕಾರಿಯ ಜಂಟಿ ಕಾರ್ಯಕಾರಿ ಗುಂಪಿನ ಹನ್ನೊಂದನೆಯ ಸಭೆಯ ನಂತರ, ನಿಯಮಿತ ನಿಶ್ಚಿತತೆ ಮತ್ತು ಸಮಾಲೋಚನೆಗಳು, ವಿವಿಧ ಹಂತಗಳಲ್ಲಿ, ವಿಶೇಷವಾಗಿ ಉನ್ನತ ಮಟ್ಟದಲ್ಲಿ ನಿಯೋಗಗಳ ವಿನಿಮಯ ಮತ್ತು ಹಾ ನೋಯ್‌ನಲ್ಲಿರುವ ನಿವಾಸ ಪಾಪಲ್ ಪ್ರತಿನಿಧಿ ಗೌರವಾನ್ವಿತ ಮಹಾಧರ್ಮಾಧ್ಯಕ್ಷರಾದ ಮಾರೆಕ್ ಜಲೆವ್ಸ್ಕಿರವರ ಚಟುವಟಿಕೆಗಳ ಮೂಲಕ ಎರಡೂ ಕಡೆಯವರು ತಮ್ಮ ದ್ವಿಪಕ್ಷೀಯ ಸಂಬಂಧಗಳಲ್ಲಿನ ಪ್ರಗತಿಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು.

ಉನ್ನತ ಮಟ್ಟದ ವಿನಿಮಯದ ಮೂಲಕ ತಮ್ಮ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಉತ್ತೇಜಿಸುವ ಮಹತ್ವವನ್ನು ಎರಡೂ ಕಡೆಯವರು ಒತ್ತಿ ಹೇಳಿದರು ಮತ್ತು ಜಂಟಿ ಕಾರ್ಯಕಾರಿ ಗುಂಪಿನ ನಿಯಮಿತ ಸಭೆಗಳನ್ನು ನಡೆಸುವುದನ್ನು ಮುಂದುವರಿಸಲು ಒಪ್ಪಿಕೊಂಡರು.

ಸ್ನೇಹ, ವಿಶ್ವಾಸ ಮತ್ತು ಪರಸ್ಪರ ಗೌರವದ ವಾತಾವರಣದಲ್ಲಿ ಸಭೆ ನಡೆಯಿತು.
ವ್ಯಾಟಿಕನ್ ಭೇಟಿಯ ಸಂದರ್ಭದಲ್ಲಿ, ವಿಯೆಟ್ನಾಂ ನಿಯೋಗವನ್ನು ಪರಮಪೂಜ್ಯ ವಿಶ್ವಗುರು ಹದಿನಾಲ್ಕನೇ ಲಿಯೋರವರು ಬರಮಾಡಿಕೊಂಡರು ಮತ್ತು ವಿದೇಶಾಂಗ ಕಾರ್ಯದರ್ಶಿ ಕಾರ್ಡಿನಲ್ ಪಿಯೆಟ್ರೊ ಪರೋಲಿನ್ ರವರು ಮತ್ತು ರಾಜ್ಯಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗಿನ ಸಂಬಂಧಗಳ ಕಾರ್ಯದರ್ಶಿ ಮಹಾಧರ್ಮಾಧ್ಯಕ್ಷರಾದ ಪಾಲ್ ಗಲ್ಲಾಘರ್ ರವರನ್ನು ಸೌಜನ್ಯದಿಂದ ಭೇಟಿಯಾದರು.
 

13 ಸೆಪ್ಟೆಂಬರ್ 2025, 22:25