ವಿಶ್ವಸಂಸ್ಥೆಗೆ ಪವಿತ್ರ ಪೀಠದ ವೀಕ್ಷಕರು: ಪೋಪ್ ಫ್ರಾನ್ಸಿಸ್ ಅವರು ನಮ್ಮೆಲ್ಲರನ್ನೂ ಸಹೋದರರಾಗಿ ಒಗ್ಗೂಡಿಸಿದ್ದರು
ವರದಿ: ವ್ಯಾಟಿಕನ್ ನ್ಯೂಸ್
ಮಂಗಳವಾರ ನ್ಯೂಯಾರ್ಕ್‌ನಲ್ಲಿ ವಿಶ್ವಸಂಸ್ಥೆಯಲ್ಲಿ ನಡೆದ ವಿಶೇಷ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್, ಪೋಪ್ ಫ್ರಾನ್ಸಿಸ್ ಅವರನ್ನು "ಯುದ್ಧದ ಜಗತ್ತಿನಲ್ಲಿ ಯಾವಾಗಲೂ ಶಾಂತಿಯ ಧ್ವನಿಯಾಗಿದ್ದರು" ಎಂದು ಹೇಳಿದ್ದಾರೆ.
ಪೋಪ್ ಫ್ರಾನ್ಸಿಸ್ ಅವರಿಗೆ ಗೌರವ ಸಲ್ಲಿಸುವ ಸಮಾರಂಭದಲ್ಲಿ ಭಾಗವಹಿಸುವುದು ತುಂಬಾ ಸಂತೋಷ ತಂದಿದೆ ಎಂದು ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಪವಿತ್ರ ಪೋಠದ ಖಾಯಂ ವೀಕ್ಷಕ ಆರ್ಚ್‌ಬಿಷಪ್ ಗೇಬ್ರಿಯೆಲ್ ಕ್ಯಾಸಿಯಾ ವ್ಯಾಟಿಕನ್ ರೇಡಿಯೋ ಜೊತೆ ಮಾತನಾಡಿದರು.
ಪೋಪ್ ಫ್ರಾನ್ಸಿಸ್ ಅವರ ನಿಧನದ ನಂತರ, ಪ್ರಪಂಚದಾದ್ಯಂತದ ಎಲ್ಲಾ ವಿಶ್ವಸಂಸ್ಥೆಯ ಕಚೇರಿಗಳಲ್ಲಿ, ಗೌರವ ಮತ್ತು ಒಗ್ಗಟ್ಟಿನ ಸಂಕೇತವಾಗಿ ಧ್ವಜವನ್ನು ಅರ್ಧಕ್ಕೆ ಹಾರಿಸಲಾಯಿತು ಎಂದು ಅವರು ವಿವರಿಸಿದರು.
ಎಲ್ಲಾ ಸದಸ್ಯ ರಾಷ್ಟ್ರಗಳನ್ನು ಪ್ರತಿನಿಧಿಸಿದ ವಿಶೇಷ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಸರ್ವಾನುಮತದ ಸಂತಾಪದೊಂದಿಗೆ ಭಾಗವಹಿಸಿದ ಕುರಿತು ಅವರು ಪ್ರತಿಕ್ರಿಯಿಸಿದರು.
"ವಿಶ್ವಸಂಸ್ಥೆಯ ಎಲ್ಲಾ ರಾಷ್ಟ್ರಗಳು ಪೋಪ್ ಫ್ರಾನ್ಸಿಸ್ ಅವರಿಗೆ ಗೌರವವನ್ನು ಸಲ್ಲಿಸಿದ್ದಾರೆ ಏಕೆಂದರೆ ಅವರು ಜನರ ಪೋಪ್ ಆಗಿದ್ದರು" ಎಂದು ರ್ಚ್‌ಬಿಷಪ್ ಗೇಬ್ರಿಯೆಲ್ ಕ್ಯಾಸಿಯಾ ಹೇಳಿದರು.