ಪೂರ್ವ ಧರ್ಮಸಭೆಗಳ ಜ್ಯೂಬಿಲಿ: ಕಾಪ್ಟಿಕ್ ವಿಧಾನದಲ್ಲಿ ಬಲಿಪೂಜೆ
ವರದಿ: ವ್ಯಾಟಿಕನ್ ನ್ಯೂಸ್
ಪೂರ್ವ ಧರ್ಮಸಭೆಗಳ ಜ್ಯೂಬಿಲಿಯ ಹಿನ್ನೆಲೆ ಅಲೆಕ್ಸಾಂಡ್ರಿಯಾದ ಕ್ಯಾಥೋಲಿಕ್ ಕಾಪ್ಟ್ಸ್ ಜನತೆಯ ಪೇಟ್ರಿಯಾರ್ಕ್ (ಪಿತೃಪ್ರಧಾನರು), ಈಜಿಪ್ಟಿನ ಪೇಟ್ರಿಯಾರ್ಕರು ಮತ್ತು ಬಿಷಪ್'ಗಳ ಮಂಡಳಿಯ ಅಧ್ಯಕ್ಷರಾಗಿರುವ ಅತಿ ಪೂಜ್ಯ ಇಬ್ರಾಹಿಂ ಇಸಾಕ್ ಸೆಡ್ರಾಕ್ ಅವರು ಇಂದು ರೋಮ್ ನಗರದಲ್ಲಿನ ಸಂತ ಮೇರಿ ಮೇಜರ್ ಮಹಾದೇವಾಲಯದಲ್ಲಿನ ಸಂತ ಪೌಲರ ಪ್ರಾರ್ಥನಾಲಯದಲ್ಲಿ ಕಾಪ್ಟಿಕ್ ವಿಧಾನದಲ್ಲಿ ಬಲಿಪೂಜೆಯನ್ನು ಅರ್ಪಿಸಿದ್ದಾರೆ.
ಇದೇ ಸಂದರ್ಭದಲ್ಲಿ ಈ ಬಲಿಪೂಜೆಯಲ್ಲಿ ಪೂರ್ವಧರ್ಮಸಭೆಗಳ ವಿಭಾಗದ ಪ್ರಿಫೇಕ್ಟ್ ಕಾರ್ಡಿನಲ್ ಕ್ಲಾಡಿಯೋ ಗುಗೆರೊಟ್ಟಿ, ಅವರ ಕಾರ್ಯದರ್ಶಿ ಫಾದರ್ ಇಮ್ಯಾನುಯೇಲ್ ಸನದಾಕ್ ಹಾಗೂ ಇದೇ ವಿಭಾಗದ ಅಧೀನ ಕಾರ್ಯದರ್ಶಿ ಆರ್ಚ್'ಬಿಷಪ್ ಫಿಲಿಪೋ ಚ್ಯಾಂಪನೆಲ್ಲಿ ಅವರು ಉಪಸ್ಥಿತರಿದ್ದರು.
ಈಜಿಪ್ಟ್ ದೇಶಕ್ಕೆ ಕ್ರೈಸ್ತ ಮತವು ಕಾಲಿಟ್ಟಾಗ, ಈ ಮತದ ಹಿಂಬಾಲಕರನ್ನು ಅಂದರೆ ಕ್ರೈಸ್ತರನ್ನು ಕಾಪ್ಟ್ಸ್ ಎಂದು ಕರೆಯಲಾಯಿತು, ಇದಾದ ನಂತರ ಅರಬ್ಬರು ಈಜಿಪ್ಟ್ ಅನ್ನು ವಶಪಡಿಸಿಕೊಂಡಾಗಲೂ ಸಹ ಇಲ್ಲಿನ ಕ್ರೈಸ್ತರು ಯಾವುದೇ ಸಂಕಷ್ಟ ಅಥವಾ ಹಿಂಸೆಗೆ ಭಯ ಪಡದೆ, ಎಲ್ಲವನ್ನೂ ಸಮಚಿತ್ತದಿಂದ ಅನುಭವಿಸಿ, ಶುಭಸಂದೇಶಕ್ಕೆ ಸಾಕ್ಷಿಯಾದರು.
ಈ ಕುರಿತು ಮಾತನಾಡಿದ ಕಾರ್ಡಿನಲ್ ಗುಗೆರೊಟ್ಟಿ ಅವರು ಇಲ್ಲಿನ ಕ್ರೈಸ್ತರು ವಿಶ್ವಾಸಕ್ಕಾಗಿ ಹೇಗೆ ರಕ್ತಸಾಕ್ಷಿಗಳಾದರು ಎಂಬ ಕುರಿತು ಗಮನ ಸೆಳೆದರು. ಕಾಪ್ಟಿಕ್ ಕಥೋಲಿಕರಲ್ಲಿ ರಕ್ತಸಾಕ್ಷಿಗಳು ಬಹಳ ಇದ್ದಾರೆ. ಇತ್ತೀಚೆಗಷ್ಟೇ ಹಲವು ಕಥೋಲಿಕ ಕಾಪ್ಟಿಕ್ ಕ್ರೈಸ್ತರು ರಕ್ತಸಾಕ್ಷಿಗಳಾದರು. ನಿಮಗೆ ರಕ್ತಸಾಕ್ಷಿಗಳಾಗುವಲ್ಲಿ ಬಹಳ ಅನುಭವವಿದೆ" ಎಂದು ಅವರು ಹೇಳಿದರು.
ಇದೇ ವೇಳೆ ಈ ಬಲಿಪೂಜೆಯಲ್ಲಿ ದಿವಂಗತ ಪೋಪ್ ಫ್ರಾನ್ಸಿಸ್ ಅವರನ್ನು ಸ್ಮರಿಸಿಕೊಳ್ಳಲಾಯಿತು. ಹೇಗೆ ಅವರು ಕಥೋಲಿಕ ಕ್ರೈಸ್ತತ್ವದ ಕವಲುಗಳಾದ ಎಲ್ಲರನ್ನು ಒಗ್ಗೂಡಿಸಲು, ಸಹಭಾಗಿತ್ವದಿಂದ ಅವರೊಡನೆ ಮುಂದುವರೆಯಲು ಉಪಕ್ರಮಗಳನ್ನು ತೆಗೆದುಕೊಂಡಿದ್ದರು ಎಂದು ಪೂರ್ವ ಧರ್ಮಸಭೆಗಳ ಜ್ಯೂಬಿಲಿಯ ಹಿನ್ನೆಲೆ ಅಲೆಕ್ಸಾಂಡ್ರಿಯಾದ ಕ್ಯಾಥೋಲಿಕ್ ಕಾಪ್ಟ್ಸ್ ಜನತೆಯ ಪೇಟ್ರಿಯಾರ್ಕ್ (ಪಿತೃಪ್ರಧಾನರು), ಈಜಿಪ್ಟಿನ ಪೇಟ್ರಿಯಾರ್ಕರು ಮತ್ತು ಬಿಷಪ್'ಗಳ ಮಂಡಳಿಯ ಅಧ್ಯಕ್ಷರಾಗಿರುವ ಅತಿ ಪೂಜ್ಯ ಇಬ್ರಾಹಿಂ ಇಸಾಕ್ ಸೆಡ್ರಾಕ್ ಅವರು ಹೇಳಿದರು.