ಯುದ್ಧಪೀಡಿತ ಜಗತ್ತಿಗೆ ಶಾಂತಿ ಸ್ಥಾಪನೆಯಲ್ಲಿ ಧಾರ್ಮಿಕ ಪಾತ್ರಧಾರಿಗಳ ಪಾತ್ರ
ಲಿಂಡಾ ಬೋರ್ಡೋನಿ
ಮೂರನೇ ಮಹಾಯುದ್ಧದಿಂದ ತೀವ್ರವಾಗಿ ಹಾನಿಗೊಳಗಾದ ಜಗತ್ತಿನಲ್ಲಿ, ವ್ಯಾಟಿಕನ್‌ನಲ್ಲಿ ಎರಡು ದಿನಗಳ ಅಂತರರಾಷ್ಟ್ರೀಯ ಸಮ್ಮೇಳನವು ಶಾಂತಿ ಸ್ಥಾಪನೆಯಲ್ಲಿ ಧಾರ್ಮಿಕ ಪಾತ್ರಧಾರಿಗಳ ಪಾತ್ರವನ್ನು ಪರಿಶೋಧಿಸುತ್ತದೆ.
"ಶಾಂತಿ ನಿರ್ಮಾಣದ ಧಾರ್ಮಿಕ ಆಯಾಮಗಳು" ಎಂಬ ಶೀರ್ಷಿಕೆಯ ಈ ಕಾರ್ಯಕ್ರಮವನ್ನು ಪಾಂಟಿಫಿಕಲ್ ಅಕಾಡೆಮಿ ಆಫ್ ಸೋಶಿಯಲ್ ಸೈನ್ಸಸ್ (PASS) ನೊಟ್ರೆ ಡೇಮ್ ವಿಶ್ವವಿದ್ಯಾಲಯದ ಕೀಫ್ ಸ್ಕೂಲ್ ಆಫ್ ಗ್ಲೋಬಲ್ ಅಫೇರ್ಸ್ ಮತ್ತು ಪೀಸ್ ರಿಸರ್ಚ್ ಇನ್ಸ್ಟಿಟ್ಯೂಟ್ ಓಸ್ಲೋ (PRIO) ಸಹಯೋಗದೊಂದಿಗೆ ಆಯೋಜಿಸಿದೆ. ಜುಲೈ 10–11, 2025 ರಂದು ಈ ಕಾರ್ಯಕ್ರಮ ನಡೆಯಲಿದೆ.
ಭಾಷಣಕಾರರಲ್ಲಿ ನೊಟ್ರೆ ಡೇಮ್ ವಿಶ್ವವಿದ್ಯಾಲಯದ ಪೀಸ್ ಅಕಾರ್ಡ್ಸ್ ಮ್ಯಾಟ್ರಿಕ್ಸ್ ಯೋಜನೆಯ ನಿರ್ದೇಶಕಿ ಪ್ರೊಫೆಸರ್ ಜೋಸೆಫಿನಾ ಎಚಾವರ್ರಿಯಾರವರು ಕೂಡ ಇದ್ದಾರೆ. ವ್ಯಾಟಿಕನ್ ಸುದ್ಧಿಯವರ ಜೊತೆ ಮಾತನಾಡಿದ ಅವರು, ವಿಶ್ವಾಸ ಆಧಾರಿತ ಮೌಲ್ಯಗಳು ಮತ್ತು ಧಾರ್ಮಿಕ ನಾಯಕತ್ವವು ಶಾಂತಿಯ ಮಾತುಕತೆ ಮತ್ತು ಯುದ್ಧದಿಂದ ಛಿದ್ರಗೊಂಡ ಸಮಾಜಗಳ ಗುಣಪಡಿಸುವಿಕೆ ಎರಡಕ್ಕೂ ಹೇಗೆ ಕೊಡುಗೆ ನೀಡುತ್ತದೆ ಎಂಬುದನ್ನು ಅನ್ವೇಷಿಸಲು ಇದು ಒಂದು ಉತ್ತಮ ಅವಕಾಶ ಎಂದು ಬಣ್ಣಿಸಿದರು.
ನ್ಯಾಯಸಮ್ಮತತೆ ಮತ್ತು ಸಮನ್ವಯದ ಮೂಲವಾಗಿ ವಿಶ್ವಾಸ
ಪ್ರಾಧ್ಯಾಪಕ ಎಚಾವರ್ರಿಯಾರವರು ಹೀಗೆಂದು ವಿವರಿಸಿದ್ದು, ಧಾರ್ಮಿಕ ನಾಯಕರು ಸಾಮಾನ್ಯವಾಗಿ ಶಾಂತಿ ಪ್ರಕ್ರಿಯೆಗಳಿಗೆ ನೈತಿಕ ಅಧಿಕಾರ ಮತ್ತು ನ್ಯಾಯಸಮ್ಮತತೆಯನ್ನು ತರಲಿದ್ದಾರೆ. ಕೊಲಂಬಿಯಾದ ಎಚಾವರ್ರಿಯಾರವರು, ಸಂಘರ್ಷ ಪೀಡಿತ ದೇಶದಲ್ಲಿ ವಾಸಿಸುವ ಮತ್ತು ಶಾಂತಿ ಪ್ರಕ್ರಿಯೆಯನ್ನು ಪ್ರಾರಂಭಿಸುವ ತನ್ನ ಸ್ವಂತ ಅನುಭವವನ್ನು ಸಹ ಬಳಸುತ್ತಾರೆ. ಉದಾಹರಣೆಗೆ, ಕೊಲಂಬಿಯಾದಲ್ಲಿ, ಕಥೋಲಿಕ ಧರ್ಮಸಭೆ, ಕೊಲಂಬಿಯಾದ ಕಾರಿತಾಸ್ ಮತ್ತು ಇತರ ಸಂಸ್ಥೆಗಳ ಮೂಲಕ, 2016ರ ಶಾಂತಿ ಒಪ್ಪಂದದ ಅನುಷ್ಠಾನದ ಸಮಯದಲ್ಲಿ ಬಿಕ್ಕಟ್ಟುಗಳನ್ನು ಮಧ್ಯಸ್ಥಿಕೆ ವಹಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ ಎಂದು ಅವರು ಹೇಳಿದರು.
ಶಿಕ್ಷಣ, ಸಬಲೀಕರಣ, ದೀರ್ಘಕಾಲೀನ ಪರಿವರ್ತನೆ
ಪ್ರಾಧ್ಯಾಪಕ ಎಚಾವರ್ರಿಯಾರವರು ಶಾಲೆಗಳಲ್ಲಿ ಮಾತ್ರವಲ್ಲದೆ ಸಂವಹನ, ಮಧ್ಯಸ್ಥಿಕೆ ಮತ್ತು ಸಹಾನುಭೂತಿಯನ್ನು ಬೆಳೆಸಬಹುದಾದ ಅನೌಪಚಾರಿಕ ಸೆಟ್ಟಿಂಗ್‌ಗಳಲ್ಲಿಯೂ ಶಾಂತಿ ಶಿಕ್ಷಣದ ಮಹತ್ವವನ್ನು ಎತ್ತಿ ತೋರಿಸಿದರು.
ಶಾಂತಿ ಸ್ಥಾಪನೆಗೆ ಒಂದು ತಾಂತ್ರಿಕ ಭಾಗವಿದೆ, ಎಂದು ಅವರು ವಿವರಿಸಿದರು, ಮಾತುಕತೆಗಳನ್ನು ಹೇಗೆ ಸುಗಮಗೊಳಿಸುವುದು ಎಂಬುದರಿಂದ ಹಿಡಿದು ಸಂತ್ರಸ್ತರುಗಳೊಂದಿಗೆ ಹೇಗೆ ಹೋಗುವುದು ಎಂಬುದರವರೆಗೆ ವಿವರಿಸಿದರು. ಆದರೆ ಇಲ್ಲಿ ಮಾನವೀಯ ಭಾಗವೂ ಇದೆ, ದುರ್ಬಲರನ್ನು ನೋಡಲು ನಾವು ನಮ್ಮ ನೋಟವನ್ನು ಹೇಗೆ ತರಬೇತಿಗೊಳಿಸುತ್ತೇವೆ, ನಾವು ಹೇಗೆ ವಿಶ್ವಾಸವನ್ನು ಬೆಳೆಸುತ್ತೇವೆ, ಹೊಸ ಮಾರ್ಗಗಳನ್ನು ಆಯ್ಕೆ ಮಾಡಲು ಜನರಿಗೆ ನಾವು ಹೇಗೆ ಅಧಿಕಾರ ನೀಡುತ್ತೇವೆ. ಆಧುನಿಕ ಸಂಘರ್ಷಗಳ ಘರ್ಷಣೆಯಲ್ಲಿ ನಾಗರಿಕ ಜನಸಂಖ್ಯೆಯು ಹೆಚ್ಚಾಗಿ ಸಿಲುಕಿಕೊಳ್ಳುತ್ತಿರುವ ಜಗತ್ತಿನಲ್ಲಿ, ಶಾಂತಿ ಪ್ರಕ್ರಿಯೆಗಳಲ್ಲಿ ಸಂತ್ರಸ್ತರುಗಳನ್ನು ಸೇರಿಸುವುದು ಮತ್ತು ಅವರ ಧ್ವನಿಯನ್ನು ಕೇಳುವಂತೆ ಖಚಿತಪಡಿಸಿಕೊಳ್ಳುವುದು ಅತ್ಯಗತ್ಯ ಎಂದು ಅವರು ಹೇಳಿದರು.
ಶಾಂತಿಗಾಗಿ ವಿಶ್ವಗುರುಗಳ ಮನವಿ
ಶಾಂತಿಗಾಗಿ ವಿಶ್ವಗುರುಗಳ ಮನವಿಗಳ ಪರಿಣಾಮದ ಬಗ್ಗೆ ಕೇಳಿದಾಗ, ಪ್ರೊಫೆಸರ್ ಎಚಾವರ್ರಿಯಾರವರು ಸಶಸ್ತ್ರ ಸಂಘರ್ಷದಲ್ಲಿ ತೊಡಗಿರುವವರಿಗೆ ಮತ್ತು ಗುಣಪಡಿಸುವಿಕೆಯನ್ನು ಬಯಸುವವರಿಗೆ ಅವುಗಳ ಮಹತ್ವವನ್ನು ದೃಢಪಡಿಸಿದರು ವಿಶ್ವಗುರುಗಳ ಧ್ವನಿ ಲಕ್ಷಾಂತರ ಜನರನ್ನು ತಲುಪುತ್ತದೆ, ಹೋರಾಟಗಾರರು, ಸಂತ್ರಸ್ತರುಗಳು ಮತ್ತು ಶಾಂತಿ ನಿರ್ಮಾಣಕಾರರು ಹೀಗೆ ಅನೇಕ ಜನರನ್ನು ತಲುಪುತ್ತದೆ. ಇದು ಆತ್ಮಸಾಕ್ಷಿ ಮತ್ತು ಧೈರ್ಯಕ್ಕೆ ಕರೆ, ಎಂದು ಅವರು ಗಮನಿಸಿದರು.
ನಾವು ಬಿಕ್ಕಟ್ಟಿನ ಸ್ಥಿತಿಯಿಂದ ಸೃಜನಶೀಲ ಸಹಯೋಗದತ್ತ ಸಾಗಬೇಕಾಗಿದೆ ಎಂದು ಅವರು ಹೇಳಿದರು. ಈ ಸಮ್ಮೇಳನವು ಆ ದಿಕ್ಕಿನಲ್ಲಿ ಒಂದು ಹೆಜ್ಜೆಯಾಗಿದೆ ಎಂದು ಎಚಾವರ್ರಿಯಾರವರು ಹೇಳಿದರು ಮತ್ತು ಸಹಯೋಗದ ನಿರ್ಣಾಯಕ ಅಗತ್ಯವನ್ನು ಎತ್ತಿ ತೋರಿಸಿದರು. ನಾವು ಈ ಪರಿಸ್ಥಿತಿಗೆ ಬಿಕ್ಕಟ್ಟಿನ ಸ್ಥಿತಿಯಲ್ಲಿ, ಬದುಕುಳಿಯುವ ರೀತಿಯಲ್ಲಿ ಪ್ರತಿಕ್ರಿಯಿಸುವುದನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದು ಪುನರುಚ್ಚರಿಸುತ್ತಾ, ನಾವು ಇನ್ನೂ ಒಂದು ಹೆಜ್ಜೆ ಮುಂದಿಡಬೇಕಾಗಿದೆ, ಮುಂದುವರಿಯುವುದು ಮತ್ತು ಸೇತುವೆಗಳನ್ನು ನಿರ್ಮಿಸುವುದು ಹೇಗೆ ಎಂಬುದರ ಕುರಿತು ಒಟ್ಟಾಗಿ ಯೋಚಿಸಬೇಕು ಎಂದು ಅವರು ಹೇಳಿದರು.