MAP

ಬೌದ್ಧರ ಹಬ್ಬ ವೆಸಕ್'ಗೆ ಶುಭಾಶಯ ತಿಳಿಸಿದ ವ್ಯಾಟಿಕನ್

ವ್ಯಾಟಿಕನ್ ಅಂತರ್ಧರ್ಮೀಯ ಸಂವಾದ ಡಿಕಾಸ್ಟರಿಯು ಬೌದ್ಧರ ಹಬ್ಬ ವೆಸಕ್'ಗೆ ಶುಭಾಶಯಗಳನ್ನು ಕೋರುತ್ತಾ ಸಂದೇಶವನ್ನು ಕಳುಹಿಸಿದೆ. ಈ ಸಂದೇಶದಲ್ಲಿ ಸಂವಾದ ಎಂಬುದು ಕೇವಲ ಮಾತುಗಳಿಗೆ ಸೀಮಿತವಾಗದೆ; ಕಾರ್ಯರೂಪಕ್ಕೆ ಬರಬೇಕು ಎಂದು ಹೇಳಿದೆ.

ವರದಿ: ವ್ಯಾಟಿಕನ್ ನ್ಯೂಸ್

ವ್ಯಾಟಿಕನ್ ಅಂತರ್ಧರ್ಮೀಯ ಸಂವಾದ ಡಿಕಾಸ್ಟರಿಯು ಬೌದ್ಧರ ಹಬ್ಬ ವೆಸಕ್'ಗೆ ಶುಭಾಶಯಗಳನ್ನು ಕೋರುತ್ತಾ ಸಂದೇಶವನ್ನು ಕಳುಹಿಸಿದೆ. ಈ ಸಂದೇಶದಲ್ಲಿ ಸಂವಾದ ಎಂಬುದು ಕೇವಲ ಮಾತುಗಳಿಗೆ ಸೀಮಿತವಾಗದೆ; ಕಾರ್ಯರೂಪಕ್ಕೆ ಬರಬೇಕು ಎಂದು ಹೇಳಿದೆ.

ವೆಸಕ್ ಎಂಬುದು ಬೌದ್ಧರ ಬಹುದೊಡ್ಡ ಹಬ್ಬವಾಗಿದ್ದು, ಈ ಹಬ್ಬದಂದು ಗೌತಮ ಬುದ್ಧನ ಜನನ, ಜ್ಞಾನೋದಯ ಮತ್ತು ಮರಣವನ್ನು ಸ್ಮರಿಸಲಾಗುತ್ತದೆ. 

ಈ ಸಂದೇಶಕ್ಕೆ ವ್ಯಾಟಿಕನ್ ಅಂತರ್ಧರ್ಮೀಯ ಸಂವಾದ ಡಿಕಾಸ್ಟರಿಯ ಪ್ರಿಫೆಕ್ಟ್ ಆಗಿರುವ ಕಾರ್ಡಿನಲ್ ಜಾರ್ಜ್ ಜೇಕಬ್ ಕೂವಕ್ಕಾಡ್ ಮತ್ತು ಇದೇ ಡಿಕಾಸ್ಟರಿಯ ಕಾರ್ಯದರ್ಶಿ ಮೊನ್ಸಿಜ್ಞೊರ್ ಇಂದುನಿಲ್ ಜನಕರತ್ನೆ ಕೊಡಿತುವಾಕ್ಕು ಕಂಕನಮಳಗೆ ಅವರು ಸಹಿ ಹಾಕಿದ್ದಾರೆ. ಈ ಸಂದೇಶವು ಕಥೋಲಿಕತೆ ಹಾಗೂ ಬೌದ್ಧ ಧರ್ಮದ ನಡುವಿನ ಸಾಮ್ಯತೆಗಳನ್ನು ವಿಶ್ಲೇಷಿಸುತ್ತದೆ.

ಜಗತ್ತಿನ ಸಮಸ್ತ ಬೌದ್ಧರಿಗೆ ವೆಸಕ್ ಶುಭಾಶಯಗಳನ್ನು ಕೋರುವ ಮೂಲಕ ಈ ಸಂದೇಶವು ಆರಂಭವಾಗುತ್ತದೆ. ಬೌದ್ಧ ಧರ್ಮವು ಈ ಜಗತ್ತಿನಲ್ಲಿನ ಅನೇಕ ಕಷ್ಟ-ಕಾರ್ಪಣ್ಯಗಳು, ಹಿಂಸೆ ಹಾಗೂ ಸಾವಲುಗಳನ್ನು ಎದುರಿಸಲು ಸ್ವತಂತ್ರವಾದ ಸಂವಾದದಲ್ಲಿ ನಂಬಿಕೆಯನ್ನಿಟ್ಟಿದೆ" ಎಂದು ಹೇಳುತ್ತದೆ.

ಇಂದು ಜಗತ್ತಿನಲ್ಲಿ ಅತಿರೇಕದ ಅನ್ಯಾಯ, ಸಂಘರ್ಷ ಮತ್ತು ಅನಿಶ್ಚಿತತೆಯ ಹಿನ್ನೆಲೆಯಲ್ಲಿ, "ಮಾನವ ಅಸ್ತಿತ್ವದ ಬಗೆಹರಿಯದ ಒಗಟುಗಳಿಗೆ' ಅರ್ಥಪೂರ್ಣ ಪ್ರತಿಕ್ರಿಯೆಗಳನ್ನು ನೀಡುವ ಧರ್ಮಗಳ ಆಳವಾದ ಸಾಮರ್ಥ್ಯದ ಬಗ್ಗೆ ನಮಗೆ ಮನವರಿಕೆಯಾಗಿದೆ" ಎಂದು ಸಂದೇಶ ಒತ್ತಿ ಹೇಳುತ್ತದೆ. 

ಅಂತಿಮವಾಗಿ, ಡಿಕಾಸ್ಟಿರಿಯು ಸಂವಾದದ ಮೂಲಕ, ನಮ್ಮ ಆಯಾ ಸಂಪ್ರದಾಯಗಳು ನಮ್ಮ ಕಾಲದ ಸವಾಲುಗಳಿಗೆ ಯೋಗ್ಯ ಪ್ರತಿಕ್ರಿಯೆಗಳನ್ನು ನೀಡಬಹುದು" ಎಂಬ ಭರವಸೆಯನ್ನು ವ್ಯಕ್ತಪಡಿಸುತ್ತದೆ.

12 ಮೇ 2025, 17:47