ಪೀಟರ್ಸ್ ಪೆನ್ಸ್ 2024ರ ವರದಿಯು ವಿಶ್ವಗುರುವಿನ ಧ್ಯೇಯದ ಬೆಂಬಲದಲ್ಲಿ ಹೆಚ್ಚಳವನ್ನು ತೋರಿಸುತ್ತದೆ
ಸಾಲ್ವಟೋರ್ ಸೆರ್ನುಜಿಯೊ
2024ರಲ್ಲಿ ಪೀಟರ್ಸ್ ಪೆನ್ಸ್ ಸಂಗ್ರಹವು 58 ಮಿಲಿಯನ್ ಯುರೋಗಳನ್ನು ಗಳಿಸಿತು, ಇದು 2023ಕ್ಕೆ ಹೋಲಿಸಿದರೆ ಆರು ಮಿಲಿಯನ್ ಯುರೋಗಳ ಹೆಚ್ಚಳವಾಗಿದೆ. ಒಟ್ಟು ವೆಚ್ಚ 75.4 ಮಿಲಿಯನ್ ಯುರೋಗಳು. ಇವುಗಳಲ್ಲಿ 61.2 ಮಿಲಿಯನ್ ಯುರೋಗಳನ್ನು ವಿಶ್ವಗುರುಗಳ ಪ್ರೇಷಿತ ಧ್ಯೇಯದ ಸೇವೆ ಸಲ್ಲಿಸುವ ತನ್ನ ಡಿಕಾಸ್ಟ್ರಿಗಳ ಪವಿತ್ರ ಪೀಠಾಧಿಕಾರಿಯು ನಡೆಸಿದ ಚಟುವಟಿಕೆಗಳನ್ನು ಬೆಂಬಲಿಸಲು ಬಳಸಲಾಯಿತು, ಆದರೆ 13.3 ಮಿಲಿಯನ್ ಯುರೋಗಳನ್ನು ನೆರವಿನ ಅಗತ್ಯವಿರುವವರಿಗೆ 239 ಸಹಾಯ ಯೋಜನೆಗಳನ್ನು ಬೆಂಬಲಿಸಲು ಹಂಚಿಕೆ ಮಾಡಲಾಯಿತು. ಈ ಯೋಜನೆಗಳಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಬೆಂಬಲ, ಸೆನೆಗಲ್, ಪೆರು, ರೊಮೇನಿಯಾ, ಬೆನಿನ್, ಅಂಗೋಲಾದಂತಹ ಸ್ಥಳಗಳಲ್ಲಿನ ಸಮುದಾಯ ಯೋಜನೆಗಳು ಮತ್ತು ಯುದ್ಧಗಳಿಂದ ಪ್ರಭಾವಿತರಾದ ಜನಸಂಖ್ಯೆಗೆ ವಸ್ತು ನೆರವೂ ಸಹ ಸೇರಿವೆ.
ವಿಶ್ವಗುರುಗಳ ಧ್ಯೇಯಕ್ಕೆ ಸಹಾಯ ಮಾಡುವ ದೇಣಿಗೆಗಳ ಕುರಿತು ನಿಧಿಯ ವಾರ್ಷಿಕ ವರದಿಯನ್ನು ಬಿಡುಗಡೆ ಮಾಡುವುದರೊಂದಿಗೆ, ಜೂನ್ 27 ರ ಶುಕ್ರವಾರದಂದು ಅಂಕಿ ಅಂಶ ಮಾಹಿತಿಯನ್ನು ಸಾರ್ವಜನಿಕಗೊಳಿಸಲಾಯಿತು. ವಿಶ್ವಗುರು ರೋಮನ್ ಕ್ಯೂರಿಯಾ ಮೂಲಕ ಹೆಚ್ಚುವರಿಯಾಗಿ 37.3 ಮಿಲಿಯನ್ ಯೂರೋಗಳನ್ನು ದತ್ತಿ ಕಾರ್ಯಗಳಿಗೆ ದೇಣಿಗೆ ನೀಡಿದ್ದಾರೆ (ಪೀಟರ್ಸ್ ಪೆನ್ಸ್ 6.2 ಮಿಲಿಯನ್ ಯೂರೋಗಳನ್ನು ನಿಧಿಯಾಗಿ ನೀಡಿದ್ದಾರೆ), ಒಟ್ಟು ದತ್ತಿ ಕಾರ್ಯಗಳ ಮೊತ್ತ 50.6 ಮಿಲಿಯನ್ ಯೂರೋಗಳಿಗೆ ತಲುಪಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಪೀಟರ್ಸ್ ಪೆನ್ಸ್‌ಗೆ ದೇಣಿಗೆಗಳು
2024ರಲ್ಲಿ ಪೀಟರ್ಸ್ ಪೆನ್ಸ್‌ಗೆ ಒಟ್ಟು 54.3 ಮಿಲಿಯನ್ ಯುರೋಗಳಷ್ಟು ದೇಣಿಗೆಗಳು ಬಂದಿದ್ದು, ಆರ್ಥಿಕ ಆದಾಯ ಮತ್ತು ಇತರ ಮೊತ್ತಗಳು 3.7 ಮಿಲಿಯನ್ ಯುರೋಗಳನ್ನು ತಲುಪಿವೆ ಎಂದು ವರದಿ ತೋರಿಸುತ್ತದೆ.
ದೇಣಿಗೆಗಳು ವಿವಿಧ ರೂಪಗಳಲ್ಲಿ ಬಂದವು: ಸಂತರುಗಳಾದ ಪೇತ್ರ ಮತ್ತು ಪೌಲ್ ರವರ ಪವಿತ್ರ ಹಬ್ಬದ ಸಂದರ್ಭದಲ್ಲಿ ವಿಶ್ವದಾದ್ಯಂತದ ಧರ್ಮಕೇಂದ್ರಗಳಲ್ಲಿ ಸಂಗ್ರಹಿಸಲಾದ ಸಂಗ್ರಹಗಳಿಂದ, ಧರ್ಮಕ್ಷೇತ್ರಗಳ ಮೂಲಕ ಪವಿತ್ರ ಪೀಠಾಧಿಕಾರಿಗೆ ರವಾನಿಸಲಾದವುಗಳಿಂದ (ಇಟಾಲಿಯನ್ ಡಯೋಸೀಸ್‌ಗಳನ್ನು ಹೊರತುಪಡಿಸಿ, ಅವು ನೇರವಾಗಿ ಕಳುಹಿಸುತ್ತವೆ); ತಂತಿ ವರ್ಗಾವಣೆಗಳು, ಚೆಕ್‌ಗಳು ಅಥವಾ ಪೀಟರ್ಸ್ ಪೆನ್ಸ್ ಅಧಿಕೃತ ವೆಬ್‌ಸೈಟ್ ಮೂಲಕ ನೇರ ಕೊಡುಗೆಗಳಿಂದ; ಮತ್ತು ಪೀಟರ್ಸ್ ಪೆನ್ಸ್‌ಗೆ ಅಥವಾ ನೇರವಾಗಿ ವಿಶ್ವಗುರುಗಳ ವಿಲ್‌ಗಳಲ್ಲಿ ನಿರ್ದಿಷ್ಟಪಡಿಸಿದ ದಾನಗಳಿಂದ ದೇಣಿಗೆಗಳು ಬರುತ್ತಿವೆ.
ದಾನ ಮಾಡುತ್ತಿರುವ ದೇಶಗಳು
2024ರಲ್ಲಿ ಧರ್ಮಕ್ಷೇತ್ರಗಳು ದೇಣಿಗೆಗಳಲ್ಲಿ 59% (€ 31.8 ಮಿಲಿಯನ್), ನಂತರ ಖಾಸಗಿ ವ್ಯಕ್ತಿಗಳು 16% (€ 8.9 ಮಿಲಿಯನ್), ಫೌಂಡೇಶನ್‌ಗಳು 12.2% (€ 12.2 ಮಿಲಿಯನ್), ಮತ್ತು ಧಾರ್ಮಿಕ ಸಂಸ್ಥೆಗಳು 1.4% (€ 1.4 ಮಿಲಿಯನ್) ಗಳನ್ನು ಹೊಂದಿವೆ. ಅತಿ ಹೆಚ್ಚು ದೇಣಿಗೆ ಮೊತ್ತವನ್ನು ಹೊಂದಿರುವ ದೇಶಗಳಲ್ಲಿ ಯುನೈಟೆಡ್ ಸ್ಟೇಟ್ಸ್ (25.2%), ಫ್ರಾನ್ಸ್ (15%), ಇಟಲಿ (5.2%), ಬ್ರೆಜಿಲ್ (3%), ಮತ್ತು ಜರ್ಮನಿ (2.8%) ಸೇರಿವೆ. ಇತರ ದಾನಿ ದೇಶಗಳಲ್ಲಿ ದಕ್ಷಿಣ ಕೊರಿಯಾ, ಮೆಕ್ಸಿಕೊ, ಐರ್ಲೆಂಡ್, ಸ್ಪೇನ್, ಕೊಲಂಬಿಯಾ ಮತ್ತು ಇತರರು ಒಟ್ಟು 15% ಕೊಡುಗೆ ನೀಡಿದ್ದಾರೆ.
ಪವಿತ್ರ ಪೀಠಾಧಿಕಾರಿಯ ಧ್ಯೇಯದ ಕೊಡುಗೆಗಳು
ವೆಚ್ಚಗಳಿಗೆ ಸಂಬಂಧಿಸಿದಂತೆ, ಪವಿತ್ರ ಪೀಠಾಧಿಕಾರಿಯ ಪ್ರೇಷಿತ ಧ್ಯೇಯದ ಮತ್ತು ನಿರ್ದಿಷ್ಟ ನೇರ ನೆರವು ಯೋಜನೆಗಳನ್ನು ಬೆಂಬಲಿಸಲು € 74.5 ಮಿಲಿಯನ್ ಅನ್ನು ವಿತರಿಸಲಾಯಿತು. ಇವುಗಳಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳು ಮತ್ತು ಯುದ್ಧಗಳಿಂದ ಪ್ರಭಾವಿತವಾಗಿರುವ ಜನಸಂಖ್ಯೆಗೆ ವಸ್ತು ನೆರವು ನೀಡುವ ಯೋಜನೆಗಳು, ಹಾಗೆಯೇ ನೆರವಿನ ಅಗತ್ಯವಿರುವ ಧರ್ಮಕೇಂದ್ರಗಳು, ಧರ್ಮಕ್ಷೇತ್ರಗಳು ಮತ್ತು ಧಾರ್ಮಿಕ ಸಂಸ್ಥೆಗಳಿಂದ ಸುವಾರ್ತಾಬೋಧನಾ ಪ್ರಯತ್ನಗಳಿಗೆ ಬೆಂಬಲ ಸೇರಿವೆ.
2024 ರಲ್ಲಿ ಪೀಟರ್ಸ್ ಪೆನ್ಸ್ ಸೆನೆಗಲ್‌ನಲ್ಲಿ ತರಬೇತಿ ಮತ್ತು ಧರ್ಮಪ್ರಚಾರಕ ಕೇಂದ್ರ, ಪೆರುವಿನಲ್ಲಿ ಧರ್ಮಕೇಂದ್ರದ ದೇವಾಲಯ ಮತ್ತು ಥೈಲ್ಯಾಂಡ್‌ನಲ್ಲಿ ಹಾಸ್ಟೆಲ್ ನಿರ್ಮಾಣಕ್ಕೆ ಹಣಕಾಸು.
ವಿಶ್ವಗುರುಗಳ ಪ್ರೇಷಿತ ಧ್ಯೇಯ
ವರದಿಯ ಅಂತಿಮ ಕೋಷ್ಟಕಗಳು 2024 ರಲ್ಲಿ ಪವಿತ್ರ ಪೀಠಾಧಿಕಾರಿಯ ವೆಚ್ಚಗಳು € 367.4 ಮಿಲಿಯನ್ ಆಗಿದ್ದು, ಅದರಲ್ಲಿ ಸರಿಸುಮಾರು € 61.2 ಮಿಲಿಯನ್ (17%) ಪೀಟರ್ಸ್ ಪೆನ್ಸ್‌ನಿಂದ ಭರಿಸಲ್ಪಟ್ಟಿದೆ ಎಂದು ತೋರಿಸುತ್ತದೆ.
ವಿಶ್ವಗುರುಗಳ ಪ್ರೇಷಿತ ಧ್ಯೇಯವು ಹಲವಾರು ಕ್ಷೇತ್ರಗಳನ್ನು ಒಳಗೊಂಡಿದೆ, ಅವುಗಳಲ್ಲಿ ಕಷ್ಟದಲ್ಲಿರುವ ಸ್ಥಳೀಯ ಧರ್ಮಸಭೆಗಳಿಗೆ ಬೆಂಬಲ, ಸುವಾರ್ತಾ ಪ್ರಚಾರ ಪ್ರಯತ್ನಗಳು, ಪ್ರೇಷಿತ ರಾಯಭಾರಿಗಳು, ದತ್ತಿ ಸೇವೆಗಳು, ಸುವಾರ್ತೆ ಸಂದೇಶವನ್ನು ತಿಳಿಸುವುದು, ಸಾಂಸ್ಕೃತಿಕ ಪರಂಪರೆ, ಶೈಕ್ಷಣಿಕ ಸಂಸ್ಥೆಗಳು, ಮಾನವ ಅಭಿವೃದ್ಧಿ, ಕುಟುಂಬ ಜೀವನ, ಶಿಕ್ಷಣ, ವಿಜ್ಞಾನ ಮತ್ತು ಸಂಸ್ಕೃತಿಯೂ ಸೇರಿವೆ.