ಪ್ರೇಷಿತ ಪೀಠಾಧಿಕಾರಿಯ ಮತ್ತು ಬುರುಂಡಿ ರಾಜತಾಂತ್ರಿಕ ಸಂಬಂಧಗಳ ನಡುವಿನ 60 ವರ್ಷಗಳ ವಾರ್ಷಿಕೋತ್ಸವದ ಆಚರಣೆ
ವ್ಯಾಟಿಕನ್ ಸುದ್ದಿ
ಸ್ಥಳೀಯ ಧರ್ಮಸಭೆ ಮತ್ತು ಬುರುಂಡಿಯ ಅಧಿಕಾರಿಗಳ ಆಹ್ವಾನದ ಮೇರೆಗೆ, ಕಾರ್ಡಿನಲ್ ಸೆಕ್ರೆಟರಿ ಆಫ್ ಸ್ಟೇಟ್ ಪಿಯೆಟ್ರೊ ಪರೋಲಿನ್ ರವರು ಆಗಸ್ಟ್ 12, ಮಂಗಳವಾರದಿಂದ ಆಗಸ್ಟ್ 18, ಸೋಮವಾರದವರೆಗೆ ಪೂರ್ವ ಆಫ್ರಿಕಾದ ದೇಶಕ್ಕೆ ಭೇಟಿ ನೀಡುತ್ತಿದ್ದಾರೆ.
ಈ ಪ್ರವಾಸದ ಸಂದರ್ಭವೆಂದರೆ ಬುರುಂಡಿ ಮತ್ತು ಪ್ರೇಷಿತ ಪೀಠಾಧಿಕಾರಿಯ ನಡುವಿನ ರಾಜತಾಂತ್ರಿಕ ಸಂಬಂಧಗಳ 60 ವರ್ಷಗಳ ಕಾರ್ಯನಿರ್ವಹಣೆಯ ಮಹೋತ್ಸವದ ಸಮಾರೋಪ ಮತ್ತು 2003ರಲ್ಲಿ ಬುರುಂಡಿಯಲ್ಲಿ ಕೊಲ್ಲಲ್ಪಟ್ಟ ಮಾಜಿ ಪ್ರೇಷಿತ ರಾಯಭಾರಿ, ಮಹಾಧಧರ್ಮಾಧ್ಯಕ್ಷರಾದ ಮೈಕೆಲ್ ಐಡನ್ ಕೋರ್ಟ್ನಿರವರ ಗೌರವಾರ್ಥವಾಗಿ ಸ್ಮಾರಕದ ಉದ್ಘಾಟನೆ ಮತ್ತು ಆರೋಗ್ಯ ಕೇಂದ್ರದ ಅಡಿಪಾಯ ಹಾಕುವುದು.
ಅಂತರ್ಯುದ್ಧದಿಂದ ಧ್ವಂಸಗೊಂಡ ದೇಶದಲ್ಲಿ ವಿಶ್ವಗುರುವಿನ ಪ್ರತಿನಿಧಿಯಾಗಿ ದ್ವಿತೀಯಾ ಜಾನ್ ಪೌಲ್ ರವರು 2000ರಲ್ಲಿ ನೇಮಕಗೊಂಡ ಮಹಾಧಧರ್ಮಾಧ್ಯಕ್ಷರಾದ ಕೋರ್ಟ್ನಿರವರು, ಬುರುಂಡಿಯದ ಸರ್ಕಾರ ಮತ್ತು ಹುಟು ಬಂಡುಕೋರರ ನಡುವೆ ನವೆಂಬರ್ 2003ರ ಒಪ್ಪಂದವನ್ನು ತಲುಪುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಕ್ಯೂಬಾದಲ್ಲಿ ಪ್ರೇಷಿತ ರಾಯಭಾರಿಗೆ ಉದ್ದೇಶಿಸಲಾಗಿದ್ದ ಐರಿಶ್ ಧರ್ಮಗುರುಗಳು, ಖಚಿತವಾದ ಶಾಂತಿ ಸನ್ನಿಹಿತವಾಗಿದೆ ಎಂದು ನಂಬಿ ಮತ್ತೊಂದು ಅವಧಿಗೆ ಬುಜುಂಬುರಾದಲ್ಲಿ ಉಳಿಯಲು ಅಥವಾ ತಂಗಲು ಕೇಳಿಕೊಂಡಿದ್ದರು. ನಂತರ ಬುರುಂಡಿಯ ರಾಜಧಾನಿಯಿಂದ ಸ್ವಲ್ಪ ದೂರದಲ್ಲಿ ಪ್ರಯಾಣಿಸುತ್ತಿದ್ದಾಗ, ಅವರ ಕಾರಿನ ಮೇಲೆ ದಾಳಿ ಮಾಡಲಾಯಿತು. ಡಿಕ್ಕಿ ಹೊಡೆದ ವಾಹನದಲ್ಲಿದ್ದ ಏಕೈಕ ವ್ಯಕ್ತಿಯಾಗಿದ್ದ ಮಹಾಧಧರ್ಮಾಧ್ಯಕ್ಷರವರು ದಾಳಿಯಿಂದ ಗಾಯಗೊಂಡು ಡಿಸೆಂಬರ್ 29, 2003ರಂದು ಆಸ್ಪತ್ರೆಯಲ್ಲಿ ನಿಧನರಾದರು, ಅವರು ನಿಧನರಾದಾಗ ಅವರಿಗೆ ಕೇವಲ 58 ವರ್ಷವಾಗಿತ್ತು.
2023 ರಲ್ಲಿ, ಅವರ ಮರಣದ ಇಪ್ಪತ್ತು ವರ್ಷಗಳ ನಂತರ, ಮಹಾಧಧರ್ಮಾಧ್ಯಕ್ಷ ಪೌಲ್ ರಿಚರ್ಡ್ ಗಲ್ಲಾಘರವರು ವ್ಯಾಟಿಕನ್ ಗ್ರೊಟೋಸ್‌ನ ಐರಿಶ್ ಪ್ರಾರ್ಥನಾ ಮಂದಿರದಲ್ಲಿ ರಾಯಭಾರಿಯವರ ಸ್ಮರಣಾರ್ಥವಾಗಿ ದಿವ್ಯಬಲಿಪೂಜೆಯನ್ನು ಅರ್ಪಿಸಿದರು.
ಈಗ ಇಡೀ ದೇಶವು, ಕಾರ್ಡಿನಲ್ ಪರೋಲಿನ್ ರವರ ಸಮ್ಮುಖದಲ್ಲಿ, ಸ್ಮರಣಾರ್ಥ ಸ್ಮಾರಕದ ಕೇಂದ್ರವನ್ನು ಸ್ಥಾಪಿಸುವುದರೊಂದಿಗೆ ಮಹಾಧಧರ್ಮಾಧ್ಯಕ್ಷರವರನ್ನು ಸ್ಮರಿಸುತ್ತದೆ, ಇದನ್ನು ಹತ್ಯೆ ನಡೆದ ಸ್ಥಳದಲ್ಲೇ ನಿರ್ಮಿಸಲಾಗುವುದು. ಈ ಯೋಜನೆಯನ್ನು ಕಳೆದ ವರ್ಷ ಬುರುಂಡಿಯ ಅಧ್ಯಕ್ಷ ಎವರಿಸ್ಟೆ ನಡೈಶಿಮಿಯೆರವರು ಘೋಷಿಸಿದರು ಮತ್ತು ಅಡಿಪಾಯ ಹಾಕುವ ದಿನಾಂಕವನ್ನು ಆಗಸ್ಟ್ 14, 2025 ಕ್ಕೆ ನಿಗದಿಪಡಿಸಲಾಯಿತು. ಸ್ಮಾರಕದ ಉದ್ಘಾಟನೆ ಮತ್ತು ಆರೋಗ್ಯ ಕೇಂದ್ರದ ಕಾಮಗಾರಿ ಆರಂಭದ ಸಮಾರಂಭದ ಅಧ್ಯಕ್ಷತೆಯನ್ನು ಕಾರ್ಡಿನಲ್ ಪರೋಲಿನ್ ರವರು ವಹಿಸಲಿದ್ದಾರೆ.