MAP

ಸಂತ ಅಗಸ್ಟೀನರ ಧಾರ್ಮಿಕ ಸಭೆಯ ಪ್ರಯರ್ ಜನರಲ್ (ಮುಖ್ಯಾಧಿಕಾರಿ) ಫಾದರ್ ಅಲೆಹಾಂದ್ರೋ ಮೊರಾಲ್ ಅಂದಿನ ಕಾರ್ಡಿನಲ್ ಪ್ರಿವೋಸ್ಟ್ (ಪೋಪ್ ಹದಿನಾಲ್ಕನೇ ಲಿಯೋ) ಅವರೊಂದಿಗೆ ಸಂತ ಅಗಸ್ಟೀನರ ಧಾರ್ಮಿಕ ಸಭೆಯ ಪ್ರಯರ್ ಜನರಲ್ (ಮುಖ್ಯಾಧಿಕಾರಿ) ಫಾದರ್ ಅಲೆಹಾಂದ್ರೋ ಮೊರಾಲ್ ಅಂದಿನ ಕಾರ್ಡಿನಲ್ ಪ್ರಿವೋಸ್ಟ್ (ಪೋಪ್ ಹದಿನಾಲ್ಕನೇ ಲಿಯೋ) ಅವರೊಂದಿಗೆ 

ಅಗಸ್ಟೀನರ ಸಭೆಯ ಪ್ರಯರ್ ಜನರಲ್: ಪೋಪ್ ಹದಿನಾಲ್ಕನೇ ಲಿಯೋ "ಸರ್ವರಿಗೂ ಹತ್ತಿರದವರಾಗಿದ್ದಾರೆ"

ಸಂತ ಅಗಸ್ಟೀನರ ಧಾರ್ಮಿಕ ಸಭೆಯ ಪ್ರಯರ್ ಜನರಲ್ (ಮುಖ್ಯಾಧಿಕಾರಿ) ಆಗಿರುವ ಫಾದರ್ ಅಲೆಹಾಂದ್ರೊ ಮೊರಾಲ್ ಅವರು ಪೋಪ್ ಹದಿನಾಲ್ಕನೇ ಲಿಯೋ ಅವರ ಬಹುಕಾಲದ ಗೆಳೆಯರಾಗಿದ್ದು, ನೂತನ ಪೋಪ್ ನ್ಯಾಯ, ಶಾಂತಿ ಹಾಗೂ ಸೇತುವೆಗಳನ್ನು ನಿರ್ಮಿಸುವ ಕುರಿತು ತಮ್ಮ ಮೊದಲ ಸಂದೇಶದಲ್ಲೇ ಹೇಳಿದ್ದಾರೆ" ಎಂದು ಹೇಳಿದರು.

ವರದಿ: ವ್ಯಾಟಿಕನ್ ನ್ಯೂಸ್

ಸಂತ ಅಗಸ್ಟೀನರ ಧಾರ್ಮಿಕ ಸಭೆಯ ಪ್ರಯರ್ ಜನರಲ್ (ಮುಖ್ಯಾಧಿಕಾರಿ) ಆಗಿರುವ ಫಾದರ್ ಅಲೆಹಾಂದ್ರೊ ಮೊರಾಲ್ ಅವರು ಪೋಪ್ ಹದಿನಾಲ್ಕನೇ ಲಿಯೋ ಅವರ ಬಹುಕಾಲದ ಗೆಳೆಯರಾಗಿದ್ದು, ನೂತನ ಪೋಪ್ ನ್ಯಾಯ, ಶಾಂತಿ ಹಾಗೂ ಸೇತುವೆಗಳನ್ನು ನಿರ್ಮಿಸುವ ಕುರಿತು ತಮ್ಮ ಮೊದಲ ಸಂದೇಶದಲ್ಲೇ ಹೇಳಿದ್ದಾರೆ" ಎಂದು ಹೇಳಿದರು. 

"ನಮಗೆ ಬಹಳ ಸಂತೋಷವಾಗಿದೆ. ವಿಶೇಷವಾಗಿ, ನಮಗೆ (ಅಗಸ್ಟೀನ್ ಸಭೆಯ ಸದಸ್ಯರಿಗೆ) ಇದೊಂದು ಉಡುಗೊರೆಯಾಗಿದೆ. ಇಡೀ ಧರ್ಮಸಭೆಗೆ ಇದು ಉಡುಗೊರೆಯಾಗಿದೆ. ಅದೇ ಮುಖ್ಯ" ಎಂದು ಫಾದರ್ ಅಲೆಹಾಂದ್ರೊ ಮೊರಾಲ್ ಅವರು ವ್ಯಾಟಿಕನ್ ನ್ಯೂಸ್ ಜೊತೆಗೆ ಮಾತನಾಡಿದ್ದಾರೆ.

"ಅಗಸ್ಟೀನಿಯನ್ನರಾಗಿ ನಾವು ಬಹಳ ಸಂತೋಷಿಸುತ್ತೇವೆ. ಅವರು ಸೇವಕರಂತೆ ಧರ್ಮಸಭೆಗೆ ಸೇವೆಸಲ್ಲಿಸಬೇಕು" ಎಂದು ಅವರು ಹೇಳಿದರು.

ಮುಂದುವರೆದು ಮಾತನಾಡಿದ ಫಾದರ್ ಅಲೆಹಾಂದ್ರೊ ಮೊರಾಲ್ "ಪೋಪ್ ಹದಿನಾಲ್ಕನೇ ಲಿಯೋ ಅವರು ತೂಕದ ವ್ಯಕ್ತಿತ್ವವನ್ನು ಹೊಂದಿದ್ದು, ಬಹಳ ಆಧ್ಯಾತ್ಮಿಕ ವ್ಯಕ್ತಿಯಾಗಿದ್ದಾರೆ ಹಾಗೂ ಎಲ್ಲರೊಂದಿಗೂ ಹತ್ತಿರವಾಗುತ್ತಾರೆ" ಎಂದು ಹೇಳಿದರು.

ನೂತನ ವಿಶ್ವಗುರು ಪೋಪ್ ಹದಿನಾಲ್ಕನೇ ಲಿಯೋ ಅವರ ಬಹುಕಾಲದ ಗೆಳೆಯರಾದ ಫಾದರ್ ಅಲೆಹಾಂದ್ರೊ ಮೊರಾಲ್ ಅವರು "ಅಗಸ್ಟೀನಿಯನ್ ಸಭೆಯವರಾದ ನಮಗೆ ಇದರಿಂದ ಬಹಳ ಸಂತೋಷವಾಗಿದೆ. ಶ್ರೀಮಂತ ಬಡವರಾದಿಯಾಗಿ, ಅವರು ಎಲ್ಲರನ್ನೂ ಪ್ರೀತಿಸುತ್ತಾರೆ. ಧರ್ಮಸಭೆಗೆ ಅವರು ಪ್ರಾಮಾಣಿಕ ಸೇವೆಯನ್ನು ಸಲ್ಲಿಸುತ್ತಾರ ಎಂದು ನಮಗೆ ನಂಬಿಕೆಯಿದೆ. ಈ ಕುರಿತು ನಾವು ಇತ್ತೀಚೆಗಷ್ಟೇ ಚರ್ಚಿಸಿದ್ದೆವು. ಈಗ ಅದು ನೆರವೇರಲಿದೆ" ಎಂದು ಅವರು ಹೇಳಿದರು.

ಲಿಯೋ ಎಂಬ ಹೆಸರಿನ ಕುರಿತು ಮಾತನಾಡಿದ ಫಾದರ್ ಅಲೆಹಾಂದ್ರೊ ಮೊರಾಲ್ ಅವರು "ಪೋಪ್ ಹದಿಮೂರನೇ ಲಿಯೋ ಅವರು ಧರ್ಮಸಭೆಯ ಮಹಾನ್ ವಿಶ್ವಗುರುಗಳಲ್ಲಿ ಒಬ್ಬರಾಗಿದ್ದರು. ಆದುದರಿಂದ, ಪೋಪ್ ಹದಿನಾಲ್ಕನೇ ಲಿಯೋ ಅವರು ಆ ಹೆಸರನ್ನು ಆಯ್ಕೆ ಮಾಡಿಕೊಂಡಿದ್ದಾರೆ" ಎಂದು ಹೇಳಿದರು. "ನೂತನ ಪೋಪ್ ನ್ಯಾಯ, ಶಾಂತಿ ಹಾಗೂ ಸೇತುವೆಗಳನ್ನು ನಿರ್ಮಿಸುವ ಕುರಿತು ತಮ್ಮ ಮೊದಲ ಸಂದೇಶದಲ್ಲೇ ಹೇಳಿದ್ದಾರೆ. ನಮ್ಮ ನಿಜವಾದ ನಾಡಿಗೆ ಪಯಣಿಸುತ್ತಿರುವ ನಾವೆಲ್ಲರೂ ಯಾತ್ರಿಕರು ಎಂಬ ಸಂತ ಅಗಸ್ಟೀನರ ಸಾಲುಗಳನ್ನು ನೆನಪಿಸಿಕೊಂಡಿದ್ದಾರೆ. ಇದು ಮುಂದಿನ ದಿನಗಳಲ್ಲಿ ಪೋಪ್ ಯಾವ ದಿಸೆಯಲ್ಲಿ ಮುಂದುವರೆಯಬಹುದು ಎಂಬುದರ ಸಂಕೇತವಾಗಿದೆ" ಎಂದು ಫಾದರ್ ಅಲೆಹಾಂದ್ರೊ ಮೊರಾಲ್, ಓ.ಎಸ್.ಎ., ಅವರು ಹೇಳಿದ್ದಾರೆ.

09 ಮೇ 2025, 09:06