ಲಿಯೋನ್ ದೆ ಪೆರು: ಪೆರು ದೇಶದಲ್ಲಿ ಪೋಪರ ಸೇವಾಕಾರ್ಯದ ಕುರಿತ ವ್ಯಾಟಿಕನ್ ಮಾಧ್ಯಮದ ವ್ಯಕ್ತಿ ಚಿತ್ರಣ
ಅಖಲಿ ಧರ್ಮಸಭೆಯ ವಿಶ್ವಗುರುವಾಗಿ ಆಯ್ಕೆಯಾಗುವುದಕ್ಕೂ ಮುಂಚೆ ಕಾರ್ಡಿನಲ್ ರಾಬರ್ಟ್ ಫ್ರಾನ್ಸಿಸ್ ಪ್ರೆವೋಸ್ಟ್ ಅವರು ಪೆರು ದೇಶದಲ್ಲಿ ಸುವಾರ್ತಾ ಪ್ರಸಾರಕರಾಗಿ, ತದನಂತರ ಧರ್ಮಾಧ್ಯಕ್ಷರಾಗಿ ಅನೇಕ ದಶಕಗಳ ಕಾಲ ಸೇವೆಯನ್ನು ಸಲ್ಲಿಸಿದ್ದರು. ಹೀಗೆ ಪೆರು ದೇಶದಲ್ಲಿ ಅವರು ಸುವಾರ್ತಾ ಪ್ರಸಾರ ಯಾಜಕರಾಗಿ ಜೀವಿಸಿದ ಬದುಕು, ಮಾಡಿದ ಸೇವಾಕಾರ್ಯಗಳು ಹಾಗೂ ಅವರು ಜನತೆಯನ್ನು ಮುನ್ನಡೆಸಿದ ಪರಿಯನ್ನು ಕಟ್ಟಿಕೊಡುವ ವ್ಯಕ್ತಿ ಚಿತ್ರಣವನ್ನು ವ್ಯಾಟಿಕನ್ ಮಾಧ್ಯಮವು ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆ ಮಾಡಲಿದೆ. ಈ ಹಿನ್ನೆಲೆಯಲ್ಲಿ ಆ ಕುರಿತ ಒಂದು ಪರಿಚಯಾತ್ಮಕ ವಿಡಿಯೋ ನಿಮಗಾಗಿ ಇಲ್ಲಿದೆ.
08 ಜೂನ್ 2025, 17:36