MAP

padre John Vespa da Melbourne, Australia, e sua madre, in servizio come diacono durante la messa di San Patrizio padre John Vespa da Melbourne, Australia, e sua madre, in servizio come diacono durante la messa di San Patrizio 

ವಿಶ್ವಗುರು ನೇಮಿಸಿದ ಆಸ್ಟ್ರೇಲಿಯಾದ ಧರ್ಮಗುರು: 'ದೇವರು ನಿರತವಾಗಿ ಕೆಲಸ ಮಾಡುತ್ತಿದ್ದಾರೆ'

ಸಂತ ಪೇತ್ರರ ಮಹಾದೇವಾಲಯದಲ್ಲಿ ವಿಶ್ವಗುರುಗಳು ನೇಮಿಸಿದ ಮೂವತ್ತೆರಡು ಉಪಯಾಜಕರುಗಳಲ್ಲಿ ಒಬ್ಬರಾದ ಆಸ್ಟ್ರೇಲಿಯಾದ ಧರ್ಮಗುರು ಜಾನ್ ವೆಸ್ಪಾರವರು ರೋಮ್‌ನೊಂದಿಗೆ ವಿಶೇಷ ಸಂಬಂಧ ಹೊಂದಿರುವ ತಮ್ಮ ದೈವಕರೆಯ ಪ್ರಯಾಣವನ್ನು ಹಂಚಿಕೊಳ್ಳುತ್ತಾರೆ.

ಕೀಲ್ಸ್ ಗುಸ್ಸಿ

ಜೂನ್ 27ರಂದು ಪವಿತ್ರ ಹೃದಯದ ಹಬ್ಬದಂದು ಬೆಳಿಗ್ಗೆ, ಅಮೆರಿಕದಿಂದ ಓಷಿಯಾನಿಯಾದವರೆಗಿನ ವಿವಿಧ ದೇಶಗಳು ಮತ್ತು ಪ್ರದೇಶಗಳನ್ನು ಪ್ರತಿನಿಧಿಸುವ ವಿಶ್ವದಾದ್ಯಂತದ ಮೂವತ್ತೆರಡು ಉಪಯಾಜಕರುಗಳನ್ನು ಸಂತ ಪೇತ್ರರ ಮಹಾದೇವಾಲಯದಲ್ಲಿ ವಿಶ್ವಗುರು ಹದಿನಾಲ್ಕನೇ ಲಿಯೋರವರು ಯಾಜಕತ್ವ ಜೀವನಕ್ಕೆ ನೇಮಿಸಿದರು.

ಆಸ್ಟ್ರೇಲಿಯಾದ ಮೆಲ್ಬೋರ್ನ್‌ನ ಒಬ್ಬ ಉಪಯಾಜಕ, ಈ ತಿಂಗಳ ಆರಂಭದಲ್ಲಿ ವಿಶ್ವಗುರುಗಳ ಮಹಾದೇವಾಲಯದಲ್ಲಿ ಯಾಜಕದೀಕ್ಷೆ ಪಡೆಯಲು ಆಯ್ಕೆಯಾಗಿದ್ದಾರೆಂದು ತಿಳಿದುಕೊಂಡರು. ಯಾಜಕತ್ವ ಜೀವನದ ಸಿದ್ಧತೆಗೆ ಕೆಲವೇ ವಾರಗಳು ಬಾಕಿ ಇರುವಾಗ, ಉಪಯಾಜಕ ಜಾನ್ ವೆಸ್ಪಾರವರು ಕುಟುಂಬ ಮತ್ತು ಸ್ನೇಹಿತರನ್ನು ಆಹ್ವಾನಿಸಿ ನಿತ್ಯಜೀವದ ನಗರಕ್ಕೆ ಕೊನೆಯ ನಿಮಿಷದ ವಿಮಾನ ಟಿಕೆಟ್ ಬುಕ್ ಮಾಡಿದರು.

ಆಸ್ಟ್ರೇಲಿಯಾವನ್ನು ಪ್ರತಿನಿಧಿಸಲು ಆಯ್ಕೆ ಮಾಡಲಾಗಿದೆ
ಈ ವರ್ಷದ ಆರಂಭದಲ್ಲಿ, ವೆಸ್ಪಾ ಮೆಲ್ಬೋರ್ನ್‌ನ ಕಾರ್ಪಸ್ ಕ್ರಿಸ್ಟಿ ಕಾಲೇಜಿನಲ್ಲಿ ಓದುತ್ತಿದ್ದರು ಮತ್ತು ಗುರುವಿದ್ಯಾಮಂದಿರದ ಗುರುಗಳಲ್ಲಿ ಒಬ್ಬರು ಯಾಜಕದೀಕ್ಷೆಗೆ ತಯಾರಿ ನಡೆಸುತ್ತಿರುವ ಎಲ್ಲಾ ಉಪಯಾಜಕರುಗಳನ್ನು ಸಂತ ಪೇತ್ರರ ಮಹಾದೇವಾಲಯದಲ್ಲಿ ಯಾಜಕದೀಕ್ಷೆ ಪಡೆಯಲು ತಮ್ಮ ಹೆಸರುಗಳನ್ನು ಮುಂದಿಡುವ ಬಗ್ಗೆ ಪ್ರಾರ್ಥಿಸಲು ಆಹ್ವಾನಿಸಿದರು.

ವೆಸ್ಪಾರವರು ಈ ಆಹ್ವಾನವನ್ನು ಗಂಭೀರವಾಗಿ ಪರಿಗಣಿಸಿತು. "ವಾರಾಂತ್ಯದಲ್ಲಿ, ನಾನು ಅದರ ಬಗ್ಗೆ ವಿವೇಚಿಸಿ ಪ್ರಾರ್ಥಿಸಿದೆ" ಎಂದು ಅವರು ವಿವರಿಸಿದರು, "ಎಲ್ಲಾ ಪುರುಷರು ಒಟ್ಟುಗೂಡಿ ಯಾಜಕದೀಕ್ಷೆ ಪಡೆಯಲು ನಮ್ಮ ಪ್ರಾಣವನ್ನೇ ಅರ್ಪಿಸುವ ಬಗ್ಗೆ" ಅವರು ಯೋಚಿಸಿದರು.

ಸ್ವಲ್ಪ ಹೊತ್ತು ಪ್ರಾರ್ಥನೆ ಮಾಡಿದ ನಂತರ, ಅವರು ತನ್ನ ಪ್ರಕ್ರಿಯೆಯನ್ನು ಪ್ರಾರಂಭಿಸಲು ನಿರ್ಧರಿಸಿದರು. ತಮ್ಮ ಎಲ್ಲಾ ದಾಖಲೆಗಳನ್ನು ಕ್ರಮವಾಗಿ ಇಟ್ಟುಕೊಂಡು, ವೆಸ್ಪಾ ತಮ್ಮ ಹೆಸರನ್ನು ಮೆಲ್ಬೋರ್ನ್‌ನ ಮಹಾಧರ್ಮಾಧ್ಯಕ್ಷರಾದ ಪೀಟರ್ ಕೊಮೆನ್ಸೋಲಿರವರಿಗೆ ಸಲ್ಲಿಸಿದರು. "ಕೆಲವು ವಾರಗಳ ಹಿಂದೆ, ಜೂನ್ 3ರಂದು, ಡಿಕ್ಯಾಸ್ಟರಿ ಆಫ್ ಇವಾಂಜೆಲೈಸೇಶನ್‌ನಿಂದ ನನಗೆ ಒಂದು ಇಮೇಲ್ ಬಂದಿತು, ಅದು ನನ್ನನ್ನು ಆಸ್ಟ್ರೇಲಿಯಾವನ್ನು ಪ್ರತಿನಿಧಿಸಲು ಆಯ್ಕೆ ಮಾಡಲಾಗಿದೆ ಎಂದು ಹೇಳಿದೆ" ಎಂದು ಅವರು ವಿವರಿಸಿದರು.

ಆಯ್ಕೆಯಾಗಿರುವುದು ನಿಜಕ್ಕೂ ಆಶೀರ್ವಾದ ಮತ್ತು ಗೌರವವೆಂದು ಎಂದು ವೆಸ್ಪಾರವರು ವಿವರಿಸಿದರು ಮತ್ತು "ದೇವರ ಕೈ ನಿರತವಾಗಿ ಕೆಲಸದಲ್ಲಿದೆ ಎಂದು ನನಗೆ ತಿಳಿದಿದೆ" ಎಂದು ವಿವರಿಸಿದರು.
 

27 ಜೂನ್ 2025, 19:46