8ನೇ ಸಮಾವೇಶವನ್ನು ಕಾಂಬೋಡಿಯಾದಲ್ಲಿ ಹಮ್ಮಿಕೊಳ್ಳಲಿರುವ ಕಥೋಲಿಕ ಮತ್ತು ಬೌದ್ಧ ನಿಯೋಗಗಳು
ವರದಿ: ವ್ಯಾಟಿಕನ್ ನ್ಯೂಸ್
ವ್ಯಾಟಿಕನ್ನಿನ ಅಂತರ್ಧರ್ಮೀಯ ಆಯೋಗವು 8ನೇ ಕಥೋಲಿಕ-ಬೌದ್ಧ ಸಮಾವೇಷವು ಕಾಂಬೋಡಿಯಾದಲ್ಲಿ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದೆ. ಮೇ 27-29 ರವರೆಗೆ ಕಾಂಬೋಡಿಯಾದ ರಾಜಧಾನಿಯಲ್ಲಿ ಈ ಸಮಾವೇಶವು ನಡೆಯಲಿದೆ.
ವ್ಯಾಟಿಕನ್ನಿನ ಅಂತರ್ಧರ್ಮೀಯ ಆಯೋಗವು ಕಾಂಬೋಡಿಯಾದಲ್ಲಿರುವ ಬೌದ್ಧ ವಿಶ್ವವಿದ್ಯಾನಿಯಗಳು, ಸನ್ಯಾಸಿ ಮಠಗಳು ಹಾಗೂ ಕಾಂಬೋಡಿಯಾ ಕಥೋಲಿಕ ಧರ್ಮಾಧ್ಯಕ್ಷರುಗಳ ಮಂಡಳಿಯ ಸಹಯೋಗದಲ್ಲಿ 8ನೇ 8ನೇ ಕಥೋಲಿಕ-ಬೌದ್ಧ ಸಮಾವೇಷವನ್ನು ಮೇ 27-29 ರವರೆಗೆ ಕಾಂಬೋಡಿಯಾದ ರಾಜಧಾನಿಯಲ್ಲಿ ನಡೆಸಲು ತೀರ್ಮಾನಿಸಿದೆ.
"ಸಂಧಾನ ಹಾಗೂ ಸೌಹಾರ್ಧತೆಯ ಮೂಲಕ ಶಾಂತಿಯನ್ನು ನಿರ್ಮಿಸಲು ಕಥೋಲಿಕರು ಹಾಗೂ ಬೌದ್ಧರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವುದು" ಎಂಬುದು ಈ ಸಮಾವೇಶದ ಶೀರ್ಷಿಕೆಯಾಗಿದೆ. ನಮ್ಮ ಕಾಲಘಟ್ಟದಲ್ಲಿ ಶಾಂತಿಯನ್ನು ವೃದ್ಧಿಸಲು, ಹಾಗೂ ಅದು ಸದಾ ನೆಲೆಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಲು ಏಷಿಯಾ ಹಾಗೂ ಇನ್ನಿತರೆ ದೇಶಗಳಿಂದ ಸುಮಾರು 150 ಕಥೋಲಿಕ ಕ್ರೈಸ್ತರು ಹಾಗೂ ಬೌದ್ಧರು ಈ ಸಮಾವೇಷದಲ್ಲಿ ಭಾಗವಹಿಸಿ, ಚಿಂತನೆಗಳನ್ನು ನಡೆಸಲಿದ್ದಾರೆ.
"ಸಂಘರ್ಷ ಮತ್ತು ಹಿಂಸಾಚಾರದಿಂದ ಧ್ವಂಸಗೊಂಡಿರುವ ಜಗತ್ತಿನಲ್ಲಿ, ಈ ಆಡುಮಾತು ಹಿಂಸಾಚಾರವನ್ನು ತಡೆಗಟ್ಟಲು ಮಾತ್ರವಲ್ಲದೆ ಗುಣಪಡಿಸುವಿಕೆ, ಸಮನ್ವಯ ಮತ್ತು ಸ್ಥಿತಿಸ್ಥಾಪಕತ್ವವನ್ನು ಬೆಳೆಸುವಲ್ಲಿ ಧರ್ಮದ ಶಕ್ತಿಯನ್ನು ಸಮಯೋಚಿತವಾಗಿ ನೆನಪಿಸುತ್ತದೆ" ಎಂದು ಪ್ರಕಟಣೆ ತಿಳಿಸಿದೆ.
ಈ ಸಮಾವೇಶವು "ಶಾಂತಿಯ ಸೇವೆಯಲ್ಲಿ ಬೌದ್ಧರು ಮತ್ತು ಕ್ರಿಶ್ಚಿಯನ್ನರ ನಡುವೆ ಪರಸ್ಪರ ತಿಳುವಳಿಕೆಯನ್ನು ಬೆಳೆಸುವ ಮತ್ತು ಸಹಕಾರವನ್ನು ಬಲಪಡಿಸುವ" ಸಂಪ್ರದಾಯವನ್ನು ಮುಂದುವರಿಸಲು ಪ್ರಯತ್ನಿಸುತ್ತದೆ.
7 &Բ;ಸಮಾವೇಶವು 2023 ರ ನವೆಂಬರ್ 13-16 ರಂದು ಥೈಲ್ಯಾಂಡ್‌ನ ಬ್ಯಾಂಕಾಕ್‌ನಲ್ಲಿ ನಡೆಯಿತು ಮತ್ತು "ಮಾನವೀಯತೆ ಮತ್ತು ಈ ಜಗತ್ತಿನ ಗಾಯಗಳನ್ನು ಗುಣಪಡಿಸಲು" ಸಾಮಾನ್ಯ ಕ್ರಮಗಳನ್ನು ಕಂಡುಕೊಳ್ಳುವುದರ ಮೇಲೆ ಕೇಂದ್ರೀಕರಿಸಿತು.