ಪೋಪ್ ಲಿಯೋ ಅವರಿಗೆ ಮನೆಯಲ್ಲಿ ಮಾಡಿದ ಉಣ್ಣೆಯ ಕರವಸ್ತ್ರವನ್ನು ಕಳುಹಿಸಿದ ಅಸ್ಟ್ರೇಲಿಯಾದ ಪ್ರಾಥಮಿಕ ಶಾಲಾ ಮಕ್ಕಳು
ವರದಿ: ವ್ಯಾಟಿಕನ್ ನ್ಯೂಸ್
ಪವಿತ್ರ ಪೀಠಕ್ಕೆ ಆಸ್ಟ್ರೇಲಿಯಾದ ರಾಯಭಾರಿಯಾಗಿರುವ ಕೀತ್ ಪಿಟ್ ಅವರು ಇಂದು ವ್ಯಾಟಿಕನ್ನಿನಲ್ಲಿ ತಮ್ಮ ರಾಜತಾಂತ್ರಿಕ ಪತ್ರಗಳನ್ನು ಸಲ್ಲಿಸಲು ಬಂದಿದ್ದರು. ಈ ವೇಳೆ ಅವರು ಅಸ್ಟ್ರೇಲಿಯಾದ ಕಥೋಲಿಕ ಪ್ರಾಥಮಿಕ ಶಾಲಾ ಮಕ್ಕಳು ಕಳುಹಿಸಿರುವ ಮನೆಯಲ್ಲಿ ನೇಯ್ದ ಉಣ್ಣೆಯ ಕರವಸ್ತ್ರವನ್ನು ಉಡುಗೊರೆಯಾಗಿ ನೀಡಿದ್ದಾರೆ.
ಇದು ಮಾತ್ರವಲ್ಲದೆ ಆಸ್ಟ್ರೇಲಿಯಾ ದೇಶದ ಬಿಸ್ಕೆಟ್'ಗಳು, ವೈನ್ ಸೇರಿದಂತೆ ವಿವಿಧ ರೀತಿಯ ಖಾಧ್ಯಗಳನ್ನು ನೂತನ ರಾಯಭಾರಿಗಳು ಪೋಪ್ ಹದಿನಾಲ್ಕನೇ ಲಿಯೋ ಅವರಿಗೆ ತಂದಿದ್ದು, ತಮ್ಮ ಭೇಟಿಯ ವೇಳೆ ಅದನ್ನು ಅವರಿಗೆ ನೀಡಿದ್ದಾರೆ.
ಪೋಪ್ ಹದಿನಾಲ್ಕನೇ ಲಿಯೋ ಅವರನ್ನು ಖಾಸಗಿಯಾಗಿ ಭೇಟಿ ಮಾಡಿ, ಕೀತ್ ಪಿಟ್ಟ್ ಅವರು ಮಾತುಕತೆ ನಡೆಸಿದರು ಹಾಗೂ ತಮ್ಮ ಕಾಗದ ಪತ್ರಗಳನ್ನು ನೀಡಿದರು. ತದ ನಂತರ ಮಾತನಾಡಿದ ಅವರು "ಪೋಪ್ ಲಿಯೋ ಅವರು ಬಹಳ ಪರಿಣಾಮಕಾರಿಯಾದ ವ್ಯಕ್ತಿಯಾಗಿದ್ದು, ಅವರ ಮಾತುಗಳು ಸೆಳೆಯುತ್ತವೆ" ಎಂದು ಹೇಳಿದ್ದಾರೆ. ನೂತನ ಪೋಪ್ ಅವರ ಆಯ್ಕೆಯನ್ನು ಆಸ್ಟ್ರೇಲಿಯಾದ ಜನತೆ ಬಹಳ ಸಕಾರಾತ್ಮಕವಾಗಿ ತೆಗೆದುಕೊಂಡಿದ್ದಾರೆ ಹಾಗೂ ಎಲ್ಲರೂ ಸಂತೋಷದಿಂದ ಇದ್ದಾರೆ" ಎಂದು ಕೀತ್ ಪಿಟ್ಟ್ ಅವರು ಈ ವೇಳೆ ಅವರಿಗೆ ಮಾಹಿತಿಯನ್ನು ನೀಡಿದ್ದಾರೆ.
ತಮ್ಮ ಜೊತೆಯಲ್ಲಿ ಪೋಪ್ ಹದಿನಾಲ್ಕನೇ ಲಿಯೋ ಅವರಿಗೆ ವಿವಿಧ ಖಾದ್ಯಗಳನ್ನು ಕೀತ್ ಪಿಟ್ಟ್ ಅವರು ಆಸ್ಟ್ರೇಲಿಯಾ ದೇಶದಿಂದ ತಂದಿದ್ದು, ಅದನ್ನು ಪೋಪರಿಗೆ ಉಡುಗೊರೆಯಾಗಿ ನೀಡಿದರು.