MAP

ಮುಂದಿನ ಪೋಪ್ ಹೊಂದಬೇಕಾದ ಅವಶ್ಯಕ ಗುಣಗಳ ಕುರಿತು ಚರ್ಚಿಸಿದ ಕಾರ್ಡಿನಲ್ಲುಗಳ 12ನೇ ಸಭೆ

ಮುಂದಿನ ಪೋಪ್ ಆಯ್ಕೆ ಪ್ರಕ್ರಿಯೆ ಆರಂಭವಾಗುವ ದಿನಕ್ಕೆ ಮುಂಚಿತವಾಗಿ ಕಾಡಿನಲ್ಲುಗಳು ಇಂದು ತಮ್ಮ 12ನೇ ಹಾಗೂ ಅಂತಿಮ ಸಭೆಯನ್ನು ನಡೆಸಿದ್ದಾರೆ. ಈ ಸಭೆಯಲ್ಲಿ ಮುಂದಿನ ಪೋಪ್ ಹೊಂದಿರಬೇಕಾದ ಅವಶ್ಯಕ ಗುಣಗಳ ಕುರಿತು ಚರ್ಚಿಸಿದ್ದಾರೆ. ಮುಂದಿನ ಪೋಪ್, ಒಬ್ಬ ನಿಜವಾದ ಕುರಿಗಾಹಿಯಾಗಿ, ಸೇತುವೆಗಳನ್ನು ನಿರ್ಮಿಸುವ ಹಾಗೂ ಸುಧಾರಣೆಗಳನ್ನು ಉತ್ತೇಜಿಸುವ ವ್ಯಕ್ತಿಯಾಗಿ ಇರಬೇಕೆಂದು ಅಭಿಪ್ರಾಯಪಟ್ಟಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಮುಂದಿನ ಪೋಪ್ ಆಯ್ಕೆ ಪ್ರಕ್ರಿಯೆ ಆರಂಭವಾಗುವ ದಿನಕ್ಕೆ ಮುಂಚಿತವಾಗಿ ಕಾಡಿನಲ್ಲುಗಳು ಇಂದು ತಮ್ಮ 12ನೇ ಹಾಗೂ ಅಂತಿಮ ಸಭೆಯನ್ನು ನಡೆಸಿದ್ದಾರೆ. ಈ ಸಭೆಯಲ್ಲಿ ಮುಂದಿನ ಪೋಪ್ ಹೊಂದಿರಬೇಕಾದ ಅವಶ್ಯಕ ಗುಣಗಳ ಕುರಿತು ಚರ್ಚಿಸಿದ್ದಾರೆ. ಮುಂದಿನ ಪೋಪ್, ಒಬ್ಬ ನಿಜವಾದ ಕುರಿಗಾಹಿಯಾಗಿ, ಸೇತುವೆಗಳನ್ನು ನಿರ್ಮಿಸುವ ಹಾಗೂ ಸುಧಾರಣೆಗಳನ್ನು ಉತ್ತೇಜಿಸುವ ವ್ಯಕ್ತಿಯಾಗಿ ಇರಬೇಕೆಂದು ಅಭಿಪ್ರಾಯಪಟ್ಟಿದ್ದಾರೆ.

ಮುಂದಿನ ಪೋಪ್ ಆಯ್ಕೆ ಪ್ರಕ್ರಿಯೆ ಆರಂಭವಾಗುವ ದಿನಕ್ಕೆ ಮುಂಚಿತವಾಗಿ ಕಾಡಿನಲ್ಲುಗಳು ಇಂದು ತಮ್ಮ 12ನೇ ಹಾಗೂ ಅಂತಿಮ ಸಭೆಯನ್ನು ನಡೆಸಿದ್ದಾರೆ. ಈ ಸಭೆಯಲ್ಲಿ ಮುಂದಿನ ಪೋಪ್ ಹೊಂದಿರಬೇಕಾದ ಅವಶ್ಯಕತೆ ಗುಣಗಳ ಕುರಿತು ಚರ್ಚಿಸಿದ್ದಾರೆ. ಮುಂದಿನ ಪೋಪ್, ಒಬ್ಬ ನಿಜವಾದ ಕುರಿಗಾಹಿಯಾಗಿ, ಸೇತುವೆಗಳನ್ನು ನಿರ್ಮಿಸುವ ಹಾಗೂ ಸುಧಾರಣೆಗಳನ್ನು ಉತ್ತೇಜಿಸುವ ವ್ಯಕ್ತಿಯಾಗಿ ಇರಬೇಕೆಂದು ಅಭಿಪ್ರಾಯಪಟ್ಟಿದ್ದಾರೆ.

ವ್ಯಾಟಿಕನ್ನಿನ ಮಾಧ್ಯಮ ಪೀಠದ ನಿರ್ದೇಶಕರಾಗಿರುವ ಮತ್ತಿಯೋ ಬ್ರೂನಿ ಅವರು ಇಂದು ನಡೆದ ಕಾಡಿನಲ್ಗಳ ಸಭೆಯ ಕುರಿತು ಪತ್ರಿಕಾ ಹೇಳಿಕೆಯನ್ನು ಬಿಡುಗಡೆಗೊಳಿಸಿದ್ದಾರೆ. ಈ ಹೇಳಿಕೆಯಲ್ಲಿ ಮಾಹಿತಿಯನ್ನು ನೀಡಿರುವ ಅವರು ಇಂದು 173 ಕಾರ್ಡಿನಲ್ಲುಗಳು ಸಭೆಯಲ್ಲಿ ಹಾಜರಿದ್ದರು. ಅವರ ಪೈಕಿ 130 ಜನರು ಕಾರ್ಡಿನಲ್ ಮತದಾರರಾಗಿದ್ದಾರೆ ಎಂದು ಹೇಳಿದರು.

ಬೆಳಿಗ್ಗೆ 9:00 ಗಂಟೆಗೆ ಸಭೆ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಈ ಸಭೆಯಲ್ಲಿ ಸುಮಾರು 26 ಜನ ಕಾರ್ಡಿನಲ್ಲುಗಳು ವಿವಿಧ ವಿಷಯಗಳ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು ಎಂದು ಮತ್ತಿಯೋ ಬ್ರೂನಿ ಮಾಹಿತಿ ನೀಡಿದರು.

ಈ ಸಭೆಯಲ್ಲಿ ಪೋಪ್ ಫ್ರಾನ್ಸಿಸ್ ಅವರ ಸುಧಾರಣೆಗಳು ಅಂದರೆ ಲೈಂಗಿಕ ದೌರ್ಜನ್ಯದ ಕುರಿತು ಕಾನೂನುಗಳನ್ನು ರೂಪಿಸುವುದು, ಆರ್ಥಿಕ ಸಮಸ್ಯೆಗಳು, ರೋಮನ್ ಕೂರಿಯಾ, ಸಿನೋಡಾಲಿಟಿ, ಶಾಂತಿ ಮೂಡಿಸುವ ಕುರಿತು ಕೈಗೊಳ್ಳುವ ಉಪಕ್ರಮಗಳು, ಮತ್ತು ಸೃಷ್ಟಿಯೆಡೆಗಿನ ಕಾಳಜಿ ಕುರಿತಂತೆ ಚರ್ಚೆಗಳು ನಡೆದು ಅವುಗಳನ್ನು ಮುಂದುವರೆಸಿಕೊಂಡು ಹೋಗಬೇಕೆಂಬ ಅಭಿಪ್ರಾಯಗಳು ವ್ಯಕ್ತವಾದವು.

ಇದೇ ವೇಳೆ, ಮುಂದಿನ ಪೋಪ್, ಒಬ್ಬ ನಿಜವಾದ ಕುರಿಗಾಹಿಯಾಗಿ, ಸೇತುವೆಗಳನ್ನು ನಿರ್ಮಿಸುವ ಹಾಗೂ ಸುಧಾರಣೆಗಳನ್ನು ಉತ್ತೇಜಿಸುವ ವ್ಯಕ್ತಿಯಾಗಿ ಇರಬೇಕೆಂದು ಕಾಡಿನಲ್ಲುಗಳು ಅಭಿಪ್ರಾಯಪಟ್ಟಿದ್ದಾರೆ.

ಮುಂದುವರೆದು ಕ್ಯಾನನ್ ಲಾ, ಪೋಪ್ ಅವರ ಅಧಿಕಾರ, ಧರ್ಮಸಭೆಯಲ್ಲಿ ಕಾರ್ಡಿನಲ್ಗಳ ವಿಭಜನೆ ಹಾಗೂ ಪಾತ್ರದ ಕುರಿತು ಚರ್ಚೆ, ಕ್ರಿಸ್ತ ರಾಜರ ಹಬ್ಬ ಹಾಗೂ ಬಡವರ ವಿಶ್ವದಿನದ ನಡುವಿನ ಸಮಯ ಮತ್ತು ದಿನಾಂಕದ ಕುರಿತು ಚರ್ಚೆಗಳು ನಡೆದಿದೆ. ಮುಂದುವರೆದು ಧರ್ಮಸಭೆಗೆ ಸಂಬಂಧಪಟ್ಟಂತೆ ಅನೇಕ ವಿಷಯಗಳ ಕುರಿತು ಚರ್ಚೆಗಳು ಈ ಸಭೆಯಲ್ಲಿ ನಡೆದಿವೆ ಎಂದು ಮಾಧ್ಯಮ ಪೀಠದ ನಿರ್ದೇಶಕರಾಗಿರುವ ಮತ್ತಿಯೋ ಬ್ರೂನಿ ಅವರು ಹೇಳಿದ್ದಾರೆ.

ನಾಳೆಯ ವೇಳಾಪಟ್ಟಿಯ ಕುರಿತು ಮಾಹಿತಿ

ನಾಳೆ ನೂತನ ಪೋಪ್ ಅವರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಆರಂಭಗೊಳ್ಳುತ್ತಿರುವ ಹಿನ್ನೆಲೆ, ನಾಳಿನ ವೇಳಾಪಟ್ಟಿಯ ಕುರಿತು ಮಾಧ್ಯಮ ಪೀಠದ ನಿರ್ದೇಶಕರಾಗಿರುವ ಮತ್ತಿಯೋ ಬ್ರೂನಿ ಮಾಹಿತಿಯನ್ನು ನೀಡಿದ್ದಾರೆ.

ನಾಳೆ ಬೆಳಗ್ಗೆ ಮೊದಲಿಗೆ ಬಲಿ ಪೂಜೆ "ಮಾಸ್ ಪ್ರೊ ಎಲ್ಲಿಜೇಂದೊ ಪೊಂತಿಫೀಚೆ" ಇರುತ್ತದೆ. ನಂತರ ಸಂಜೆ 3:45ಕ್ಕೆ ಕಾರ್ಡಿನಲ್ಲುಗಳು ಸಿಸ್ಟನ್ ಚಾಪಲ್ ಗೆ ಮೆರವಣಿಗೆಯಲ್ಲಿ ಬರುತ್ತಾರೆ.

ಗುರುವಾರ ಬೆಳಿಗ್ಗೆ ಮತ್ತೆ ಕಾಡಿನಲ್ಲುಗಳು ಬೆಳಿಗ್ಗೆ 8:15ಕ್ಕೆ ಪ್ರೇಷಿತ ಅರಮನೆಗೆ ಬರುತ್ತಾರೆ ಹಾಗೂ ಅಲ್ಲಿ ಫಲಿಪೂಜೆಯನ್ನು ಅರ್ಪಿಸುತ್ತಾರೆ. ತದನಂತರ ಬೆಳಗ್ಗೆ 9:15ಕ್ಕೆ ಬೆಳಗಿನ ಪ್ರಾರ್ಥನೆಯನ್ನು ಮುಗಿಸಿ ಮತದಾನವನ್ನು ಆರಂಭಿಸುತ್ತಾರೆ.

ನೂತನ ಪೋಪ್ ಆಯ್ಕೆ ಆಗಿದ್ದಾರೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳುವ ಹೊಗೆಯನ್ನು 10:30 ನಂತರ ಹಾಗೂ 12 ಗಂಟೆಯ ನಂತರ ನಿರೀಕ್ಷಿಸಬಹುದಾಗಿದೆ ಎಂದು ಹೇಳಿದ್ದಾರೆ. ಮಧ್ಯಾಹ್ನ ಊಟಕ್ಕೆ ಕಾಸಾ ಸಾಂತಾ ಮಾರ್ಥ ನಿವಾಸಕ್ಕೆ ತೆರಳುವ ಕಾರ್ಡಿನಲ್ಲುಗಳು, ಮಧ್ಯಾಹ್ನ 3:45 ಕ್ಕೆ ಮತ್ತೆ ಬಂದು, ಸಂಜೆ 4:30ಕ್ಕೆ ಮತದಾನವನ್ನು ಮುಂದುವರಿಸುತ್ತಾರೆ. ಸಂಜೆ 5:30 ನಂತರ ಅಥವಾ ಏಳು ಗಂಟೆಯ ನಂತರ ನೂತನ ಪೋಪ್ ಆಯ್ಕೆ ಆಗಿದ್ದಾರೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳುವ ಹೊಗೆಯನ್ನು ನಿರೀಕ್ಷಿಸಬಹುದು ಎಂದು ಅವರು ಹೇಳಿದ್ದಾರೆ.

06 ಮೇ 2025, 15:44