MAP

ಸಂತ ಜಾನ್ ಪಾಲ್ II ಸಂತ ಜಾನ್ ಪಾಲ್ II   (ANSA)

ಸಂತ ಜಾನ್ ಪಾಲ್ II ರ ಪುಣ್ಯಸ್ಮರಣೆಯ 20ನೇ ವಾರ್ಷಿಕೋತ್ಸವದಂದು ಸಾವಿರಾರು ಜನರು ಪ್ರಾರ್ಥನಾ ಜಾಗರಣೆಗಾಗಿ ಒಟ್ಟುಗೂಡಿದ್ದರು

ಜಾನ್ ಪಾಲ್ II ರ ಪುಣ್ಯಸ್ಮರಣೆಯ 20ನೇ ವಾರ್ಷಿಕೋತ್ಸವದಂದು, ಪೋಲಿಷ್ ಧರ್ಮಾಧ್ಯಕ್ಷರುಗಳ ಸಮ್ಮೇಳನದ ಅಧ್ಯಕ್ಷರಾದ ಆರ್ಚ್‌ಬಿಷಪ್ ತದೆಯುಸ್ ವೋಜ್ಡಾ ನೇತೃತ್ವದಲ್ಲಿ ಸಂತ ಪೇತ್ರರ ಚೌಕದಲ್ಲಿ ವಿಶೇಷ ಸಂಜೆ ಪ್ರಾರ್ಥನಾ ಜಾಗರಣೆಗಾಗಿ ಸಾವಿರಾರು ಜನರು ಸೇರಿದ್ದರು.

ವರದಿ: ವ್ಯಾಟಿಕನ್ ನ್ಯೂಸ್

ಇಂದು ನಾವು ದೇವರಿಗೆ ಕೃತಜ್ಞತೆಯನ್ನು ಸಲ್ಲಿಸಬೇಕಾಗಿದೆ. ಇತಿಹಾಸದ ಪುಟಗಳಲ್ಲಿ ಸಂತ ಜಾನ್ ಪೌಲ್ ರವರ ಸೇವೆ ನಿಜವಾಗಿಯೂ ಶ್ಲಾಘನೀಯವಾಗಿದೆ. ಇಪ್ಪತ್ತು ವರ್ಷಗಳ ಹಿಂದೆ ಇದೇ ಸಂತ ಪೇತ್ರರ ಚೌಕದಲ್ಲಿ ಅನೇಕ ಜನರು ಮಂಡಿಯೂರಿ ಕಣ್ಣೀರಿಡುತ್ತಾ, ನಮ್ಮ ಜಗದ್ಗುರುಗಳು ನಮ್ಮೊಂದಿಗೆ ಸದಾ ಕಾಲವೂ ಇರಬೇಕು ಎಂಬುದಾಗಿ ಪ್ರಾರ್ಥಿಸಿದ್ದರು ಎಂಬುದನ್ನು ನೆನಪಿಗೆ ತಂದುಕೊಂಡರು.

ಸಂತ ಜಾನ್ ಪೌಲ್ ರವರು ನಮ್ಮ ಪ್ರತಿಯೊಂದು ದಿನದ ಹೆಜ್ಜೆ ಹೆಜ್ಜೆಗಳಲ್ಲಿ ಹೇಗೆ ಹಿಂಬಾಲಿಸಬೇಕು ಹಾಗೂ ಜನರ ಸೇವೆಯಲ್ಲಿ ನಿರತರಾಗಬೇಕು ಎಂಬುದನ್ನ ತಮ್ಮ ಜೀವನದ ಮೂಲಕ ತೋರ್ಪಡಿಸಿದ್ದರು.

ಸಂತ ಜಾನ್ ಪೌಲ್ ರವರು ನಿಜವಾಗಿಯೂ ಪ್ರಾರ್ಥನೆಯ ಪ್ರೀತಿಯ ಹಾಗೂ ಪರ ಸೇವೆಯ ವ್ಯಕ್ತಿಯಾಗಿದ್ದರು. ಇವರು ಧೈರ್ಯವಂತರಾಗಿದ್ದರು ತಮ್ಮ ಪ್ರಾರ್ಥನೆಗಳು ಎಂದಿಗೂ ಸಹ ನಿರತವಾಗುವುದಿಲ್ಲ ಎಂಬಂತಹ ಭರವಸೆಯನ್ನು ಹೊಂದಿದ್ದರು. ಆದರೆ ಇಂದಿನ ಪ್ರಪಂಚವು ಇಂತಹ ಭರವಸೆಯನ್ನು ಕಳೆದುಕೊಂಡು ನರಳಾಡುತ್ತಿದೆ. ಆದ್ದರಿಂದ ನಾವು ಜಗದ್ಗುರುಗಳು ತೋರ್ಪಡಿಸಿದ ಮತ್ತು ಅವರ  ಬೋಧನೆಗಳನ್ನು ಅರಿತುಕೊಂಡು ಅವರನ್ನು ಪಾಲಿಸಲು ಧರ್ಮಾಧ್ಯಕ್ಷರು ಕರೆ ನೀಡಿದರು.

ಕೊನೆಯದಾಗಿ ಜಗತ್ತಿನಲ್ಲಿ ಶಾಂತಿಗಾಗಿ ಪ್ರಾರ್ಥಿಸಿದರು ಮುಖ್ಯವಾಗಿ ಉಕ್ರೇನ್, ಹೋಲಿ ಲ್ಯಾಂಡ್ ಮತ್ತು ಆಫ್ರಿಕಾ ದೇಶಗಳಲ್ಲಿ ಶಾಂತಿಗಾಗಿ ಪ್ರಾರ್ಥಿಸಿದರು.

ತದನಂತರ ಜಗದ್ಗುರು ಫ್ರಾನ್ಸಿಸ್ ರವರ ಒಳ್ಳೆಯ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಾ ದೇವರು ಅವರಿಗೆ ಬೇಕಾದಂತಹ ಶಕ್ತಿಯನ್ನು ಆರೋಗ್ಯ ಭಾಗ್ಯವನ್ನು ಕೊಟ್ಟು ನಮ್ಮ ಧರ್ಮಸಭೆಯನ್ನು ಮುನ್ನಡೆಸಲಿ ಎಂಬುದಾಗಿ ಪ್ರಾರ್ಥಿಸಿದರು.

03 ಏಪ್ರಿಲ್ 2025, 10:57