ಕ್ರೈಸ್ತರ ಏಕತೆಯನ್ನು ಉತ್ತೇಜಿಸಲು ಡಿಕ್ಯಾಸ್ಟರಿ
ಅಲೆಸ್ಸಾಂಡ್ರೊ ಡಿ ಬುಸ್ಸೊಲೊ
ಕ್ರೈಸ್ತರ ಏಕತೆಯನ್ನು ಉತ್ತೇಜಿಸುವ ಡಿಕಾಸ್ಟ್ರಿಯ ಕಾರ್ಯವೆಂದರೆ ಧರ್ಮಸಭೆಯೊಳಗೆ ನಿಜವಾದ ಸಾರ್ವತ್ರಿಕ ಪರಿಷತ್ತಿನ ಮನೋಭಾವದ ಬೆಳವಣಿಗೆ. ಇದು ಸಹೋದರ ಸಂಬಂಧಗಳು, ಸಹಯೋಗಗಳು ಮತ್ತು ಇತರ ಧರ್ಮಸಭೆಗಳು ಹಾಗೂ ಕ್ರೈಸ್ತೀಯ ಸಮುದಾಯಗಳೊಂದಿಗೆ ದೈವಶಾಸ್ತ್ರದ ಸಂವಾದಗಳ ಮೂಲಕ ಕ್ರೈಸ್ತರ ಏಕತೆಯನ್ನು ಉತ್ತೇಜಿಸಲು ಕೊಡುಗೆ ನೀಡುವ ಎಲ್ಲಾ ಕ್ಷೇತ್ರಗಳಲ್ಲಿ ಸಕ್ರಿಯವಾಗಿದೆ.
ಪ್ರಿಫೆಕ್ಟ್ ಕಾರ್ಡಿನಲ್ ಕರ್ಟ್ ಕೋಚ್, ಕಾರ್ಯದರ್ಶಿ ಮಹಾಧರ್ಮಾಧ್ಯಕ್ಷರಾದ ಫ್ಲೇವಿಯೊ ಪೇಸ್ ರವರು. ಇತರ ಧರ್ಮಸಭೆಗಳು ಮತ್ತು ಧರ್ಮಸಭೆಯ ಸಮುದಾಯಗಳೊಂದಿಗಿನ ಸಂಬಂಧಗಳನ್ನು ಎರಡು ವಿಭಾಗಗಳು ನಿರ್ವಹಿಸುತ್ತವೆ. ಬೈಜಾಂಟೈನ್ ಸಂಪ್ರದಾಯದ ಆರ್ಥೊಡಾಕ್ಸ್ ಧರ್ಮಸಭೆಗಳಿಗೆ ಪೂರ್ವ ವಿಭಾಗ ಮತ್ತು ಓರಿಯೆಂಟಲ್ ಆರ್ಥೊಡಾಕ್ಸ್ ಧರ್ಮಸಭೆಗಳಿಗೆ (ಕಾಪ್ಟಿಕ್, ಸಿರಿಯಾಕ್, ಅರ್ಮೇನಿಯದವರು, ಇಥಿಯೋಪಿಯದವರು, ಮಲಂಕರ), ಹಾಗೆಯೇ ಪೂರ್ವದ ಅಸ್ಸಿರಿಯದವರ ಧರ್ಮಸಭೆ ಮತ್ತು ಪಶ್ಚಿಮ ವಿಭಾಗ, ಪಶ್ಚಿಮದ ವಿವಿಧ ಧರ್ಮಸಭೆಗಳು ಮತ್ತು ಧರ್ಮಸಭೆಗಳ ಸಮುದಾಯಗಳು.
ಐತಿಹಾಸಿಕ ಹಿನ್ನೆಲೆ
ಜೂನ್ 5, 1960 ರಂದು, ವಿಶ್ವಗುರು ಸಂತ ಇಪ್ಪತ್ತು ಮೂರನೇ ಜಾನ್ ರವರು ಎರಡನೇ ವ್ಯಾಟಿಕನ್ ಸಮ್ಮೇಳನದ ಪೂರ್ವಸಿದ್ಧತಾ ಆಯೋಗಗಳಲ್ಲಿ ಒಂದಾಗಿ ಕ್ರೈಸ್ತರ ಏಕತೆಯನ್ನು ಉತ್ತೇಜಿಸಲು ಸಚಿವಾಲಯವನ್ನು ರಚಿಸಿದರು. ಒಂದು ನಿರ್ದಿಷ್ಟ ಅರ್ಥದಲ್ಲಿ, ಇದು ಸಾರ್ವತ್ರಿಕ ಪರಿಷತ್ತಿನ ಚಳುವಳಿಗೆ ಕಥೋಲಿಕ ಧರ್ಮಸಭೆಯ ಅಧಿಕೃತ ಬದ್ಧತೆಯ ಆರಂಭವಾಗಿದೆ. ಸೆಕ್ರೆಟರಿಯೇಟ್ ಕೌನ್ಸಿಲ್‌ಗೆ ಎಕ್ಯುಮೆನಿಸಂ ಕುರಿತ ದಾಖಲೆಗಳನ್ನು ಸಿದ್ಧಪಡಿಸಿ ಪ್ರಸ್ತುತಪಡಿಸಿತು; ಕ್ರೈಸ್ತರಲ್ಲದ ಧರ್ಮಗಳ ಮೇಲೆ (ನೋಸ್ಟ್ರಾ ಏಟೇಟ್); ಧಾರ್ಮಿಕ ಸ್ವಾತಂತ್ರ್ಯದ ಮತ್ತು, ಸೈದ್ಧಾಂತಿಕ ಆಯೋಗದ ಸಹಯೋಗದೊಂದಿಗೆ, ಡಿವೈನ್ ರೆವೆಲೆಶನ್ (ಡೀ ವರ್ಬಮ್) ಕುರಿತ ಡಾಗ್ಮ್ಯಾಟಿಕ್ ಸಂವಿಧಾನ.
ಸತ್ಯದ ಹುಡುಕಾಟದಲ್ಲಿ ಒಟ್ಟಾಗಿ ನಡೆಯುವುದು
ಕಳೆದ ಅರವತ್ತು ವರ್ಷಗಳಲ್ಲಿ ಕ್ಕ್ರೈಸ್ತರ ನಡುವಿನ ಸಂವಾದವು ಇತಿಹಾಸದಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಪ್ರಗತಿಗೆ ಅವಕಾಶ ಮಾಡಿಕೊಟ್ಟಿದೆ ಎಂದು ಡಿಕಾಸ್ಟ್ರಿಯ ಪ್ರಿಫೆಕ್ಟ್ ಕಾರ್ಡಿನಲ್ ಕರ್ಟ್ ಕೋಚ್ ಹೇಳುತ್ತಾರೆ. ಉದಾಹರಣೆಗೆ, ಅವರು ಹೀಗೆ ಹೇಳುತ್ತಾರೆ. ಹದಿನೈದು ನೂರು ವರ್ಷಗಳ ವಿವಾದವನ್ನು ಕೊನೆಗೊಳಿಸಿದ ಓರಿಯೆಂಟಲ್ ಆರ್ಥೊಡಾಕ್ಸ್ ಧರ್ಮಸಭೆಗಳೊಂದಿಗಿನ ಕ್ರೈಸ್ತಶಾಸ್ತ್ರೀಯ ಘೋಷಣೆಗಳು ಅಥವಾ ಹದಿನಾರನೇ ಶತಮಾನದ ಸುಧಾರಣೆಯ ಹೃದಯಭಾಗದಲ್ಲಿರುವ ಮೂಲಭೂತ ಸಮಸ್ಯೆಗಳನ್ನು ಪರಿಹರಿಸಿದ ಸಮರ್ಥನೆಯ ಸಿದ್ಧಾಂತದ ಜಂಟಿ ಘೋಷಣೆಯಾಯಿತು. ಕೊನೆಯದಾಗಿ ಹೇಳಬೇಕೆಂದರೆ, ಕ್ರೈಸ್ತರು ಇನ್ನು ಮುಂದೆ ಪರಸ್ಪರರನ್ನು ಶತ್ರುಗಳಾಗಿ ನೋಡುವುದಿಲ್ಲ, ಆದರೆ ಕ್ರಿಸ್ತನಲ್ಲಿ ಸಹೋದರ ಸಹೋದರಿಯರಾಗಿ ನೋಡುತ್ತಾರೆ.