MAP

Cardinal Jose Tolentino Cardinal Jose Tolentino 

ಜಾಯೆದ್ ಪ್ರಶಸ್ತಿ ತೀರ್ಪುಗಾರರ ಸಮಿತಿಗೆ ಕಾರ್ಡಿನಲ್ ಟೊಲೆಂಟಿನೊ ನೇಮಕ

ಸಂಸ್ಕೃತಿ ಮತ್ತು ಶಿಕ್ಷಣಕ್ಕಾಗಿನ ಡಿಕ್ಯಾಸ್ಟರಿಯ ಪ್ರಿಫೆಕ್ಟ್ ರವರು 2026ರ ಮಾನವ ಭ್ರಾತೃತ್ವಕ್ಕಾಗಿ ಜಾಯೆದ್ ಪ್ರಶಸ್ತಿಯ ತೀರ್ಪುಗಾರರಲ್ಲಿ ಒಬ್ಬರಾಗಿರುತ್ತಾರೆ. ನಾಮನಿರ್ದೇಶನಗಳನ್ನು ಪರಿಶೀಲಿಸಲು ಮತ್ತು ವಿಶ್ವದಾದ್ಯಂತ ಬದಲಾವಣೆಯನ್ನು ತರುತ್ತಿರುವ ಅನೇಕ ಜನರೊಂದಿಗೆ ಪರಿಚಿತರಾಗಲು ನಾನು ಎದುರು ನೋಡುತ್ತಿದ್ದೇನೆ ಎಂದು ಅವರು ಹೇಳುತ್ತಾರೆ.

ಜೋಸೆಫ್ ಟುಲ್ಲೊಚ್

ಸಂಸ್ಕೃತಿ ಮತ್ತು ಶಿಕ್ಷಣಕ್ಕಾಗಿ ಡಿಕ್ಯಾಸ್ಟರಿಯ ಪ್ರಿಫೆಕ್ಟ್ ಕಾರ್ಡಿನಲ್ ಜೋಸ್ ಟೊಲೆಂಟಿನೊ ಡಿ ಮೆಂಡೋನ್ಸಾರವರನ್ನು 7ನೇ ವಾರ್ಷಿಕ ಮಾನವ ಭ್ರಾತೃತ್ವ ಪ್ರಶಸ್ತಿಯ ತೀರ್ಪುಗಾರ ಸಮಿತಿಗೆ ನೇಮಿಸಲಾಗಿದೆ.

ವಿಶ್ವಗುರು ಫ್ರಾನ್ಸಿಸ್ ಮತ್ತು ಅಲ್-ಅಝರ್‌ನ ಗ್ರ್ಯಾಂಡ್ ಇಮಾಮ್ ರವರ ಐತಿಹಾಸಿಕ ಸಭೆ ಮತ್ತು ಈ ಜೋಡಿಯು ಮಾನವ ಭ್ರಾತೃತ್ವದ ಜಂಟಿ ದಾಖಲೆಯ ಪ್ರಕಟಣೆಯ ನಂತರ 1 ಮಿಲಿಯನ್ ಅಮೆರಿಕನ್ ಡಾಲರ್ ಬಹುಮಾನವನ್ನು ಹೊಂದಿರುವ ಈ ಪ್ರಶಸ್ತಿಯನ್ನು ಫೆಬ್ರವರಿ 2019ರಲ್ಲಿ ಸ್ಥಾಪಿಸಲಾಯಿತು.

ಈ ದಾಖಲೆಗೆ ಸಹಿ ಹಾಕುವ ಕಾರ್ಯ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯಿತು ಮತ್ತು ಈಗ ಆ ದೇಶವು ಈ ಪ್ರಶಸ್ತಿಯನ್ನು ಪ್ರಾಯೋಜಿಸುತ್ತಿದೆ, ಇದನ್ನು ಅದರ ಸ್ಥಾಪಕ ಶೇಖ್ ಜಾಯೆದ್ ಬಿನ್ ಸುಲ್ತಾನ್ ಅಲ್ ನಹ್ಯಾನ್ ರವರ ಗೌರವಾರ್ಥವಾಗಿ ಹೆಸರಿಸಲಾಗಿದೆ.

ನ್ಯಾಯಾಧೀಶರು
ಬಹುಮಾನ ವಿಜೇತರನ್ನು ಸ್ವತಂತ್ರ ತೀರ್ಪುಗಾರರಿಂದ ಆಯ್ಕೆ ಮಾಡಲಾಗುತ್ತಿದೆ, ಅವರ ಸಂಯೋಜನೆಯು ವರ್ಷದಿಂದ ವರ್ಷಕ್ಕೆ ಬದಲಾಗುತ್ತಿದೆ. ಅದರ ಸದಸ್ಯರಲ್ಲಿ, ವಿಶ್ವಗುರು ಆಯ್ಕೆ ಮಾಡಿದ ಒಬ್ಬ ವ್ಯಕ್ತಿ, ಅಲ್-ಅಝರ್‌ನ ಗ್ರ್ಯಾಂಡ್ ಇಮಾಮ್ ಆಯ್ಕೆ ಮಾಡಿದ ಒಬ್ಬ ವ್ಯಕ್ತಿ ಮತ್ತು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಯ್ಕೆ ಮಾಡಿದ ಒಬ್ಬ ವ್ಯಕ್ತಿ ಯಾವಾಗಲೂ ಇರುತ್ತಾರೆ.

ಕಾರ್ಡಿನಲ್ ಟೊಲೆಂಟಿನೊ ಜೊತೆಗೆ, ಈ ವರ್ಷದ ತೀರ್ಪುಗಾರರ ಸಮಿತಿಯು ಈ ಕೆಳಗಿನವರನ್ನು ಒಳಗೊಂಡಿದೆ:
- ಕ್ಯಾಥರೀನ್ ರಸೆಲ್, ಯುನಿಸೆಫ್‌ನ ಕಾರ್ಯನಿರ್ವಾಹಕ ನಿರ್ದೇಶಕಿ
- ಯುರೋಪ್‌ ಪರಿಷತ್ತಿನ ಮಾಜಿ ಅಧ್ಯಕ್ಷ ಮತ್ತು ಬೆಲ್ಜಿಯಂನ ಮಾಜಿ ಪ್ರಧಾನಿ ಚಾರ್ಲ್ಸ್ ಮೈಕೆಲ್
- ಆಫ್ರಿಕಾ ಒಕ್ಕೂಟ ಆಯೋಗದ ಮಾಜಿ ಅಧ್ಯಕ್ಷೆ ಮತ್ತು ಚಾಡ್‌ನ ಮಾಜಿ ಪ್ರಧಾನಿ ಮೌಸಾ ಫಕಿ ಮಹಾಮತ್
- ಉಜ್ಬೇಕಿಸ್ತಾನ್ ಗಣರಾಜ್ಯದ ಅಧ್ಯಕ್ಷರ ಆಡಳಿತ ಮುಖ್ಯಸ್ಥೆ ಸೈದಾ ಮಿರ್ಜಿಯೋಯೆವಾ
- ನ್ಯಾಯಾಧೀಶ ಮೊಹಮ್ಮದ್ ಅಬ್ದೆಲ್ಸಲಾಮ್, ಮಾನವ ಭ್ರಾತೃತ್ವಕ್ಕಾಗಿ ಜಾಯೆದ್ ಪ್ರಶಸ್ತಿಯ ಪ್ರಧಾನ ಕಾರ್ಯದರ್ಶಿ
ಕಾರ್ಡಿನಲ್ ಟೊಲೆಂಟಿನೊರವರ ನೇಮಕಾತಿ ಪ್ರಶಸ್ತಿ ಸ್ಥಾಪನೆಗೆ ಪ್ರೇರಣೆ ನೀಡಿದ ಮತ್ತು ಗೌರವ ಪುರಸ್ಕೃತರಾಗಿದ್ದ ಪವಿತ್ರ ತಂದೆ ವಿಶ್ವಗುರು ಫ್ರಾನ್ಸಿಸ್ ರವರ ಅಮೂಲ್ಯ ಪರಂಪರೆಯ ಭಾಗವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮಾನವ ಭ್ರಾತೃತ್ವದ ಮೌಲ್ಯಗಳನ್ನು ಆಚರಣೆಗೆ ತರುವವರನ್ನು ಗೌರವಿಸುವ ಈ ಜವಾಬ್ದಾರಿಯನ್ನು ವಿಶ್ವಗುರು ಫ್ರಾನ್ಸಿಸ್ ರವರು ನನಗೆ ವಹಿಸಿಕೊಟ್ಟಿದ್ದೇನೆ ಎಂದು ಕಾರ್ಡಿನಲ್ ಮುಂದುವರಿಸಿದರು. ವಿಶ್ವಗುರು ಲಿಯೋಗೆ ಸೇವೆ ಮತ್ತು ವಿಧೇಯತೆಯ ಮನೋಭಾವದಿಂದ, ನಾಮನಿರ್ದೇಶನಗಳನ್ನು ಪರಿಶೀಲಿಸಲು ಮತ್ತು ವಿಶ್ವದಾದ್ಯಂತ ಬದಲಾವಣೆಯನ್ನು ತರುತ್ತಿರುವ ಅನೇಕ ಜನರೊಂದಿಗೆ ಪರಿಚಿತರಾಗಲು ನಾನು ಎದುರು ನೋಡುತ್ತಿದ್ದೇನೆ.

ಪ್ರಶಸ್ತಿ
ಜಾಯೆದ್ ಪ್ರಶಸ್ತಿಯು ಮಾನವ ಭ್ರಾತೃತ್ವವನ್ನು ಮುನ್ನಡೆಸಲು, ಶಾಂತಿಯುತ ಸಹಬಾಳ್ವೆಯನ್ನು ಉತ್ತೇಜಿಸಲು ಮತ್ತು ಸಹಿಷ್ಣುತೆ ಹಾಗೂ ಒಗ್ಗಟ್ಟಿನ ಮೌಲ್ಯಗಳನ್ನು ಪ್ರತಿಪಾದಿಸಲು ಅತ್ಯುತ್ತಮ ಕೊಡುಗೆಗಳನ್ನು ನೀಡಿದ ವ್ಯಕ್ತಿಗಳು ಮತ್ತು ಗುಂಪುಗಳನ್ನು ಗುರುತಿಸುವ ಗುರಿಯನ್ನು ಹೊಂದಿದೆ.

ಈ ಪ್ರಶಸ್ತಿಯ USD $1 ಮಿಲಿಯನ್ ಆರ್ಥಿಕ ಬಹುಮಾನವನ್ನು ಒಳಗೊಂಡಿದೆ, ಯಾವುದೇ ಹಿನ್ನೆಲೆಯ, ಧರ್ಮ ಅಥವಾ ರಾಷ್ಟ್ರೀಯತೆಯ ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ಹೋಗಬಹುದು.

ಪ್ರಶಸ್ತಿಯ 2025ರ ಆವೃತ್ತಿಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವ್ಯಾಟಿಕನ್ ಸುದ್ಧಿಯ ಜೊತೆ ಮಾತನಾಡಿದ ಯುನೈಟೆಡ್ ಅರಬ್ ಎಮಿರೇಟ್ಸ್‌ನ ಪವಿತ್ರ ಪೀಠಾಧಿಕಾರಿ ಪ್ರೇಷಿತ ರಾಯಭಾರಿಯಾದ ಧರ್ಮಾಧ್ಯಕ್ಷರಾದ ಕ್ರಿಸ್ಟೋಫ್ ಎಲ್-ಕ್ಯಾಸಿಸ್ ರವರು, ಎರಡು ರಾಜ್ಯಗಳ ನಡುವಿನ ಸಂಬಂಧಕ್ಕೆ ಮಾನವ ಭ್ರಾತೃತ್ವದ ಪರಿಕಲ್ಪನೆಯ ಮಹತ್ವವನ್ನು ಒತ್ತಿ ಹೇಳಿದರು.

ದೇಶಗಳ ನಡುವಿನ ಸಂಬಂಧಗಳು ಇಂದು "ತುಂಬಾ ಉತ್ತಮವಾಗಿವೆ" ಎಂದು ಅವರು ಹೇಳಿದರು, ಅವರ ಸಹಕಾರದ ಮುಖ್ಯ ಗಮನವು ವಿಶ್ವಾದ್ಯಂತ ಮಾನವ ಭ್ರಾತೃತ್ವವನ್ನು ಉತ್ತೇಜಿಸುವುದಾಗಿದೆ ಎಂದು ಹೇಳಿದರು.

ವಿಶ್ವಗುರು ಫ್ರಾನ್ಸಿಸ್ ಮತ್ತು ಗ್ರ್ಯಾಂಡ್ ಇಮಾಮ್ ನಡುವಿನ ಸಹಯೋಗವು "ಇತರರಿಗೆ ಮಾದರಿ" ಮತ್ತು "ನಾವೆಲ್ಲರೂ ಒಂದೇ ಕುಟುಂಬ" ಎಂಬುದನ್ನು ನೆನಪಿಸುತ್ತದೆ ಎಂದು ಜಾಯೆದ್ ಪ್ರಶಸ್ತಿಯ ಮಹತ್ವವನ್ನು ಪ್ರೇಷಿತ ರಾಯಭಾರಿಯವರು ಒತ್ತಿ ಹೇಳಿದರು.
 

07 ಜುಲೈ 2025, 18:45