MAP

ನೈಸಿಯಾ ವಿಶ್ವಾಸ ಸಂಗ್ರಹ: ಕ್ರೈಸ್ತ ಗುರುತಿನ ಅಭಿವ್ಯಕ್ತಿ

ಎಕ್ಯುಮೆನಿಕಲ್ ಕೌನ್ಸಿಲ್ ಆಫ್ ನೈಸಿಯಾ (ನೈಸಿಯಾ ಸಮ್ಮೇಳನ) ಕ್ಕೆ 1700 ವರ್ಷವಾಗಿರುವ ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ದೈವಶಾಸ್ತ್ರ ಆಯೋಗವು "ಯೇಸು ಕ್ರಿಸ್ತ, ದೇವರ ಪುತ್ರ, ರಕ್ಷಕ" ಎಂಬ ಪುಸ್ತಕವನ್ನು ಪ್ರಕಟಿಸಿದೆ. ಇದನ್ನು ಮೊದಲ ಜಾಗತಿಕ ವಿಶ್ವಾಸ ಪ್ರಮಾಣವನ್ನು ರೂಪಿಸಿದ, ಹಾಗೂ ಆ ಮೂಲಕ ಯೇಸು ಕ್ರಿಸ್ತರೇ ವಿಶ್ವದ ಅರಸ ಮತ್ತು ರಕ್ಷಕ ಎಂಬುದನ್ನು ಸಾರಿದ ನೈಸಿಯಾ ಸಮ್ಮೇಳನಕ್ಕೆ ಅರ್ಪಿಸಿದೆ.

ವರದಿ: ವ್ಯಾಟಿಕನ್ ನ್ಯೂಸ್

ಕ್ರಿಸ್ತಶಕ 325 ರಲ್ಲಿ ನಡೆದ ನೈಸಿಯಾ ಸಮ್ಮೇಳನದ 1700 ವರ್ಷಾಚರಣೆಯನ್ನು ಕ್ರೈಸ್ತ ಜಗತ್ತು ಈ ವರ್ಷ ಮೇ 20 ರಂದು ಆಚರಿಸುತ್ತದೆ. ಅಂದು ನೈಸಿಯಾ ಎಂಬಲ್ಲಿ ನಡೆದ ಈ ಸಮ್ಮೇಳನದಲ್ಲಿ ಪ್ರಪ್ರಥಮ ಬಾರಿಗೆ ಧರ್ಮಸಭೆಗೆ ವಿಶ್ವಾಸ ಪ್ರಮಾಣ ಎಂಬುದು ರೂಪಿತವಾಯಿತು. ಯೇಸು ಕ್ರಿಸ್ತರು ತಂದೆಯ ಪುತ್ರ ಹಾಗೂ ಈ ಜಗದ ರಕ್ಷಕ ಎಂದು ಸಾರುವ, ಪಿತನ, ಸುತನ ಮತ್ತು ಪವಿತ್ರಾತ್ಮರ ಸಮ್ಮುಖದಲ್ಲಿ ತ್ರಯೇಕ ದೇವರನ್ನು ಘೋಷಿಸುವ, ಒಂದೇ ಕಥೋಲಿಕ ಧರ್ಮಸಭೆ ಎಂಬುದರ ಪ್ರಮಾಣವು ಈ ಸಭೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರವರ್ಧಮಾನಕ್ಕೆ ಬಂದಿರುತ್ತದೆ.

ಈ ಮಹಾ ಸಮ್ಮೇಳನವನ್ನು ಚಕ್ರವರ್ತಿ ಕಾನ್ಸ್ಟಂಟೈನನು ಆಯೋಜಿಸಿದ್ದನು, ಇದರ ಉದ್ದೇಶ ಕ್ರೈಸ್ತ ನಂಬಿಕೆ ಹಾಗೂ ಆಚರಣೆಗಳಿಗೆ ಭದ್ರ ದೈವಶಾಸ್ತ್ರದ ಬುನಾದಿಯನ್ನು ಹಾಕಬೇಕು ಎಂಬುದಾಗಿತ್ತು.

124 ಪ್ಯಾರಾಗಳಿರುವ "ಯೇಸು ಕ್ರಿಸ್ತ, ದೇವರ ಪುತ್ರ, ರಕ್ಷಕ ಎಂಬ ಪುಸ್ತಕವು ಕೇವಲ ಐತಿಹಾಸಿಕ ಮಾತ್ರ ಆಗಿರದೆ ಧರ್ಮಸಭೆಯೊಂದಿಗೆ ಒಂದೇ ಪ್ರೇಷಿತ ಅಭಿವ್ಯಕ್ತಿಯಲ್ಲಿ ಭಕ್ತಾಧಿಗಳು ಹೇಗಿರಬೇಕು ಎಂಬುದನ್ನು ಸೂಚಿಸುತ್ತದೆ ಹಾಗೂ ಅಂತಹ ನಮ್ಮ ಕ್ರಿಯೆಗಳ ಜ್ಞಾಪನವಾಗಿದೆ.

ದೈವಶಾಸ್ತ್ರದ ವಿವಿಧ ವಿಷಯಗಳು ಹಾಗೂ ಪದಪುಂಜಗಳ ಮೇಲೆ ಈ ಪುಸ್ತಕವು ವಿವರಣೆಯನ್ನು ನೀಡಿದ್ದು, ಹಲವು ಪವಿತ್ರ ಸಂಕೇತಗಳು ಹೇಗೆ ಪ್ರಸ್ತುತ ಸಮಾಜದಲ್ಲಿ ಅರ್ಥವನ್ನು ಹೊಂದಿವೆ ಎಂಬ ಕುರಿತೂ ಸಹ ಇದು ವಿವರಣೆಯನ್ನು ನೀಡುತ್ತದೆ ಎಂದು ತಿಳಿದು ಬಂದಿದೆ.   

03 ಏಪ್ರಿಲ್ 2025, 12:37