ಕಾರ್ಡಿನಲ್ ಪರೋಲಿನ್ ಪ್ಯಾಲಸ್ತೀನಿನ ರಾಷ್ಟ್ರಕ್ಕಾಗಿ ಕರೆಯನ್ನು ಪುನರುಚ್ಚರಿಸಿ ಮತ್ತು ಗಾಜಾದಲ್ಲಿನ ಹಸಿವನ್ನು ಖಂಡಿಸಿದರು
ಗಿಯಾಡಾ ಅಕ್ವಿಲಿನೊ
ಪವಿತ್ರ ಪೀಠಾಧಿಕಾರಿಯು ಕೆಲವು ಸಮಯದಿಂದ ಪ್ಯಾಲಸ್ತೀನಿನನ್ನು "ಈಗಾಗಲೇ ಗುರುತಿಸಿದೆ". ನ್ಯೂಯಾರ್ಕ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ವಾರ್ಷಿಕ ಅಧಿವೇಶನದಲ್ಲಿ, ಸೆಪ್ಟೆಂಬರ್‌ನಲ್ಲಿ ಫ್ರಾನ್ಸ್ ಪ್ಯಾಲಸ್ತೀನಿನ ರಾಜ್ಯವನ್ನು ಗುರುತಿಸುತ್ತದೆ ಎಂದು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನರವರು ಘೋಷಿಸಿದ ನಂತರ, ವ್ಯಾಟಿಕನ್ ವಿದೇಶಾಂಗ ಕಾರ್ಯದರ್ಶಿ ಕಾರ್ಡಿನಲ್ ಪಿಯೆಟ್ರೊ ಪರೋಲಿನರವರ ಮಾತುಗಳಲ್ಲಿ ಈ ವಿಷಯವು ಮತ್ತೆ ಮುಂಚೂಣಿಗೆ ಬಂದಿತು. ಡಿಜಿಟಲ್ ಪ್ರಭಾವಿಗಳಿಗೆ ಜುಬಿಲಿ ಕಾರ್ಯಕ್ರಮದ ಪಕ್ಕದಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ, ಕಾರ್ಡಿನಲ್ "ಪರಿಹಾರ - ಎರಡು ರಾಜ್ಯಗಳ ಸಮಸ್ಯೆಗಳಿಗೆ ಉತ್ತರವಾಗಿದೆ.
ಪ್ಯಾಲಸ್ತೀನಿನ ರಾಜ್ಯವನ್ನು ಗುರುತಿಸುವುದು "ಅಕಾಲಿಕ" ಎಂಬ ಹೇಳಿಕೆಯ ಕುರಿತಾದ ಪ್ರಶ್ನೆಗೆ ಕಾರ್ಡಿನಲ್ ಪರೋಲಿನರವರು ಉತ್ತರಿಸಿದರು: ಏಕೆ ಅಕಾಲಿಕ? ನಮ್ಮ ಅಭಿಪ್ರಾಯದಲ್ಲಿ, ಎರಡು ಸ್ವಾಯತ್ತ ರಾಜ್ಯ ಘಟಕಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಿರುವ ಎರಡೂ ಕಡೆಯ ನಡುವಿನ ನೇರ ಸಂವಾದದಲ್ಲಿ ಪರಿಹಾರವಿದೆ.
ಆದಾಗ್ಯೂ, ಪರಿಸ್ಥಿತಿ ಹೆಚ್ಚು ಕಷ್ಟಕರವಾಗುತ್ತಿದೆ ಎಂದು ಅವರು ಒಪ್ಪಿಕೊಂಡರು - ವಿಶೇಷವಾಗಿ ಪಶ್ಚಿಮ ದಂಡೆಯಲ್ಲಿನ ಬೆಳವಣಿಗೆಗಳಿಂದಾಗಿ - ಅಲ್ಲಿನ ಇಸ್ರಯೇಲ್ ನ ವಸಾಹತುಗಳನ್ನು ಉಲ್ಲೇಖಿಸಿ: "ಇದು ಪ್ರಾಯೋಗಿಕ ದೃಷ್ಟಿಕೋನದಿಂದ, ಪ್ಯಾಲಸ್ತೀನಿನ ರಾಜ್ಯದ ಸಾಕ್ಷಾತ್ಕಾರಕ್ಕೆ ಖಂಡಿತವಾಗಿಯೂ ಸಹಾಯ ಮಾಡುವುದಿಲ್ಲ. ಆದ್ದರಿಂದ ನ್ಯೂಯಾರ್ಕ್‌ನಲ್ಲಿ ಇಂದು ಮತ್ತು ನಾಳೆ ಪ್ಯಾಲಸ್ತೀನಿನ ಪ್ರಶ್ನೆಯ ಶಾಂತಿಯುತ ಪರಿಹಾರ ಮತ್ತು ಎರಡು-ರಾಜ್ಯ ಪರಿಹಾರದ ಅನುಷ್ಠಾನದ ಕುರಿತು ಉನ್ನತ ಮಟ್ಟದ ಅಂತರರಾಷ್ಟ್ರೀಯ ಸಮ್ಮೇಳನದ ಸಂದರ್ಭದಲ್ಲಿ ನಡೆಯುವ ಸಭೆಗಳು "ಸ್ವಲ್ಪ ಫಲ ನೀಡುತ್ತವೆ" ಎಂದು ಅವರು ಆಶಿಸಿದ್ದಾರೆ.
ಪವಿತ್ರ ಪೀಠಾಧಿಕಾರಿಯು 25 ವರ್ಷಗಳ ಹಿಂದೆ ಪ್ಯಾಲಸ್ತೀನಿನ ಲಿಬರೇಶನ್ ಆರ್ಗನೈಸೇಶನ್ (PLO) ಜೊತೆ ಮೂಲಭೂತ ಒಪ್ಪಂದಕ್ಕೆ ಸಹಿ ಹಾಕಿತ್ತು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳುವುದು ಯೋಗ್ಯವಾಗಿದೆ. ನಂತರ, ಹತ್ತು ವರ್ಷಗಳ ಹಿಂದೆ, ಅದು ಪ್ಯಾಲಸ್ತೀನಿನ ರಾಜ್ಯದೊಂದಿಗೆ ಸಮಗ್ರ ಒಪ್ಪಂದಕ್ಕೆ ಸಹಿ ಹಾಕಿತು, ಅದು ಜನವರಿ 2016 ರಲ್ಲಿ ಜಾರಿಗೆ ಬಂದಿತು.
ರಷ್ಯಾ ಮತ್ತು ಉಕ್ರೇನ್ ನಡುವಿನ ಮಧ್ಯಸ್ಥಿಕೆ
ಇನ್ನೊಂದು ಪ್ರಮುಖ ಮುಂಭಾಗದಲ್ಲಿ - ಉಕ್ರೇನ್‌ನಲ್ಲಿನ ಯುದ್ಧ, ರಷ್ಯಾ ಮತ್ತು ಉಕ್ರೇನ್ ನಡುವಿನ ಮಧ್ಯಸ್ಥಿಕೆ ಅಥವಾ ಶಾಂತಿ ಸಭೆಯ ಸಾಧ್ಯತೆಯ ಬಗ್ಗೆ, ಕಾರ್ಡಿನಲ್ ಪರೋಲಿನ್ ಹೀಗೆ ಹೇಳಿದರು: "ವ್ಯಾಟಿಕನ್ ತಟಸ್ಥವಾಗಿಲ್ಲ ಎಂದು ಆರೋಪಿಸಲು ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ನಾವು ಯಾವಾಗಲೂ, ಸತ್ಯವಾಗಿ ಮಾತನಾಡುವಾಗ, ಎರಡೂ ಕಡೆಯವರಿಗೆ ಹತ್ತಿರವಾಗಲು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ, ಸಂಘರ್ಷದ ಪರಿಹಾರದ ಕಡೆಗೆ ಒಂದು ಮಾರ್ಗವನ್ನು ಕಂಡುಕೊಳ್ಳಲು ಸಹಾಯ ಮಾಡಲು ಪ್ರಯತ್ನಿಸಿದ್ದೇವೆ ಎಂದು ಹೇಳಿದರು.