ಪೋಪ್ ಲಿಯೋ XIV ಅವರ ಆಯ್ಕೆಯನ್ನು ಸ್ವಾಗತಿಸಿದ ಸಿನೋಡ್ ಮಹಾಸಭೆ
ವರದಿ: ವ್ಯಾಟಿಕನ್ ನ್ಯೂಸ್
ಸಿನೋಡ್ ಮಹಾಸಭೆಯು ನೂತನ ಪೋಪ್ ಲಿಯೋ XIV ಅವರ ಆಯ್ಕೆಯನ್ನು ಸ್ವಾಗತಿಸಿ, ಅವರಿಗೆ ಪತ್ರವನ್ನು ಬರೆದಿದೆ. ಧರ್ಮಸಭೆಯನ್ನು ಮುನ್ನಡೆಸುವಲ್ಲಿ ಪೋಪ್ ಹದಿನಾಲ್ಕನೇ ಲಿಯೋ ಅವರು ನೀಡುವ ಮಾರ್ಗದರ್ಶನಕ್ಕಾಗಿ ಎದುರುನೋಡುತ್ತೇವೆ ಎಂದು ತನ್ನ ಪತ್ರದಲ್ಲಿ ಹೇಳಿದೆ.
ಪೋಪ್ ಲಿಯೋ ಅವರನ್ನು "ಅತ್ಯಂತ ಪೂಜ್ಯ ತಂದೆ" ಎಂದು ಸಂಬೋಧಿಸಿದ ಪತ್ರದಲ್ಲಿ, ಮಹಾಸಭೆಯು ಸಿನೊಡ್ "ಪವಿತ್ರಾತ್ಮದಿಂದ ನಡೆಸಲ್ಪಡುವ ಧರ್ಮಸಭೆಯ ಪ್ರಯಾಣವಾಗಿದೆ, ಪುನರುತ್ಥಾನಗೊಂಡ ಪ್ರಭುವಿನ ಕೊಡುಗೆಯಾಗಿದೆ. ಅವರು ಸುವಾರ್ತಾ ಪ್ರಸಾರ ಧರ್ಮಸಭೆಯಾಗಿ ಬೆಳೆಯಲು ನಮಗೆ ಸಹಾಯ ಮಾಡುತ್ತಾರೆ. ಸುವಾರ್ತೆಯನ್ನು ಗಮನವಿಟ್ಟು ಕೇಳುವ ಮೂಲಕ ನಿರಂತರವಾಗಿ ಜನತೆಯು ವಿಶ್ವಾಸದಲ್ಲಿ ಬೆಳೆಯುತ್ತಾರೆ" ಎಂದು ಹೇಳುತ್ತಾರೆ.
ಈಗ [ಸಿನೊಡಲ್] ಪ್ರಯಾಣವು ನಿಮ್ಮ ಪವಿತ್ರತೆಯ ಮಾರ್ಗದರ್ಶನದಲ್ಲಿ ಮುಂದುವರಿಯುತ್ತದೆ," ಎಂದು ಹೇಳುವ ಮೂಲಕ ಪತ್ರವು ಮುಕ್ತಾಯಗೊಳ್ಳುತ್ತದೆ, "ನಾವು ನೀವು ಸೂಚಿಸುವ ನಿರ್ದೇಶನಗಳನ್ನು ವಿಶ್ವಾಸದಿಂದ ನೋಡುತ್ತೇವೆ. ನಿಮ್ಮ ಮಾರ್ಗದರ್ಶನವು ಧರ್ಮಸಬೆ ಕೇಳುವ, ಗಮನವಿರುವ ಸಮುದಾಯವಾಗಿ ಬೆಳೆಯಲು ಸಹಾಯ ಮಾಡುತ್ತದೆ" ಎಂದು ಹೇಳುವ ಮೂಲಕ ಈ ಪತ್ರವು ಮುಕ್ತಾಯಗೊಳ್ಳುತ್ತದೆ.
ಅಂತಿಮವಾಗಿ, ಸಿನೋಡ್ ಮಹಾಸಸಭೆಯ ಜನರಲ್ ಸೆಕ್ರೆಟರಿ ಕಾರ್ಡಿನಲ್ ಮಾರಿಯೋ ಗ್ರೆಕ್ ಅವರು "ಇದು ಹೊಸ ಸಿನೋಡ್ ಸಭೆಯಲ್ಲ; ಬದಲಿಗೆ ಸಿನೋಡ್ ಮುಕ್ತಾಯದ ಅಂಶಗಳನ್ನು ಸ್ವಾಗತಿಸುವ ಧರ್ಮಸಭೆಯ ಕ್ರಿಯೆಯಾಗಿದೆ" ಎಂದು ಹೇಳಿದರು.