ಸಿನೊಡ್ ಅನುಷ್ಠಾನದ ಹಂತಕ್ಕೆ ವ್ಯಾಟಿಕನ್ ಹೊಸ ಮಾರ್ಗದರ್ಶನ ನೀಡುತ್ತಿದೆ
ಕ್ರಿಸ್ಟೋಫರ್ ವೆಲ್ಸ್
ಧರ್ಮಾಧ್ಯಕ್ಷರುಗಳ ಸಿನೊಡ್‌ನಿಂದ ಹೊಸ ದಾಖಲೆಯು ಸಿನೊಡಲ್ ಪ್ರಕ್ರಿಯೆಯ ಅನುಷ್ಠಾನ ಹಂತವನ್ನು ಅರ್ಥಮಾಡಿಕೊಳ್ಳಲು ಒಂದು ವ್ಯಾಖ್ಯಾನಾತ್ಮಕ ಕೀಲಿಯನ್ನು ಒದಗಿಸಲು ಉದ್ದೇಶಿಸಲಾಗಿದೆ.
ಸೋಮವಾರ ಸಿನೊಡ್ ಬಿಡುಗಡೆ ಮಾಡಿದ, ಪಾತ್‌ವೇಸ್ ಫಾರ್ ದಿ ಇಂಪ್ಲಿಮೆಂಟೇಶನ್ ಫೇಸ್ ಆಫ್ ದಿ ಸಿನೊಡ್, ವಿಶ್ವದಾದ್ಯಂತ ಸ್ಥಳೀಯ ಧರ್ಮಸಭೆಗಳು ಒಟ್ಟಿಗೆ ನಡೆಯಲು ಸುಲಭವಾಗುವಂತೆ ಹಂಚಿಕೆಯ ಚೌಕಟ್ಟನ್ನು ನೀಡುತ್ತಿದೆ ಮತ್ತು "ಇಡೀ ಧರ್ಮಸಭೆಯನ್ನು, ಧರ್ಮಸಭೆಯ ಸಭೆಗೆ ಕರೆದೊಯ್ಯುವ ಸಂವಾದವನ್ನು ಉತ್ತೇಜಿಸುತ್ತದೆ, ಇದು ಅಕ್ಟೋಬರ್ 2028ರಲ್ಲಿ ವಿಶ್ವಗುರು ಫ್ರಾನ್ಸಿಸ್ ರವರಿಂದ 2020ರಲ್ಲಿ ಪ್ರಾರಂಭಿಸಿದ ಸಿನೊಡಲ್ ಪ್ರಕ್ರಿಯೆಯನ್ನು ಗುರುತಿಸುತ್ತದೆ.
ಮಾರ್ಗಗಳನ್ನು ತೆರೆಯುತ್ತಾ, ಸಿನೊಡ್‌ನ ಪ್ರಧಾನ ಕಾರ್ಯದರ್ಶಿ ಕಾರ್ಡಿನಲ್ ಮಾರಿಯೋ ಗ್ರೆಚ್ರವರು, ಧರ್ಮಸಭೆಯ ಸಿನೊಡಲ್ ರೂಪವು ಅದರ ಧ್ಯೇಯದ ಸೇವೆಯಲ್ಲಿದೆ. ಈ ಧರ್ಮಪ್ರಚಾರ ಧೇಯದ ತುರ್ತುಸ್ಥಿತಿಯೇ ಸಿನೊಡ್ ನ್ನು ಕಾರ್ಯಗತಗೊಳಿಸಲು ನಮ್ಮನ್ನು ಪ್ರೇರೇಪಿಸುತ್ತದೆ, ಈ ಕಾರ್ಯಕ್ಕಾಗಿ ದೀಕ್ಷಸ್ನಾನ ಸ್ವೀಕರಿಸಿರುವ ಎಲ್ಲರು ಜವಾಬ್ದಾರಿಯನ್ನು ಹಂಚಿಕೊಳ್ಳುತ್ತಾರೆ ಎಂದು ಗಮನಿಸುತ್ತಾರೆ.
ಹೊಸ ದಾಖಲೆಯನ್ನು ಸಿದ್ಧಪಡಿಸಿದ ಸಿನೊಡ್‌ನ ಪ್ರಧಾನ ಕಾರ್ಯದರ್ಶಿಯು ಸ್ಥಳೀಯ ಚರ್ಚುಗಳ ಸೇವೆಯಲ್ಲಿದೆ, ಅವುಗಳನ್ನು ಕೇಳಲು, ಅವರ ಪ್ರಯತ್ನಗಳನ್ನು ಬೆಂಬಲಿಸಲು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ, ಧರ್ಮಸಭೆಗಳ ನಡುವಿನ ಸಂವಾದ ಮತ್ತು ಉಡುಗೊರೆಗಳ ವಿನಿಮಯಕ್ಕೆ ಅನಿಮೇಟ್ ಮಾಡಲು ಕೊಡುಗೆ ನೀಡಲು ಸಿದ್ಧವಾಗಿದೆ ಎಂದು ಅವರು ಹೇಳುತ್ತಾರೆ.
ನಾವು ಈ ಮಾರ್ಗಗಳನ್ನು ದೇವರ ಜನರಿಗೆಲ್ಲಾ, ಸಿನೊಡಲ್ ಪ್ರಯಾಣದ ವಿಷಯಗಳಿಗೆ, ವಿಶೇಷವಾಗಿ ಧರ್ಮಾಧ್ಯಕ್ಷರುಗಳು ಮತ್ತು ಧರ್ಮಪ್ರಾಂತ್ಯದ ಅಧಿಕಾರಿಗಳಿಗೆ, ಸಿನೊಡಲ್ ತಂಡಗಳ ಸದಸ್ಯರಿಗೆ ಮತ್ತು ಅನುಷ್ಠಾನ ಹಂತದಲ್ಲಿ ವಿವಿಧ ರೀತಿಯಲ್ಲಿ ತೊಡಗಿಸಿಕೊಂಡಿರುವ ಎಲ್ಲರಿಗೂ ತಿಳಿಸುತ್ತೇವೆ ಎಂದು ಕಾರ್ಡಿನಲ್ ಗ್ರೆಚ್ ರವರು ಹೇಳುತ್ತಾರೆ.
ಇಡೀ ಸಿನೊಡಲ್ ಪ್ರಯಾಣವನ್ನು ನಿರೂಪಿಸುವ ಸಂವಾದವನ್ನು ಮುಂದುವರಿಸುವುದು ಮತ್ತು ನಮ್ಮ ಬೆಂಬಲವನ್ನು ಅವರಿಗೆ ಅನುಭವಿಸುವಂತೆ ಮಾಡುವುದು ನಮ್ಮ ಗುರಿಯಾಗಿದೆ ಎಂದು ಅವರು ಹೇಳುತ್ತಾರೆ.