ಇಥಿಯೋಪಿಯಾದ ನೂತನ ಪ್ರೇಷಿತ ರಾಯಭಾರಿಯಾರಿಗೆ ಅಡಿಸ್ ಅಬಾಬಾದಲ್ಲಿ ಆತ್ಮೀಯ ಸ್ವಾಗತ
ಬೆಜಾವಿಟ್ ಅಸೆಫಾ - ಅಡಿಸ್ ಅಬಾಬಾ
ದಿವಂಗತ ವಿಶ್ವಗುರು ಫ್ರಾನ್ಸಿಸ್ ರವರು ಏಪ್ರಿಲ್ 12, 2025 ರಂದು ಇಥಿಯೋಪಿಯಾಕ್ಕೆ ಮಹಾಧರ್ಮಾಧ್ಯಕ್ಷರಾದ ಬ್ರಿಯಾನ್ ನ್ಗೋಜಿ ಉಡೈಗ್ವೆ ರವರನ್ನು ಅವರ ಸಾವಿಗೆ ಕೆಲವೇ ದಿನಗಳ ಮೊದಲು, ನೂತನ ಪ್ರೇಷಿತ ರಾಯಭಾರಿಯಾರಿಯಾಗಿ ನೇಮಿಸಿದರು.
ಈ ಹೊಸ ನಿಯೋಜನೆಯ ತನಕ, ಮಹಾಧರ್ಮಾಧ್ಯಕ್ಷರಾದ ಉದಯ್ಗ್ವೆರವರು ಶ್ರೀಲಂಕಾಕ್ಕೆ ನೂತನ ಪ್ರೇಷಿತ ರಾಯಭಾರಿಯಾರಿಯಾಗಿ ಸೇವೆ ಸಲ್ಲಿಸಿದ್ದರು.
ಈ ವಾರ ಅವರನ್ನು ಅಡಿಸ್ ಅಬಾಬಾಗೆ ಇಥಿಯೋಪಿಯದ ಏರ್ಲೈನ್ಸ್‌ನಲ್ಲಿ ಮತ್ತು ನಂತರ ನೂತನ ಪ್ರೇಷಿತ ರಾಯಭಾರಿಯನ್ನು ಔಪಚಾರಿಕವಾಗಿ ಸ್ವಾಗತಿಸಲಾಯಿತು, ಅಲ್ಲಿ ಧರ್ಮಸಭೆಯ ಅಧಿಕಾರಿಗಳು, ಯಾಜಕರು, ರಾಜತಾಂತ್ರಿಕ ದಳದ ಸದಸ್ಯರು ಮತ್ತು ಭಕ್ತವಿಶ್ವಾಸಿಗಳು ನೂತನ ರಾಯಭಾರಿಯನ್ನು ಸ್ವಾಗತಿಸಲು ಮತ್ತು ಅವರ ಆಗಮನದ ಬಗ್ಗೆ ತಮ್ಮ ಸಂತೋಷವನ್ನು ವ್ಯಕ್ತಪಡಿಸಲು ಒಟ್ಟುಗೂಡಿದರು.
ನೈಜೀರಿಯಾದ ಓರ್ಲು ಕಥೋಲಿಕ ಧರ್ಮಕ್ಷೇತ್ರದ ಸ್ಥಳೀಯರಾದ ಮಹಾಧರ್ಮಾಧ್ಯಕ್ಷರಾದ ಉದೈಗ್ವೆರವರು ಮೂರು ದಶಕಗಳಿಗೂ ಹೆಚ್ಚು ಕಾಲ ಪವಿತ್ರ ಪೂಜ್ಯವಿಶ್ವಗುರುಗಳ ರಾಜತಾಂತ್ರಿಕ ಸೇವೆಯಲ್ಲಿ ನಿಪುಣ ವೃತ್ತಿಜೀವನವನ್ನು ಹೊಂದಿದ್ದಾರೆ. ಮೇ 2, 1992 ರಂದು ಯಾಜಕದೀಕ್ಷೆ ಪಡೆದರು, ಜುಲೈ 1, 1994 ರಂದು ಪವಿತ್ರ ಪೀಠಾಧಿಕಾರಿಯ ರಾಜತಾಂತ್ರಿಕ ಸೇವೆಗೆ ಪ್ರವೇಶಿಸುವ ಮೊದಲು ರೋಮ್‌ನ ಪಾಂಟಿಫಿಕಲ್ ಎಕ್ಲೆಸಿಯಾಸ್ಟಿಕಲ್ ಅಕಾಡೆಮಿಯಲ್ಲಿ ತಮ್ಮ ಅಧ್ಯಯನವನ್ನು ಮುಂದುವರೆಸಿದರು. ಅವರ ಆರಂಭಿಕ ರಾಜತಾಂತ್ರಿಕ ಕಾರ್ಯಯೋಜನೆಗಳಲ್ಲಿ ಜಿಂಬಾಬ್ವೆ, ಐವರಿ ಕೋಸ್ಟ್, ಹೈಟಿ, ಬಲ್ಗೇರಿಯಾ, ಥೈಲ್ಯಾಂಡ್ ಮತ್ತು ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಸೇವೆ ಸಲ್ಲಿಸಿದರು.
ಅವರನ್ನು ಫೆಬ್ರವರಿ 22, 2013 ರಂದು ವಿಶ್ವಗುರು ಹದಿನಾರನೇ ಬೆನೆಡಿಕ್ಟ್ರವರು ಸುಯೆಲ್ಲಿಯ ಟೈಟ್ಯುಲರ್ ನ ಮಹಾಧರ್ಮಾಧ್ಯಕ್ಷರಾಗಿ ಮತ್ತು ಪ್ರೇಷಿತ ರಾಯಭಾರಿಯಾಗಿ ನೇಮಿಸಿದರು ಮತ್ತು ಏಪ್ರಿಲ್ 27, 2013 ರಂದು ಕಾರ್ಡಿನಲ್ ಟಾರ್ಸಿಸಿಯೊ ಬರ್ಟೋನ್ ರವರಿಂದ ಧರ್ಮಾಧ್ಯಕ್ಷರಾಗಿ ನೇಮಕಗೊಂಡರು. ನಂತರ 2013 ರಲ್ಲಿ, ಅವರನ್ನು ಬೆನಿನ್‌ಗೆ ಮತ್ತು ನಂತರ ಟೋಗೋಗೆ ಪ್ರೇಷಿತ ರಾಯಭಾರಿಯಾಗಿ ನೇಮಿಸಲಾಯಿತು. ನಂತರ ಅವರು ಜೂನ್ 13, 2020ರಿಂದ ಇತ್ತೀಚಿನ ಮರು ನಿಯೋಜನೆಯವರೆಗೆ ಶ್ರೀಲಂಕಾದಲ್ಲಿ ಸೇವೆ ಸಲ್ಲಿಸಿದರು.
ಸ್ವಾಗತ ಸಮಾರಂಭದ ಕಾರ್ಯಕ್ರಮದಲ್ಲಿ, ರಾಯಭಾರಿ ಕಾರ್ಯದರ್ಶಿ ಶ್ರೇಷ್ಠಗುರು ಮಾಸ್ಸಿಮೊ ಕ್ಯಾಟೆರಿನ್ ರವರು ಮಹಾಧರ್ಮಾಧ್ಯಕ್ಷರಾದ ಉದೈಗ್ವೆರವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು ಮತ್ತು ಇಥಿಯೋಪಿಯಾಕ್ಕೆ ಅವರನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದರು. ಅವರು ನೇಮಕಾತಿಯ ವಿಶೇಷ ಮಹತ್ವವನ್ನು ನೆನಪಿಸಿಕೊಂಡರು, ದಿವಂಗತ ವಿಶ್ವಗುರು ಫ್ರಾನ್ಸಿಸ್ ರವರು ತಮ್ಮ ನಿಧನಕ್ಕೆ ಕೇವಲ ಒಂಬತ್ತು ದಿನಗಳ ಮೊದಲು ಇಥಿಯೋಪಿಯಾಕ್ಕೆ ಮಹಾಧರ್ಮಾಧ್ಯಕ್ಷರು ಅವರನ್ನು ಕಳುಹಿಸಿದ್ದರು - ಇದು ಇಥಿಯೋಪಿಯದ ಧರ್ಮಸಭೆಗೆ ಪೂಜ್ಯ ತಂದೆಯ ಶಾಶ್ವತ ಗಮನವನ್ನು ಪ್ರತಿಬಿಂಬಿಸುವ ಒಂದು ಸೂಚಕವಾಗಿದೆ.