'ಹರ್ಷಭರಿತ ಯಾಜಕರು': ದೈವಕರೆ ಸೇವಾಕಾರ್ಯದ ನಾಯಕರನ್ನು ಭೇಟಿ ಮಾಡಲಿರುವ ವಿಶ್ವಗುರು
ವ್ಯಾಟಿಕನ್ ಸುದ್ಧಿ
ಗುರುವಿದ್ಯಾಮಂದಿರದ ವಿಧ್ಯಾರ್ಥಿಗಳು ಮತ್ತು ಯಾಜಕರ ಜ್ಯೂಬಿಲಿಯನ್ನು ಆಚರಿಸುತ್ತಾ, ಯಾಜಕ ವರ್ಗದ ಡಿಕಾಸ್ಟರಿಯು 'ಹರ್ಷಭರಿತ ಯಾಜಕರು' - ನಾನು ನಿಮ್ಮನ್ನು ಸ್ನೇಹಿತರು ಎಂದು ಕರೆದಿದ್ದೇನೆ (ಯೋವಾನ್ನ 15:15) ಎಂಬ ಶೀರ್ಷಿಕೆಯ ಅಂತರರಾಷ್ಟ್ರೀಯ ಸಭೆಯನ್ನು ಪ್ರಚಾರ ಮಾಡುತ್ತಿದೆ.
ವಿಶ್ವಗುರು ಹದಿನಾಲ್ಕನೇ ಲಿಯೋರವರು ಭಾಗವಹಿಸುವ ಈ ಕಾರ್ಯಕ್ರಮವು ದೈವಕರೆಯ ಸೇವಾಕಾರ್ಯದಲ್ಲಿ ಮತ್ತು ಗುರುವಿದ್ಯಾಮಂದಿರದ ವಿಧ್ಯಾರ್ಥಿಗಳು ರಚನೆಯಲ್ಲಿ ತೊಡಗಿರುವ ಎಲ್ಲರಿಗೂ ಸಮರ್ಪಿತವಾಗಿದೆ. ಇದು ಜೂನ್ 26, 2025 ರಂದು ಗುರುವಾರ ಮಧ್ಯಾಹ್ನ 3:00ರಿಂದ ಸಂಜೆ 6:00ರವರೆಗೆ ವ್ಯಾಟಿಕನ್ ಬಳಿಯಿರುವ ಆಡಿಟೋರಿಯಂ ಕಾನ್ಸಿಲಿಯಾಜಿಯೋನ್‌ನಲ್ಲಿ ನಡೆಯಲಿದೆ.
"ನಾನು ನಿಮ್ಮನ್ನು ಸ್ನೇಹಿತರೆಂದು ಕರೆದಿದ್ದೇನೆ" (ಯೋವಾನ್ನ 15:15) ಎಂಬ ವಾಕ್ಯವನ್ನು ಸಂತ ಯೋವಾನ್ನರ ಶುಭಸಂದೇಶದಿಂದ ತೆಗೆದುಕೊಳ್ಳಲಾಗಿದೆ. ಇದು ಯಾಜಕರ ದೈವಕರೆಯ ಮುಖ್ಯತ್ವವನ್ನು ಒತ್ತಿಹೇಳುತ್ತದೆ: ಒಳ್ಳೆಯ ಕುರುಬರಾದ ಕ್ರಿಸ್ತರೊಂದಿಗಿನ ಸ್ನೇಹ ಮತ್ತು ದೇವರ ಜನರಿಗೆ ಸಂತೋಷದಾಯಕ ಸೇವೆಯಾಗಿದೆ. ಇದು ಗುರುವಿನ ಆಹ್ವಾನವನ್ನು ಕಂಡುಕೊಳ್ಳಲು ಮತ್ತು ಅವರ ಚಿತ್ತವನ್ನು ಪೂರೈಸಲು ಒಂದು ಕರೆಯಾಗಿದೆ, ಇದು ಎಲ್ಲಕ್ಕಿಂತ ಮಿಗಿಲಾದ ಸಂತೋಷದ ಕರೆಯಾಗಿದೆ.
ಪ್ರಾರ್ಥನೆ, ಹಂಚಿಕೆ ಮತ್ತು ಸಾಕ್ಷಿ
ಈ ಸಭೆಯು ಪ್ರಾರ್ಥನೆಯ ಕ್ಷಣ ಮತ್ತು ಯಾಜಕ ವರ್ಗದ ಡಿಕ್ಯಾಸ್ಟರಿಯ ಪ್ರಿಫೆಕ್ಟ್ ಕಾರ್ಡಿನಲ್ ಲಜಾರೊ ಯು ಹೆಯುಂಗ್-ಸಿಕ್ ರವರ ಸ್ವಾಗತ ಭಾಷಣದೊಂದಿಗೆ ಪ್ರಾರಂಭವಾಗುತ್ತದೆ. ಅವರು ಭರವಸೆಯ ಜೂಬಿಲಿ ವರ್ಷದೊಳಗೆ ಈ ಕಾರ್ಯಕ್ರಮದ ಮಹತ್ವವನ್ನು ಒತ್ತಿ ಹೇಳುವ ಮೂಲಕ ಅಧಿವೇಶನವನ್ನು ಪರಿಚಯಿಸಿದರು. ಮೊದಲ ಅಧಿವೇಶನವು ವಿಶ್ವದಾದ್ಯಂತದ ದೈವಕರೆಯ ಸೇವಾಕಾರ್ಯದಲ್ಲಿ ಐದು ಮಹತ್ವದ ಉದಾಹರಣೆಗಳನ್ನು ಒಳಗೊಂಡಿರುತ್ತದೆ, ಇದು ಅತ್ಯುತ್ತಮ ಅಭ್ಯಾಸಗಳ ಜಾಗತಿಕ ನೋಟವನ್ನು ನೀಡಲಿದೆ.
ವಿಶ್ವಗುರುಗಳ ಭಾಷಣ
“ಹರ್ಷಭರಿತ ಯಾಜಕರು” ಕಾರ್ಯಕ್ರಮದ ಕೇಂದ್ರಬಿಂದು ವಿಶ್ವಗುರು ಹದಿನಾಲ್ಕನೇ ಲಿಯೋರವರ ಭಾಷಣವಾಗಿದ್ದು, ಇಂದಿನ ಯಾಜಕ ವರ್ಗದ ದೈವಕರೆಯ ಸೇವಾಕಾರ್ಯದ ಅರ್ಥವನ್ನು ಆಲಿಸುವ ಮತ್ತು ಧ್ಯಾನಿಸುವ ಸಮಯವನ್ನು ನೀಡುತ್ತದೆ. ದೈವಕರೆಯ ಸೇವಾಕಾರ್ಯದ ಸೌಂದರ್ಯ ಮತ್ತು ಸೇವೆಯ ದೈನಂದಿನ ಜೀವನದಲ್ಲಿ ಪವಿತ್ರತೆ ಮತ್ತು ಸಹಭಾಗಿತ್ವದ ಕರೆಯಾಗಿದೆ.
ವಿಶ್ವಗುರುವಿನ ಭಾಷಣದ ನಂತರ ಪ್ರಶ್ನೆಗಳು, ಸಾಕ್ಷ್ಯಗಳು ಮತ್ತು ಹಂಚಿಕೊಂಡ ಅನುಭವಗಳನ್ನು ಒಳಗೊಂಡಂತೆ ಮುಕ್ತ ಸಂವಾದಕ್ಕೆ ಅವಕಾಶವಿರುತ್ತದೆ. ಸಭೆಯ ಎರಡನೇ ಭಾಗವು ಆರಂಭಿಕ ಗುರುವಿದ್ಯಾಮಂದಿರದ ವಿಧ್ಯಾರ್ಥಿಗಳ ರಚನೆಯಲ್ಲಿ ಐದು ಅನುಕರಣೀಯ ಮಾದರಿಗಳ ಮೇಲೆ ಕೇಂದ್ರೀಕರಿಸುವ ವಿಷಯಗಳ ಬಗ್ಗೆ ಚರ್ಚಿಸಲಾಯಿತು.
ಸಂತ ಪೇತ್ರರ ಮಹಾದೇವಾಲಯದಲ್ಲಿ ಜಾಗರಣೆ
ಈ ಕಾರ್ಯಕ್ರಮವು ಕೇವಲ ಮಾಹಿತಿ ನೀಡುವುದು ಮತ್ತು ಪ್ರೇರೇಪಿಸುವುದು ಮಾತ್ರವಲ್ಲದೆ, ಯಾಜಕರು, ರಚನಾಕಾರರು, ಧಾರ್ಮಿಕ ಗುರುಗಳು ಮತ್ತು ಭಗಿನಿಯರು ಹಾಗೂ ಆರಂಭಿಕ ರಚನೆ ಮತ್ತು ದೈವಕರೆಯ ಸೇವಾಕಾರ್ಯದಲ್ಲಿ ತೊಡಗಿರುವ ಶ್ರೀ ಸಾಮಾನ್ಯ ಜನರಲ್ಲಿ ಭ್ರಾತೃತ್ವವನ್ನು ಬೆಳೆಸುವ ಗುರಿಯನ್ನು ಹೊಂದಿದೆ.
ಈ ಕಾರ್ಯಕ್ರಮವು ಸಂಜೆ 6:00 ಗಂಟೆಗೆ ಮುಕ್ತಾಯಗೊಳ್ಳಲಿದ್ದು, ಭಾಗವಹಿಸುವವರು ಸಂತ ಪೇತ್ರರ ಮಹಾದೇವಾಲಯದಲ್ಲಿ ಜಾಗರಣೆ ನಡೆಯುವ ದೈವಕರೆಯ ಸೇವಾಕಾರ್ಯದ ಜಾಗರಣೆಯಲ್ಲಿ ಸೇರಬಹುದು. ಭಾಗವಹಿಸುವಿಕೆಯು ಉಚಿತವಾಗಿದೆ, ಆದರೆ ಲಭ್ಯವಿರುವ ಸ್ಥಳಗಳು ತುಂಬುವವರೆಗೆ ಡಿಕ್ಯಾಸ್ಟರಿ ಫಾರ್ ದಿ ಕ್ಲರ್ಜಿಯ ಅಧಿಕೃತ ವೆಬ್‌ಸೈಟ್: www.clerus.va ಮೂಲಕ ನೋಂದಣಿ ಅಗತ್ಯವಿದೆ.