MAP

ನೂತನ ಪೋಪ್ ಆಯ್ಕೆ ಪ್ರಕ್ರಿಯೆಯಲ್ಲಿ ತಮಗಾಗಿ ಪ್ರಾರ್ಥಿಸುವಂತೆ ಭಕ್ತಾಧಿಗಳಿಗೆ ಮನವಿ ಮಾಡಿದ ಕಾರ್ಡಿನಲ್ಲುಗಳು

ಕಾರ್ಡಿನಲ್ಲುಗಳ ಪರಿಷತ್ತಿನ ಸದಸ್ಯರಾದ ಕಾರ್ಡಿನಲ್ಲುಗಳು ನೂತನ ಪೋಪರ ಆಯ್ಕೆಯಲ್ಲಿ ಪವಿತ್ರಾತ್ಮ ಪ್ರೇರಿತರಾಗಿ ಉತ್ತಮ ಪೋಪರನ್ನು ಆಯ್ಕೆಮಾಡಲು ತಮಗಾಗಿ ಪ್ರಾರ್ಥಿಸುವಂತೆ ಜಗತ್ತಿನ ಎಲ್ಲಾ ಕಥೋಲಿಕರಿಗೆ ಮನವಿ ಮಾಡಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಕಾರ್ಡಿನಲ್ಲುಗಳ ಪರಿಷತ್ತಿನ ಸದಸ್ಯರಾದ ಕಾರ್ಡಿನಲ್ಲುಗಳು ನೂತನ ಪೋಪರ ಆಯ್ಕೆಯಲ್ಲಿ ಪವಿತ್ರಾತ್ಮ ಪ್ರೇರಿತರಾಗಿ ಉತ್ತಮ ಪೋಪರನ್ನು ಆಯ್ಕೆಮಾಡಲು ತಮಗಾಗಿ ಪ್ರಾರ್ಥಿಸುವಂತೆ ಜಗತ್ತಿನ ಎಲ್ಲಾ ಕಥೋಲಿಕರಿಗೆ ಮನವಿ ಮಾಡಿದ್ದಾರೆ.

ಪವಿತ್ರ ಪೀಠವು ಕಾರ್ಡಿನಲ್ಲುಗಳ ಈ ಮನವಿಯನ್ನು ಬುಧವಾರ ಪ್ರಕಟಿಸಿದೆ.

"ವ್ಯಾಟಿಕನ್ ನಗರದಲ್ಲಿ ಈಗಾಗಲೇ ಸಾಮಾನ್ಯ ಸಭೆಗಳನ್ನು ನಡೆಸುತ್ತಿರುವ ಕಾರ್ಡಿನಲ್ಲುಗಳ ಪರಿಷತ್ತಿನ ಸದಸ್ಯರು ಜಗತ್ತಿನ ಜಗತ್ತಿನ ಎಲ್ಲಾ ಕಥೋಲಿಕರಿಗೆ ನೂತನ ಪೋಪರ ಆಯ್ಕೆಯಲ್ಲಿ ಪವಿತ್ರಾತ್ಮ ಪ್ರೇರಿತರಾಗಿ ಉತ್ತಮ ಪೋಪರನ್ನು ಆಯ್ಕೆಮಾಡಲು ತಮಗಾಗಿ ಪ್ರಾರ್ಥಿಸುವಂತೆ ಮನವಿ ಮಾಡಿದ್ದಾರೆ.

"ಕ್ರಿಸ್ತನ ಒಂದೇ ದೇಹದ ಎಲ್ಲಾ ಸದಸ್ಯರ ಐಕ್ಯತೆಯನ್ನು ಉತ್ತೇಜಿಸುವ ಧರ್ಮಸಭೆಯಲ್ಲಿ ನಿಜವಾದ ಶಕ್ತಿ ಪ್ರಾರ್ಥನೆಯಾಗಿದೆ" ಎಂದು ಅವರು ಹೇಳಿದರು.

"ಮುಂದಿನ ಕಾರ್ಯದ ಅಗಾಧತೆ ಮತ್ತು ವರ್ತಮಾನದ ತುರ್ತುಸ್ಥಿತಿಯನ್ನು ಎದುರಿಸುತ್ತಿರುವಾಗ, ಪವಿತ್ರಾತ್ಮದ ಕ್ರಿಯೆಗೆ ವಿಧೇಯರಾಗಿ, ನಮ್ಮ ಸ್ವರ್ಗೀಯ ತಂದೆಯ ಅನಂತ ಬುದ್ಧಿವಂತಿಕೆ ಮತ್ತು ವಿನಮ್ರ ಸಾಧನಗಳಾಗಿ ನಮ್ಮನ್ನು ನಾವು ಮಾಡಿಕೊಳ್ಳುವುದು ಮೊದಲನೆಯದಾಗಿ ಅಗತ್ಯವಾಗಿದೆ" ಎಂದು ಕಾರ್ಡಿನಲ್'ಗಳು ಹೇಳಿದರು.

ಇದೇ ವೇಳೆ ಈ ಪ್ರಕ್ರಿಯೆಯಲ್ಲಿ ಮಾತೆ ಮರಿಯಮ್ಮನವರ ಮಧ್ಯಸ್ಥಿಕೆಯನ್ನೂ ಸಹ ಅವರು ಬೇಡಿದ್ದಾರೆ.

30 ಏಪ್ರಿಲ್ 2025, 16:17