ವ್ಯಾಟಿಕನ್ನಿನಲ್ಲಿ ಆರಂಭವಾದ ಕಾರ್ಡಿನಲ್ಲುಗಳ ಸಾರ್ವತ್ರಿಕ ಸಭೆ
ವರದಿ: ವ್ಯಾಟಿಕನ್ ನ್ಯೂಸ್
ಪೋಪ್ ಫ್ರಾನ್ಸಿಸ್ ಅವರ ನಿಧನದ ನಂತರ ಕಾರ್ಡಿನಲ್ಲುಗಳ ಮೊದಲ ಸಾರ್ವತ್ರಿಕ ಸಭೆಯು ವ್ಯಾಟಿಕನ್ನಿನಲ್ಲಿ ಆರಂಭವಾಗಿದೆ. ಈ ಸಭೆಯು ಪ್ರಾರ್ಥನೆ ಹಾಗೂ ಚಿಂತನೆಯ ಮೂಲಕ ಆರಂಭವಾಗಿದ್ದು, ಮುಂಬರುವ ಎಲ್ಲಾ ಕಾರ್ಯಕ್ರಮಗಳ ಸಿದ್ಧತೆಯಾಗಿದೆ.
ಈ ಸಭೆಯ ಆರಂಭದಲ್ಲಿ ಪೋಪ್ ಫ್ರಾನ್ಸಿಸ್ ಅವರ ಆತ್ಮಶಾಂತಿಗಾಗಿ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ಸಭೆಯಲ್ಲಿ ನೆರೆದಿದ್ದ ಕಾರ್ಡಿನಲ್ಲುಗಳು ಸಾರ್ವತ್ರಿಕ ಪ್ರಾರ್ಥನೆಯ ನಂತರ ಒಂದು ನಿಮಿಷದ ಮೌನಾಚರಣೆಯನ್ನು ಮಾಡುವ ಮೂಲಕ ಪೋಪ್ ಫ್ರಾನ್ಸಿಸ್ ಅವರಿಗೆ ಗೌರವವನ್ನು ಸಲ್ಲಿಸಿದರು.
ಸುಮಾರು 60 ಕಾರ್ಡಿನಲ್ಲುಗಳು ಈ ಸಭೆಯಲ್ಲಿ ಭಾಗವಹಿಸಿದ್ದು, ಪ್ರೇಷಿತ ಸಂವಿಧಾನ ಯೂನಿವರ್ಸಿ ದೊಮಿನಿಚಿ ಗ್ರೇಜಿಸ್ ಪ್ರಕಾರ "ಇಂಟರ್ರೆಗ್ನುಂ" ಅಂದರೆ ಪೋಪ್ ಇಲ್ಲದ ಅವಧಿಯಲ್ಲಿ ಹಾಗೂ ಮುಂದಿನ ಪೋಪ್ ಅವರನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಎಲ್ಲಾ ವಿಷಯಗಳಲ್ಲಿಯೂ ಅತ್ಯಂತ ಗೌಪ್ಯತೆಯನ್ನು ಕಾಪಾಡುವುದಾಗಿ ಪ್ರಮಾಣವನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸಾಂಪ್ರದಾಯಿಕ ಪವಿತ್ರಾತ್ಮರ ಗೀತೆಯನ್ನು ಹಾಡಲಾಯಿತು.
ಈ ಸಭೆಯಲ್ಲಿ ಕಾರ್ಡಿನಲ್ಲುಗಳ ಜವಾಬ್ದಾರಿಗಳೇನು ಎಂಬ ಕುರಿತು ಮಾಹಿತಿಯನ್ನು ನೀಡುವ ಪ್ರೇಷಿತ ಸಂವಿಧಾನದ 12 ಮತ್ತು 13ನೇ ಪ್ಯಾರಗಳನ್ನು ಜೋರಾಗಿ ಓದಿ, ಹೇಳಲಾಯಿತು. ಇದೇ ವೇಳೆ ಕ್ಯಾಮರಲೆಂಗೋ ಕಾರ್ಡಿನಲ್ ಫಾರೆಲ್ ಅವರು ಪೋಪ್ ಫ್ರಾನ್ಸಿಸ್ ಅವರ ಕೊನೆಯ ಹೇಳಿಕೆಯನ್ನು ಓದಿದರು.
ನಾಳೆ ಬೆಳಿಗ್ಗೆ ಕಾರ್ಡಿನಲ್ಲುಗಳ ಎರಡನೇ ಸಭೆಯು ಸಿನೋಡ್ ಹಾಲ್'ನಲ್ಲಿ ನಡೆಯಲಿದೆ. ಇದೇ ವೇಳೆ ಪೋಪ್ ಫ್ರಾನ್ಸಿಸ್ ಅವರ ಅಂತ್ಯಕ್ರಿಯೆಯ ಕುರಿತು ಈ ಸಭೆಯಲ್ಲಿ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ.