MAP

BRITAIN-US-FILM-TV-STUDIO BRITAIN-US-FILM-TV-STUDIO 

ಸಂತ ಪೇತ್ರರ ಕೊಲೊನೇಡ್ ಅಡಿಯಲ್ಲಿ ಹೊಸ ವ್ಯಾಟಿಕನ್ ಮಾಧ್ಯಮ ಕೇಂದ್ರ ತೆರೆಯಲಾಗಿದೆ

ವ್ಯಾಟಿಕನ್ ಮಾಧ್ಯಮವು ಸಂತ ಪೇತ್ರರ ಚೌಕದಲ್ಲಿ ಹೊಸ ಮಾಧ್ಯಮ ಸ್ಥಳವನ್ನು ಉದ್ಘಾಟಿಸಿತು

ಡೇನಿಯಲ್ ಪಿಕ್ಕಿನಿ

ಜೂಬಿಲಿ ವರ್ಷದ ಸಿದ್ಧತೆಗಳು ಮುಂದುವರೆದಂತೆ, ವ್ಯಾಟಿಕನ್‌ನ ಸಂವಹನ ಜಾಲವು ಸಂತ ಪೇತ್ರರ ಚೌಕದಲ್ಲಿ ಮುಖಾಮುಖಿ, ಸಂವಾದ ಮತ್ತು ಭರವಸೆಗೆ ಮೀಸಲಾಗಿರುವ ಹೊಸ ಜಾಗವನ್ನು ತೆರೆದಿದೆ. ಬ್ರಾಸಿಯೊ ಡಿ ಕಾರ್ಲೊ ಮ್ಯಾಗ್ನೊ ಕೆಳಗೆ ಇರುವ ಹೊಸ ರೇಡಿಯೋ ಬೂತ್ ನ್ನು ಜುಲೈ 25, ಶುಕ್ರವಾರ ಬೆಳಿಗ್ಗೆ 8:10ಕ್ಕೆ ಇಟಾಲಿಯದ ಕಾರ್ಯಕ್ರಮ ರೇಡಿಯೋ ವ್ಯಾಟಿಕಾನಾ ಕಾನ್ ವೋಯ್‌ನ ವಿಶೇಷ ಪ್ರಸಾರದ ಸಮಯದಲ್ಲಿ ನೇರ ಪ್ರಸಾರದಲ್ಲಿ ಉದ್ಘಾಟಿಸಲಾಯಿತು.

ಈ ರಚನೆಯನ್ನು ಪವಿತ್ರ ಪೀಠಾಧಿಕಾರಿಯ ಪ್ರಮುಖ ಮಾಧ್ಯಮ ಸಂಸ್ಥೆಗಳಾದ ವ್ಯಾಟಿಕನ್ ಆಕಾಶವಾಣಿ, ವ್ಯಾಟಿಕನ್ ಸುದ್ಧಿ, ಎಲ್'ಒಸ್ಸೆರ್ವಟೋರ್ ರೊಮಾನೋ ಮತ್ತು ವ್ಯಾಟಿಕನ್ ಮಾಧ್ಯಮಗಳಿಗೆ ಕಾರ್ಯನಿರತ ನೆಲೆಯಾಗಿ ಸ್ಥಾಪಿಸಲಾಗಿದೆ ಮತ್ತು ಇದು ಜೂಬಿಲಿ ವರ್ಷದುದ್ದಕ್ಕೂ ಯಾತ್ರಿಕರು ಮತ್ತು ಪತ್ರಕರ್ತರಿಗೆ ಸೇವೆ ಸಲ್ಲಿಸುತ್ತದೆ.

ಯಾತ್ರಿಕರಿಗೆ ಉಡುಗೊರೆ
ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಪಿಯರ್ ಜಾರ್ಜಿಯೊ ಫ್ರಾಸ್ಸಾಟಿ ಮತ್ತು ಕಾರ್ಲೊ ಅಕ್ಯುಟಿಸ್ ರವರ ಸಂತ ಪದವಿಗೇರಿಸುವ ಪ್ರದಾನದಂತಹ ಪ್ರಮುಖ ಕ್ಷಣಗಳನ್ನು ಒಳಗೊಳ್ಳುವ ಗುರಿಯನ್ನು ಹೊಂದಿರುವ ಈ ಉಪಕ್ರಮವು ವ್ಯಾಟಿಕನ್ ರಾಜ್ಯಪಾಲರ ಅಧಿಕಾರ ಮತ್ತು ಪವಿತ್ರ ತಂದೆಯ ಸ್ನೇಹಿತರ ದಾನಿ ಜಾಲದ ಆರ್ಥಿಕ ಬೆಂಬಲದಿಂದಾಗಿ ಸಾಧ್ಯವಾಯಿತು.

“ಭರವಸೆ ಎಂದಿಗೂ ಕಳೆದುಹೋಗಬಾರದು”
ಈ ಸಣ್ಣ ನಿಲ್ದಾಣವು ಅತ್ಯಂತ ಸಣ್ಣ ಭರವಸೆಯ ಕಿಡಿಗಳು ದೊಡ್ಡ ಜ್ವಾಲೆಗಳನ್ನು ಹೊತ್ತಿಸಬಹುದು ಎಂಬುದನ್ನು ತೋರಿಸುತ್ತದೆ ಎಂದು ಸಂವಹನದ ಡಿಕ್ಯಾಸ್ಟರಿಯಾದ ಪ್ರಿಫೆಕ್ಟ್ ಪಾವೊಲೊ ರುಫಿನಿರವರು ಹೊಸ ಸ್ಥಳವನ್ನು ಉದ್ಘಾಟಿಸುತ್ತಾ ಹೇಳಿದರು.

ವಿಶ್ವವು ಹತಾಶೆಯಿಂದ ತುಂಬಿರುವ ಸಮಯದಲ್ಲಿ ಭರವಸೆಯ ಜೂಬಿಲಿಯನ್ನು ಆಚರಿಸುವುದು ಸ್ವತಃ ಒಂದು ಪ್ರಬಲ ಹೇಳಿಕೆಯಾಗಿದೆ, ಭರವಸೆ ಎಂದಿಗೂ ಕಳೆದುಕೊಳ್ಳಬಾರದು ಎಂದು ಅವರು ಹೇಳಿದರು. ಡಿಕ್ಯಾಸ್ಟರಿಯ ಶಕ್ತಿ ನಮ್ಮನ್ನು ಒಟ್ಟಿಗೆ ಹಿಡಿದಿಟ್ಟುಕೊಳ್ಳುವ ಜಾಲದಿಂದ ಬರುತ್ತದೆ.

ದೈನಂದಿನ ಜೀವನವನ್ನು ಹಂಚಿಕೊಳ್ಳುವ ಧರ್ಮಸಭೆ
ಜಾಲತಾಣಕ್ಕಾಗಿ ವಿಷಯವನ್ನು ರಚಿಸುವುದು ಕೇವಲ ಕಥೆಗಳನ್ನು ಪ್ರಕಟಿಸುವುದಲ್ಲ ಎಂದು ಸಂವಹನಕ್ಕಾಗಿ ಡಿಕ್ಯಾಸ್ಟರಿ ಕಾರ್ಯದರ್ಶಿಯಾದ ಶ್ರೇಷ್ಠಗುರು ಲೂಸಿಯೊ ಆಡ್ರಿಯನ್ ರೂಯಿಜ್ ರವರು ಹೇಳಿದರು. ಇದರರ್ಥ ಜನರ ದೈನಂದಿನ ಜೀವನದ ಭಾಗವಾಗಿರುವ ನೈಜ ಸ್ಥಳಗಳಲ್ಲಿ ವಾಸಿಸುವುದು.

ಈ ಡಿಜಿಟಲ್ ಸ್ಥಳಗಳು ಹೊಸದಾಗಿರಬಹುದು ಮತ್ತು ವಿಭಿನ್ನವಾಗಿರಬಹುದು. ಅವು ನಮ್ಮ ದಿನಚರಿಗಳನ್ನು ಮತ್ತು ನಮ್ಮ ಸಂಬಂಧಗಳನ್ನು ರೂಪಿಸುತ್ತವೆ - ಏಕೆಂದರೆ ಮಾನವ ಜೀವನ ಎಲ್ಲಿದೆಯೋ ಅಲ್ಲಿ ಧರ್ಮಸಭೆಯೂ ಕೂಡ ಸೇರಿದೆ.

ವಿಶ್ವಗುರುಗಳಿಗೆ ಸೇವೆಯ ಪರಂಪರೆ
ಉಪ ಸಂಪಾದಕೀಯ ನಿರ್ದೇಶಕ ಅಲೆಸ್ಸಾಂಡ್ರೊ ಗಿಸೊಟ್ಟಿರವರು, ವ್ಯಾಟಿಕನ್ ಮಾಧ್ಯಮವು ವಿಶ್ವಗುರುಗಳ ಧ್ವನಿಯನ್ನು ಬೆಂಬಲಿಸುವ ತನ್ನ ಧ್ಯೇಯದಲ್ಲಿ ಮುಂದುವರೆದಿದೆ ಎಂದು ವಿವರಿಸಿದರು. ವಿಶ್ವಗುರು ದ್ವಿತೀಯ ಸಂತ ಜಾನ್ ಪಾಲ್ ರವರಿಂದ, ವಿಶ್ವಗುರು ಹದಿನಾರನೇ ಬೆನೆಡಿಕ್ಟ್ ರವರು ಮತ್ತು ವಿಶ್ವಗುರು ಫ್ರಾನ್ಸಿಸ್ ರವರ ಮೂಲಕ ಇಂದಿನ ವಿಶ್ವಗುರು ಹದಿನಾಲ್ಕನೇ ಲಿಯೋರವರೆಗೆ ವಿಸ್ತರಿಸಿರುವ ಸುಂದರವಾದ ನಿರಂತರತೆಯಲ್ಲಿ ವ್ಯಾಟಿಕನ್ ಮಾಧ್ಯಮವು ವಿಶ್ವಗುರುಗಳ ಧ್ವನಿಯನ್ನು ಬೆಂಬಲಿಸುವ ತನ್ನ ಧ್ಯೇಯದಲ್ಲಿ ಮುಂದುವರೆದಿದೆ ಎಂದು ವಿವರಿಸಿದರು.

ವಿಶ್ವಗುರು ದ್ವಿತೀಯ ಸಂತ ಜಾನ್ ಪಾಲ್ ರವರು ಯುವಜನರಿಗೆ ನಿರಂತರವಾಗಿ 'ನೀವು ನನ್ನ ಭರವಸೆ' ಎಂದು ನೆನಪಿಸುತ್ತಿದ್ದರು" ಎಂದು ವ್ಯಾಟಿಕನ್ ಮಾಧ್ಯಮದ ಉಪ ಸಂಪಾದಕೀಯ ನಿರ್ದೇಶಕ ಅಲೆಸ್ಸಾಂಡ್ರೊ ಗಿಸೊಟ್ಟಿರವರು ನೆನಪಿಸಿಕೊಂಡರು. ವಿಶ್ವಗುರು ಹದಿನಾರನೇ ಬೆನೆಡಿಕ್ಟ್ ರವರು ಅದೇ ಸಂದೇಶವನ್ನು ಕಾರ್ಯರೂಪದಲ್ಲಿ ಸ್ಪಷ್ಟಪಡಿಸಿದರು: ವಿಶ್ವಗುರುವಾಗಿ ಅವರ ಮೊದಲ ಪ್ರವಾಸವು ಕಲೋನ್‌ನಲ್ಲಿ ನಡೆದ ವಿಶ್ವ ಯುವ ದಿನಾಚರಣೆಯಾಗಿತ್ತು, ಅಲ್ಲಿ ಅವರು ಮುಂದಿನ ಪೀಳಿಗೆಯಲ್ಲಿ ಆ ಆಳವಾದ ನಂಬಿಕೆಯನ್ನು ನವೀಕರಿಸಿದರು.
 

25 ಜುಲೈ 2025, 22:33