MAP

FRANCE-RELIGION-BEATIFICATION-CEREMONY FRANCE-RELIGION-BEATIFICATION-CEREMONY  (AFP or licensors)

ಪುನೀತ ಫ್ಲೋರಿಬರ್ಟ್ ಬ್ವಾನಾ ಚುಯಿ: ಒಳಿತಿಗೆ ಮತ್ತು ಶಾಂತಿಗೆ ಸಾಕ್ಷಿ

ಫ್ಲೋರಿಬರ್ಟ್ ಬ್ವಾನಾ ಚುಯಿರವರನ್ನು ರೋಮ್‌ನಲ್ಲಿ ಕಾರ್ಡಿನಲ್ ಮಾರ್ಸೆಲ್ಲೊ ಸೆಮೆರಾರೊರವರು ಪುನೀತರ ಪದವಿಗೇರಿಸಿದ್ದಾರೆ. 26 ವರ್ಷದ ಕಾಂಗೋಲೀಸ್ ಕಸ್ಟಮ್ಸ್ ಅಧಿಕಾರಿ ಮತ್ತು ಸಂತ ಎಜಿಡಿಯೊ ಸಮುದಾಯದ ಸದಸ್ಯ ಫ್ಲೋರಿಬರ್ಟ್, 2007 ರಲ್ಲಿ ಹಾಳಾದ ಆಹಾರವನ್ನು ಸೇವಿಸಲು ನಿರಾಕರಿಸಿದ್ದಕ್ಕಾಗಿ ಮತ್ತು ಭ್ರಷ್ಟಾಚಾರಕ್ಕಿಂತ ಸಮಗ್ರತೆಯನ್ನು ಆರಿಸಿಕೊಂಡಿದ್ದಕ್ಕಾಗಿ ಹುತಾತ್ಮರಾದರು.

ವ್ಯಾಟಿಕನ್ ಸುದ್ದಿ

ಭಾನುವಾರ, 15 ಜೂನ್ 2025 ರಂದು, ರೋಮ್‌ನಲ್ಲಿರುವ ಗೋಡೆಗಳ ಹೊರಗಿನ ಸಂತ ಪೌಲರ ಮಹಾದೇವಾಲಯದಲ್ಲಿ ಫ್ಲೋರಿಬರ್ಟ್ ಬ್ವಾನಾ ಚುಯಿರವರ ಪುನೀತರನ್ನಾಗಿಸುವ ಅಧ್ಯಕ್ಷತೆಯನ್ನು ಡಿಕಾಸ್ಟ್ರಿಯ ಪ್ರಿಫೆಕ್ಟ್ ಕಾರ್ಡಿನಲ್ ಮಾರ್ಸೆಲ್ಲೊ ಸೆಮೆರಾರೊರವರು ವಹಿಸಿದ್ದರು. ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದ ಗೋಮಾದಲ್ಲಿ ಕಸ್ಟಮ್ಸ್ ಅಧಿಕಾರಿ ಮತ್ತು ಸಂತ ಎಜಿಡಿಯೊ ಸಮುದಾಯದ ಸದಸ್ಯರಾಗಿದ್ದ ಫ್ಲೋರಿಬರ್ಟ್ ರವರನ್ನು 2007ರಲ್ಲಿ ಬಡವರ ಜೀವಗಳನ್ನು ರಕ್ಷಿಸಲು ತೆಗೆದುಕೊಳ್ಳಲಾದ ನಿರ್ಧಾರದಿಂದ ಹಾಳಾದ ಆಹಾರವನ್ನು ಗಡಿ ದಾಟಿಸಿಲು ನಿರಾಕರಿಸಿದ್ದಕ್ಕಾಗಿ ಕೊಲ್ಲಲಾಯಿತು.

ಫ್ಲೋರಿಬರ್ಟ್ ರವರು ಒಬ್ಬ ಭರವಸೆಯ ಶಿಕ್ಷಕ, "ಅವರು ಒಳಿತಿನಿಂದ ಕೆಟ್ಟದ್ದನ್ನು ಜಯಿಸಲು ನಮಗೆ ಕಲಿಸುತ್ತಾರೆ" ಎಂದು ಕಾರ್ಡಿನಲ್ ಸೆಮೆರಾರೊರವರು ತಮ್ಮ ಪ್ರಬೋಧನೆಯ ಸಮಯದಲ್ಲಿ ಹೇಳಿದರು.

ಸ್ತುತಿಗೀತೆ ಮತ್ತು ಹರ್ಷದಿಂದ ಕೂಡಿದ ದೈವಾರಾಧನಾ ವಿಧಿಯು ರೋಮ್‌ನಲ್ಲಿರುವ ಕಾಂಗೋಲೀಸ್ ಸಮುದಾಯ ಮತ್ತು ಆಫ್ರಿಕಾದಾದ್ಯಂತದ ಸಂತ ಎಜಿಡಿಯೊ ಸದಸ್ಯರಿಂದ ಪ್ರೇರೇಪಿಸಲ್ಪಟ್ಟಿತು. ಈ ದೈವಾರಾಧನಾ ವಿಧಿಯಲ್ಲಿ ಗೋಮಾದ ಧರ್ಮಾಧ್ಯಕ್ಷರಾದ ವಿಲ್ಲಿ ನ್ಗುಂಬಿ ಮತ್ತು ಕಿನ್ಶಾಸಾದ ಕಾರ್ಡಿನಲ್ ಫ್ರಿಡೋಲಿನ್ ಅಂಬೊಂಗೊರವರೂ ಸಹ ಸೇರಿದ್ದರು.

ವಿಶ್ವಗುರುವಿನ ಪ್ರೇಷಿತ ಪತ್ರ
ದೈವಾರಾಧನಾ ವಿಧಿ ಆಚರಣೆಯ ಸಮಯದಲ್ಲಿ, ವಿಶ್ವಗುರು ಹದಿನಾಲ್ಕನೇ ಲಿಯೋರವರ ಪ್ರೇಷಿತ ಪತ್ರವನ್ನು ಓದಲಾಯಿತು, ಅದರಲ್ಲಿ ಅವರು ಯುವ ಕಾಂಗೋಲೀಸ್ ನ್ನು "ತನ್ನ ಸ್ವಂತ ಜೀವನಕ್ಕಿಂತ ಇತರರ ಮೇಲಿನ ಪ್ರೀತಿಯನ್ನು ಆದ್ಯತೆ ನೀಡಿದ ಒಬ್ಬ ಸಾಮಾನ್ಯ ಹುತಾತ್ಮ" ಎಂದು ಗುರುತಿಸಿದರು, ಹೀಗಾಗಿ ಫ್ಲೋರಿಬರ್ಟ್ ರವರನ್ನು ಅಧಿಕೃತವಾಗಿ ಪುನೀತರೆಂದು ಘೋಷಿಸಿದರು. ಅವರ ಸ್ಮರಣೆದಯ ದಿನವನ್ನು ಒಂದು ಹಬ್ಬದ ದಿನವಾಗಿ ವಾರ್ಷಿಕವಾಗಿ ಜುಲೈ 8 ರಂದು, ಅವರ ಹುತಾತ್ಮತೆಯ ದಿನವಾಗಿ ಆಚರಿಸಲಾಗುತ್ತದೆ.

ಫ್ಲೋರಿಬರ್ಟ್ ರವರ ಅವಶೇಷ, ಆತನ ಅಪಹರಣ ಮತ್ತು ಹುತಾತ್ಮತೆಯ ಸಮಯದಲ್ಲಿ ಧರಿಸಿದ್ದ ಜಾಕೆಟ್, ಆತನ ಸಹೋದರರು ಉಡುಗೊರೆಯಾಗಿ ನೀಡಿದರು. ಆತನ ತಾಯಿ ಗೆರ್ಟ್ರೂಡ್ ರವರೂ ಕೂಡ ಈ ದೈವಾರಾಧನಾ ವಿಧಿಯ ಆಚರಣೆಯಲ್ಲಿ ಉಪಸ್ಥಿತರಿದ್ದರು.

ಫ್ಲೋರಿಬರ್ಟ್ ರವರ ನೈತಿಕ ಆಯ್ಕೆಯ ಕ್ಷಣವನ್ನು ನೆನಪಿಸಿಕೊಳ್ಳುತ್ತಾ, ಕಾರ್ಡಿನಲ್ ಸೆಮೆರಾರೊರವರು ಆತನನ ಮಾತುಗಳನ್ನು ಉಲ್ಲೇಖಿಸಿದರು, ಅದೇನೆಂದರೆ "ಒಬ್ಬ ಕ್ರೈಸ್ತನಾಗಿ, ನಾನು ಇತರರ ಜೀವಗಳನ್ನು ತ್ಯಾಗ ಮಾಡಲು ಒಪ್ಪುವುದಿಲ್ಲ. ಈ ಹಣವನ್ನು ಸ್ವೀಕರಿಸುವುದಕ್ಕಿಂತ ನನ್ನ ಜೀವ ತ್ಯಾಗ ಮಾಡಿ ಸಾಯುವುದು ಉತ್ತಮ" ಎಂದು ಹೇಳಿದರು.

ಭ್ರಷ್ಟಾಚಾರದ ದುಷ್ಟತನದ ವಿರುದ್ಧ ಸಾಕ್ಷಿ
"ವಿಶ್ವಾಸದ ದ್ವೇಷದಲ್ಲಿ" ಎಂದು ಗುರುತಿಸಲ್ಪಟ್ಟ ಅವರ ಹುತಾತ್ಮತೆಯು ಭ್ರಷ್ಟಾಚಾರದ ವಿರುದ್ಧವೂ ಸಾಕ್ಷಿಯಾಗಿತ್ತು, ಇದನ್ನು ವಿಶ್ವಗುರು ಫ್ರಾನ್ಸಿಸ್ ರವರು "ದುಷ್ಟತನದ ಜೌಗು ಪ್ರದೇಶ" ಎಂದು ಬಣ್ಣಿಸಿದ್ದಾರೆ. "ಫ್ಲೋರಿಬರ್ಟ್ ತನಗಾಗಿ ಬದುಕಲು ಆಯ್ಕೆ ಮಾಡಿಕೊಳ್ಳಲಿಲ್ಲ, ಬದಲಿಗೆ ಕ್ರಿಸ್ತರಿಗಾಗಿ ಬದುಕಲು ಆರಿಸಿಕೊಂಡನು, ತನ್ನ ರಕ್ತವನ್ನು ಕ್ರಿಸ್ತರಿಗಾಗಿ ಚೆಲ್ಲುವ ಹಂತದವರೆಗೆ ಕೆಟ್ಟದ್ದನ್ನು ವಿರೋಧಿಸಿದರು" ಎಂದು ಕಾರ್ಡಿನಲ್ ಸೆಮೆರಾರೊರವರು ನೆನಪಿಸಿಕೊಂಡರು.

ತನ್ನ ಆಧ್ಯಾತ್ಮಿಕ ಪ್ರಯಾಣದಲ್ಲಿ, ಫ್ಲೋರಿಬರ್ಟ್ ಸಂತ ಎಜಿಡಿಯೊ ಸಮುದಾಯದಲ್ಲಿ ಶಕ್ತಿಯನ್ನು ಕಂಡುಕೊಂಡರು, ಅಲ್ಲಿ ಅವರು ಬಡವರಿಗೆ, ವಿಶೇಷವಾಗಿ ಬೀದಿ ಮಕ್ಕಳಿಗೆ ಸೇವೆ ಸಲ್ಲಿಸಿದರು.

ಭಾನುವಾರದ ತ್ರಿಕಾಲ ಪ್ರಾರ್ಥನೆಯ ಸಮಯದಲ್ಲಿ ವಿಶ್ವಗುರು ಹದಿನಾಲ್ಕನೇ ಲಿಯೋರವರು, ಯುವ ಹುತಾತ್ಮರನ್ನು ಈ ಮಾತುಗಳೊಂದಿಗೆ ಹೊಗಳಿದರು: "ಅನ್ಯಾಯವನ್ನು ವಿರೋಧಿಸಿದ್ದಕ್ಕಾಗಿ ಮತ್ತು ಬಡವರನ್ನು ರಕ್ಷಿಸಿದ್ದಕ್ಕಾಗಿ ಅವರು 26 ನೇ ವಯಸ್ಸಿನಲ್ಲಿ ಕೊಲ್ಲಲ್ಪಟ್ಟರು. ಅವರ ಸಾಕ್ಷಿಯು ಕಾಂಗೋ ಮತ್ತು ಎಲ್ಲಾ ಆಫ್ರಿಕಾದ ಯುವಕರಿಗೆ ಭರವಸೆಯನ್ನು ತರಲಿ" ಎಂದು ಆಶಿಸಿದರು.
 

15 ಜೂನ್ 2025, 01:53