MAP

ಕಾರ್ಡಿನಲ್ ಗ್ರೆಕ್: ಧಾರ್ಮಿಕ ವ್ಯಕ್ತಿಗಳು ಸಿನೋಡಲ್ ಧರ್ಮಸಭೆಗಾಗಿ ಭರವಸೆಯ ಇಂಜಿನ್'ಗಳಾಗಬೇಕು

ಜನರಲ್ ಸಿನೋಡ್ ಆಫ್ ಬಿಷಪ್ಸ್'ನ ಕಾರ್ಯದರ್ಶಿಯಾಗಿರುವ ಕಾರ್ಡಿನಲ್ ಮಾರಿಯೋ ಗ್ರೆಕ್ ಅವರು ಧಾರ್ಮಿಕ ವ್ಯಕ್ತಿಗಳನ್ನುದ್ದೇಶಿಸಿ ಮಾತನಾಡುತ್ತಾ, ಸಿನೊಡಾಲಿಟಿಗೆ ಧರ್ಮಸಭೆಯ ಆಸೆಯಿಂದ ನಾವು ಸ್ಪೂರ್ತಿಯನ್ನು ಪಡೆಯಬೇಕು ಎಂದು ಹೇಳಿದ್ದಾರೆ. ಯೂನಿಯನ್ ಆಫ್ ಸುಪೀರಿಯರ್ಸ್ ಜನರಲ್ ಸಂಸ್ಥೆಯ ಸದಸ್ಯರುಗಳನ್ನು ಉದ್ದೇಶಿಸಿ ಮಾತನಾಡುವ ವೇಳೆ ಅವರು ಈ ಮಾತುಗಳನ್ನು ಹೇಳಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಜನರಲ್ ಸಿನೋಡ್ ಆಫ್ ಬಿಷಪ್ಸ್'ನ ಕಾರ್ಯದರ್ಶಿಯಾಗಿರುವ ಕಾರ್ಡಿನಲ್ ಮಾರಿಯೋ ಗ್ರೆಕ್ ಅವರು ಧಾರ್ಮಿಕ ವ್ಯಕ್ತಿಗಳನ್ನುದ್ದೇಶಿಸಿ ಮಾತನಾಡುತ್ತಾ, ಸಿನೊಡಾಲಿಟಿಗೆ ಧರ್ಮಸಭೆಯ ಆಸೆಯಿಂದ ನಾವು ಸ್ಪೂರ್ತಿಯನ್ನು ಪಡೆಯಬೇಕು ಎಂದು ಹೇಳಿದ್ದಾರೆ. ಯೂನಿಯನ್ ಆಫ್ ಸುಪೀರಿಯರ್ಸ್ ಜನರಲ್ ಸಂಸ್ಥೆಯ ಸದಸ್ಯರುಗಳನ್ನು ಉದ್ದೇಶಿಸಿ ಮಾತನಾಡುವ ವೇಳೆ ಅವರು ಈ ಮಾತುಗಳನ್ನು ಹೇಳಿದ್ದಾರೆ.

"ಪೋಪ್ ಹದಿನಾಲ್ಕನೇ ಲಿಯೋ ಅವರು ನಾವೆಲ್ಲರೂ ಸಿನೋಡಲ್ ಹಾದಿಯಲ್ಲಿ ಪಯಣಿಸಬೇಕು ಎಂದು ಬಯಸುತ್ತಾರೆ" ಎಂದು ಹೇಳಿರುವ ಕಾರ್ಡಿನಲ್ ಮಾರಿಯೋ ಗ್ರೆಕ್ ಅವರು "2021 ರಿಂದ 2024 ರವರೆಗೆ ಧರ್ಮಸಭೆಯು ಭಿತ್ತಿದ ಬೀಜಗಳನ್ನು ನಾವು ಫಲವಾಗಿಸುತ್ತಾ ಸಾಗಬೇಕು" ಎಂದು ಹೇಳಿದ್ದಾರೆ.

ಶುಕ್ರವಾರ ಯೂನಿಯನ್ ಆಫ್ ಸುಪೀರಿಯರ್ಸ್ ಜನರಲ್ (ಯುಎಸ್'ಜಿ) ಮಂಡಳಿ ಸದಸ್ಯರನ್ನು ಉದ್ದೇಶಿಸಿ ಮಾತನಾಡುತ್ತಾ, ಜನರಲ್ ಸಿನೋಡ್ ಆಫ್ ಬಿಷಪ್ಸ್'ನ ಕಾರ್ಯದರ್ಶಿಯಾಗಿರುವ ಕಾರ್ಡಿನಲ್ ಮಾರಿಯೋ ಗ್ರೆಕ್ ಅವರು ಈ ಮಂಡಳಿಯ ಎಲ್ಲಾ ಸದಸ್ಯರುಗಳನ್ನು ಸಿನೋಡಲ್ ಹಾದಿಯಲ್ಲಿ ನಡೆಯಲು ಕರೆ ನೀಡಿದ್ದಾರೆ.

ರೋಮ್ ನಗರದ ಸಾಕ್ರೋಫಾನೋ ಎಂಬಲ್ಲಿ ಪುರುಷ ಧಾರ್ಮಿಕ ಸಭೆಗಳ ಮುಖ್ಯಸ್ಥರುಗಳು ತಮ್ಮ 103ನೇ ಸಭೆಯನ್ನು ಇಂದು ಹಮ್ಮಿಕೊಂಡಿದ್ದರು.

ಪೋಪ್ ಹದಿನಾಲ್ಕನೇ ಲಿಯೋ ಅವರು ಸಿನೋಡಲ್ ಹಾದಿಯ ಬಗ್ಗೆ ಈಗಾಗಲೇ ಮಾತನಾಡಿದ್ದಾರೆ. ನಾವೆಲ್ಲರೂ ಸಿನೋಡಲ್ ಧರ್ಮಸಭೆಯಾಗಿ ಅಂದರೆ ಪಯಣಿಸುವ ಧರ್ಮಸಭೆಯಾಗಿ ಸಾಗಬೇಕು ಎಂದು ಪೋಪ್ ಲಿಯೋ ಅವರ ಮಾತುಗಳನ್ನು ಕಾರ್ಡಿನಲ್ ಮಾರಿಯೋ ಗ್ರೆಕ್ ಅವರು ಪುನರುಚ್ಛರಿಸಿದರು. ಮುಂದುವರೆದು ಮಾತನಾಡಿದ ಅವರು "ಧರ್ಮಸಭೆಯು ಈಗಾಗಲೇ ಸಂಭ್ರಮದ ಹಂತವನ್ನು ದಾಟಿದ್ದು, ಇದೀಗ ನಾವೆಲ್ಲರೂ ಸ್ವಾಗತಿಸುವ ಅಥವಾ ಪಡೆದುಕೊಳ್ಳುವ ಹಂತದಲ್ಲಿದ್ದೇವೆ. ನಾವು ಪಡೆದುಕೊಳ್ಳುವ ನಿಟ್ಟಿನಲ್ಲಿ ಪ್ರಧಾನ ಪಾತ್ರವನ್ನು ವಹಿಸುವವರು ಪವಿತ್ರಾತ್ಮರು" ಎಂದು ಮಾಲ್ಟಾದಲ್ಲಿ ಜನಿಸಿದ ಕಾರ್ಡಿನಲ್ ಮಾರಿಯೋ ಗ್ರೆಕ್ ಅವರು ಹೇಳಿದ್ದಾರೆ.

ಇದೇ ವೇಳೆ ಅವರು ಪೋಪ್ ಹದಿನಾಲ್ಕನೇ ಲಿಯೋ ಅವರು ಸುವಾರ್ತಾ ಪ್ರಸಾರ ಉತ್ಸಾಹದ ಕುರಿತು ಗಮನವನ್ನು ಸೆಳೆದರು. ಪ್ರಾಚೀನ ಧಾರ್ಮಿಕ ಸಭೆಗಳ ಸದಸ್ಯರಾಗಿರುವ ಯಾಜಕರುಗಳೇ, ನೀವೆಲ್ಲರೂ ಧರ್ಮಸಭೆಯ ಸಿನೋಡಲ್ ಹಾದಿಯಲ್ಲಿ ಸುವಾರ್ತಾ ಪ್ರಸಾರದ ಕಿಡಿಗಳಾಗಬೇಕು" ಎಂದು ಅವರಿಗೆ ಕರೆ ನೀಡಿದ್ದಾರೆ.

23 ಮೇ 2025, 16:46