WYD ಸಿಯೋಲ್: ಸಿದ್ಧತೆಗಳು ಈಗಾಗಲೇ ಪ್ರಾರಂಭವಾಗಿವೆ
ಕೀಲ್ಸ್ ಗುಸ್ಸಿ
ಆಗಸ್ಟ್ 3 ರಂದು ಯುವಜನತೆಯ ಜೂಬಿಲಿಯ ಸಂದರ್ಭದಲ್ಲಿ ನಡೆದ ತ್ರಿಕಾಲ ಪ್ರಾರ್ಥನೆಯ ನಂತರ, ವಿಶ್ವಗುರು ಹದಿನಾಲ್ಕನೇಯ ಲಿಯೋರವರು ದಕ್ಷಿಣ ಕೊರಿಯಾದ ಸಿಯೋಲ್‌ನಲ್ಲಿ ನಡೆಯಲಿರುವ ಮುಂದಿನ ವಿಶ್ವ ಯುವ ದಿನದ ದಿನಾಂಕಗಳನ್ನು ಘೋಷಿಸಿದರು.
ಎರಡು ವರ್ಷಗಳ ಹಿಂದೆ ಲಿಸ್ಬನ್‌ನಲ್ಲಿ ವಿಶ್ವಗುರು ಫ್ರಾನ್ಸಿಸ್ ರವರು ನೀಡಿದ ಆಹ್ವಾನವನ್ನು ನಾನು ನವೀಕರಿಸುತ್ತೇನೆ. 2027ರ ಆಗಸ್ಟ್ 3 ರಿಂದ 8 ರವರೆಗೆ ಕೊರಿಯಾದ ಸಿಯೋಲ್‌ನಲ್ಲಿ ವಿಶ್ವ ಯುವ ದಿನವನ್ನು ಆಚರಿಸಲು ವಿಶ್ವದಾದ್ಯಂತದ ಯುವಕರು ಪೇತ್ರರವರ ಉತ್ತರಾಧಿಕಾರಿಯೊಂದಿಗೆ ಒಟ್ಟುಗೂಡುತ್ತಾರೆ.
ಪ್ರಯಾಣ ಮುಂದುವರಿಯುತ್ತದೆ
ಶ್ರೀಸಾಮಾನ್ಯರು, ಕುಟುಂಬ ಮತ್ತು ಜೀವನಕ್ಕಾಗಿ ಡಿಕ್ಯಾಸ್ಟರಿಯ ಪ್ರಿಫೆಕ್ಟ್ ಕಾರ್ಡಿನಲ್ ಕೆವಿನ್ ಫಾರೆಲ್ ರವರು, ವಿಶ್ವಗುರುಗಳ ಆಹ್ವಾನಕ್ಕೆ ಪ್ರತಿಕ್ರಿಯಿಸಿ, ಘೋಷಣೆಗೆ ಕೃತಜ್ಞತೆ ಸಲ್ಲಿಸಿದರು. ಅವರು ಸ್ಥಾಪಕರು, ಯುವ ಸೇವಾಕಾರ್ಯದ ಕಚೇರಿಗಳು ಮತ್ತು ಧರ್ಮಾಧ್ಯಕ್ಷರುಗಳಿಗೆ WYD ಸಿಯೋಲ್ 2027ರ ಶೀರ್ಷಿಕೆಯಿಂದ ಮಾರ್ಗದರ್ಶನ ಪಡೆದು ಸಿಯೋಲ್ ಕಡೆಗೆ ಒಟ್ಟಿಗೆ ಪ್ರಯಾಣಿಸಲು ಆಹ್ವಾನವನ್ನು ನೀಡಿದರು: 'ಧೈರ್ಯದಿಂದಿರಿ! ನಾನು ವಿಶ್ವವನ್ನು ಗೆದ್ದಿದ್ದೇನೆ!
ಸಿಯೋಲ್‌ನಲ್ಲಿ ಭೇಟಿಯಾಗೋಣ
ತ್ರಿಕಾಲ ಪ್ರಾರ್ಥನೆಯನ್ನು ಮುಕ್ತಾಯಗೊಳಿಸುತ್ತಾ, ವಿಶ್ವಗುರು ವಿಶ್ವ-ಯುವ ದಿನದ ಜೂಬಿಲಿಯ ಸಂದೇಶವನ್ನು ವಿಶ್ವ ಯುವ ದಿನದೊಂದಿಗೆ ಕಟ್ಟಿಕೊಟ್ಟರು. ದುಷ್ಟತನ ಮತ್ತು ಸಾವಿನ ಮೇಲೆ ಜಯವನ್ನು ಸಾಧಿಸಿದ, ಪುನರುತ್ಥಾನಗೊಂಡ ಕ್ರಿಸ್ತನ ವಿಜಯವನ್ನು ಘೋಷಿಸಲು ನಮಗೆ ಶಕ್ತಿಯನ್ನು ನೀಡುವುದು ನಮ್ಮ ಹೃದಯಗಳಲ್ಲಿ ನೆಲೆಸಿರುವ ಭರವಸೆಯಾಗಿದೆ. ನೀವು, ಭರವಸೆಯ ಯುವ ಯಾತ್ರಿಕರೇ, ಭೂಮಿಯ ತುದಿಗಳವರೆಗೆ ಇದಕ್ಕೆ ಸಾಕ್ಷಿಯಾಗುತ್ತೀರಿ! ಸಿಯೋಲ್‌ನಲ್ಲಿ ನಿಮ್ಮನ್ನು ನೋಡಲು ನಾನು ಎದುರು ನೋಡುತ್ತಿದ್ದೇನೆ. ನಾವು ಒಟ್ಟಿಗೆ ಕನಸು ಕಾಣುವುದನ್ನು ಮತ್ತು ಒಟ್ಟಿಗೆ ಆಶಿಸುವುದನ್ನು ಮುಂದುವರಿಸೋಣ.