ಸಂತರಾದ ಪೇತ್ರ ಮತ್ತು ಪೌಲರ ಹಬ್ಬಕ್ಕಾಗಿ ಸನಾತನ ಧರ್ಮಸಭೆಯ ನಿಯೋಗ ರೋಮ್‌ಗೆ ಭೇಟಿ ನೀಡಿದೆ
ದೆಬೊರಾ ಕ್ಯಾಸ್ಟೆಲ್ಲಾನೊ ಲುಬೊವ್
ಕಾನ್ಸ್ಟಾಂಟಿನೋಪಲ್‌ನ ಧರ್ಮಾಧ್ಯಕ್ಷರುಗಳ ಪಿತೃಪ್ರಧಾನದ ಅಧಿಕೃತ ನಿಯೋಗವು ಜೂನ್ 27-29, 2025ರವರೆಗೆ ರೋಮ್‌ಗೆ ಭೇಟಿ ನೀಡಲಿದೆ ಎಂದು ಪವಿತ್ರ ಪೀಠಾಧಿಕಾರಿಯ ಪತ್ರಿಕಾ ಕಚೇರಿ ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದೆ.
ಈ ಭೇಟಿಯು ಪಾಲಕ ಪೋಷಕ ಸಂತರ ಹಬ್ಬಗಳಿಗೆ ನಿಯೋಗಗಳ ಸಾಂಪ್ರದಾಯಿಕ ವಿನಿಮಯದ ಭಾಗವಾಗಿದೆ: ಜೂನ್ 29 ರಂದು ರೋಮ್‌ನಲ್ಲಿ ಪವಿತ್ರ ಪ್ರೇಷಿತರಾದ ಪೇತ್ರ ಮತ್ತು ಪೌಲರ ಹಬ್ಬದ ಆಚರಣೆಗಾಗಿ ಮತ್ತು ನವೆಂಬರ್ 30 ರಂದು ಇಸ್ತಾನ್‌ಬುಲ್‌ನಲ್ಲಿ ಪ್ರೇಷಿತರಾದ ಸಂತ ಆಂಡ್ರ್ಯೂರವರ ಹಬ್ಬದ ಆಚರಣೆಯ ಸಿದ್ಧತೆಯ ಭೇಟಿಯಾಗಿದೆ.
ಕಥೋಲಿಕ ಧರ್ಮಸಭೆಯೊಂದಿಗಿನ ಸಂಬಂಧಗಳಿಗಾಗಿ ಧರ್ಮಾಧ್ಯಕ್ಷರುಗಳ ಪಿತೃಪ್ರಧಾನ ಸಿನೊಡಲ್ ಆಯೋಗದ ಅಧ್ಯಕ್ಷರಾದ ಚಾಲ್ಸೆಡನ್‌ನ ಮಹಾನಗರದ ಎಮ್ಯಾನುಯೆಲ್ ರವರು ಸನಾತನ ಧರ್ಮಸಭೆಯ ನಿಯೋಗದ ನೇತೃತ್ವ ವಹಿಸಿದ್ದಾರೆ. ಈ ಆಚರಣೆಗೆ ಮಹಾನಗರದ ಧರ್ಮಗುರುಗಳು ಪಿತೃಪ್ರಧಾನ ಬಾರ್ತಲೋಮೆವ್ ರವರ ರಾಯಭಾರಿಯಾಗಿದ್ದು, ಅವರೊಂದಿಗೆ ಪೂಜ್ಯ ಗುರುಗಳಾದ ಏಟಿಯಸ್ ಮತ್ತು ಐರೋನಿಮೋಸ್ ರವರೂ ಕೂಡ ಇರುತ್ತಾರೆ.
ಜೂನ್ 29 ರ ಭಾನುವಾರದಂದು ಸಂತ ಪೇತ್ರ ಮತ್ತು ಪೌಲ್ ರವರ ಹಬ್ಬವನ್ನು ಆಚರಿಸಲು ವಿಶ್ವಗುರು ಹದಿನಾಲ್ಕನೇ ಲಿಯೋರವರ ಅಧ್ಯಕ್ಷತೆಯಲ್ಲಿ ನಡೆಯುವ ದಿವ್ಯಬಲಿಪೂಜೆಯಲ್ಲಿ ನಿಯೋಗವು ಭಾಗವಹಿಸಲಿದ್ದು, ಜೂನ್ 28 ರ ಶನಿವಾರ ವಿಶ್ವಗುರುವನ್ನು ಭೇಟಿಯಾಗಲಿದೆ.