ಹತ್ಯಾಕಾಂಡವನ್ನು ನಿಲ್ಲಿಸದ ದುರ್ಬಲ ನಿರ್ಬಂಧಗಳು
ಆಂಡ್ರಿಯಾ ಟೋರ್ನಿಯೆಲ್ಲಿ
ಬುಧವಾರ, ಸೆಪ್ಟೆಂಬರ್ 17 ರಂದು, ಯುರೋಪಿನ ಕಮಿಷನ್ ಗಾಜಾದಲ್ಲಿ ಮುಂದುವರೆಯುತ್ತಿರುವ ದುರಂತವನ್ನು ತಡೆಯುವ ಗುರಿಯನ್ನು ಹೊಂದಿರುವ ಕ್ರಮಗಳ ಗುಂಪನ್ನು ಮಂಡಿಸಿತು. ಬಾಂಬ್ ದಾಳಿಯ ಅಡಿಯಲ್ಲಿ ಬಲವಂತವಾಗಿ ಗಡಿಪಾರು ಮಾಡಲ್ಪಟ್ಟ ಇಡೀ ಜನರ ಭಯಾನಕ ಚಿತ್ರಗಳು, ಕೊಲ್ಲಲ್ಪಟ್ಟ ಮಕ್ಕಳ ಚಿತ್ರಗಳು ನಮಗೆ ಇನ್ನೂ ಗೋಚರಿಸುತ್ತಿವೆ. ಸಾಮಾನ್ಯ ಸಭೆಯ ಕೊನೆಯಲ್ಲಿ, ಮತ್ತೊಮ್ಮೆ ಅಂತರರಾಷ್ಟ್ರೀಯ ಮಾನವೀಯ ಕಾನೂನನ್ನು ಸಂಪೂರ್ಣವಾಗಿ ಗೌರವಿಸುವಂತೆ ಕರೆ ನೀಡಿದ ವಿಶ್ವಗುರು XIV ಲಿಯೋರವರ ಪುನರಾವರ್ತಿತ ಮನವಿಗಳನ್ನು ನಾವು ಕೇಳುತ್ತಲೇ ಇದ್ದೇವೆ, "ಭಯದಿಂದ ಬದುಕುವುದನ್ನು ಮತ್ತು ಸ್ವೀಕಾರಾರ್ಹವಲ್ಲದ ಪರಿಸ್ಥಿತಿಗಳಲ್ಲಿ ಬದುಕುಳಿಯುವುದನ್ನು ಮುಂದುವರೆಸುವ, ತಮ್ಮ ಸ್ವಂತ ನಾಡಿನಿಂದ ಮತ್ತೊಮ್ಮೆ ಬಲವಂತವಾಗಿ ಸ್ಥಳಾಂತರಿಸಲ್ಪಟ್ಟ" ಪ್ಯಾಲೆಸ್ತೀನಿನ ಜನರಿಗೆ ನಿಕಟತೆಯನ್ನು ವ್ಯಕ್ತಪಡಿಸಿದರು.
ಕೆಲವು ಕ್ರಮಗಳು ಸಾಮಾನ್ಯ ಜನರ ಜೀವನವನ್ನು ಹೆಚ್ಚು ಕಷ್ಟಕರವಾಗಿಸುವ ಅಪಾಯವನ್ನುಂಟುಮಾಡುತ್ತವೆ, ಆದರೆ ಸಂಘರ್ಷದ ಮೇಲೆ ನೇರವಾಗಿ ಪರಿಣಾಮ ಬೀರುವ ಇತರವುಗಳು ಕಾಣೆಯಾಗಿವೆ - ಅವುಗಳೆಂದರೆ ಶಸ್ತ್ರಾಸ್ತ್ರ ವ್ಯಾಪಾರದ ಮೇಲಿನ ನಿರ್ಬಂಧಗಳು. ನೆರೆಯ ರಾಷ್ಟ್ರಗಳ ಮೇಲಿನ ದಾಳಿಗಳಲ್ಲಿ ಈಗ ಬಳಸಲಾಗುತ್ತಿರುವ ಶಸ್ತ್ರಾಸ್ತ್ರಗಳು ಇವುಗಳೇ. ವಾಸ್ತವವಾಗಿ, ಯುರೋಪಿನ ಪ್ಯಾಕೇಜ್ ಶಸ್ತ್ರಾಸ್ತ್ರಗಳು ಮತ್ತು ಮಿಲಿಟರಿ ಉಪಕರಣಗಳ ಪೂರೈಕೆಗೆ ಸಂಬಂಧಿಸಿದಂತೆ ಯಾವುದೇ ಕ್ರಮಗಳನ್ನು ಹೊಂದಿಲ್ಲ.
ಜೂನ್ 26 ರಂದು ವಿಶ್ವಗುರು XIV ಲಿಯೋರವರು ಹೇಳಿದ ಮಾತುಗಳು ದುರಂತಮಯವಾಗಿ ಪ್ರಸ್ತುತವಾಗಿವೆ: “ಸೈನಿಕರ ಪ್ರಾಬಲ್ಯವು, ಇನ್ನೂ ಹೆಚ್ಚಿನ ದ್ವೇಷ ಮತ್ತು ಸೇಡು ತೀರಿಸಿಕೊಳ್ಳುವ ಬಯಕೆಯನ್ನು ಹೆಚ್ಚಿಸುವ ಬದಲು ಸಮಸ್ಯೆಗಳನ್ನು ಪರಿಹರಿಸುತ್ತದೆ ಎಂಬಂತೆ ಶಸ್ತ್ರಾಸ್ತ್ರಗಳ ಸಂಗ್ರಹಣೆಯ ಬಗ್ಗೆ ಪ್ರಚಾರದೊಂದಿಗೆ ನಾವು ವಿಶ್ವದ ಜನರ ಶಾಂತಿಯ ಬಯಕೆಯನ್ನು ಹೇಗೆ ದ್ರೋಹ ಮಾಡುವುದನ್ನು ಮುಂದುವರಿಸಬಹುದು? ಸಾವಿಗೆ ಸಂಬಂಧಪಟ್ಟ, ಅಂದರೆ ಸಾವಿನ ವ್ಯಾಪಾರಿಗಳ ಜೇಬಿನಲ್ಲಿ ಎಷ್ಟು ಹಣ ಸೇರುತ್ತಿದೆ ಎಂಬುದನ್ನು ಜನರು ಅರಿತುಕೊಳ್ಳಲು ಪ್ರಾರಂಭಿಸಿದ್ದಾರೆ; ಹೊಸ ಆಸ್ಪತ್ರೆಗಳು ಮತ್ತು ಶಾಲೆಗಳನ್ನು ನಿರ್ಮಿಸಲು ಬಳಸಬಹುದಾದ ಹಣವನ್ನು ಈಗಾಗಲೇ ಇರುವ ಆಸ್ಪತ್ರೆಗಳು ಮತ್ತು ಶಾಲೆಗಳನ್ನು ನಾಶಮಾಡಲು ಬಳಸಲಾಗುತ್ತಿದೆ! ”