ವಿಶ್ವಾಸದ ಸಿದ್ಧಾಂತಕ್ಕಾಗಿ ಡಿಕ್ಯಾಸ್ಟರಿ
ಅಮೆಡಿಯೊ ಲೊಮೊನಾಕೊ
ಇಂದು, ವಿಶ್ವಾಸದ ಸಿದ್ಧಾಂತಕ್ಕಾಗಿ ಡಿಕಾಸ್ಟ್ರಿಯ ಕಾರ್ಯವೆಂದರೆ, ಎಲ್ಲಕ್ಕಿಂತ ಹೆಚ್ಚಾಗಿ, ವಿಶ್ವಾಸದ ಅರಿವನ್ನು ಎಲ್ಲೆಡೆ ಹೆಚ್ಚಿಸಲು ಶ್ರಮಿಸುವುದು, ದೋಷಗಳನ್ನು ತಪ್ಪಿಸುವ ಕೆಲಸಗಳನ್ನು ಮಾಡುವುದು ಮಾತ್ರವಲ್ಲದೆ, ಔಪಚಾರಿಕವಾಗಿ ಸರಿಯಾಗಿದ್ದರೂ, ವಿಶ್ವಾಸದ ಶ್ರೀಮಂತಿಕೆಯನ್ನು ದುರ್ಬಲಗೊಳಿಸುವ ಚೈತನ್ಯವನ್ನು 'ತಣಿಸುವ' ಕೆಲವು ನಿರ್ಧಾರಗಳನ್ನು ತಪ್ಪಿಸುವ ಕಾರ್ಯವನ್ನು ನಿರ್ವಹಿಸುತ್ತಿದೆ.
ಈ ಮಾತುಗಳೊಂದಿಗೆ, ಪ್ರಿಫೆಕ್ಟ್, ಕಾರ್ಡಿನಲ್ ವಿಕ್ಟರ್ ಮ್ಯಾನುಯೆಲ್ ಫೆರ್ನಾಂಡಿಸ್, ವಿಶ್ವಾಸದ ಸಿದ್ಧಾಂತಕ್ಕಾಗಿ ಡಿಕಾಸ್ಟ್ರಿಯ ಧ್ಯೇಯವನ್ನು ವಿವರಿಸುತ್ತಾರೆ. ಇದು ಅದರ ರಚನೆಯಲ್ಲಿ ಶ್ರೇಷ್ಠಗುರು ಅರ್ಮಾಂಡೋ ಮ್ಯಾಟಿಯೊರವರು, ಶ್ರೇಷ್ಠಗುರು ಜಾನ್ ಜೋಸೆಫ್ ಕೆನಡಿಯವರು ಮತ್ತು ಶ್ರೇಷ್ಠಗುರು ಚಾರ್ಲ್ಸ್ ಸ್ಕಿಕ್ಲುನಾರಾದ ಮೂವರು ಕಾರ್ಯದರ್ಶಿಗಳನ್ನು ಒಳಗೊಂಡಿದೆ.
ಇತಿಹಾಸ
ಧರ್ಮಸಭೆಯ ಸಭಾಪಾಲಕರು ಕ್ರಿಸ್ತನು ಅವರಿಗೆ ವಹಿಸಿಕೊಟ್ಟ ವಿಶ್ವಾಸದ ಠೇವಣಿಯನ್ನು ಅದರ ಸಮಗ್ರತೆಯಲ್ಲಿ ಕಾಪಾಡಿಕೊಳ್ಳುವ ಕರ್ತವ್ಯವನ್ನು ಹೊಂದಿದ್ದಾರೆ. ಈ ಕಾರ್ಯವನ್ನು ಪೂರೈಸಲು, ಇತಿಹಾಸದುದ್ದಕ್ಕೂ, ವಿಶ್ವಗುರುಗಳು ವಿವಿಧ ಸಾಧನಗಳನ್ನು ಬಳಸಿದ್ದಾರೆ. ಧರ್ಮಸಭೆಯ ಆಡಳಿತವನ್ನು ಸುಗಮಗೊಳಿಸುವ ಉದ್ದೇಶದಿಂದ ವಿವಿಧ ಇಲಾಖೆಗಳನ್ನು ಸ್ಥಾಪಿಸಲಾಗಿದೆ.
ವಿಶ್ವಗುರುಗಳ ಬೈಬಲ್ ಆಯೋಗ ಮತ್ತು ಅಂತರರಾಷ್ಟ್ರೀಯ ದೈವಶಾಸ್ತ್ರ ಆಯೋಗ
ವಿಶ್ವಗುರುಗಳ ಬೈಬಲ್ ಆಯೋಗವನ್ನು ವಿಶ್ವಗುರು ಹದಿಮೂರನೇ ಲಿಯೋರವರು ಅಕ್ಟೋಬರ್ 30, 1902ರಂದು ಅಪೋಸ್ಟೋಲಿಕ್ ಲೆಟರ್ ವಿಜಿಲಾಂಟಿಯೇ ಸ್ಟುಡಿಯೇ https://www.vatican.va/content/leo-xiii/la/apost_letters/documents/hf_l-xiii_apl_19021030_vigilantieae-studiique.html ಮೂಲಕ ಸ್ಥಾಪಿಸಿದರು. ಇದು ಮ್ಯಾಜಿಸ್ಟೀರಿಯಂನ ಸೇವೆಯಲ್ಲಿರುವ ಸಲಹಾ ಸಂಸ್ಥೆಯಾಗಿದೆ.
ಅಂತರರಾಷ್ಟ್ರೀಯ ದೈವಶಾಸ್ತ್ರದ ಆಯೋಗವನ್ನು 1969ರಲ್ಲಿ ವಿಶ್ವಗುರು ಆರನೇ ಪೌಲ್ ರವರು ಸ್ಥಾಪಿಸಿದರು. ಪ್ರಮುಖ ಪ್ರಾಮುಖ್ಯತೆಯ ಸೈದ್ಧಾಂತಿಕ ಪ್ರಶ್ನೆಗಳನ್ನು ಪರಿಶೀಲಿಸುವಲ್ಲಿ ಪವಿತ್ರ ಪೀಠಾಧಿಕಾರಿಗೆ ಸಹಾಯ ಮಾಡುವುದು ಇದರ ಕಾರ್ಯವಾಗಿದೆ.
ವ್ಯಾಟಿಕನ್‌ನಿಂದ ವಿಶ್ವಕ್ಕೆ
ವಿಶ್ವಾಸದ ಸಿದ್ಧಾಂತಕ್ಕಾಗಿ ಸಭೆಯ ಪ್ರಧಾನ ಕಛೇರಿಯು ಸಂತ ಪೇತ್ರರ ಮಹಾದೇವಾಲಯ ಮತ್ತು ವ್ಯಾಟಿಕನ್ ನಗರದ ಪ್ರವೇಶದ್ವಾರಗಳ ನಡುವೆ ಇರುವ ಪವಿತ್ರ ಕಚೇರಿಯ ಅರಮನೆಯಲ್ಲಿದೆ. ಈ ಸ್ಥಳದಿಂದ, ವಿಶ್ವವನ್ನು ಅಪ್ಪಿಕೊಳ್ಳುವ ಬರ್ನಿನಿಯ ಕೊಲೊನೇಡ್‌ನೊಂದಿಗೆ ವಿಲೀನಗೊಳ್ಳುವಂತೆ ತೋರುವ ಈ ಸ್ಥಳದಿಂದ, ವಿಶ್ವಾಸವನ್ನು ಉತ್ತೇಜಿಸುವ ಮತ್ತು ರಕ್ಷಿಸುವ ಸೇವೆಯು ನಮ್ಮ ಕಾಲದಲ್ಲಿ ನವೀಕರಿಸಲ್ಪಟ್ಟಿದೆ.
ವಿಶ್ವಾಸದ ಸಿದ್ಧಾಂತಕ್ಕಾಗಿ ಡಿಕ್ಯಾಸ್ಟರಿಯ ಜೀವನದಲ್ಲಿ ಈ ಧ್ಯೇಯವನ್ನು ವಿಚಾರ ಸಂಕಿರಣಗಳು, ಅಧ್ಯಯನ ದಿನಗಳು, ದಾಖಲೆಗಳು ಮತ್ತು ಅನುಭವಗಳು ಸೇರಿದಂತೆ ವ್ಯಾಪಕ ಶ್ರೇಣಿಯ ಚಟುವಟಿಕೆಗಳ ಮೂಲಕ ಕೈಗೊಳ್ಳಲಾಗುತ್ತದೆ.
ಇಂದಿನ ಡಿಕಾಸ್ಟ್ರಿಯ ಕೆಲಸವು ಧರ್ಮಸಭೆಯ ಮೂಲವನ್ನು ನಿರೂಪಿಸುವ ಕೆಲಸದೊಂದಿಗೆ ಏಕೀಕೃತವಾಗಿದೆ: ಪವಿತ್ರ ಕಚೇರಿಗೆ ಮುಂಚೆಯೇ ಅಸ್ತಿತ್ವದಲ್ಲಿದ್ದ "ಸೂಕ್ತವಾದ ಸಿದ್ಧಾಂತದೆಡಗಿನ ಕಾಳಜಿ" ಎಂದು ವಿವರಿಸಲ್ಪಟ್ಟದ್ದು ಹೊಸ ಒಡಂಬಡಿಕೆಯಲ್ಲಿ ಈಗಾಗಲೇ ಇತ್ತು. ಇದನ್ನು ಅನೇಕ ಮಂಡಳಿಗಳು ಮತ್ತು ಸಿನೊಡ್‌ಗಳು ದೃಢೀಕರಿಸುತ್ತವೆ. ಈ ಸಂಪ್ರದಾಯವನ್ನು ಆಧರಿಸಿ, ವಿಶ್ವಾಸದ ಸಿದ್ಧಾಂತಕ್ಕಾಗಿ ಡಿಕ್ಯಾಸ್ಟರಿಯು ವಿಶ್ವಾಸದ ಠೇವಣಿಯನ್ನು ರಕ್ಷಿಸುವ ತನ್ನ ಧ್ಯೇಯವನ್ನು ಮುಂದುವರೆಸುತ್ತದೆ ಮತ್ತು ಆ ಕಾರ್ಯದಲ್ಲಿ ಮುಂದಕ್ಕೆ ಸಾಗುತ್ತಿದೆ.