MAP

1978 ರಲ್ಲಿ ಕಾರ್ಡಿನಲ್ ಕರೋಲ್ ವೊಯ್ತೀವಾ (ಪೋಪ್ ದ್ವಿತೀಯ ಜಾನ್ ಪೌಲ್) ಅವರನ್ನು ಚುನಾಯಿಸಿದ ಕಾಂಕ್ಲೇವ್ 1978 ರಲ್ಲಿ ಕಾರ್ಡಿನಲ್ ಕರೋಲ್ ವೊಯ್ತೀವಾ (ಪೋಪ್ ದ್ವಿತೀಯ ಜಾನ್ ಪೌಲ್) ಅವರನ್ನು ಚುನಾಯಿಸಿದ ಕಾಂಕ್ಲೇವ್ 

ಕೊಠಡಿಯಲ್ಲಿ ಕಾರ್ಡಿನಲ್ಗಳನ್ನು ಕೂಡಿ ಹಾಕುವುದು "ಕಾಂಕ್ಲೆವ್" ಎಂಬ ಹೆಸರು ಪಡೆದ ಬಗೆ

ನೂತನ ಪೋಪನ್ನು ಚುನಾಯಿಸುವುದು ಯಾವಾಗಲೂ ಈಗಿನಂತೆ ನಿಯಮಗಳ ಪ್ರಕಾರ ಅಧಿಕೃತವಾಗಿರಲಿಲ್ಲ. 1271ರಲ್ಲಿ ನೂತನ ಪೋಪ್ ಆಯ್ಕೆ ಪ್ರಕ್ರಿಯೆ ಮೂರು ವರ್ಷಗಳನ್ನು ತೆಗೆದುಕೊಂಡ ಬಳಿಕ ಎಲ್ಲವೂ ಬದಲಾಯಿತು.

ವರದಿ: ವ್ಯಾಟಿಕನ್ ನ್ಯೂಸ್

ನೂತನ ಪೋಪನ್ನು ಚುನಾಯಿಸುವುದು ಯಾವಾಗಲೂ ಈಗಿನಂತೆ ನಿಯಮಗಳ ಪ್ರಕಾರ ಅಧಿಕೃತವಾಗಿರಲಿಲ್ಲ. 1271ರಲ್ಲಿ ನೂತನ ಪೋಪ್ ಆಯ್ಕೆ ಪ್ರಕ್ರಿಯೆ ಮೂರು ವರ್ಷಗಳನ್ನು ತೆಗೆದುಕೊಂಡ ಬಳಿಕ ಎಲ್ಲವೂ ಬದಲಾಯಿತು.

ಸಾಮಾನ್ಯವಾಗಿ ನಾವು ತಿಳಿದುಕೊಂಡಿರುವಂತೆ ರೋಮ್ ನಗರವು ಪೋಪರ ಅಧಿಕಾರ ಕೇಂದ್ರವಾಗಿರಲಿಲ್ಲ. ಧರ್ಮಸಭೆಯ ಇತಿಹಾಸದಲ್ಲಿ ಎರಡು ಅವಧಿಗೆ ಪೋಪ್ ಅವರು ರೋಮ್ ನಗರದ ಹೊರಗಿನಿಂದ ಪ್ರೇಷಿತ ಅಧಿಕಾರವನ್ನು ನಿರ್ವಹಿಸುತ್ತಿದ್ದರು.

"ಅವಿಗ್ನನ್ ಪೇಪಸಿ" ಕುರಿತು ನಿಮಗೆ ಈಗಾಗಲೇ ತಿಳಿದಿರಬಹುದು. 14ನೇ ಶತಮಾನದಲ್ಲಿ 68 ವರ್ಷಗಳ ಕಾಲ - ಪೋಪ್ ಹಾಗೂ ಫ್ರೆಂಚ್ ಅರಸನ ಮಧ್ಯೆ ಸಂಘರ್ಷವಿದ್ದ ಕಾರಣ - ಪೋಪರು ಫ್ರಾನ್ಸ್ ದೇಶದ ಅವಿಗ್ನನ್ ಎಂಬ ನಗರದಿಂದ ಅಧಿಕಾರವನ್ನು ನಡೆಸುತ್ತಿದ್ದರು.

13ನೇ ಶತಮಾನದಲ್ಲಿ ರೋಮ್ ನಗರದಲ್ಲಿ ಇದ್ದ ಎರಡು ರಾಜ ಕುಟುಂಬಗಳ ನಡುವೆ ಸದಾ ಯುದ್ಧ ನಡೆಯುತ್ತಿತ್ತು. ಗುಲೆಪ್ ಮತ್ತು ಗಿಬಿಲೆನ್ ಎಂಬ ಎರಡು ಕುಟುಂಬಗಳ ಮಧ್ಯೆ ಯಾರು ಬಿಶಪ್ಪರುಗಳನ್ನು ಹಾಗೂ ಮಠಾಧೀಶರನ್ನು ನೇಮಿಸಬೇಕು ಎಂಬ ವಿಷಯಕ್ಕೆ ಜಗಳ ನಡೆಯುತ್ತಿತ್ತು. ಒಂದು ಬಣ ರಾಜನಿಗೆ ಆಧಿಕಾರ ಇದೆ ಎಂದು ಹೇಳಿದರೆ ಮತ್ತೊಂದು ಬಣ ಪೋಪರಿಗೆ ಮಾತ್ರ ಅಧಿಕಾರ ಇದೆ ಎಂದು ವಾದಿಸುತ್ತಿತ್ತು.

ಈ ಮಧ್ಯೆ ರೋಮ್ ನಗರದಲ್ಲಿ ಕಾರ್ಯಭಾರ ಮಾಡುವುದು ಸುರಕ್ಷಿತವಲ್ಲ ಎಂದು ಅರಿತ ಅಂದಿನ ವಿಶ್ವಗುರು ನಾಲ್ಕನೇ ಅಲೆಕ್ಸಾಂಡರ್ ರವರು ಪವಿತ್ರ ಪೀಠವನ್ನು ರೋಮ್ ನಗರದಿಂದ 90 ಮೈಲಿಗಳ ದೂರದಲ್ಲಿದ್ದ ವಿತೆರ್ಬೋ ನಗರಕ್ಕೆ ವರ್ಗಾಯಿಸಿದರು.

1768ರಲ್ಲಿ ಧರ್ಮಸಭೆಯ ಪೀಠ ಬರಿದಾಗಿತ್ತು. ಆ ಸಂದರ್ಭದಲ್ಲಿ 19ರಿಂದ 20 ಕಾರ್ಡಿನಲ್ ಮತದಾರರು ನೂತನ ಪೋಪ್ ಅವರನ್ನು ಆಯ್ಕೆ ಮಾಡಲು ವಿತೆರ್ಬೋ ನಗರಕ್ಕೆ ಆಗಮಿಸಿದರು. ಅಂದು ಪೋಪರ ಆಯ್ಕೆ ಪ್ರಕ್ರಿಯೆ ಇತಿಹಾಸದಲ್ಲಿ ಅತ್ಯಂತ ಸುದೀರ್ಘ ಅವಧಿಯ ಪ್ರಕ್ರಿಯೆಯಾಗಿರಲಿದೆ ಎಂದು ಯಾರಿಗೂ ತಿಳಿದಿರಲಿಲ್ಲ.

ಹೀಗೆ ಅಂದಿನ ಕಾರ್ಡಿನಲ್ಲುಗಳು ಒಂದು ವರ್ಷದ ನಂತರವೂ ಸಹ ನೂತನ ಪೋಪ್ ಅವರನ್ನು ಆಯ್ಕೆ ಮಾಡಲು ವಿಫಲವಾದ ಹಿನ್ನೆಲೆ ಆ ನಗರದ ಜನರು ವಿಷಯವನ್ನು ತಮ್ಮ ಕೈಗೆತ್ತಿಕೊಂಡರು. ಕಾಡಿನಲ್ಲುಗಳು ಪರಸ್ಪರ ಅರ್ಥ ಮಾಡಿಕೊಂಡು ತಮ್ಮೊಳಗೆ ಒಬ್ಬ ಕಾರ್ಡಿನಲ್ ಅನ್ನು ಪೋಪ್ ಎಂದು ಆಯ್ಕೆ ಮಾಡುವ ನಿಟ್ಟಿನಲ್ಲಿ ಅವರ ಮೇಲೆ ಒತ್ತಡ ಹೇರಲು ಆ ನಗರದ ಜನರು ಕಾರ್ಡಿನಲ್'ಗಳನ್ನು ಪೋಪರ ಅರಮನೆ ಒಳಗೆ ಕೂಡಿಹಾಕಿ, ಬೇಗ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಹೇಳಿದರು. ಹೀಗೆ ಕೂಡಿ ಹಾಕಿದ ಕಾರ್ಡಿನಲ್ಲುಗಳಿಗೆ ಆಹಾರ ಮತ್ತು ನೀರಿನ ಸರಬರಾಜು ಸಹ ಮಿತಿಯುಳ್ಳದ್ದಾಗಿತ್ತು.

ಇದರ ಪರಿಣಾಮ ಅಂತಿಮವಾಗಿ, 1271ರಲ್ಲಿ ಅಂದರೆ ಮೂರು ಸುಧೀರ್ಘ ವರ್ಷಗಳ ನಂತರ ಪೋಪ್ 10ನೇ ಗ್ರೇಗೋರಿ ಅವರು ಚುನಾಯಿತರಾದರು.

ಇದರಿಂದ ಅದ್ದಿನ ಕಾರ್ಡಿನಲ್ಲುಗಳು ನೂತನ ಪೋಪ್ ಅವರನ್ನು ಆಯ್ಕೆ ಮಾಡುವ ಈ ಸುಧೀರ್ಘ ಪ್ರಕ್ರಿಯೆ ಧರ್ಮಸಭೆಯ ಒಳಿತಿಗೆ ಸರಿಯಾದ ಉಪಕ್ರಮವಲ್ಲ ಎಂದು ಅರಿತರು. ಪೋಪ್ 10ನೇ ಗ್ರೇಗೋರಿ ಅವರು ನೂತನ ಪೋಪ್ ಆಯ್ಕೆಯ ಕುರಿತು ನಿಯಮಗಳನ್ನು ರೂಪಿಸಿ, ಪ್ರೇಷಿತ ಸಂವಿಧಾನವನ್ನು ಪ್ರಕಟಿಸಿದರು. ಹೀಗೆ ಅಂದು ಅವರು ಪ್ರಕಟಿಸಿದ ಈ ನಿಯಮಗಳೇ ಪ್ರಸ್ತುತ ಆಯ್ಕೆ ಪ್ರಕ್ರಿಯೆಯ ಆಧಾರವಾಗಿದೆ.

06 ಮೇ 2025, 17:50