ಎಂಟನೇ ಸಭೆಯಲ್ಲಿ ಸುವಾರ್ತಾ ಪ್ರಸಾರ ಹಾಗೂ ಸೇವಾಕಾರ್ಯದ ಕುರಿತು ಚರ್ಚಿಸಿದ ಕಾರ್ಡಿನಲ್'ಗಳು
ವರದಿ: ವ್ಯಾಟಿಕನ್ ನ್ಯೂಸ್
ಕಾರ್ಡಿನಲ್ಲುಗಳು ವ್ಯಾಟಿಕನ್ನಿನಲ್ಲಿ ಎಂಟನೇ ಸಭೆಯನ್ನು ಸೇರಿದ್ದು, ಈ ಸಭೆಯಲ್ಲಿ ಸುವಾರ್ತಾ ಪ್ರಸಾರ, ಸಿನೋಡಾಲಿಟಿ, ಸೇವಾಕಾರ್ಯ ಮುಂತಾದ ಕುರಿತು ಚರ್ಚಿಸಿದ್ದಾರೆ.
ವ್ಯಾಟಿಕನ್ನಿನ ಮಾಧ್ಯಮ ಕಚೇರಿಯ ನಿರ್ದೇಶಕ ಮತ್ತಿಯೋ ಬ್ರೂನಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಇಂದು ನಡೆದ ಎಂಟನೇ ಸಭೆಯಲ್ಲಿ 180 ಕಾರ್ಡಿನಲ್ಲುಗಳು ಭಾಗವಹಿಸಿದ್ದು, ಅದರಲ್ಲಿ 120 ಕಾರ್ಡಿನಲ್ಲುಗಳು ಮತದಾರ ಕಾರ್ಡಿನಲ್ಲುಗಳಾಗಿದ್ದಾರೆ ಎಂದು ಹೇಳಿದರು. ಮುಂದುವರೆದು ಮಾತನಾಡಿದ ಅವರು ಎಂಟನೇ ಸಭೆಯಲ್ಲಿ ಸುವಾರ್ತಾ ಪ್ರಸಾರ, ಸಿನೋಡಾಲಿಟಿ, ಸೇವಾಕಾರ್ಯ ಮುಂತಾದ ಕುರಿತು ಕಾರ್ಡಿನಲ್ಲುಗಳು ಚರ್ಚಿಸಿದ್ದಾರೆ ಎಂದು ಹೇಳಿದರು.
ಇಂದು ಬೆಳಿಗ್ಗೆ 9 ಗಂಟೆಗೆ ಪ್ರಾರ್ಥನೆಯೊಂದಿಗೆ ಸಭೆ ಆರಂಭವಾಯಿತು.
ಕಳೆದ ಹಲವು ದಿನಗಳಲ್ಲಿ ವ್ಯಾಟಿಕನ್ನಿಗೆ ಬಂದ ಕಾರ್ಡಿನಲ್ಲುಗಳು ಗೌಪ್ಯತಾ ಪ್ರಮಾಣವನ್ನು ಸ್ವೀಕರಿಸಿ, ಸಭೆಯಲ್ಲಿ ಪಾಲ್ಗೊಂಡರು.
ಈ ಸಭೆಯಲ್ಲಿ ಸುಮಾರು 25 ಭಾಷಣಗಳು ನಡೆಯಿತು. ಅವುಗಳಲ್ಲಿ ಮುಖ್ಯವಾದವುಗಳೆಂದರೆ...
- ಪೋಪ್ ಫ್ರಾನ್ಸಿಸ್ ಅವರ ಪ್ರೇಷಿತ ಅಧಿಕಾರದ ಕೇಂದ್ರಬಿಂದುವಾಗಿ ಶುಭ ಸಂದೇಶ ಪ್ರಸಾರ
- ಸುವಾರ್ತಾ ಪ್ರಸಾರ ಸೋದರತ್ವದ ಸಹಭಾಗಿಯಾಗಿ ಧರ್ಮಸಭೆ
- ವಿಶೇಷವಾಗಿ ಯುವ ಜನತೆಗೆ ಶುಭ ಸಂದೇಶವನ್ನು ಸಂವಹಿಸುವುದು
- ಪೂರ್ವ ಧರ್ಮಸಭೆಗಳು, ಅವುಗಳ ಯಾತನೆ ಹಾಗೂ ಸಾಕ್ಷಿ
- ಎಲ್ಲಾ ಹಂತಗಳಲ್ಲಿ ಶುಭ ಸಂದೇಶದ ಸಂವಹನವನ್ನು ಪರಿಣಾಮಕಾರಿಯಾಗಿಸುವುದರ ಅವಶ್ಯಕತೆ.
- ಆರಾಧನಾ ವಿಧಿಯ ಕೇಂದ್ರ ಬಿಂದುತ್ವ
- ಸಿನೋಡಾಲಿಟಿ, ಇತ್ಯಾದಿ.
ಮಧ್ಯಾಹ್ನ 12:30ಕ್ಕೆ ಸಭೆ ಮುಕ್ತಾಯವಾಯಿತು.
ಕಾರ್ಡಿನಲ್ ಪರೋಲಿನ್ ಅವರ ಆರೋಗ್ಯದ ಕುರಿತ ಸುದ್ದಿಗಾರರ ಪ್ರಶ್ನೆಗೆ ಮತ್ತಿಯೋ ಬ್ರೂನಿ ಅವರು "ಕಾರ್ಡಿನಲ್ ಪರೋಲಿನ್" ಆರೋಗ್ಯವಾಗಿದ್ದಾರೆ" ಎಂದು ಹೇಳಿದರು.