ಪೊಂಟಿಫಿಕಲ್ ಆಕಾಡೆಮಿ ಫಾರ್ ಲೈಫ್ ಸಂಸ್ಥೆಯ ಅಧ್ಯಕ್ಷರಾಗಿ ಅವಧಿಯನ್ನು ಪೂರ್ಣಗೊಳಿಸಿದ ಆರ್ಚ್'ಬಿಷಪ್ ಪಾಲಿಯ
ವರದಿ: ವ್ಯಾಟಿಕನ್ ನ್ಯೂಸ್
ಆರ್ಚ್'ಬಿಷಪ್ ವಿನ್ಸೆಂಝೋ ಪಾಲಿಯ ಅವರು ಇಟಾಲಿಯನ್ ದಿನಪತ್ರಿಕೆ ಲಾ ಸ್ಟಾಂಪಾ ಜೊತೆಗೆ ಮಾತನಾಡಿದ್ದು, ಪೊಂಟಿಫಿಕಲ್ ಆಕಾಡೆಮಿ ಫಾರ್ ಲೈಫ್ ಸಂಸ್ಥೆಯ ಅಧ್ಯಕ್ಷರಾಗಿ ಅವಧಿಯನ್ನು ಪೂರ್ಣಗೊಳಿಸಿದ ಬಗೆ ಚರ್ಚಿಸಿದ್ದಾರೆ. ಎಂಬತ್ತು ವರ್ಷಗಳನ್ನು ಪೂರೈಸಿದ ನಂತರ; ಸ್ವಯಂಚಾಲಿತವಾಗಿ ಎಲ್ಲಾ ನೇಮಕಾತಿಗಳು ರದ್ದಾಗುತ್ತವೆ ಎಂದು ಹೇಳಿದ್ದಾರೆ.
2016 ರಲ್ಲಿ ಪೋಪ್ ಫ್ರಾನ್ಸಿಸ್ ಅವರು ಆರ್ಚ್'ಬಿಷಪ್ ವಿನ್ಸೆಂಝೋ ಪಾಲಿಯ ಅವರನ್ನು ಪೊಂಟಿಫಿಕಲ್ ಆಕಾಡೆಮಿ ಫಾರ್ ಲೈಫ್ ಸಂಸ್ಥೆಯ ಅಧ್ಯಕ್ಷರಾಗಿ ನೇಮಿಸಿದ್ದರು. ಸುಮಾರು 10 ವರ್ಷಗಳ ಕಾಲ ಇವರು ಈ ಸಂಸ್ಥೆಯನ್ನು ಮುನ್ನಡೆಸಿದ್ದಾರೆ.
ಇತ್ತೀಚಿಗಷ್ಟೇ ಆರ್ಚ್'ಬಿಪಷ್ ಪಾಲಿಯಾ ಅವರು ಅರ್ಜೆಂಟೀನಾದಿಂದ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡ ನಂತರ ಬಂದಿದ್ದು, ಯಾವುದೇ ಹಂತದಲ್ಲಿ ಜೀವವನ್ನು ರಕ್ಷಿಸಬೇಕು ಎಂದು ಹೇಳಿದ್ದಾರೆ.
ಕೆಲವು ದಿನಗಳ ಹಿಂದೆ ಪೋಪ್ ಹದಿನಾಲ್ಕನೇ ಲಿಯೋ ಅವರು ಪೊಂಟಿಫಿಕಲ್ ದ್ವಿತೀಯ ಜಾನ್ ಪೌಲ್ ಇನ್ಸ್ಟಿಟ್ಯೂಟ್ ಫಾರ್ ಥಿಯಾಲಜಿ, ಫ್ಯಾಮಿಲಿ ಸೈನ್ಸಸ್ ಸಂಸ್ಥೆಗೆ ಗ್ರ್ಯಾಂಡ್ ಚಾನ್ಸಲರ್ ಆಗಿ ಕಾರ್ಡಿನಲ್ ಬಾಲ್ದೆಸ್ಸೆರಿ ರೈನಾ ಅವರನ್ನು ಆರ್ಚ್'ಬಿಷಪ್ ವಿನ್ಸೆಂಝೋ ಪಾಲಿಯ ಅವರ ಉತ್ತರಾಧಿಕಾರಿಯನ್ನಾಗಿ ನೇಮಿಸಿದರು.
"ಎಂಬತ್ತು ವರ್ಷಗಳನ್ನು ಪೂರೈಸಿದ ನಂತರ; ಸ್ವಯಂಚಾಲಿತವಾಗಿ ಎಲ್ಲಾ ನೇಮಕಾತಿಗಳು ರದ್ದಾಗುತ್ತವೆ. ಫೋಪ್ ಫ್ರಾನ್ಸಿಸ್ ಅವರು ತೀರಿಕೊಂಡ ದಿನವೇ ನನಗೆ 80 ವರ್ಷ ವಯಸ್ಸಾಯಿತು. ಆದುದರಿಂದ ಈ ಕುರಿತು ಅಧಿಸೂಚನೆ ಬರುವುದು ತಡವಾಯಿತು" ಎಂದು ಆರ್ಚ್'ಬಿಷಪ್ ಪಾಲಿಯ ಅವರು ಹೇಳಿದ್ದಾರೆ.