ಕಾರ್ಡಿನಲ್ ಗ್ರೆಚ್ ರವರು ಪಿತೃಪ್ರಧಾನ ಬಾರ್ತಲೋಮಿಯೋ ರವರನ್ನು ಭೇಟಿಯಾದರು: ನಾವು ಸೇತುವೆಗಳನ್ನು ನಿರ್ಮಿಸೋಣ
ಸಾಲ್ವಟೋರ್ ಸೆರ್ನುಜಿಯೊ
ವಿಶ್ವಗುರು ಫ್ರಾನ್ಸಿಸ್ ರವರೊಂದಿಗೆ ಆಗಾಗ್ಗೆ ವಿನಿಮಯ ಮಾಡಿಕೊಳ್ಳುವ ಆಲಿಂಗನವನ್ನು ನೆನಪಿಸುವ ಸಹೋದರತ್ವದ ಸಭೆಯು ಜೂನ್ ತಿಂಗಳ 17ರ ಮಧ್ಯಾಹ್ನ ಫಾನಾರ್‌ನಲ್ಲಿ ಕಾನ್ಸ್ಟಾಂಟಿನೋಪಲ್‌ನ ಸಾರ್ವತ್ರಿಕ ಪರಿಷತ್ತಿನ ಪಿತೃಪ್ರಧಾನ ಬಾರ್ತಲೋಮಿಯೋ I ಮತ್ತು ಸಿನೊಡ್‌ನ ಪ್ರಧಾನ ಕಾರ್ಯದರ್ಶಿ ಕಾರ್ಡಿನಲ್ ಮಾರಿಯೋ ಗ್ರೆಚ್ ರವರ ನಡುವೆ ನಡೆಯಿತು, ಅವರು ಪ್ರಸ್ತುತ ಯುರೋಪಿನ ಧರ್ಮಾಧ್ಯಕ್ಷರುಗಳ ಸಮ್ಮೇಳನಗಳ (CCEE) ಪ್ರಧಾನ ಕಾರ್ಯದರ್ಶಿಗಳ ಸಭೆಗಾಗಿ ಇಸ್ತಾನ್‌ಬುಲ್‌ನಲ್ಲಿದ್ದಾರೆ.
ಸಭೆಯ ಸಮಯದಲ್ಲಿ, ಕಾರ್ಡಿನಲ್ ಗ್ರೆಚ್ ರವರು ಸಭೆಯಲ್ಲಿ ಭಾಗವಹಿಸುವವರಿಗೆಲ್ಲಾ ಸಿನೊಡ್ ಅನುಷ್ಠಾನ ಹಂತದ ಪ್ರಕ್ರಿಯೆಯನ್ನು ತಿಳಿಯಪಡಿಸಿದರು. ಅವರ ಪ್ರಯಾಣದ ವೇಳಾಪಟ್ಟಿಯಲ್ಲಿ ಇಂದಿನ ಇಜ್ನಿಕ್ ಎಂದು ಕರೆಯಲ್ಪಡುವ ನೈಸಿಯಾದಲ್ಲಿ ಒಂದು ನಿಲುಗಡೆಯೂ ಸೇರಿತ್ತು. ಅದು ಮೊದಲ ಸಾರ್ವತ್ರಿಕ ಪರಿಷತ್ತಿನ ಸ್ಥಳವಾಗಿದೆ, ಅದರ 1700ನೇ ವಾರ್ಷಿಕೋತ್ಸವವು ಸಮೀಪಿಸುತ್ತಿದೆ. ಈ ಸ್ಥಳಕ್ಕೆ ವಿಶ್ವಗುರು ಹದಿನಾಲ್ಕನೇ ಲಿಯೋರವರ ಭೇಟಿಯನ್ನು ನಿರೀಕ್ಷಿಸಲಾಗಿದೆ, ಇದು ಅವರ ಪೂರ್ವ ಅಧಿಕಾರಿ ಫ್ರಾನ್ಸಿಸ್ ರವರ ಉದ್ದೇಶವನ್ನು ಮುಂದುವರೆಸುತ್ತಿದೆ.
ವಿಶ್ವಗುರು ಫ್ರಾನ್ಸಿಸ್ ರವರನ್ನು ಸ್ಮರಿಸುವುದು
CCEE ಸಭೆಯಲ್ಲಿ ಭಾಗವಹಿಸಿದವರನ್ನು ಉದ್ದೇಶಿಸಿ ಮಾತನಾಡಿದ ಕುಲಸಚಿವ ಬಾರ್ತಲೋಮಿಯೋ, ವಿಶ್ವಗುರು ಫ್ರಾನ್ಸಿಸ್ ರವರನ್ನು ಸ್ಮರಿಸಿದರು ಮತ್ತು ವಿಶ್ವಗುರು ಹದಿನಾಲ್ಕನೇ ಲಿಯೋರವರ ಸಂಭಾವ್ಯ ಭೇಟಿಗಾಗಿ ತಮ್ಮ "ಮಹಾ ನಿರೀಕ್ಷೆ"ಯನ್ನು ವ್ಯಕ್ತಪಡಿಸಿದರು. ಮೊದಲನೆಯದಾಗಿ, ಪಿತೃಪ್ರಧಾನರು "ವೈಯಕ್ತಿಕ ಸ್ನೇಹ ಮತ್ತು ವಿಶ್ವಗುರು ಫ್ರಾನ್ಸಿಸ್ ರವರ ಅಚಲ ಬದ್ಧತೆಗಾಗಿ" ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.
ಸಂವಾದದ ಮಹತ್ವ
ವಿಭಜನೆಗಳು, ಭಯ ಮತ್ತು ಹಿಂಸಾಚಾರದಿಂದ ಗುರುತಿಸಲ್ಪಟ್ಟ ಸಮಯದಲ್ಲಿ, ನಾವು ಗೋಡೆಗಳಲ್ಲ, ಸೇತುವೆಗಳನ್ನು ನಿರ್ಮಿಸುವವರಾಗಿ ಕರೆಯಲ್ಪಟ್ಟಿದ್ದೇವೆ ಎಂಬ ಸಂವಾದದ ವಿಷಯಕ್ಕೆ ಸಾರ್ವತ್ರಿಕ ಪರಿಷತ್ತು ಮತ್ತು ಅಂತರ್ಧರ್ಮೀಯ ಪಿತೃಪ್ರಧಾನ ಬಾರ್ತಲೋಮಿಯೋ ಗಮನಾರ್ಹ ಗಮನವನ್ನು ಅರ್ಪಿಸಿದರು. ನಿರ್ದಿಷ್ಟವಾಗಿ ಹೇಳುವುದಾದರೆ, ರೋಮನ್ ಕಥೋಲಿಕ ಧರ್ಮಸಭೆಯೊಂದಿಗಿನ ಸಂಬಂಧದ ಮಹತ್ವವನ್ನು ಮತ್ತು 1965ರಲ್ಲಿ ಪರಸ್ಪರ ಅನಾಥೆಮಾಗಳನ್ನು ರದ್ದುಗೊಳಿಸಿದ ನಂತರ ಸುಮಾರು ಅರ್ಧ ಶತಮಾನದ ಹಿಂದೆಯೇ ಪುನರಾರಂಭವಾದ ದೈವಶಾಸ್ತ್ರದ ಸಂವಾದವನ್ನು ಬಗ್ಗೆ ಒತ್ತಿ ಹೇಳಿದರು.
ಒಂದು ಸ್ಥಿರ ಮತ್ತು ದೃಢವಾದ ಹಾದಿಯನ್ನು ಅನುಸರಿಸಲು ಈ ಸಂಬಂಧವು ಅತ್ಯಗತ್ಯ. ಈ ಪ್ರಯಾಣವು ಸವಾಲುಗಳಿಲ್ಲದಿದ್ದರೂ, "ಕೃಪೆಯ ಕ್ಷಣಗಳು, ಆಳವಾದ ತಿಳುವಳಿಕೆ ಮತ್ತು ಕ್ರಿಸ್ತರು ಬಯಸುವ ಏಕತೆಗಾಗಿ ಪ್ರಾಮಾಣಿಕ ಬಯಕೆಯಿಂದ ಗುರುತಿಸಲ್ಪಟ್ಟಿದೆ."
ಶಾಂತಿ
ಇತರ ಪ್ರಾಚೀನ ಪೂರ್ವ ಧರ್ಮಸಭೆಗಳು, ಪ್ರೊಟೆಸ್ಟಂಟ್ ಸಂಪ್ರದಾಯಗಳು ಮತ್ತು ಹಲವಾರು ಅಂತರ-ಕ್ರೈಸ್ತ ಸಂಸ್ಥೆಗಳೊಂದಿಗೆ ಸಂವಾದವನ್ನು ಪಿತೃಪ್ರಧಾನರು ಒತ್ತಿ ಹೇಳಿದರು. ಇವು ಔಪಚಾರಿಕ ಪ್ರಕ್ರಿಯೆಗಳಲ್ಲ, ಬದಲಾಗಿ "ಆಧ್ಯಾತ್ಮಿಕತೆಯ ಅನುಭವ ಎದುರಾಗುವ ಸಮಯ ಮತ್ತು ಸುವಾರ್ತೆಯ ನವೀಕೃತ ಬದ್ಧತೆಗೆ ನೀಡುವ ಅವಕಾಶಗಳಾಗಿವೆ ಎಂದು ಅವರು ಗಮನಿಸಿದರು.
ಸನಾತನ ಧರ್ಮಸಭೆಯಲ್ಲಿ ನಾವು ಅಂತರ್ಧರ್ಮೀಯ ಸಂವಾದಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತೇವೆ" ಎಂದು ಅವರು ಹೇಳಿದರು, "ಶಾಂತಿ, ಪರಸ್ಪರ ತಿಳುವಳಿಕೆ ಮತ್ತು ಪ್ರತಿಯೊಬ್ಬ ಮನುಷ್ಯನ ಘನತೆಗೆ ಗೌರವವು, ವಿಶ್ವಾಸಭರಿತ ಎಲ್ಲಾ ಸಂಪ್ರದಾಯಗಳಿಗೆ ಪ್ರಮುಖ ಬದ್ಧತೆಗಳಾಗಿರಬೇಕು ಎಂಬ ದೃಢನಿಶ್ಚಯದಲ್ಲಿ ಯೆಹೂದ್ಯರು, ಮುಸ್ಲಿಂ ಮತ್ತು ಇತರ ಧಾರ್ಮಿಕ ನಾಯಕರೊಂದಿಗಿನ ಸಂಬಂಧಗಳನ್ನು ಬಹಳ ಹಿಂದಿನಿಂದಲೂ ಬೆಳೆಸಲಾಗಿದೆ ಎಂದು ವಿವರಿಸಿದರು.
ದೇವರನ್ನು ಅನುಕರಿಸುವುದು ಎಂದರೆ ಇತರರೊಂದಿಗೆ ಏಕತೆಗೆ ಪ್ರವೇಶಿಸುವುದು, ವಿಭಿನ್ನ ಜನರ ನಡುವೆ ಐಕ್ಯತೆಯ ಸೇತುವೆಗಳನ್ನು ನಿರ್ಮಿಸುವುದು, ಇದು ಎಷ್ಟೇ ಕಷ್ಟಕರ ಕೆಲಸವಾಗಿದ್ದರೂ ಸಹ ಐಕ್ಯತೆಯ ಸೇತುವೆಗಳನ್ನು ನಿರ್ಮಿಸುವುದು, ಏಕತೆಯೆಡಿಗಿನ ಸಾಗುವ ಹಾದಿಯಾಗಿದೆ ಎಂದು ಕಾರ್ಡಿನಲ್ ಗ್ರೆಚ್ ಗಮನಿಸಿದರು.