ವಿಶ್ವಗುರು ಫ್ರೆಂಚ್ ಧರ್ಮಾಧ್ಯಕ್ಷರಾದ ತಿಬಾಲ್ಟ್ ವರ್ನಿರವರನ್ನು ಅಪ್ರಾಪ್ತ ವಯಸ್ಕರ ರಕ್ಷಣೆಗಾಗಿ ವಿಶ್ವಗುರುಗಳ ಆಯೋಗದ ಹೊಸ ಅಧ್ಯಕ್ಷರನ್ನಾಗಿ ನೇಮಿಸಿದ್ದಾರೆ
ಜೀನ್ ಚಾರ್ಲ್ಸ್ ಪುಟ್ಜೋಲು
ಧರ್ಮಾಧ್ಯಕ್ಷರಾದ ತಿಬಾಲ್ಟ್ ವರ್ನಿರವರು ಅಪ್ರಾಪ್ತ ವಯಸ್ಕರ ರಕ್ಷಣೆಗಾಗಿ ವಿಶ್ವಗುರು ಆಯೋಗದ ಹೊಸ ಅಧ್ಯಕ್ಷರಾಗಿದ್ದಾರೆ. ಅವರು ತಮ್ಮ ಧರ್ಮಕ್ಷೇತ್ರದ ಜವಾಬ್ದಾರಿಗಳನ್ನು ಉಳಿಸಿಕೊಂಡು, ತಮ್ಮ ಫ್ರೆಂಚ್ ಅನುಭವವನ್ನು ಸಾರ್ವತ್ರಿಕ ಧರ್ಮಸಭೆಯ ಸೇವೆಗೆ ವಿನಿಯೋಗಿಸುತ್ತಾರೆ.
ಕಳೆದ ಜೂನ್‌ನಲ್ಲಿ ಅವರು ತಮ್ಮ ದೇಶದ ಧರ್ಮಾಧ್ಯಕ್ಷರುಗಳ ಸಮ್ಮೇಳನದಲ್ಲಿ ಶಿಶುಕಾಮದ ವಿರುದ್ಧದ ತಡೆಗಟ್ಟುವಿಕೆ ಮತ್ತು ಹೋರಾಟದ ಮಂಡಳಿಯ ಅಧ್ಯಕ್ಷರಾಗಿದ್ದರು, ಅವರು ಅಧಿಕಾರವನ್ನು ಅಮಿಯೆನ್ಸ್‌ನ ಧರ್ಮಾಧ್ಯಕ್ಷರಾದ ಗೆರಾರ್ಡ್ ಲೆ ಸ್ಟಾಂಗ್ ರವರಿಗೆ ಹಸ್ತಾಂತರಿಸಿದರು, ಅವರು ಕಳೆದ ಸಮಗ್ರ ಸಭೆಯಲ್ಲಿ ಆ ಸ್ಥಾನಕ್ಕೆ ಆಯ್ಕೆಯಾದರು.
ಮೊದಲು ಪ್ಯಾರಿಸ್ ಧರ್ಮಕ್ಷೇತ್ರದಲ್ಲಿ ಮತ್ತು ನಂತರ ಫ್ರಾನ್ಸ್‌ನ ಧರ್ಮಾಧ್ಯಕ್ಷರುಗಳ ಸಮ್ಮೇಳನದಲ್ಲಿ, ಮಹಾಧರ್ಮಾಧ್ಯಕ್ಷರಾದ ವರ್ನಿ ರವರು ಧರ್ಮಸಭೆಯಲ್ಲಿನ ನಿಂದನೆಯ ವಿರುದ್ಧದ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ, ಸಂತ್ರಸ್ತರುಗಳನ್ನು ಆಲಿಸಲು ಮತ್ತು ಅವರೊಂದಿಗೆ ಹೋಗಲು ಹಾಗೂ ನಾಗರಿಕ ಮತ್ತು ನ್ಯಾಯಾಂಗ ಅಧಿಕಾರಿಗಳೊಂದಿಗೆ ಅಗತ್ಯವಾದ ಸಂವಹನಕ್ಕೆ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದಾರೆ.
ಅವರು ತಮ್ಮ ನೇಮಕಾತಿಯನ್ನು CIASE (ಧರ್ಮಸಭೆಯಲ್ಲಿ ಲೈಂಗಿಕ ದೌರ್ಜನ್ಯದ ಸ್ವತಂತ್ರ ಆಯೋಗ) ಸ್ಥಾಪನೆಯೊಂದಿಗೆ ಫ್ರೆಂಚ್ ಧರ್ಮಸಭೆಯು ನಡೆಸಿದ ಕೆಲಸಕ್ಕೆ ಒಂದು ರೀತಿಯ ಮಾನ್ಯತೆಯಾಗಿ ನೋಡುತ್ತಾರೆ, ಇದು ಅದರ ಅಧ್ಯಕ್ಷ ಜೀನ್ ಮಾರ್ಕ್ ಸೌವೆ ರವರ ವರದಿಯನ್ನು ಪ್ರಕಟಿಸಲು ಮತ್ತು ಪರಿಹಾರಕ್ಕಾಗಿ ಒಂದು ಸಂಸ್ಥೆಯಾದ INIRR ಸ್ಥಾಪನೆಗೆ ಕಾರಣವಾಯಿತು.