ಪವಿತ್ರ ಪೀಠಾಧಿಕಾರಿ: ವೃದ್ಧರು ಸಮಾನ ರಕ್ಷಣೆ ಮತ್ತು ಕಾರ್ಮಿಕ ಹಕ್ಕುಗಳಿಗೆ ಅರ್ಹರು
ಡೆವಿನ್ ವ್ಯಾಟ್ಕಿನ್ಸ್
ಜಿನೀವಾದಲ್ಲಿರುವ ವಿಶ್ವಸಂಸ್ಥೆಗೆ ಪವಿತ್ರ ಪೀಠಾಧಿಕಾರಿಯ ಖಾಯಂ ವೀಕ್ಷಕರಾಗಿರುವ ಮಹಾಧರ್ಮಾಧ್ಯಕ್ಷರಾಗಿರುವ ಎಟ್ಟೋರ್ ಬಾಲೆಸ್ಟ್ರೆರೊವರು, ವೃದ್ಧರ ಮಾನವ ಹಕ್ಕುಗಳ ರಕ್ಷಣೆಗಾಗಿ ಕಥೋಲಿಕ ಧರ್ಮಸಭೆಯ ಕರೆಯನ್ನು ನವೀಕರಿಸಿದ್ದಾರೆ.
ಬುಧವಾರ ಮಾನವ ಹಕ್ಕುಗಳ ಮಂಡಳಿಯ 60ನೇ ನಿಯಮಿತ ಅಧಿವೇಶನದಲ್ಲಿ ಮಾತನಾಡಿದ ಪ್ರೇಷಿತ ರಾಯಭಾರಿ, ವಿಶ್ವದಾದ್ಯಂತದ ಸಮಾಜಗಳು ಮುಂಬರುವ ಜನಸಂಖ್ಯಾ ಬದಲಾವಣೆಗಳನ್ನು ಎದುರಿಸಲು ಸಿದ್ಧರಿಲ್ಲ ಎಂದು ಹೇಳಿದರು.
2030ರ ವೇಳೆಗೆ, 6 ಜನರಲ್ಲಿ ಒಬ್ಬರು 60 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿರುತ್ತಾರೆ, ಒಟ್ಟು 1.4 ಶತಕೋಟಿ ಜನರು, 2050ರ ವೇಳೆಗೆ ಈ ಸಂಖ್ಯೆ ದ್ವಿಗುಣಗೊಳ್ಳುವ ನಿರೀಕ್ಷೆಯಿದೆ ಎಂದು ಅವರು ಗಮನಿಸಿದರು.
ಈ ಬದಲಾವಣೆಯ ಮಧ್ಯೆ, ಮಹಾಧರ್ಮಾಧ್ಯಕ್ಷರಾಗಿರುವ ಎಟ್ಟೋರ್ ಬಾಲೆಸ್ಟ್ರೆರೊವರು, ವೃದ್ಧರ ದುರ್ಬಲತೆ ಮತ್ತು ಘನತೆಯನ್ನು ಸರಿಯಾದ ಗೌರವ, ಅವರ ಆರ್ಥಿಕ ಮತ್ತು ಸಾಮಾಜಿಕ ಯೋಗಕ್ಷೇಮ ಸೇರಿದಂತೆ, ಪ್ರಾಯೋಗಿಕ ಪರಿಗಣನೆಗಳೊಂದಿಗೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಈ ಜನಸಂಖ್ಯಾ ಬದಲಾವಣೆಯು ಸಮಾಜಗಳು ತಮ್ಮ ಹಿರಿಯರನ್ನು ಹೇಗೆ ಗೌರವಿಸುತ್ತವೆ ಮತ್ತು ಕಾಳಜಿ ವಹಿಸುತ್ತವೆ ಎಂಬುದರ ನೈತಿಕ ಪರೀಕ್ಷೆಯಾಗಿದೆ ಎಂದು ಅವರು ಹೇಳಿದರು.
ಜನರು ವಯಸ್ಸಾದಂತೆ, ಸಕ್ರಿಯ ನಾಗರಿಕರನ್ನು ಬೆಂಬಲಿಸುವುದು ಮತ್ತು ನೆರವಿನ ಅಗತ್ಯವಿರುವವರಿಗೆ ಸಹಾಯ ಮಾಡುವುದರ ನಡುವೆ ಸಂಪನ್ಮೂಲಗಳನ್ನು ಮರುಹಂಚಿಕೆ ಮಾಡುವ ಮಾರ್ಗಗಳನ್ನು ಕಂಡುಕೊಳ್ಳಬೇಕು ಎಂದು ಮಹಾಧರ್ಮಾಧ್ಯಕ್ಷರು ಹೇಳಿದರು. ವಯಸ್ಸಾದಂತೆ ಅಥವಾ ದೈಹಿಕ ಮತ್ತು ಮಾನಸಿಕ ಕ್ಷೀಣತೆಯಿಂದ, ಅವರ ಘನತೆಯು ಕ್ಷೀಣಿಸುವುದಿಲ್ಲ ಎಂದು ಅವರು ಹೇಳಿದರು.
ವಿಶೇಷವಾಗಿ ಮಹಿಳೆಯರಿಗೆ ವೃದ್ಧಾಪ್ಯದಲ್ಲಿ ರಕ್ಷಣೆ ನೀಡಲು ಸಾಮಾಜಿಕ ರಕ್ಷಣೆ ಮತ್ತು ಪಿಂಚಣಿಗಳಿಗೆ ಸಮಾನ ಪ್ರವೇಶವಿರಬೇಕು.
ಕೊನೆಯದಾಗಿ, ಮಹಾಧರ್ಮಾಧ್ಯಕ್ಷರಾದ ಬಾಲೆಸ್ಟ್ರೆರೊರವರು ಬಲವಾದ ಸಾಮಾಜಿಕ ಭದ್ರತಾ ವ್ಯವಸ್ಥೆಗಳನ್ನು ಎತ್ತಿಹಿಡಿಯಲು, ವಿಶೇಷವಾಗಿ ಅನೇಕ ವೃದ್ಧರು ಸಹಾಯದ ಏಕೈಕ ಮೂಲವನ್ನು ಕಂಡುಕೊಳ್ಳುವ ಕುಟುಂಬವನ್ನು ಬೆಂಬಲಿಸಲು, ಅಂತರ-ಪೀಳಿಗೆಯ ಒಗ್ಗಟ್ಟಿಗೆ ಕರೆ ನೀಡಿದರು.
ಮಾನವ ಸಮಾಜದ ಕುಟುಂಬವನ್ನು ಬಲಪಡಿಸಲು ಮತ್ತು ರಕ್ಷಿಸಲು ಕುಟುಂಬಗಳನ್ನು ಬೆಂಬಲಿಸುವ ಸಾಮಾಜಿಕ ರಕ್ಷಣಾ ನೀತಿಗಳಲ್ಲಿ ಹೆಚ್ಚಿನ ಹೂಡಿಕೆಗೆ ಪವಿತ್ರ ಪೀಠಾಧಿಕಾರಿಯು ಕರೆ ನೀಡುತ್ತದೆ ಎಂದರು.